ಅಭ್ಯುದಯ ಮಂಡಲಕೆ ಸಪ್ತರ್ಷಿ ಬಲ

"ಶ್ರೀ ಮಧ್ಯಮ ವರ್ಗ': ಜನಸಾಮಾನ್ಯರತ್ತ ಗಮನ

Team Udayavani, Feb 2, 2023, 7:44 AM IST

ಅಭ್ಯುದಯ ಮಂಡಲಕೆ ಸಪ್ತರ್ಷಿ ಬಲ

ಹೊಸದಿಲ್ಲಿ: ಎಲ್ಲರಿಗೂ ಬಜೆಟ್‌ನಲ್ಲಿ ಏನಾದರೂ ಒಂದು ಕೊಟ್ಟೇ ಕೊಡುತ್ತಾರೆ, ಆದರೆ ನಮ್ಮನ್ನು ಮಾತ್ರ ಮರೆತುಬಿಡುತ್ತಾರೆ ಎಂಬ ದೇಶದ ಮಧ್ಯಮ ವರ್ಗದ ಮುನಿಸಿಗೆ ಕರಗಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಅವರ ಬಹುದಿನಗಳ ಬೇಡಿಕೆಯಾದ ಆದಾಯ ತೆರಿಗೆ ಸ್ಲಾéಬ್‌ ಮಿತಿ ಹೆಚ್ಚಳ ಮಾಡಿ ಕೋಪ ತಣಿಸಲು ಮುಂದಾಗಿದ್ದಾರೆ. ಹಾಗೆಯೇ ಉಳಿತಾಯ ಯೋಜನೆಗಳ ಮೂಲಕ ಮಹಿಳೆಯರ ಮನವೊಲಿಕೆಗೂ ಹೆಜ್ಜೆ ಇರಿಸಿದ್ದಾರೆ.

ಲೋಕಸಭೆಯಲ್ಲಿ ಬುಧವಾರ ತಮ್ಮ ಐದನೇ ಬಜೆಟ್‌ ಮಂಡಿಸಿದ ನಿರ್ಮಲಾ, ಯಾರಿಗೂ ಹೆಚ್ಚು ಹೊರೆ ನೀಡದೆ ಎಲ್ಲರನ್ನೂ ತೃಪ್ತಗೊಳಿಸುವ ಪ್ರಯತ್ನ ಮಾಡಿದ್ದಾರೆ. ರಕ್ಷಣೆ, ಆರೋಗ್ಯ, ಕೃಷಿ, ಗ್ರಾಮೀಣಾಭಿವೃದ್ಧಿ, ಮೂಲಸೌಕರ್ಯ, ರೈಲ್ವೇ, ಸಾರ್ವಜನಿಕ ವಿತರಣೆ -ಹೀಗೆ ಸಾಲು ಸಾಲು ಇಲಾಖೆಗಳಿಗೆ ಲಕ್ಷ ಲಕ್ಷ ಕೋಟಿ ರೂ. ಅನುದಾನ ನೀಡಿದ್ದಾರೆ.

ಬಜೆಟ್‌ನಲ್ಲಿ ಏಳು ಆದ್ಯತಾ ವಲಯಗಳನ್ನು ಗುರುತಿಸಲಾಗಿದ್ದು, ಇದನ್ನು “ಸಪ್ತರ್ಷಿ’ ಎಂದು ನಿರ್ಮಲಾ ಕರೆದಿದ್ದಾರೆ. ಹಾಗೆಯೇ “ಅಮೃತಕಾಲದಿಂದ ಶತಮಾನೋತ್ಸವದತ್ತ ಭಾರತ’ ಎಂಬ ಪರಿಕಲ್ಪನೆಯಡಿ ನಾಲ್ಕು ಅವಕಾಶಗಳನ್ನು ಗುರುತಿಸಿದ್ದಾರೆ. 2024ರ ಲೋಕಸಭೆ ಚುನಾವಣೆಗೆ ಮುನ್ನ ಮಂಡನೆಯಾಗಿರುವ ಪೂರ್ಣ ಪ್ರಮಾಣದ ಬಜೆಟ್‌ ಇದು ಎಂಬುದು ವಿಶೇಷ.

ಹೊಸ ತೆರಿಗೆ ಪದ್ಧತಿ

ಇದುವರೆಗೆ 5 ಲಕ್ಷ ರೂ.ಗಳ ವರೆಗೆ ಆದಾಯ ತೆರಿಗೆ ಇರಲಿಲ್ಲ. ಹೊಸ ತೆರಿಗೆ ಪದ್ಧತಿಯಂತೆ ಇದನ್ನು 7 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ. ಹಾಗೆಯೇ ಹಳೇ ಪದ್ಧತಿಯಲ್ಲಿನ ಆದಾಯ ತೆರಿಗೆ ಸ್ಲಾéಬ್‌ಗಳ ಮಿತಿ ಏರಿಕೆ ಮಾಡಲಾಗಿದೆ.

ಸಪ್ತರ್ಷಿಗಳು

  1. ಸರ್ವ ಜನರ ತೋಟ (ಸರ್ವರ ಅಭಿವೃದ್ಧಿ)
  2. ಸರ್ವರಿಗೂ ವಿಕಾಸದ ಬೆಳಕು (ಕೊನೇ ವ್ಯಕ್ತಿಯವರೆಗೆ)
  3. ಹಣಕಾಸು ಸಮ್ಮಾನ (ಹಣಕಾಸು ವಿಭಾಗ)
  4. ಯುವಶಕ್ತಿ ಮೇವ ಜಯತೇ (ಯುವಶಕ್ತಿ)
  5. ಹಸಿರ ಹಾದಿಯಲ್ಲಿ (ಹಸುರು ಪ್ರಗತಿ)
  6. ಹೂಡಿಕೆ ಬೇಡಿಕೆ (ಮೂಲಸೌಕರ್ಯ, ಹೂಡಿಕೆ)
  7. ಬದುಕಿಗೆ ಡಿಜಿಟಲ್‌ ಸ್ಪರ್ಶ (ಸಾಮರ್ಥ್ಯಗಳ ಅನಾವರಣ)

ಇದು ಅಮೃತಕಾಲದ ಮೊದಲ ಬಜೆಟ್‌. ಸಮಾಜದ ಶ್ರೀಸಾಮಾನ್ಯನಿಗೆ ನಾವು ಆಯ್ಕೆಗಳನ್ನು ನೀಡಿದ್ದೇವೆ. ಎರಡು ರೀತಿಯ ತೆರಿಗೆ ಪದ್ಧತಿ ನೀಡಲಾಗಿದ್ದು, ಜನ ಅವರಿಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳ ಬಹುದು. ಇದರಿಂದ ತೆರಿಗೆದಾರರಿಗೆ ಅನುಕೂಲವಾಗಲಿದೆ.

-ನಿರ್ಮಲಾ ಸೀತಾರಾಮನ್‌,  ವಿತ್ತ ಸಚಿವೆ

ಟಾಪ್ ನ್ಯೂಸ್

Khattar (2)

Kasaragod: ಸ್ಥಳ ನೀಡಿದರೆ ಕೇರಳದಲ್ಲಿ ಅಣು ಶಕ್ತಿ ನಿಲಯ: ಕೇಂದ್ರ ಸಚಿವ ಖಟ್ಟರ್‌

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

1-maha-kumbha

Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Khattar (2)

Kasaragod: ಸ್ಥಳ ನೀಡಿದರೆ ಕೇರಳದಲ್ಲಿ ಅಣು ಶಕ್ತಿ ನಿಲಯ: ಕೇಂದ್ರ ಸಚಿವ ಖಟ್ಟರ್‌

police

Udupi: ಕೋಳಿ ಅಂಕಕ್ಕೆ ದಾಳಿ; 9 ಕೋಳಿ ಸಹಿತ ನಾಲ್ವರ ವಶ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

1-dhanjay

Ullal; ಲೋಕಾಯುಕ್ತ ಅಧಿಕಾರಿ ಹೆಸರಲ್ಲಿ ವಂಚನೆ ಯತ್ನ: ಬಂಧನ

police

Bajpe; ದನಗಳನ್ನು ಕಳವು ಮಾಡಿ ವ*ಧೆ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.