Chandrayaan-3; ಜುಲೈ 14ರಂದು ಚಂದ್ರಯಾನ-3 ಗಗನ ನೌಕೆ ಉಡಾವಣೆ: ಇಸ್ರೋ
ಈ ಬಾರಿ ಚಂದ್ರನ ಅಂಗಳವನ್ನು ಸುಗಮವಾಗಿ ತಲುಪುವ ನಿರೀಕ್ಷೆ ಇದ್ದಿರುವುದಾಗಿ ಸೋಮನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Team Udayavani, Jul 6, 2023, 6:16 PM IST
ಶ್ರೀಹರಿಕೋಟ: ಬಹುನಿರೀಕ್ಷಿತ ಚಂದ್ರಯಾನ-3 ನೌಕೆಯ ಉಡಾವಣೆ ದಿನಾಂಕವನ್ನು ಮುಂದೂಡಿರುವುದಾಗಿ ಇಸ್ರೋ ಗುರುವಾರ (ಜುಲೈ 06) ತಿಳಿಸಿದ್ದು, ಚಂದ್ರಯಾನ 3 ನೌಕೆ ಜುಲೈ 14ರಂದು ಉಡಾವಣೆ ಮಾಡುವುದಾಗಿ ಮಾಹಿತಿ ನೀಡಿದೆ.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ಜಿಎಸ್ ಎಲ್ ವಿಎಂಕೆ ಸೆಟಲೈಟ್ ಚಂದ್ರಯಾನ-3 ನೌಕೆಯನ್ನು ಮಧ್ಯಾಹ್ನ 2.35ಕ್ಕೆ ಹೊತ್ತೊಯ್ಯಲಿದೆ ಎಂದು ಇಸ್ರೋ ತಿಳಿಸಿದೆ. ಚಂದ್ರಯಾನ-3 ನೌಕೆಯನ್ನು ಜು.13ರಂದು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗುವುದು ಎಂದು ಈ ಮೊದಲು ತಿಳಿಸಿತ್ತು.
ಚಂದ್ರಯಾನ-3 ನೌಕೆಯನ್ನು ಉಡಾಯಿಸುವ ಅವಕಾಶ ಜುಲೈ 19ರವರೆಗೂ ಇದ್ದು, ಒಂದು ವೇಳೆ ನಿಗದಿಪಡಿಸಿದ ದಿನಾಂಕದಂದು ಚಂದ್ರಯಾನ-3 ನೌಕೆಯನ್ನು ಉಡಾಯಿಸಲು ಸಾಧ್ಯವಾಗದಿದ್ದಲ್ಲಿ, 19ರವರೆಗೂ ಅವಕಾಶ ಇರುವುದಾಗಿ ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಾರಿ ಚಂದ್ರಯಾನ-3 ನೌಕೆ ಈ ಬಾರಿ ಚಂದ್ರನ ಅಂಗಳವನ್ನು ಸುಗಮವಾಗಿ ತಲುಪುವ ನಿರೀಕ್ಷೆ ಇದ್ದಿರುವುದಾಗಿ ಸೋಮನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2019ರ ಸೆಪ್ಟೆಂಬರ್ ನಲ್ಲಿ ನಡೆದಿದ್ದ ಚಂದ್ರಯಾನ-2 ವೈಫಲ್ಯ ಕಂಡಿತ್ತು. ಈ ಹಿನ್ನೆಲೆಯಲ್ಲಿ ಲ್ಯಾಡರ್ ನಲ್ಲಿ ಇಸ್ರೋ ಹಲವು ಬದಲಾವಣೆ ಕೈಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
Daily Horoscope: ವಧೂವರಾನ್ವೇಷಿಗಳಿಗೆ ಯಶಸ್ಸಿನ ಭರವಸೆ, ಸ್ವರ್ಣೋದ್ಯಮಿಗಳಿಗೆ ಹೇರಳ ಲಾಭ
Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!
ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ
NIA: ರಾಮೇಶ್ವರಂ ಕೆಫೆ ಸ್ಫೋಟ ಉಗ್ರ ಪಾಕ್‌ನಲ್ಲಿ: ಎನ್‌ಐಎಗೆ ಸುಳಿವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.