Chamarajnagar: ತೂಕ ಇಳಿಸಿಕೊಳ್ಳಲು ಪೊಲೀಸರಿಗೆ ಬೆಟ್ಟ ಹತ್ತುವ ವ್ಯಾಯಾಮ!
ನಿತ್ಯ ಒಂದೊಂದು ಠಾಣೆ ಪೊಲೀಸರು ಬೆಟ್ಟ ಹತ್ತಬೇಕು, ಎರಡೇ ತಿಂಗಳಲ್ಲಿ 34 ಸಿಬಂದಿಯ ತೂಕ ಇಳಿಕೆ
Team Udayavani, Jan 14, 2025, 7:35 AM IST
ಚಾಮರಾಜನಗರ: ಕಾನೂನು ಸುವ್ಯವಸ್ಥೆ ಕಾಪಾಡಲು ಹಗಲಿ ರುಳು ಕೆಲಸ ಮಾಡುತ್ತಾ ದೈಹಿಕ ಮತ್ತು ಮಾನಸಿಕ ಆರೋಗ್ಯ ಕುಂದುತ್ತಿರುವ ಪೊಲೀಸರಲ್ಲಿ ಚೈತನ್ಯ ಮೂಡಿಸಿ, ಆರೋಗ್ಯ ಕಾಪಾಡಿಕೊಳ್ಳುವ ಸಲುವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಕವಿತಾ ಅವರು ಪೊಲೀಸ್ ಸಿಬಂದಿಗೆ ನಿತ್ಯವೂ ನಗರದ ಕರಿವರದಸ್ವಾಮಿ ಬೆಟ್ಟವನ್ನು ಹತ್ತಿಳಿಯುವ ಟಾಸ್ಕ್ ನೀಡಿದ್ದಾರೆ!
ಬೆಟ್ಟಕ್ಕೆ ನಸುಕಿನಲ್ಲಿ ತೆರಳಿ ಬೆಟ್ಟ ಹತ್ತುತ್ತಿದ್ದು, ಇದರಿಂದ ಹಲವು ಪೊಲೀಸರ ಬೊಜ್ಜು ಕರಗಿದೆ. ಆರೋಗ್ಯವೂ ಸುಧಾರಿ ಸಿದೆ. ನಗರದ ಮಹಿಳಾ ಠಾಣೆ, ನಗರ, ಗ್ರಾಮಾಂತರ, ಪೂರ್ವ, ಪಟ್ಟಣ, ಸೆನ್, ಡಿಸಿಆರ್‌ಬಿ, ಡಿಎಆರ್‌ನ 34 ಅಧಿಕಾರಿಗಳ ಹಾಗೂ ಸಿಬಂದಿಯ ದೇಹ ತೂಕ ಇಳಿದಿದೆ.
ಎರಡು ತಿಂಗಳಿನಿಂದ ನಿರಂತರವಾಗಿ ಚಾರಣ ನಡೆಯುತ್ತಿದೆ. ತುರ್ತು ಸಿಬಂದಿಯನ್ನು ಹೊರತುಪಡಿಸಿ, ಪ್ರತೀ ದಿನ ತಲಾ ಒಂದು ಠಾಣೆಯ 20ರಿಂದ 25 ಅಧಿಕಾರಿಗಳು ಹಾಗೂ ಸಿಬಂದಿ ಭಾಗವಹಿಸುತ್ತಿದ್ದಾರೆ. ಬೆಳಗ್ಗೆ 6.30ರಿಂದ 9.15ರ ವರೆಗೂ 6 ಕಿ.ಮೀ. ಚಾರಣ ನಡೆಸಲಾಗುತ್ತದೆ.
ಪೊಲೀಸರು ಸದಾ ಒತ್ತಡದ ಕೆಲಸದ ನಡುವೆ ಆರೋಗ್ಯದ ಕಡೆ ಗಮನ ಕೊಡುವುದಿಲ್ಲ. ಬೆಳಗಿನ ಬೆಟ್ಟ ಚಾರಣದಿಂದ ಅವರ ಆರೋಗ್ಯ ಸುಧಾರಣೆ ಕಂಡಿದೆ ಎನ್ನುತ್ತಾರೆ ಪೊಲೀಸ್ ವರಿಷ್ಠಾಧಿಕಾರಿ ಡಾ| ಬಿ.ಟಿ. ಕವಿತಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yelandur: ಮೂಗುರು ತ್ರಿಪುರ ಸುಂದರಿ ಅಮ್ಮನವರ ಜಾತ್ರೆ; ಬಂಡಿ ಹರಿದು ಓರ್ವ ಮೃತ
Finance Debt: ಫೈನಾನ್ಸ್ ಸಾಲ ವಸೂಲಿಗೆ ಹೆದರಿ ಊರನ್ನೇ ಬಿಟ್ಟರು!
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು
MUST WATCH
ಹೊಸ ಸೇರ್ಪಡೆ
Mangaluru: ಜೈಲಾಧಿಕಾರಿಗಳ ಕರ್ತವ್ಯಕ್ಕೆ ಕೈದಿಗಳಿಂದ ಅಡ್ಡಿ; ಹಲ್ಲೆಗೆ ಯತ್ನ
Rain: ಉಡುಪಿ,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವೆಡೆ ಅಕಾಲಿಕ ಮಳೆ
Sachin Panchal Case: ರಾಜು ಕಪನೂರ ಸೇರಿದಂತೆ ಆರೋಪಿಗಳಿಗೆ ಸಂಕ್ರಾಂತಿ ಶಾಕ್
House arrest: ಮಾರಾಮಾರಿ ಪ್ರಕರಣ; ಕೆಟಿಆರ್ ಸೇರಿ ಬಿಆರೆಸ್ ಪ್ರಮುಖರ ಗೃಹ ಬಂಧನ
Koratagere: ಸಂಕ್ರಾಂತಿ ಹಬ್ಬಕ್ಕೆ ಹಸುಗಳಿಗೆ ಪೂಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.