ಇಂಗಾಲ ಭಾರ ಇಳಿಸಿದ ವರ್ಕ್ ಫ್ರಂ ಹೋಂ!
ಹೆಚ್ಚಿನ ಸಿಬಂದಿಗೆ ಕಚೇರಿ-ಮನೆ ನಡುವಿನ ಪ್ರಯಾಣವಿಲ್ಲ
Team Udayavani, Jun 30, 2021, 6:20 PM IST
ಭಾರತೀಯ ಐಟಿ ಕಂಪೆನಿಗಳ ಶೇ.95ರಷ್ಟು ಜನರು ಮನೆಗಳಿಂದಲೇ ಕೆಲಸ ಮಾಡುತ್ತಿ ರುವುದರಿಂದ ಇಂಗಾಲ ಹೊರ ಸೂಸುವಿಕೆ ಪ್ರಮಾಣ ಶೇ. 85ರಷ್ಟು ಕಡಿಮೆಯಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಇದರಿಂದ ಐಟಿ ಕಂಪೆನಿಗಳು ತಮ್ಮ ಸಿಬಂದಿ ಪಿಕ್‌ಅಪ್/ಡ್ರಾಪ್‌ಗಾಗಿ ವ್ಯಯಿಸುತ್ತಿದ್ದ ಹಣ ಅಗಾಧವಾಗಿ ಇಳಿಕೆಯಾಗಿದೆ. ಟಾಪ್ 5 ಕಂಪೆನಿಗಳಾದ ಟಾಟಾ ಸರ್ವೀಸಸ್, ಇನ್ಫೋಸಿಸ್, ಎಚ್‌ಸಿಎಲ್, ವಿಪ್ರೊ, ಟೆಕ್ ಮಹೀಂದ್ರಾ ಸಂಸ್ಥೆಗಳನ್ನು ಅಧ್ಯಯನ ಮಾಡಿ ಈ ವರದಿ ತಯಾರಿಸಲಾಗಿದೆ.
ಹೊರೆ ಇಳಿಕೆಗೆ ಪ್ರಮುಖ ಕಾರಣ
1)ಶೇ. 95ರಷ್ಟು ಸಿಬಂದಿಗೆ ಮನೆಯಿಂದಲೇ ಕೆಲಸ
2)ಹೆಚ್ಚಿನ ಸಿಬಂದಿಗೆ ಕಚೇರಿ-ಮನೆ ನಡುವಿನ ಪ್ರಯಾಣವಿಲ್ಲ
3)ಸಿಬಂದಿ ನೇಮಕಾತಿಯೂ ಆನ್‌ಲೈನ್ ಆಧಾರಿತ
ಅಧ್ಯಯನದ ಸಲಹೆಗಳು
ಸಾಂಕ್ರಾಮಿಕ ಕಾಲಘಟ್ಟವು ಮುಗಿದು ಎಲ್ಲ ಐಟಿ ಸಿಬಂದಿಯೂ ಕಚೇರಿಗೆ ಬಂದು ಹೋಗುವಂತಾದಾಗಲೂ ಇಂಗಾಲ ಹೊರಸೂಸುವಿಕೆ ಹಾಗೂ ಕಂಪೆನಿಗಳ ಮೇಲೆ ಬೀಳುವ ಸಿಬಂದಿ ಪ್ರಯಾಣ ಖರ್ಚುಗಳನ್ನು ಗಣನೀಯವಾಗಿ ಇಳಿಕೆ ಮಾಡಬಹುದು ಎಂದು ಅಧ್ಯಯನ ತಿಳಿಸಿದೆ.
ವರದಿಯಲ್ಲೇನಿದೆ?
ಇಂಗಾಲ ಸೂಸುವಿಕೆಯಲ್ಲಿ ಇಳಿಕೆ ಸುಮಾರು 44 ಲಕ್ಷದಷ್ಟಿರುವ ಐಟಿ ಸಿಬಂದಿಯಲ್ಲಿ ಕೇವಲ ಶೇ.4-5 ರಷ್ಟು ಸಿಬಂದಿ ಮಾತ್ರ ಕಚೇರಿಗೆ ಹೋಗುತ್ತಿದ್ದು, ಉಳಿದವರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಅಂದಾಜು ಶೇ.95-96 ರಷ್ಟು ಸಿಬಂದಿ ಕಚೇರಿಗಳಿಗೆ ಹೋಗುತ್ತಿಲ್ಲವಾದ್ದರಿಂದ 2021 ರಲ್ಲಿ ಇಂಗಾಲದ ಹೊರಸೂಸುವಿಕೆ ಪ್ರಮಾಣ ಶೇ.85ರಷ್ಟು ಇಳಿಮುಖವಾಗಿದೆ. 2020ರಲ್ಲಿ 20 ಲ. ಟನ್ ಗಳಷ್ಟಿದ್ದ ಇಂಗಾಲ ಹೊರಸೂಸುವಿಕೆ, 2021ರಲ್ಲಿ ಶೇ.85ರಷ್ಟು ಕಡಿಮೆಯಾಗಿದೆ.
ಪ್ರಯಾಣ ಖರ್ಚಿನಲ್ಲೂ ಉಳಿತಾಯ
ಟಾಪ್ 5 ಕಂಪೆನಿಗಳ ಮೇಲಿದ್ದ ಸಿಬಂದಿ ಪ್ರಯಾಣದ ಖರ್ಚಿನಲ್ಲಿ ಭಾರೀ ಉಳಿತಾಯವಾಗಿದೆ. ಸಿಬಂದಿ ಪ್ರಯಾಣಕ್ಕಾಗಿ ಈ ಕಂಪೆನಿಗಳು ಭರಿಸುತ್ತಿದ್ದ ಪ್ರಯಾಣ ವೆಚ್ಚ 2021ರಲ್ಲಿ ಶೇ.75ರಷ್ಟು ಕಡಿತವಾಗಿದೆ. 2020ರಲ್ಲಿ 10,240 ಕೋಟಿ ರೂ.ಗಳಷ್ಟಿದ್ದ ಈ ಹೊರೆ, 2021ರಲ್ಲಿ 2,706 ಕೋಟಿ ರೂ.ಗಳಿಗೆ ಇಳಿದಿದೆ. ಭಾರತೀಯ ಸಮಗ್ರ ಐಟಿ ವಲಯವು ತಮ್ಮ ಸಿಬಂದಿಯ ಪ್ರಯಾಣಕ್ಕಾಗಿ 2019-20ರಲ್ಲಿ 21,000 ಕೋಟಿ ರೂ.ಗಳನ್ನು ವ್ಯಯಿಸಿದ್ದರೆ, ಪ್ರಸಕ್ತ ವರ್ಷದಲ್ಲಿ 5,400 ಕೋಟಿ ರೂ.ಗಳನ್ನು ಮಾತ್ರ ವ್ಯಯಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.