Cast Census: ಜಾತಿಗಳ ಸಮಸ್ಯೆಗೆ ಸಿಎಂ ಪರಿಹಾರವೇನು?: ಎಚ್.ಡಿ.ಕುಮಾರಸ್ವಾಮಿ
ಸಿದ್ದರಾಮಯ್ಯ ಅಹಿಂದ ವರ್ಗಕ್ಕೆ ಏನು ಮಾಡಿದ್ದಾರೆ?: ಕೇಂದ್ರ ಸಚಿವ
Team Udayavani, Jan 13, 2025, 7:00 AM IST
ಬೆಂಗಳೂರು: ಕಾಂತರಾಜು ವರದಿ ಸರಕಾರದ ಕೈ ಸೇರಿ ಎಷ್ಟು ವರ್ಷವಾಯಿತು? ಜಾತಿಗಳ ಸಮಸ್ಯೆಗಳಿಗೆ ಇವರು ಏನು ಪರಿಹಾರ ಕೊಟ್ಟಿದ್ದಾರೆ. 7 ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಇದ್ದಾರಲ್ಲವೇ? ಬೇರೆ ಸಮಾಜಗಳ ಮಾತಿರಲಿ, ಅವರು ಅಹಿಂದ ವರ್ಗಕ್ಕೆ ಏನು ಮಾಡಿದ್ದಾರೆ. ಹೊಸ ಜಾತಿ ಗಣತಿ ಮಾಡಲಿ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅಹಿಂದ ನಾಯಕರು. ಇಷ್ಟು ದಿನ ಅಧಿಕಾರದಲ್ಲಿ ಇದ್ದರೂ ಇವರು ಇನ್ನೂ ಅಹಿಂದ.. ಅಹಿಂದ ಎಂದು ಹೇಳುತ್ತಿದ್ದಾರೆ. ಕೇವಲ ರಾಜಕೀಯಕ್ಕಾಗಿ ಸಿದ್ದರಾಮಯ್ಯ ಅವರು ಈ ಸಮುದಾಯವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಹೊಸದಾಗಿ ಜಾತಿ ಗಣತಿ ಮಾಡಿ
ರಾಜ್ಯದಲ್ಲಿ ಈಗಾಗಲೇ ಆಗಿರುವ ಜಾತಿಗಣತಿ ವರದಿ ದೋಷಪೂರಿತವಾಗಿದೆ. ಗಣತಿ ಆಗಿ 10 ವರ್ಷಗಳು ಮೀರಿದೆ. ರಾಜ್ಯದಲ್ಲಿ ಹಣಕ್ಕೆ ಬರವಿಲ್ಲ. ರಾಜ್ಯ ಸರ್ಕಾರವೇ ಹೊಸದಾಗಿ ಇನ್ನೊಂದು ಜಾತಿ ಜನಗಣತಿ ಮಾಡಲಿ. ಜನರಿಂದ ಹಣವನ್ನು ಯಥೇತ್ಛವಾಗಿ ಸುಲಿಗೆ ಮಾಡುತ್ತಿದ್ದೀರಿ. ಗಂಜಿ ಕೇಂದ್ರಗಳಿಗಾಗಿ ಬಾಯಿ ಬಿಟ್ಟುಕೊಂಡು ಕಾಯುತ್ತಾ ಕೂತಿರುವರು ಕೆಲವರು ಇರುತ್ತಾರಲ್ಲವೇ..? ಅವರನ್ನೇ ಸೇರಿಸಿ ಇನ್ನೊಂದು ಸಮಿತಿ ಮಾಡಿ ಜಾತಿಗಣತಿ ಮಾಡಿ ಎಂದು ಕುಮಾರಸ್ವಾಮಿ ಆಗ್ರಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ರಸ್ತೆ ಅಪಘಾತ… ಯುವ ಪರ್ತಕರ್ತ ಮೃತ್ಯು…
Bengaluru: ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಓರ್ವ ಆರೋಪಿ ಬಂಧನ
Mudhol: ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದವರನ್ನು ಕೂಡಲೇ ಬಂಧಿಸಿ: ಪ್ರಮೋದ್ ಮುತಾಲಿಕ್
Cast Census: ಜಾತಿ ಗಣತಿ ವರದಿ ಜಾರಿಗೆ ಸಂಪುಟ ಸಭೆಯಲ್ಲಿ ತೀರ್ಮಾನ: ಸಿಎಂ ಸಿದ್ದರಾಮಯ್ಯ
Cast Census: ಮಕರ ಸಂಕ್ರಾಂತಿ ಬಳಿಕ ಒಕ್ಕಲಿಗರ ಸಭೆ; ಸಂಘ ಒಮ್ಮತದ ತೀರ್ಮಾನ
MUST WATCH
ಹೊಸ ಸೇರ್ಪಡೆ
Kambala: ದಾಖಲೆ ಜೋಡಿ ಕೋಣಗಳಿಗೆ ಸಾಕ್ಷಿಯಾದ ನರಿಂಗಾನ ಕಂಬಳ: ಇಲ್ಲಿದೆ ಫಲಿತಾಂಶ ಪಟ್ಟಿ
Bengaluru: ಟ್ರಕ್ ಡಿಕ್ಕಿ; ಜನ್ಮದಿನದಂದೇ ಬಾಲಕ ಸಾವು
Panambur: ಲೈಟರ್ ವಿಚಾರಕ್ಕೆ ಘರ್ಷಣೆ… ಬಿಯರ್ ಬಾಟಲಿಯಿಂದ ಹಲ್ಲೆ, ಪ್ರಕರಣ ದಾಖಲು
Bengaluru: ರಸ್ತೆ ಬದಿ ಮಲಗುವ ವಿಷಯಕ್ಕೆ ಜಗಳ; ಕಟ್ಟಿಗೆಯಿಂದ ಹೊಡೆದು ವ್ಯಕ್ತಿಯ ಕೊಲೆ
Bengaluru: ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಇಬ್ಬರು ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.