Charlie Chaplin; ಹಾಸ್ಯಚಕ್ರವರ್ತಿ ಚಾರ್ಲಿ ಚಾಪ್ಲಿನ್ ಪುತ್ರಿ, ನಟಿ ಜೋಸೆಫಿನ್ ನಿಧನ
ಚಾಪ್ಲಿನ್ ಮತ್ತು ಊನಾ ಓನೀಲ್ ಗೆ ಜನಿಸಿದ ಎಂಟು ಮಕ್ಕಳಲ್ಲಿ ಮೂರನೇಯವರಾಗಿದ್ದಾರೆ
Team Udayavani, Jul 22, 2023, 10:55 AM IST
ವಾಷಿಂಗ್ಟನ್ ಡಿಸಿ: ಹಾಲಿವುಡ್ ದಂತಕಥೆ, ಹಾಸ್ಯ ಚಕ್ರವರ್ತಿ ಚಾರ್ಲಿ ಚಾಪ್ಲಿನ್ ಪುತ್ರಿ, ನಟಿ ಜೋಸೆಫಿನ್ ಚಾಪ್ಲಿನ್ (74ವರ್ಷ) ನಿಧನ ಹೊಂದಿರುವುದಾಗಿ ಅಮೆರಿಕ ಮೂಲದ ವೆರೈಟಿ ಡಾಟ್ ಕಾಮ್ ವರದಿ ಮಾಡಿದೆ.
ಇದನ್ನೂ ಓದಿ:295 ಪ್ರಯಾಣಿಕರ ಸಾವಿಗೆ ಕಾರಣವಾದ ಒಡಿಶಾ ರೈಲು ದುರಂತಕ್ಕೆ ಇದುವೇ ಕಾರಣವಂತೆ
ಚಾಪ್ಲಿನ್ ಕುಟುಂಬ ಹೊರಡಿಸಿರುವ ಪ್ರಕಟನೆ ಪ್ರಕಾರ, ಜೋಸೆಫಿನ್ ಚಾಪ್ಲಿನ್ ಜುಲೈ 13ರಂದು ಪ್ಯಾರೀಸ್ ನಲ್ಲಿ ಕೊನೆಯುಸಿರೆಳೆದಿರುವುದಾಗಿ ತಿಳಿಸಿದೆ. 1949ರ ಮಾರ್ಚ್ 28ರಂದು ಜೋಸೆಫಿನ್ ಕ್ಯಾಲಿಫೋರ್ನಿಯಾದ ಸಂಟಾ ಮೋನಿಕಾದಲ್ಲಿ ಜನಿಸಿದ್ದರು.
ಜೋಸೆಫಿನ್ ಚಾರ್ಲಿ ಚಾಪ್ಲಿನ್ ಮತ್ತು ಊನಾ ಓನೀಲ್ ಗೆ ಜನಿಸಿದ ಎಂಟು ಮಕ್ಕಳಲ್ಲಿ ಮೂರನೇಯವರಾಗಿದ್ದಾರೆ. ಜೋಸೆಫಿನ್ ಚಿಕ್ಕ ವಯಸ್ಸಿನಲ್ಲಿಯೇ ನಟನೆ ಆರಂಭಿಸಿದ್ದರು. 1952ರಲ್ಲಿ ತಂದೆ ಚಾರ್ಲಿ ಚಾಪ್ಲಿನ್ ನಿರ್ದೇಶನದ ಲೈಮ್ ಲೈಟ್ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ತಮ್ಮ ಸಿನಿ ಜೀವನಕ್ಕೆ ಪದಾರ್ಪಣೆ ಮಾಡಿದ್ದರು.
ನಟಿ ಜೋಸೆಫಿನ್ ಚಾಪ್ಲಿನ್ ಮೂವರು ಪುತ್ರರನ್ನು (ಚಾರ್ಲಿ, ಅರ್ಥೂರ್ ಮತ್ತು ಜೂಲಿಯೆನ್ ರೋನೆಟ್) ಅಗಲಿದ್ದಾರೆ. ಅಲ್ಲದೇ ಸಹೋದರ, ಸಹೋದರಿಯರಾದ ಮೈಕೇಲ್, ಜೆರಾಲ್ಡೈನ್, ವಿಕ್ಟೋರಿಯಾ, ಜೇನ್, ಆನೆಟ್ಟ್, ಯೂಜೇನ್ ಮತ್ತು ಕ್ರಿಸ್ಟೋಫರ್ ಅವರನ್ನು ಅಗಲಿರುವುದಾಗಿ ವರದಿ ವಿವರಿಸಿದೆ.
ಹಲವು ಸಿನಿಮಾಗಳಲ್ಲಿ ಜೋಸೆಫಿನ್ ನಟಿಸಿದ್ದರು. 1972ರಲ್ಲಿ ಪಿಯರ್ ಪಾವೊಲೊ ಪಸೊಲಿನಿಯ ಪ್ರಶಸ್ತಿ ವಿಜೇತ ದಿ ಕ್ಯಾಂಟರ್ಬರಿ ಟೇಲ್ಸ್ ಮತ್ತು ರಿಚರ್ಡ್ ಬಾಲ್ಡುಸಿಯ ಎಲ್ ಒಡೆರ್ ಡೆಸ್ ಫೌವ್ಸ್ ಚಿತ್ರಗಳಲ್ಲಿ ಅಭಿನಯಿಸಿದ್ದರು.
ಜೋಸೆಫಿನ್ ಚಾಪ್ಲಿನ್ ಫ್ರೆಂಚ್ ನಟ ಮೌರ್ಸಿ ರೋನೆಟ್ ಅವರನ್ನು ವಿವಾಹವಾಗಿದ್ದು, ಪುತ್ರ ಜೂಲಿಯೆನ್ ರೋನೆಟ್ ಜನಿಸಿದ್ದ. 1983ರಲ್ಲಿ ಮೌರ್ಸಿ ನಿಧನರಾಗುವವರೆಗೂ ದಂಪತಿ ಜತೆಗಿದ್ದರು. ನಂತರ ಜೋಸೆಫಿನ್ ಗ್ರೀಕ್ ನ ನಿಕೋಲಸ್ ಸಿಸ್ಟೋವ್ ರಿಸ್ ಎಂಬಾತನನ್ನು ವಿವಾಹವಾಗಿದ್ದು, ದಂಪತಿಗೆ ಪುತ್ರ ಚಾರ್ಲಿ ಜನಿಸಿದ್ದು, ಬಳಿಕ ಜೋಸೆಫಿನ್ ಫ್ರೆಂಚ್ ಪುರಾತತ್ವಶಾಸ್ತ್ರಜ್ಞ ಜೀನ್ ಕ್ಲೌಡೆ ಗಾರ್ಡಿನ್ ಎಂಬವರನ್ನು ವಿವಾಹವಾಗಿದ್ದು, ದಂಪತಿಗೆ ಪುತ್ರ ಅರ್ಥೂರ್ ಜನಿಸಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
AI: ಶಾರುಖ್ ಪತ್ನಿ ಗೌರಿ ಮತಾಂತರ?: ಡೀಪ್ ಫೇಕ್ ಫೋಟೋ ವೈರಲ್
Life threat: ಸಲ್ಮಾನ್ ಮನೆ ಬಾಲ್ಕನಿಗೆ ಬುಲೆಟ್‌ಪ್ರೂಫ್ ಗಾಜು
ನಾನೇ ಇಂಡಿಯಾ..ನಾನೇ ಕ್ಯಾಬಿನೆಟ್.. ʼಎಮರ್ಜೆನ್ಸಿʼಯಲ್ಲಿ ಇಂದಿರಾ ಗಾಂಧಿಯಾಗಿ ಮಿಂಚಿದ ಕಂಗನಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.