Central Government: ಮೇಕ್‌ ಇನ್‌ ಇಂಡಿಯಾ ಯೋಜನೆಗೆ 10 ವರ್ಷ!

2014 ಸೆಪ್ಟಂಬರ್‌ 25ರಂದು ಜಾರಿಗೊಂಡ ಮೇಕ್‌ ಇನ್‌ ಇಂಡಿಯಾ ಯೋಜನೆಯಿಂದ ಭಾರತ ಅಜೇಯ, ಮೊಬೈಲ್‌ ರಫ್ತು 1.2 ಲಕ್ಷ ಕೋಟಿ ರೂ.ಗೆ ಏರಿಕೆ

Team Udayavani, Sep 26, 2024, 7:36 AM IST

MAke-in-india

ಮೇಕ್‌ ಇನ್‌ ಇಂಡಿಯಾ ಯೋಜನೆಯ ಭಾರೀ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ವಂದನೆ ಸಲ್ಲಿಸಲು ಇದೊಂದು ಅವಕಾಶವಾಗಿದೆ. ನಿಮ್ಮೆಲ್ಲರ ಅವಿರತ ಪ್ರಯತ್ನಗಳು “ಮೇಕ್‌ ಇನ್‌ ಇಂಡಿಯಾ’ ಯಶಸ್ಸಿಗೆ ಉತ್ತೇಜನ ನೀಡಿವೆ, ಆ ಮೂಲಕ ನಮ್ಮ ದೇಶವನ್ನು ಇಡೀ ಜಗತ್ತಿನ ಮುಂದೆ ಕುತೂಹಲದ ಕೇಂದ್ರಬಿಂದುವನ್ನಾಗಿ ಮಾಡಿವೆ. ಈ ಸಾಮೂಹಿಕ ಸ್ಫೂರ್ತಿಯೇ ನಮ್ಮ ಕನಸನ್ನು ಶಕ್ತಿಯುತ ಆಂದೋಲನವನ್ನಾಗಿ ಪರಿವರ್ತಿಸಿದೆ.

“ಮೇಕ್‌ ಇನ್‌ ಇಂಡಿಯಾ’ದ ಪರಿಣಾಮವು ಭಾರತ ಅಜೇಯ ಎಂಬುದನ್ನು ತೋರಿಸುತ್ತದೆ. ಈ ಪ್ರಯತ್ನವು ಹತ್ತು ವರ್ಷಗಳ ಹಿಂದೆ ನಮ್ಮಂತಹ ಪ್ರತಿಭಾವಂತ ರಾಷ್ಟ್ರವು ಆಮದು ದಾರನಾಗಿ ಮಾತ್ರ ಇರದೆ ರಫ್ತುದಾರನೂ ಆಗುವುದನ್ನು ಖಚಿತ ಪಡಿಸಿಕೊಳ್ಳಲು ಉತ್ಪಾದನೆಯಲ್ಲಿ ಭಾರತದ ಪ್ರಗತಿಯನ್ನು ಹೆಚ್ಚಿಸುವ ಮಹತ್ವಾಕಾಂಕ್ಷೆಯ ಗುರಿಯೊಂದಿಗೆ ಪ್ರಾರಂಭ ವಾಯಿತು. ಕಳೆದ ದಶಕವನ್ನು ಪ್ರತಿಬಿಂಬಿಸುವಾಗ, 140 ಕೋಟಿ ಭಾರತೀಯರ ಶಕ್ತಿ ಮತ್ತು ಕೌಶಲ್ಯವು ನಮ್ಮನ್ನು ಎಷ್ಟು ದೂರಕ್ಕೆ ಕೊಂಡೊಯ್ದಿದೆ ಎಂಬುದರ ಬಗ್ಗೆ ನಾನು ಹೆಮ್ಮೆಯಿಂದ ಬೀಗುತ್ತಿದ್ದೇನೆ. ನಾವು ಕನಸಿನಲ್ಲಿಯೂ ಯೋಚಿಸದ ಕ್ಷೇತ್ರಗಳು ಸೇರಿದಂತೆ ಎಲ್ಲಾ  ಕ್ಷೇತ್ರಗಳಲ್ಲಿ ಮೇಕ್‌ ಇನ್‌ ಇಂಡಿಯಾ ಛಾಪು ಗೋಚರಿಸುತ್ತಿದೆ. ನಾನು ಒಂದೆರಡು ಉದಾಹರಣೆ ನೀಡುತ್ತೇನೆ.

ಮೊಬೈಲ್‌ ತಯಾರಿಕೆ: ಈಗ ಮೊಬೈಲ್‌ ಫೋನ್‌ಗಳು ಎಷ್ಟು ಪ್ರಾಮುಖ್ಯ ಪಡೆದಿವೆ ಎಂಬುದು ನಮಗೆ ಗೊತ್ತಿದೆ, ಆದರೆ ಆಶ್ಚರ್ಯಕರ ವಿಷಯವೆಂದರೆ 2014ರಲ್ಲಿ ಇಡೀ ದೇಶದಲ್ಲಿ ಕೇವಲ ಎರಡು ಮೊಬೈಲ್‌ ತಯಾರಿಕ ಘಟಕಗಳನ್ನು ಹೊಂದಿದ್ದೆವು. ಇಂದು, ಈ ಸಂಖ್ಯೆ 200ಕ್ಕಿಂತ ಹೆಚ್ಚಾಗಿದೆ. ನಮ್ಮ ಮೊಬೈಲ್‌ ರಫ್ತು ಕೇವಲ 1,556 ಕೋಟಿಯಿಂದ 1.2 ಲಕ್ಷ ಕೋಟಿಗೆ ಭಾರೀ ಏರಿಕೆ ಕಂಡಿದೆ, ಬೆರಗುಗೊಳಿಸುವ ಶೇ.7500ರಷ್ಟು ಬೆಳವಣಿಗೆ! ಇಂದು, ಭಾರತದಲ್ಲಿ ಬಳಸಲಾಗುವ ಶೇ.99ರಷ್ಟು ಮೊಬೈಲ್‌ ಫೋನ್‌ಗಳು ಮೇಡ್‌ ಇನ್‌ ಇಂಡಿಯಾ ಆಗಿವೆ. ನಾವು ವಿಶ್ವಾದ್ಯಂತ 2ನೇ ಅತೀದೊಡ್ಡ ಮೊಬೈಲ್‌ ತಯಾರಕರಾಗಿದ್ದೇವೆ.

ನಮ್ಮ ಉಕ್ಕು ಉದ್ಯಮ ವನ್ನು ನೋಡಿ – ನಾವು ಸಿದ್ಧಪಡಿಸಿದ ಉಕ್ಕಿನ ನಿವ್ವಳ ರಫ್ತುದಾರರಾಗಿ ದ್ದೇವೆ ಮತ್ತು 2014 ರಿಂದ ಉತ್ಪಾದನೆಯು ಶೇ.50 ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ನಮ್ಮ ಸೆಮಿಕಂಡಕ್ಟರ್‌ ತಯಾರಿಕ ವಲಯವು 1.5 ಲಕ್ಷ ಕೋಟಿಗೂ ಹೆಚ್ಚು ಮೌಲ್ಯದ ಹೂಡಿಕೆಯನ್ನು ಆಕರ್ಷಿಸಿದೆ, 5 ಘಟಕಗಳನ್ನು ಅನುಮೋದಿ ಸಲಾಗಿದೆ, ಅವು ದಿನಕ್ಕೆ 7 ಕೋಟಿಗೂ ಹೆಚ್ಚು ಚಿಪ್‌ ಗಳ ಒಟ್ಟು ಸಾಮರ್ಥ್ಯವನ್ನು ಹೊಂದಿರುತ್ತವೆ!

ನಾವು ಜಾಗತಿಕವಾಗಿ ನವೀಕರಿಸಬಹುದಾದ ಇಂಧನದ ನಾಲ್ಕನೇ ಅತೀದೊಡ್ಡ ಉತ್ಪಾದಕರಾಗಿದ್ದೇವೆ, ಕೇವಲ ಒಂದು ದಶಕದಲ್ಲಿ ಇದರ ಸಾಮರ್ಥ್ಯವು ಶೇ.400ರಷ್ಟು ಹೆಚ್ಚಾಗಿದೆ. 2014 ರಲ್ಲಿ ಬಹುತೇಕ ಅಸ್ತಿತ್ವದಲ್ಲಿಲ್ಲದ ನಮ್ಮ ಎಲೆಕ್ಟ್ರಿಕ್‌ ವಾಹನ ಉದ್ಯಮವು ಈಗ 3 ಬಿಲಿಯನ್‌ ಮೌಲ್ಯದ್ದಾಗಿದೆ.
ರಕ್ಷಣ ಉತ್ಪಾದನ ರಫ್ತು 1,000 ಕೋಟಿಗಳಿಂದ 21,000 ಕೋಟಿಗೆ ಏರಿಕೆಯಾಗಿದ್ದು, 85ಕ್ಕೂ ಹೆಚ್ಚು ದೇಶಗಳನ್ನು ತಲುಪಿದೆ.

ಮನ್‌ ಕೀ ಬಾತ್‌ ಸಂಚಿಕೆಯೊಂದರಲ್ಲಿ ನಾನು ಆಟಿಕೆ ಉದ್ಯಮವನ್ನು ಪುನಶ್ಚೇತನಗೊಳಿಸುವ ಅಗತ್ಯದ ಬಗ್ಗೆ ಮಾತನಾಡಿದ್ದಾರೆ ಮತ್ತು ಅದನ್ನು ಹೇಗೆ ಮಾಡಲಾಗುತ್ತದೆ ಎಂಬು ದನ್ನು ನಮ್ಮ ಜನರು ತೋರಿಸಿದ್ದಾರೆ! ಕಳೆದ ಕೆಲವು ವರ್ಷಗಳಲ್ಲಿ, ರಫ್ತುಗಳಲ್ಲಿ ಶೇ.239 ರಷ್ಟು ಬೆಳವಣಿಗೆಯನ್ನು ನಾವು ನೋಡಿದ್ದೇವೆ, ಅಲ್ಲದೇ ಆಮದು ಅರ್ಧದಷ್ಟು ಕಡಿಮೆ ಯಾ ಗಿದೆ, ಇದು ವಿಶೇಷ ವಾಗಿ ನಮ್ಮ ಸ್ಥಳೀಯ ತಯಾರಕರು ಮತ್ತು ಮಾರಾಟ ಗಾರರಿಗೆ ಪ್ರಯೋ ಜ ನವನ್ನು ನೀಡಿದೆ, ಇದ ರಲ್ಲಿ ಚಿಕ್ಕ ಮಕ್ಕಳನ್ನು ಉಲ್ಲೇಖೀಸದೇ ಇರಲಾದೀತೇ!

ಇಂದಿನ ಭಾರತದ ಅನೇಕ ಗಣ್ಯ ವ್ಯಕ್ತಿಗಳು -ನಮ್ಮ ವಂದೇ ಭಾರತ್‌ ರೈಲುಗಳು, ಬ್ರಹ್ಮೋಸ್‌ ಕ್ಷಿಪಣಿಗಳು ಮತ್ತು ನಮ್ಮ ಕೈಯಲ್ಲಿರುವ ಮೊಬೈಲ್‌ ಫೋನ್‌ಗಳು ಇವೆಲ್ಲದರ ಮೇಕ್‌ ಇನ್‌ ಇಂಡಿಯಾ ಲೇಬಲ್‌ ಅನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತಿದ್ದಾರೆ. ಎಲೆಕ್ಟ್ರಾನಿಕ್ಸ್‌ನಿಂದ ಬಾಹ್ಯಾಕಾಶ ಕ್ಷೇತ್ರದವರೆಗೆ, ಇದು ಭಾರತೀಯ ಪ್ರತಿಭೆ ಮತ್ತು ಗುಣಮಟ್ಟವನ್ನು ಪ್ರತಿನಿಧಿಸುತ್ತದೆ.

ಮೇಕ್‌ ಇನ್‌ ಇಂಡಿಯಾ ಯೋಜನೆ ವಿಶೇಷವಾಗಿದೆ, ಏಕೆಂದರೆ ಇದು ಬಡವರಿಗೆ ದೊಡ್ಡ ಕನಸುಗಳಿಗೆ ಮತ್ತು ಅವರ ಆಕಾಂಕ್ಷೆಗಳಿಗೆ ರೆಕ್ಕೆ ನೀಡಿದೆ. ಇದು ಅವರಿಗೆ ತಾವೂ ಸಂಪತ್ತಿನ ಸೃಷ್ಟಿಕರ್ತರಾಗಬಹುದು ಎಂಬ ವಿಶ್ವಾಸವನ್ನು ನೀಡಿದೆ. ಎಂ ಎಸ್‌ಎಂಇ ವಲಯದ ಮೇಲಿನ ಪರಿಣಾಮವು ಅಷ್ಟೇ ಗಮನಾರ್ಹವಾಗಿದೆ. ಒಂದು ಸರಕಾರವಾಗಿ, ಈ ಮನೋಭಾವ ವನ್ನು ಇನ್ನಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ. ನಮ್ಮ ದಶಕದ ಸುದೀರ್ಘ‌ ದಾಖಲೆಯು ಸ್ವತಃ ಇದನ್ನೇ ಹೇಳುತ್ತದೆ. ಉತ್ಪಾದನೆ ಆಧಾರಿತ ಪೋ›ತ್ಸಾಹಕ (ಪಿ ಎಲ್‌ ಐ) ಪರಿವರ್ತಕ ಯೋಜನೆಯಾಗಿದೆ. ಸಾವಿರಾರು ಕೋಟಿಗಳ ಹೂಡಿಕೆಗಳನ್ನು ಸಕ್ರಿಯಗೊಳಿಸುತ್ತಿದೆ ಮತ್ತು ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ. ವ್ಯವಹಾರವನ್ನು ಸುಲಭಗೊಳಿಸುವಲ್ಲಿ ನಾವು ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದೇವೆ.

ಇಂದು ಭಾರತದ ಪರವಾಗಿ ಬಹಳಷ್ಟು ನಡೆಯುತ್ತಿದೆ- ನಾವು ಪ್ರಜಾಪ್ರಭುತ್ವ, ಜನಸಂಖ್ಯೆ ಮತ್ತು ಬೇಡಿಕೆಯ ಪರಿಪೂರ್ಣ ಮಿಶ್ರಣವಾಗಿದ್ದೇವೆ. ಜಾಗತಿಕ ಪೂರೈಕೆ ಸರಪಳಿಯಲ್ಲಿ ಪ್ರಮುಖ ಆಟಗಾರನಾಗಲು ಅಗತ್ಯವಿರುವ ಎಲ್ಲವನ್ನೂ ನಾವು ಹೊಂದಿದ್ದೇವೆ, ನಮ್ಮನ್ನು ವ್ಯಾಪಾರಕ್ಕಾಗಿ ವಿಶ್ವಾಸಾರ್ಹ ಪಾಲುದಾರರಾಗಿ ನೋಡಲಾಗುತ್ತಿದೆ. ನಮ್ಮಲ್ಲಿ ಅತ್ಯಂತ ಅಸಾಧಾರಣವಾದ ಯುವ ಶಕ್ತಿಯೂ ಇದೆ, ಸ್ಟಾರ್ಟ್‌ ಅಪ್‌ ಜಗತ್ತಿನಲ್ಲಿ ಅವರ ಯಶಸ್ಸು ಎಲ್ಲರಿಗೂ ಗೋಚರಿಸುತ್ತಿದೆ. ಹೀಗಾಗಿ ಆವೇಗ ಸ್ಪಷ್ಟವಾಗಿ ಭಾರತದ ಪರವಾಗಿದೆ. ಜಾಗತಿಕ ಸಾಂಕ್ರಾಮಿಕದಂತಹ ಅಭೂತಪೂರ್ವ ಸವಾಲುಗಳನ್ನು ಎದುರಿಸುತ್ತಿದ್ದರೂ, ಭಾರತವು ಬೆಳವಣಿಗೆಯ ಹಾದಿಯಲ್ಲಿ ದೃಢವಾಗಿ ಉಳಿದಿದೆ.

ಇಂದು ನಮ್ಮನ್ನು ಜಾಗತಿಕ ಬೆಳವಣಿಗೆಯ ಚಾಲಕರನ್ನಾಗಿ ನೋಡಲಾಗುತ್ತಿದೆ. ಮೇಕ್‌ ಇನ್‌ ಇಂಡಿಯಾ ವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಮ್ಮನ್ನು ಬೆಂಬಲಿಸು ವಂತೆ ನಾನು ನನ್ನ ಯುವ ಸ್ನೇಹಿತರಿಗೆ ಕರೆ ನೀಡುತ್ತೇನೆ. ನಾವೆಲ್ಲರೂ ಶ್ರೇಷ್ಠತೆಗಾಗಿ ಶ್ರಮಿಸಬೇಕು. ಗುಣಮಟ್ಟವನ್ನು ಒದಗಿಸುವುದು ನಮ್ಮ ಬದ್ಧತೆಯಾಗಬೇಕು. ಶೂನ್ಯ ದೋಷ ನಮ್ಮ ಮಂತ್ರವಾಗಬೇಕು. ನಾವು ಒಟ್ಟಾಗಿ, ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳುವುದು ಮಾತ್ರವಲ್ಲದೇ ಜಗತ್ತಿಗೆ ಉತ್ಪಾದನೆ ಮತ್ತು ನಾವೀನ್ಯತೆಯ ಶಕ್ತಿಕೇಂದ್ರವಾಗುವ ಭಾರತ ನಿರ್ಮಾಣವನ್ನು ಮುಂದುವರಿಸೋಣ.

– ನರೇಂದ್ರ ಮೋದಿ, ಪ್ರಧಾನಮಂತ್ರಿ

ಟಾಪ್ ನ್ಯೂಸ್

congress

Ambedkar; ಅವಮಾನ ಖಂಡಿಸಿ ಕಾಂಗ್ರೆಸ್‌ ಆಂದೋಲನ

1-sara

Hindi ಹೇರಿದರೆ ಗೋಕಾಕ್‌ ಮಾದರಿ ಹೋರಾಟ: ಸಾ.ರಾ.ಗೋವಿಂದು

ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

1-vvv

Virtual university ಸ್ಥಾಪಿಸಿ: ಚಿದಾನಂದ ಗೌಡ ಒತ್ತಾಯ..ಏನಿದು?

1-ausi

Australia; ‘ವನ್‌ ಡೇ ಕಪ್‌’ಗೆ ಡೀನ್‌ ಜೋನ್ಸ್‌  ಹೆಸರು

ravishankar-guruji

Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್‌

Ramalinga-reddy

Distribution: ಕೆಎಸ್ಸಾರ್ಟಿಸಿ ನಿವೃತ್ತ ಸಿಬಂದಿಗೆ 224 ಕೋಟಿ ರೂ. ಪಾವತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

congress

Ambedkar; ಅವಮಾನ ಖಂಡಿಸಿ ಕಾಂಗ್ರೆಸ್‌ ಆಂದೋಲನ

1-sara

Hindi ಹೇರಿದರೆ ಗೋಕಾಕ್‌ ಮಾದರಿ ಹೋರಾಟ: ಸಾ.ರಾ.ಗೋವಿಂದು

ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

1-vvv

Virtual university ಸ್ಥಾಪಿಸಿ: ಚಿದಾನಂದ ಗೌಡ ಒತ್ತಾಯ..ಏನಿದು?

1-ausi

Australia; ‘ವನ್‌ ಡೇ ಕಪ್‌’ಗೆ ಡೀನ್‌ ಜೋನ್ಸ್‌  ಹೆಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.