ಶೂನ್ಯ ಇಂಗಾಲದೆಡೆಗಿನ ಭಾರತದ ದೃಢ ಹೆಜ್ಜೆಗಳು
Team Udayavani, Dec 28, 2021, 6:40 AM IST
ಜಾಗತಿಕ ತಾಪಮಾನ ಏರಿಕೆ ಇಂದಿನ ಜ್ವಲಂತ ಸಮಸ್ಯೆಯಾಗಿದೆ. ಇತ್ತೀಚೆಗೆ ವಿಶ್ವಸಂಸ್ಥೆಯ ಅಂತಾ ರಾಷ್ಟ್ರೀಯ ತಾಪಮಾನ ಬದಲಾವಣೆಯ ಸಮಿತಿಯು ವರದಿ ನೀಡಿ ಭೂಮಿಯ ತಾಪಮಾನ ವಿಂದು ಕಳೆದ 1,25,000 ವರ್ಷಗಳಲ್ಲೇ ಅತೀ ಹೆಚ್ಚಾಗಿದೆ ಎಂದು ಹೇಳಿದೆ. ಇದೇ ಪರಿಸ್ಥಿತಿ ಮುಂದು ವರಿದರೆ ಮುಂದಿನ 20 ವರ್ಷಗಳಲ್ಲಿ ತಾಪಮಾನವು 1.5 ರಿಂದ 2 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಲಿದೆ.
ಈಗಾಗಲೇ ನಾವು ಜಾಗತಿಕ ತಾಪಮಾನದ ಹೆಚ್ಚಳದಿಂದಾಗಿ ಹವಾಮಾನದಲ್ಲಾಗುತ್ತಿರುವ ಬದಲಾವಣೆಯನ್ನು ಕಾಣುತ್ತಿದ್ದೇವೆ. ಅಕಾಲಿಕ ಮಳೆ, ಚಂಡಮಾರುತ, ಅತಿವೃಷ್ಟಿ , ಅನಾವೃಷ್ಟಿ ಹಾಗೂ ಕಡಲ್ಕೊರೆತಗಳನ್ನು ದೇಶದ ವಿವಿಧ ಭಾಗಗಳಲ್ಲಿ ಗಮನಿಸುತ್ತಿದ್ದೇವೆ. ಧ್ರುವ ಪ್ರದೇಶದ ನೀರ್ಗಲ್ಲು ಕರಗಿ ಸಮುದ್ರದ ನೀರಿನ ಮಟ್ಟ ಏರುತ್ತಿದೆ. ಇದರ ದುಷ್ಪರಿಣಾಮವನ್ನು ದ್ವೀಪರಾಷ್ಟ್ರಗಳು ಹಾಗೂ ದಕ್ಷಿಣ ಏಷ್ಯಾದ ಕರಾವಳಿ ಪ್ರದೇಶಗಳು ಎದುರಿಸುತ್ತಿವೆ. ಈ ಶತಮಾನದ ಅಂತ್ಯದೊಳಗೆ ಸಮುದ್ರ ಮಟ್ಟವು ಗಣನೀಯವಾಗಿ ಏರಿ ದೇಶದ ಕರಾವಳಿ ಪ್ರದೇಶಗಳಲ್ಲಿರುವ ಮುಂಬಯಿ, ಗೋವಾ, ಮಂಗಳೂರು, ಕೊಚ್ಚಿನ್, ಚೆನ್ನೈ, ವಿಶಾಖಪಟ್ಟಣಂ ಮೊದಲಾದ 12 ನಗರಗಳು 3 ಅಡಿ ಸಮುದ್ರ ನೀರಿನಲ್ಲಿ ಮುಳುಗಿಹೋಗುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ. ಜಾಗತಿಕ ತಾಪಮಾನದ ಏರಿಕೆಯನ್ನು ತಡೆಗಟ್ಟುವ ವಿಚಾರ ವಾಗಿ ಅಂತಾರಾಷ್ಟ್ರೀಯವಾಗಿ ಬಹಳಷ್ಟು ಗಂಭೀರ ಚರ್ಚೆಗಳು ನಡೆಯುತ್ತಿವೆ.
ಅಮೆರಿಕ, ಯುರೋಪ್, ರಷ್ಯಾ, ಚೀನ ಮೊದ ಲಾದ ದೇಶಗಳಲ್ಲಿ ನಡೆದ ಕೈಗಾರಿಕಾ ಕ್ರಾಂತಿಯ ಫಲವಾಗಿ ಕೈಗಾರಿಕೆಗಳು ಹೆಚ್ಚು ಪ್ರಮಾಣದಲ್ಲಿ ಹೊಗೆಯನ್ನು ವಾತಾವರಣಕ್ಕೆ ಉಗುಳಿ ಹಸುರು ಮನೆ ಪರಿಣಾಮವು ರೂಪುಗೊಂಡು ಭೂಮಿಯ ತಾಪಮಾನವು ದಿನೇದಿನೆ ಏರುತ್ತಿದೆ. 2015ರಲ್ಲಿ ನಡೆದ ಪ್ಯಾರಿಸ್ ಒಪ್ಪಂದದ ಪ್ರಕಾರ ಕೈಗಾರಿಕಾ ಕ್ರಾಂತಿಯ ಪೂರ್ವದ ತಾಪಮಾನವನ್ನು ಆಧರಿಸಿ ಹಸುರುಮನೆ ಪರಿಣಾಮಕ್ಕೆ ಕಾರಣವಾಗುವ ಅನಿಲ ಗಳ ಹೊರಸೂಸುವಿಕೆಯನ್ನು ನಿಯಂತ್ರಿಸಿ ಈ ಶತ ಮಾನದಲ್ಲಿ ಹೆಚ್ಚಾಗಲಿರುವ ತಾಪಮಾನವನ್ನು 2 ಡಿಗ್ರಿ (ಸಾಧ್ಯವಾದರೆ 1.5 ಡಿಗ್ರಿ) ಸೆಂಟಿಗ್ರೇಡ್‌ಗೆ ನಿಯಂತ್ರಿಸುವುದೆಂದು ನಿರ್ಧರಿಸಲಾಗಿತ್ತು. ಈ ನಿಟ್ಟಿನಲ್ಲಿ ಆರ್ಥಿಕವಾಗಿ ಮುಂದುವರಿದ ಹಾಗೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಬಡ ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಪರಿಸರ ಸ್ನೇಹಿ, ಪರ್ಯಾಯ ಇಂಧನವನ್ನು ಅಳ ವಡಿಸಿ ಕೊಳ್ಳಲು ವರ್ಷಂಪ್ರತಿ 100 ಬಿಲಿಯನ್ ಡಾಲರ್ (100 ಶತಕೋಟಿ ಡಾಲರ್) ಆರ್ಥಿಕ ನೆರವನ್ನು ಕೊಡುವುದೆಂದೂ ಪ್ಯಾರಿಸ್ ಒಪ್ಪಂದ ದಲ್ಲಿ ನಿರ್ಧಾರ ವಾಗಿತ್ತು. ಆದರೆ ಯಾವ ಶ್ರೀಮಂತ ರಾಷ್ಟ್ರವೂ ಇದು ವರೆಗೂ ಒಂದು ನಯಾ ಪೈಸೆ ಯನ್ನೂ ಕೊಟ್ಟಿಲ್ಲ.
ಪ್ಯಾರಿಸ್ ಒಪ್ಪಂದದಂತೆ ಹಸುರುಮನೆ ಅನಿಲ ಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಶ್ರಮಿಸಿದ ಏಕೈಕ ರಾಷ್ಟ್ರ ಭಾರತ ಮಾತ್ರ. ಹವಾಮಾನ ಬದಲಾವಣೆ ಕಾರ್ಯಕ್ಷಮತೆಯ ಸೂಚ್ಯಂಕದಲ್ಲಿ ಟಾಪ್ ಟೆನ್ ಸ್ಥಾನದಲ್ಲಿರುವ ಏಕೈಕ ಜಿ20 ರಾಷ್ಟ್ರ ಭಾರತವಾಗಿದೆ. ಭಾರತವು ಜಾಗತಿಕವಾಗಿ ಶೇ.15 ಜನಸಂಖ್ಯೆಯನ್ನು ಹೊಂದಿದ್ದರೂ ಅದು ಹೊರಸೂಸುವ ಹಸುರುಮನೆ ಅನಿಲದ ಪ್ರಮಾಣ ಕೇವಲ ಶೇ.5 ಮಾತ್ರ. ಇತ್ತೀಚೆಗೆ ಗ್ಲಾಸೊYàನಲ್ಲಿ ನಡೆದ ಹವಾಮಾನ ಬದಲಾವಣೆಯ ಕುರಿತಾದ ಸಿಒಪಿ 26 ದೇಶಗಳ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ 2070 ರ ಒಳಗೆ ಭಾರತವು ತನ್ನ ಇಂಗಾಲದ ಹೊರಸೂಸುವಿಕೆಯ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಲಿದೆ ಎಂದು ಹೇಳಿದ್ದರು. 2030ರೊಳಗಾಗಿ ಭಾರತವು 500 ಗಿಗಾವ್ಯಾಟ್ ವಿದ್ಯುತ್ ಅನ್ನು ಸೋಲಾರ್, ಗಾಳಿಯಂತ್ರ ಮೊದಲಾದ ಪಳೆಯುಳಿಕೆಯಲ್ಲದ ಹಾಗೂ ಪುನರ್ ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್ ಅನ್ನು ಉತ್ಪಾದಿಸಲಿದೆ. ಅಲ್ಲದೆ 2030ರ ಒಳಗೆಯೇ ಪುನರ್ ನವೀಕರಿಸಬಹುದಾದ ಇಂಧನ ಮೂಲಗಳಿಂದ ದೇಶದ ಶೇ.50ರಷ್ಟು ವಿದ್ಯುತ್ ಅನ್ನು ಉತ್ಪಾದಿಸಲಿಸಲಿದೆ ಎಂದೂ ಅವರು ಹೇಳಿದ್ದರು. ಈ ಮೂಲಕ ಭಾರತವು 2030ರ ಒಳಗೆ ಈಗಾಗಲೇ ಅಂದಾಜಿಸಿರುವ ಇಂಗಾಲದ ಹೊರಸೂಸುವಿಕೆಯ ಪ್ರಮಾಣಕ್ಕಿಂತ 100 ಕೋಟಿ ಟನ್‌ಗಳಷ್ಟು ಕಡಿಮೆ ಇಂಗಾಲವನ್ನು ಹೊರಸೂಸಲಿದೆ.
ಇಂಟರ್‌ನ್ಯಾಶನಲ್ ಸೋಲಾರ್ ಅಲಯನ್ಸ್ (ಅಂತಾರಾಷ್ಟ್ರೀಯ ಸೋಲಾರ್ ಒಕ್ಕೂಟ) ಭಾರತದ ನೇತೃತ್ವದಲ್ಲಿ ರೂಪುಗೊಂಡಿದ್ದು ಭಾರತದ ಈ ಉಪಕ್ರಮವನ್ನು ಮೆಚ್ಚಿ ವಿಶ್ವಸಂಸ್ಥೆಯು “ಚ್ಯಾಂಪಿಯನ್ಸ್ ಆಫ್ ದ ಅರ್ತ್’ ಪ್ರಶಸ್ತಿಯನ್ನು ಭಾರತಕ್ಕೆ ಕೊಡಮಾಡಿದೆ. ಭಾರತದಲ್ಲಿಂದು ಸೋಲಾರ್ ವಿದ್ಯುತ್ ಕ್ರಾಂತಿಯೇ ಆಗಿದೆ. ಮೊದಲು ಭಾರತದಲ್ಲಿ 2022ರ ಅಂತ್ಯದ ವೇಳೆಗೆ 20 ಗಿಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಯ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಆದರೆ 2018ರÇÉೇ 20 ಗಿಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಸಾಧಿಸಲಾಗಿದ್ದು ಇದೀಗ ದೇಶದಲ್ಲಿ 45 ಗಿಗಾವ್ಯಾಟ್ ವಿದ್ಯುತ್ ಸೋಲಾರ್ ಮೂಲಕ ಉತ್ಪಾದನೆ ಆಗುತ್ತಿದೆ. 2022 ರ ಡಿಸೆಂಬರ್ ತಿಂಗಳ ಒಳಗೆ ದೇಶದಲ್ಲಿ 100 ಗಿಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡುವಂತೆ ಗುರಿಯನ್ನು ಮರುನಿಗದಿಪಡಿಸಲಾಗಿದೆ. ಸೋಲಾರ್ ವಿದ್ಯುತ್‌ನಲ್ಲಿ ಉತ್ಪಾದನೆಯಾಗುವ ಇಂಗಾಲದ ಪ್ರಮಾಣ ಶೂನ್ಯವಾಗಿರುತ್ತದೆ. ಇದೀಗ ಸರಿಸುಮಾರು 40 ಗಿಗಾವ್ಯಾಟ್ ವಿದ್ಯುತ್ ಪವನಯಂತ್ರಗಳ ಮೂಲಕ ಉತ್ಪಾದನೆ ಆಗುತ್ತಿದ್ದು ಪುನರ್ ನವೀಕರಿಸಬಹುದಾದ ಮೂಲಗಳಿಂದ ಉತ್ಪಾದಿತವಾಗುತ್ತಿರುವ ವಿದ್ಯುತ್ ಪ್ರಮಾಣವಿಂದು 100 ಗಿಗಾವ್ಯಾಟ್ ಅನ್ನು ಮೀರಿದೆ.
ಭಾರತೀಯ ರೈಲ್ವೇಯೂ ಪೆಟ್ರೋಲಿಯಂ ಅವಲಂಬನೆಯಿಂದ ಮುಕ್ತವಾಗುತ್ತಿದ್ದು ದೇಶದ 64,689 ಕಿ.ಮೀ. ಉದ್ದದ ಬ್ರಾಡ್‌ಗೆàಜ್ ರೈಲ್ವೇ ಹಳಿಗಳಲ್ಲಿ 45,881(ಶೇ.71) ಕಿ.ಮೀ. ಹಳಿಗಳು ವಿದ್ಯುದೀಕರಣಗೊಂಡಿವೆ. 2014ರ ವರೆಗೆ ದೇಶದಲ್ಲಿ 21,801 ಕಿ.ಮೀ. ಬ್ರಾಡ್ ಗೇಜ್ ಹಳಿಗಳು ವಿದ್ಯುದೀಕರಣಗೊಂಡಿದ್ದು, ಕಳೆದ 7 ವರ್ಷಗಳಲ್ಲಿ ದಾಖಲೆಯ 24,080 ಕಿ.ಮೀ. ಹಳಿಗಳು ವಿದ್ಯುದೀಕರಣಗೊಂಡಿವೆ. 2023ರ ಒಳಗೆ ದೇಶದ ಎಲ್ಲ ಬ್ರಾಡ್‌ಗೆàಜ್ ಹಳಿಗಳು ವಿದ್ಯುತ್ ಸಂಪರ್ಕವನ್ನು ಹೊಂದಲಿದ್ದು ಡೀಸೆಲ್ ಮೇಲಿನ ಅವಲಂಬನೆ ನಿಂತು ಹೋಗಿ ಸುಮಾರು 13,500 ಕೋ.ರೂ.ಗಳಷ್ಟು ವಿದೇಶೀ ವಿನಿಮಯ ಉಳಿತಾಯವಾಗಲಿದೆ. 2030ರ ಒಳಗೆ ಭಾರತೀಯ ರೈಲ್ವೇ ಸಂಪೂರ್ಣವಾಗಿ ಕಾರ್ಬನ್ ಮುಕ್ತವಾಗಲಿದೆ. ಈಗಾಗಲೇ ದೇಶದ 13 ನಗರಗಳಲ್ಲಿ ಮೆಟ್ರೋ ರೈಲುಗಳು ಓಡುತ್ತಿದ್ದು, 9 ನಗರಗಳಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದೆ. 4 ನಗರಗಳಲ್ಲಿ ಮೆಟ್ರೋ ಕಾಮಗಾರಿಗೆ ಅನುಮತಿ ದೊರೆತಿದೆ ಹಾಗೂ ಇನ್ನೂ 14 ನಗರಗಳು ಮೆಟ್ರೋ ರೈಲಿಗೆ ಪ್ರಸ್ತಾವನೆ ಸಲ್ಲಿಸಿವೆ. ಹೀಗೆ ದೇಶದ ಒಟ್ಟು 42 ನಗರಗಳು ಇಂಗಾಲ ರಹಿತ ಸ್ವತ್ಛ ಸಾರಿಗೆಯಾದ ಮೆಟ್ರೋ ರೈಲು ವ್ಯವಸ್ಥೆಯನ್ನು ಹೊಂದಲಿವೆ.
ಉಜಾಲಾ ಯೋಜನೆಯಡಿ ಅತೀ ಕಡಿಮೆ ವಿದ್ಯುತ್ ಬಳಸುವ 36.78 ಕೋಟಿ ಎಲ್‌ಇಡಿ ಬಲ್ಬ್ ಗಳ ವಿತರಣೆ ನಡೆದಿದ್ದು ಇದರ ಪರಿಣಾಮವಾಗಿ ವಿದ್ಯುತ್ ಬಳಕೆಯ ಪ್ರಮಾಣ ಕಡಿಮೆಯಾಗಿದ್ದು ಈ ಮೂಲಕ ಸುಮಾರು 2.3 ಕೋಟಿ ಟನ್‌ಗಳಷ್ಟು ಕಾರ್ಬನ್ ಡೈ ಆಕ್ಸೆ„ಡ್ ವಾತಾವರಣ ಸೇರುವುದನ್ನು ತಡೆಗಟ್ಟಲಾಗಿದೆ.ಉಜ್ವಲ ಯೋಜ ನೆಯಡಿ ದೇಶದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಮನೆ ಗಳಿಗೆ ಅಡುಗೆ ಅನಿಲ ತಲುಪಿಸಲಾಗಿದ್ದು ಅಷ್ಟು ಪ್ರಮಾಣದ ಮರ ಕಡಿಯುವುದು ಹಾಗೂ ಉರು ವಲು ಉರಿಸುವುದನ್ನು ತಡೆಗಟ್ಟಿದಂತಾಗಿದೆ. ಈಗ ಪೆಟ್ರೋಲ್‌ಗೆ ಶೇ.10 ಎಥೆನಾಲ್ ಅನ್ನು ಮಿಶ್ರಣ ಮಾಡಲಾಗುತ್ತಿದ್ದು ಮುಂದೆ ಈ ಪ್ರಮಾಣ ಶೇ.20ಕ್ಕೆ ಏರಲಿದೆ. ದೇಶದಲ್ಲಿಂದು ಎಲೆಕ್ಟ್ರಿಕ್ ಕಾರು, ಆಟೋಗಳ ಬಳಕೆಗೆ ಹೆಚ್ಚು ಪ್ರೋತ್ಸಾಹವನ್ನು ನೀಡಲಾಗುತ್ತಿದೆ. ಹೆ¨ªಾರಿಗಳ ಅಕ್ಕಪಕ್ಕದಲ್ಲಿ ಕಡ್ಡಾಯವಾಗಿ ಮರಗಿಡಗಳನ್ನು ನೆಟ್ಟು ಬೆಳೆಸಲಾಗುತ್ತಿದೆ. ಇತ್ತೀಚೆಗೆ ಗ್ಲಾಸ್ಕೊನಲ್ಲಿ ನಡೆದ ಸಿಒಪಿ 26 ರಾಷ್ಟ್ರಗಳ ಅಧಿವೇಶನದಲ್ಲಿ ಭಾರತವು ಅಂತಾರಾಷ್ಟ್ರೀಯ ಸೋಲಾರ್ ವಿದ್ಯುತ್ ಕ್ಷೇತ್ರದಲ್ಲಿ ಭಾರತದ ಪಾತ್ರದ ಕುರಿತು ಮಾತನಾಡಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು “ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್ ಹಾಗೂ ಒಬ್ಬರೇ ನರೇಂದ್ರ ಮೋದಿ’ ಎಂದು ಕೊಂಡಾಡಿ ರುವುದು ಶೂನ್ಯ ಇಂಗಾಲದಡೆಗಿನ ಭಾರತದ ನಡೆಯನ್ನು ಪ್ರತಿಬಿಂಬಿಸುತ್ತದೆ.
– ಗಣೇಶ್ ಭಟ್ , ವಾರಣಾಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.