ಸಿಬಿಎಸ್‌ಇ ಫಲಿತಾಂಶ: ಯಶಸ್ ಟಾಪರ್
Team Udayavani, May 7, 2019, 3:07 AM IST
ಹುಳಿಯಾರು: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯ 10ನೇ ತರಗತಿ ಪರೀಕ್ಷೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಬಳ್ಳೆಕಟ್ಟೆಯ ವಿದ್ಯಾವಾರಿಧಿ ಇಂಟರ್‌ನ್ಯಾಷನಲ್ ಶಾಲೆಯ ವಿದ್ಯಾರ್ಥಿ ಡಿ.ಯಶಸ್ 500 ಕ್ಕೆ 498 ಅಂಕಗಳನ್ನು ಪಡೆದು ಚೆನ್ನೈ ದಕ್ಷಿಣ ವಲಯ ಹಾಗೂ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ.
ಯಶಸ್ ಹುಳಿಯಾರು ಸಮೀಪದ ಕಾಯಿ ತಿಮ್ಮನಹಳ್ಳಿ ಗ್ರಾಮದ ದೇವರಾಜು ಹಾಗೂ ನೇತ್ರಾವತಿ ದಂಪತಿ ಪುತ್ರ. ಅಪ್ಪಟ ಗ್ರಾಮೀಣ ಪ್ರತಿಭೆಯಾಗಿರುವ ಈತ ಕೇಂದ್ರಕ್ಕೆ 38 ನೇಯವನಾಗಿ ಹಾಗೂ ರಾಜ್ಯಕ್ಕೆ ಮೊದಲಿಗನಾಗಿ ಉತ್ತೀರ್ಣರಾಗಿದ್ದಾನೆ.
ಒಂದರಿಂದ ನಾಲ್ಕನೇ ತರಗತಿಯವರೆಗೆ ಚಿಕ್ಕನಾಯಕನಹಳ್ಳಿ ರೋಟರಿ ಶಾಲೆಯಲ್ಲಿ ಓದಿರುವ ಯಶಸ್, 5 ನೇ ತರಗತಿಯಿಂದ 10 ತರಗತಿಯವರಿಗೆ ಹುಳಿಯಾರಿನ ವಿದ್ಯಾವಾರಿಧಿ ಶಾಲೆಯಲ್ಲಿ ಓದಿ ಶಾಲೆಯ ಹೆಮ್ಮೆಯ ವಿದ್ಯಾರ್ಥಿಯಾಗಿದ್ದಾನೆ. ತಮ್ಮ ಮಗನ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಪೋಷಕರು.
“ಶೇ. 98 ರವರೆಗೂ ಅಂಕ ತೆಗೆಯಬಹುದು ಎಂದುಕೊಂಡಿದ್ದೇವಾದರೂ ರ್‍ಯಾಂಕ್ ನಿರೀಕ್ಷಿಸಿರಲಿಲ್ಲ. ಅವನು ರಾಜ್ಯಕ್ಕೆ ಪ್ರಥಮನಾಗಿರುವುದು ಅತ್ಯಂತ ಸಂತೋಷವಾಗಿದೆ’ ಎಂದು ಪತ್ರಿಕೆಯೊಂದಿಗೆ ಸಂಭ್ರಮ ಹಂಚಿಕೊಂಡರು.
ಯಶಸ್ ತಂದೆ ದೇವರಾಜು ಅವರು ತಿಮ್ಮನಹಳ್ಳಿಯಲ್ಲಿ ಕೃಷಿಕರು. ಇವರೂ ಎಂಜಿನಿಯರಿಂಗ್ ಪದವೀಧರರು. ಮೈಸೂರಿನಲ್ಲಿ ಇನ್ಸು$óಮೆಂಟೇಶನ್ ಟೆಕ್ನಾಲಜಿಯ ಪದವೀಧರರಾದ ದೇವರಾಜು, ಇದೀಗ ಕೃಷಿಯಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ.
ನಿತ್ಯವೂ ಓದಿನಲ್ಲಿ ತೊಡಗಿಕೊಳ್ಳುತ್ತಿದ್ದರಿಂದ ಯಶಸ್‌ಗೆ ಪರೀಕ್ಷೆಯ ಆತಂಕವಿರಲಿಲ್ಲ. ಅಲ್ಲದೆ ಯಾವುದೇ ಟ್ಯೂಷನ್‌ಗೂ ಆತ ಹೋಗಿರಲಿಲ್ಲ. ಮುಂಚಿನಿಂದಲೂ ಆತ ಶಾಲೆಗೆ ಮೊದಲ ಸ್ಥಾನದಲ್ಲೇ ಇರುತ್ತಿದ್ದ. ಪ್ರತಿಯೊಂದು ಪರೀಕ್ಷೆಯಲ್ಲೂ ನೂರಕ್ಕೆ ನೂರು ಅಂಕ ನಿರೀಕ್ಷಿಸುತ್ತಿದ್ದ.
-ನೇತ್ರಾವತಿ, ಯಶಸ್ ತಾಯಿ
ಆಸಕ್ತಿ ಮತ್ತು ಪರಿಶ್ರಮ ಇದ್ದರೆ ಹಳ್ಳಿಯಲ್ಲಿದ್ದು, ರೈತನ ಮಗನಾಗಿ, ಹಳ್ಳಿ ಶಾಲೆಯಲ್ಲಿ ಓದಿದರೂ ರಾಜ್ಯಕ್ಕೆ ಫಸ್ಟ್ ಬರಬಹುದೆಂದು ದೇಶಕ್ಕೆ ತೋರಿಸಿದ್ದಾನೆ. ಯಶಸ್‌ನ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದಿಂದ ಅಭಿನಂದನೆ ಸಲ್ಲಿಸುತ್ತೇನೆ.
-ಕವಿತಾಕಿರಣ್, ಕಾರ್ಯದರ್ಶಿ, ವಿದ್ಯಾವಾರಿ ಧಿ ಇಂಟರ್ ನ್ಯಾಷನಲ್ ಸ್ಕೂಲ್, ಹುಳಿಯಾರು
ತಂದೆ ತಾಯಿ ಕೂಡ ನಿತ್ಯ ಶಾಲೆಯಲ್ಲಿನ ನನ್ನ ಕಲಿಕೆಯ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದರು. ವಾರಕ್ಕೊಮ್ಮೆ ಮೂರೂ ಮಂದಿ ಕುಳಿತು ಪಠ್ಯದ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಬಿಡುವಿನ ವೇಳೆ ಚೆಸ್ ಆಡುವುದರ ಮೂಲಕ ಮೈಂಡ್ ರಿಲ್ಯಾಕ್ಸ್ ಮಾಡಿಕೊಳ್ಳುತ್ತಿದ್ದೆ. ಹಾಗಾಗಿ ವಿದ್ಯಾರ್ಥಿಗಳು ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಎನ್ನುವಂತೆ ಪರೀಕ್ಷೆಯ ಸಮಯದಲ್ಲಿ ಓದುವುದು ಬಿಟ್ಟು ನಿತ್ಯ ಓದಬೇಕು. ಬಹುಮುಖ್ಯವಾಗಿ ಪಾಲಕರು ಮಕ್ಕಳ ಕಲಿಕೆಯ ಬಗ್ಗೆ ಆಸಕ್ತಿ ವಹಿಸಬೇಕು.
-ಯಶಸ್ ಟಾಪರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUDA case; ಸಿಎಂ ಸಿದ್ದರಾಮಯ್ಯ ವಿಚಾರಣೆಗೆ ಕರೆದ ಲೋಕಾಯುಕ್ತ ಪೊಲೀಸರು
Waqf Notice: ʼವಕ್ಫ್ ಬೋರ್ಡ್‌ಗೆ ಆಸ್ತಿ ನೋಂದಣಿ ತಕ್ಷಣ ಸ್ಥಗಿತಗೊಳಿಸಲು ಸಿಎಸ್‌ಗೆ ಸೂಚಿಸಿʼ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.