ಕೇಂದ್ರ ಬಜೆಟ್: ತಜ್ಞರ ಅಭಿಪ್ರಾಯ
Team Udayavani, Feb 2, 2022, 6:25 AM IST
ದೇಶದ ಆರ್ಥಿಕತೆಗೆ “ಬೂಸ್ಟರ್’ ಡೋಸ್ ಕೋವಿಡ್ ನಂತರ ಕೈಗಾರಿಕೆ ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ಸಾಕಷ್ಟು ಹೊಡೆತ ಬಿದ್ದಿದೆ. ಆದರೆ, ಮೂಲಸೌಕರ್ಯ ಅಭಿವೃದ್ಧಿ ಮೂಲಕ “ಆರ್ಥಿಕ ಬೂಸ್ಟರ್’ ನೀಡುವ ಪ್ರಯತ್ನ ಮಂಗಳವಾರ ಮಂಡನೆಯಾದ ಕೇಂದ್ರ ಬಜೆಟ್‌ನಲ್ಲಿ ಕಾಣಬಹುದು. 400 ಹೊಸ ರೈಲುಗಳ ಕೊಡುಗೆ, ಒಳನಾಡು ಸಾರಿಗೆ, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಹಣದ ಹೊಳೆ ಹರಿದಿದೆ. ಇದರ ಫಲ ತಕ್ಷಣಕ್ಕೆ ಕಾಣದಿರಬಹುದು. ಆದರೆ, ಭವಿಷ್ಯದಲ್ಲಿ ಪರೋಕ್ಷವಾಗಿ ಕೈಗಾರಿಕೆಗಳ ಬೆಳವಣಿಗೆಗೆ ದೊಡ್ಡ ಪಾತ್ರ ನಿರ್ವಹಿಸಲಿದೆ.
ರಾಷ್ಟ್ರೀಯ ಹೆದ್ದಾರಿಗಳನ್ನು ಖಾಸಗಿ ವಲಯದಿಂದ ಅಭಿವೃದ್ಧಿಪಡಿಸಿ, ಟೋಲ್ ಮೂಲಕ ಮರುಪಾವತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಮತ್ತೂಂದೆಡೆ ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲೂ ಮೂಲಸೌಕರ್ಯಗಳ ವೃದ್ಧಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಹೆಚ್ಚು ಸರಕು-ಸಾಗಣೆ ಸಾಧ್ಯವಾಗಲಿದೆ. ಪರಿಣಾಮ ಕೈಗಾರಿಕಾ ವಲಯಕ್ಕೆ ಉತ್ತೇಜನ ಸಿಗಲಿದೆ.
ಅದೇ ರೀತಿ, ರೈಲುಗಳನ್ನು ಪರಿಚಯಿಸಲಾಗಿದ್ದು, ಇದು ಸ್ವಾಗತಾರ್ಹ ಬೆಳವಣಿಗೆ. ಆದರೆ, ಬರೀ ರೈಲುಗಳನ್ನು ಹೆಚ್ಚಿಸಿದರೆ ಪ್ರಯೋಜನ ಇಲ್ಲ. ವಿದ್ಯುದೀಕರಣ, ಅಟೋಮ್ಯಾಟಿಕ್ ಸಿಗ್ನಲಿಂಗ್ ಸೇರಿದಂತೆ ಮಾರ್ಗಗಳನ್ನು ಮೇಲ್ದರ್ಜೆಗೇರಿಸುವ ಕೆಲಸವೂ ಆಗಬೇಕು. ಆಗ, ಎರಡು ದಿನಗಳಿಗೆ ತಲುಪುವ ಸರಕು ಒಂದು ದಿನದಲ್ಲಿ ತಲುಪುತ್ತದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ಆಗಬೇಕಿತ್ತು. ಇನ್ನು ನದಿಗಳ ಜೋಡಣೆಗೆ ಮುಂದಾಗಿರುವುದು ಕೂಡ ಉತ್ತಮ ಬೆಳವಣಿಗೆ. ಇದರಲ್ಲಿ ಕಾವೇರಿ ಕೂಡ ಸೇರ್ಪಡೆ ಮಾಡಲಾಗಿದೆ. ಇದರಡಿ ಸುರಕ್ಷಿತ ಜಾಗಗಳಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಜಲ ಸಾರಿಗೆ ಸೌಲಭ್ಯ ಕಲ್ಪಿಸಬಹುದಾಗಿದೆ. ಎತ್ತರಿಸಿದ ಸೇತುವೆಗಳ ನಿರ್ಮಾಣ ಮೂಲಕ ರಸ್ತೆ ಸಾರಿಗೆಗಳನ್ನೂ ಭವಿಷ್ಯದಲ್ಲಿ ಕಲ್ಪಿಸಬಹುದು.
ಇದಲ್ಲದೆ, ಕೋವಿಡ್ ಹಾವಳಿ ನಂತರ ಆರೋಗ್ಯ ಕ್ಷೇತ್ರ ಕೂಡ ಮೂಲಸೌಕರ್ಯ ವಲಯಕ್ಕೆ ಬರುತ್ತಿದೆ. ಇಲ್ಲಿಯೂ ಹಲವಾರು ಕೊಡುಗೆಗಳನ್ನು ನೀಡಲಾಗಿದೆ. ಆದರೆ, ರಾಜ್ಯಕ್ಕೆ ನಿರ್ದಿಷ್ಟವಾಗಿ ಮೂಲಸೌಕರ್ಯಗಳಲ್ಲಿ ಕೊಡುಗೆ ನೀಡದಿರುವುದು ನಿರಾಸೆ ಮೂಡಿಸಿದೆ.
– ಪ್ರೊ.ಎಂ.ಎನ್. ಶ್ರೀಹರಿ, ಮೂಲಸೌಕರ್ಯ ತಜ್ಞ ಮತ್ತು ಸಲಹೆಗಾರರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
MUST WATCH
ಹೊಸ ಸೇರ್ಪಡೆ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.