Cast Census: ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಹೆಚ್ಚು ದಿನ ಇರಲ್ಲ: ಬಿ.ವೈ.ವಿಜಯೇಂದ್ರ

ಸಿಎಂ ಕುರ್ಚಿ ಅಲ್ಲಾಡುತ್ತಿರುವ ಕಾಲಘಟ್ಟದಲ್ಲಿ ಜಾತಿಗಣತಿಯ ರಾಜಕೀಯ ದಾಳವಾಗಿ ಬಳಕೆ: ಬಿಜೆಪಿ ರಾಜ್ಯಾಧ್ಯಕ್ಷ

Team Udayavani, Oct 9, 2024, 6:32 AM IST

BY-Vijayendra

ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಲ್ಲಿ ಹೆಚ್ಚು ದಿನ ಉಳಿಯುವುದಿಲ್ಲ ಎಂಬುದು ಸಿದ್ದರಾಮಯ್ಯರಿಗೆ ಮನವರಿಕೆ ಆಗಿದ್ದು, ಬಹಳ ದಿನ ಭಂಡತನ ನಡೆಯುವುದಿಲ್ಲ ಎಂಬುದು ಗೊತ್ತಾಗಿಯೇ ತರಾತುರಿಯಲ್ಲಿ ಜಾತಿ ಗಣತಿಯನ್ನು ಸಂಪುಟ ಸಭೆ ಮುಂದೆ ಮಂಡಿಸಲು ಮುಂದಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದರು.

ಪಕ್ಷದ ಕಚೇರಿಯಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸ್ಥಾನದಲ್ಲಿ ಬಹಳ ದಿನ ಉಳಿಯಲು ಸಾಧ್ಯವಿಲ್ಲ ಎಂಬುದು ಮನವರಿಕೆ ಆದಂತಿದೆ. ತಾನು ಅಪರಾಧಿ ಸ್ಥಾನದಲ್ಲಿದ್ದು, ಬಹಳ ದಿನ ಈ ಭಂಡತನ ನಡೆಯದು ಎಂಬುದೂ ಅವರಿಗೆ ಗೊತ್ತಾಗಿದೆ. ಹಾಗಾಗಿ ಬ್ರಹ್ಮಾಸ್ತ್ರ ಚಲಾವಣೆ ಮಾಡುವ ಪ್ರಯತ್ನದಲ್ಲಿದ್ದಂತೆ ಕಾಣುತ್ತಿದೆ. ಅದರ ಭಾಗವಾಗಿ ತರಾತುರಿಯಲ್ಲಿ ಜಾತಿ ಗಣತಿ ವರದಿಯನ್ನು ಸಚಿವ ಸಂಪುಟದಲ್ಲಿ ಮಂಡಿಸಲು ಮುಂದಾಗಿದ್ದಾರೆ. ಕಾಂಗ್ರೆಸ್‌ ಮುಖಂಡರೂ ಇದನ್ನು ವಿರೋಧಿಸುತ್ತಿದ್ದಾರೆ. ಅದಕ್ಕೆ ಕಾರಣಗಳೂ ಸ್ಪಷ್ಟವಾಗಿವೆ. ಈ ವರದಿ ಅವೈಜ್ಞಾನಿಕವಾಗಿದೆ ಎಂದು ಹಲವಾರು ಬಾರಿ ಕಾಂಗ್ರೆಸ್‌ ಮುಖಂಡರೇ ಹೇಳಿದ್ದಾರೆ ಎಂದು ನೆನಪು ಮಾಡಿದರು.

ರಾಜಕೀಯ ದಾಳವಾಗಿ ಬಳಕೆ :

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ರಹ್ಮಾಂಡ ಭ್ರಷ್ಟಾಚಾರ, ಮೈಸೂರಿನ ಮುಡಾ ಹಗರಣ, ಮುಖ್ಯಮಂತ್ರಿಗಳ ಬುಡವನ್ನೇ ಅಲ್ಲಾಡಿಸಿರುವ ಈ ಸಂದರ್ಭದಲ್ಲಿ, ಸಿಎಂ ಕುರ್ಚಿ ಅಲ್ಲಾಡುತ್ತಿರುವ ಈ ಕಾಲಘಟ್ಟದಲ್ಲಿ ಜಾತಿಗಣತಿಯನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. ಇದು ಕಾಂಗ್ರೆಸ್‌ ಪಕ್ಷದ ಅಗ್ರಗಣ್ಯ ನಾಯಕರಿಗೂ ಅನ್ನಿಸಿದೆ. ಜಾತಿ ಜನಗಣತಿ ಬಗ್ಗೆ ರಾಷ್ಟ್ರೀಯ, ರಾಜ್ಯಮಟ್ಟಗಳಲ್ಲಿ ಚರ್ಚೆ ಮಾಡಬೇಕು. ನಂತರ ನಿರ್ಣಯಿಸುವ ಬಗ್ಗೆ ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ್ದಾರೆ. ಇದು ಅವೈಜ್ಞಾನಿಕ; ಮತ್ತೂಮ್ಮೆ ಪರಿಶೀಲಿಸಿ ಎಂದು ಶಾಮನೂರು ಶಿವಶಂಕರಪ್ಪ ಅವರೂ ಹೇಳಿದ್ದಾರೆ. ಒಕ್ಕಲಿಗ ಸಮುದಾಯಕ್ಕೆ ಅನ್ಯಾಯ ಆಗಲಿದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ ಎಂದು ಗಮನ ಸೆಳೆದರು.

ತಳಸಮುದಾಯಕ್ಕೆ ನ್ಯಾಯ ಸಿಗಲೇಬೇಕು
ಹಿಂದುಳಿದ ಸಮಾಜ, ಪರಿಶಿಷ್ಟ ಜಾತಿ, ಪಂಗಡಗಳು, ಎಲ್ಲ ಸಮುದಾಯಗಳಿಗೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಶಕ್ತಿ ಕೊಡಬೇಕು. ಅವರನ್ನೂ ಮುಂಚೂಣಿಯಲ್ಲಿ ತರಬೇಕೆಂಬುದು ಬಿಜೆಪಿ ನಿಲುವು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ದೇಶದ, ರಾಜ್ಯದ ಸೌಲಭ್ಯ ಸಿಗಬೇಕೆಂಬ ಆಶಯವುಳ್ಳ ಅಂತ್ಯೋದಯದ ಪರಿಕಲ್ಪನೆಯ ಮೂಲ ಉದ್ದೇಶವನ್ನು ಬಿಜೆಪಿ ಹೊಂದಿದೆ.

ಆ ಸಮುದಾಯಗಳಿಗೆ ನ್ಯಾಯ ಸಿಗಬೇಕೆಂಬ ಬದ್ಧತೆ ಬಿಜೆಪಿಗೆ ಇದೆ. ಅದರ ಬಗ್ಗೆ ಗೊಂದಲ ಬೇಡ. ಆದರೆ, ಇದನ್ನು ರಾಜಕೀಯ ದಾಳವಾಗಿ ಬಳಸಿ ತಮ್ಮ ಕುರ್ಚಿ ಉಳಿಸಿಕೊಳ್ಳಲು ಹೊರಟಿದ್ದಾರೆ. ಇದು ಖಂಡಿತ ಸಾಧ್ಯವಾಗುವುದಿಲ್ಲ. ಇದರ ಹಿಂದೆ ರಾಜಕೀಯ ಷಡ್ಯಂತ್ರ, ಕುತಂತ್ರ ಇರುವುದಾಗಿ ಕಾಂಗ್ರೆಸ್ಸಿನವರೇ ಹೇಳುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಟಾಪ್ ನ್ಯೂಸ್

brij Bhushan

Power…; ವಿನೇಶ್ ಫೋಗಾಟ್ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ಬ್ರಜ್ ಭೂಷಣ್!

Navratri special: ಹೆಣ್ಣು ಅಬಲೆಯೇ? ಹಾಗೆಂದು ನಿರ್ಧರಿಸಿದ್ಯಾರು? ಹೆಣ್ಣಾ ಅಥವಾ..

Navratri special: ಹೆಣ್ಣು ಅಬಲೆಯೇ? ಹಾಗೆಂದು ನಿರ್ಧರಿಸಿದ್ಯಾರು? ಹೆಣ್ಣಾ ಅಥವಾ..

Dakshineswar-kali-temple-kolkatha

Famous Godesess Temple: ಹಿಂದೂ ನವರತ್ನ ದೇವಾಲಯ ದಕ್ಷಿಣೇಶ್ವರ ಕಾಳಿ ಮಂದಿರ

h-kantaraju

Cast Census: ಕಾಯ್ದೆ ಪ್ರಕಾರ ಸರಕಾರ ಜಾತಿಗಣತಿ ವರದಿ ಒಪ್ಪಬೇಕು

BJP-Head

Haryana Election Result: ಹರಿಯಾಣದಲ್ಲಿ ಅಭಿವೃದ್ಧಿ ಗ್ಯಾರಂಟಿ ಗೆದ್ದಿದೆ: ಪ್ರಧಾನಿ ಮೋದಿ

Rishab-Shetty

National Film Award: ರಿಷಬ್‌ ಶೆಟ್ಟಿಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಪ್ರದಾನ

isrel netanyahu

Hezbollah ದುರ್ಬಲ; ನಸ್ರಲ್ಲಾ ಉತ್ತರಾಧಿಕಾರಿಗಳೆಲ್ಲ ಫಿನಿಷ್: ನೆತನ್ಯಾಹು ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rishab-Shetty

National Film Award: ರಿಷಬ್‌ ಶೆಟ್ಟಿಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಪ್ರದಾನ

Coffee-Price

Price Hike: ಕಾಫಿ ಪ್ರಿಯರಿಗೆ ಕಹಿ ಸುದ್ದಿ, ಕಾಫಿ ಪುಡಿ ಬೆಲೆ 100 ರೂ. ಹೆಚ್ಚಳ

Ramanagar

Donation: ರಾಮನಗರದ ಮಠಕ್ಕೆ ರಾಜಸ್ಥಾನದ ಉದ್ಯಮಿಯಿಂದ 3 ಸಾವಿರ ಎಕರೆ ಭೂಮಿ ದಾನ!

Janardhana-Reddy-Car

Koppal: ಸಿಎಂ ವಾಹನ ಸಂಚಾರಕ್ಕೆ ಅಡ್ಡಿ: ಶಾಸಕ ಜನಾರ್ದನ ರೆಡ್ಡಿ ರೇಂಜ್‌ ರೋವರ್‌ ಕಾರು ವಶ

BJP-Camp

Internal Reservation: ಬಸವರಾಜ್‌ ಬೊಮ್ಮಾಯಿ ಅವಧಿಯ ಒಳಮೀಸಲಿಗೆ ಬಿಜೆಪಿ ಒತ್ತಡ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

brij Bhushan

Power…; ವಿನೇಶ್ ಫೋಗಾಟ್ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ಬ್ರಜ್ ಭೂಷಣ್!

Navratri special: ಹೆಣ್ಣು ಅಬಲೆಯೇ? ಹಾಗೆಂದು ನಿರ್ಧರಿಸಿದ್ಯಾರು? ಹೆಣ್ಣಾ ಅಥವಾ..

Navratri special: ಹೆಣ್ಣು ಅಬಲೆಯೇ? ಹಾಗೆಂದು ನಿರ್ಧರಿಸಿದ್ಯಾರು? ಹೆಣ್ಣಾ ಅಥವಾ..

Dakshineswar-kali-temple-kolkatha

Famous Godesess Temple: ಹಿಂದೂ ನವರತ್ನ ದೇವಾಲಯ ದಕ್ಷಿಣೇಶ್ವರ ಕಾಳಿ ಮಂದಿರ

h-kantaraju

Cast Census: ಕಾಯ್ದೆ ಪ್ರಕಾರ ಸರಕಾರ ಜಾತಿಗಣತಿ ವರದಿ ಒಪ್ಪಬೇಕು

BJP-Head

Haryana Election Result: ಹರಿಯಾಣದಲ್ಲಿ ಅಭಿವೃದ್ಧಿ ಗ್ಯಾರಂಟಿ ಗೆದ್ದಿದೆ: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.