ಒಂದು ಬಿಸ್ಕೆಟ್ ಕಥೆ;ಕಂಪನಿ ವಿರುದ್ಧ ಗ್ರಾಹಕ ನ್ಯಾಯಾಲಯಕ್ಕೆ ದೂರು..1ಲಕ್ಷ ಪರಿಹಾರ ಸಿಕ್ತು!
ಸ್ಪಷ್ಟ ಮಾಹಿತಿ ನೀಡಿರುವುದರಿಂದ ಕಂಪನಿಯ ಈ ವಾದವನ್ನು ಒಪ್ಪಲು ಸಾಧ್ಯವಿಲ್ಲ
Team Udayavani, Sep 6, 2023, 4:43 PM IST
ತಿರುವಳ್ಳೂರ್ (ಚೆನ್ನೈ): ಜನಪ್ರಿಯ ಐಟಿಸಿ ಲಿಮಿಟೆಡ್ ನ ಸನ್ ಫೀಸ್ಟ್ ಮಾರಿ ಲೈಟ್ ಬಿಸ್ಕೆಟ್ ಕಂಪನಿ ವಿರುದ್ಧ ಗಾಹಕರೊಬ್ಬರು ಗ್ರಾಹಕ ನ್ಯಾಯಾಲಯದ ಮೊರೆ ಹೋಗಿ ಕಾನೂನು ಸಮರದಲ್ಲಿ ಜಯಗಳಿಸಿರುವ ಪ್ರಕರಣ ಚೆನ್ನೈನಲ್ಲಿ ನಡೆದಿದೆ.
ಏನಿದು ಪ್ರಕರಣ?
ಚೆನ್ನೈನ ವ್ಯಕ್ತಿಯೊಬ್ಬರು ಸನ್ ಫೀಸ್ಟ್ ಮಾರಿ ಲೈಟ್ ಬಿಸ್ಕೆಟ್ ಪ್ಯಾಕೆಟ್ ವೊಂದನ್ನು ಖರೀದಿಸಿದ್ದರು. ಆದರೆ ಬಿಸ್ಕೆಟ್ ಪ್ಯಾಕ್ ಮೇಲೆ ನಮೂದಿಸಿದ್ದಕ್ಕಿಂತ ಒಂದು ಬಿಸ್ಕೆಟ್ ಕಡಿಮೆ ಇದ್ದಿದ್ದು, ಇದರ ವಿರುದ್ಧ ಅವರು ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು.
16 ಬಿಸ್ಕೆಟ್ ಬದಲು 15 ಬಿಸ್ಕೆಟ್ ಪ್ಯಾಕೇಟ್ ನಲ್ಲಿತ್ತು:
ಸನ್ ಫೀಸ್ಟ್ ಮಾರಿ ಲೈಟ್ ಬಿಸ್ಕೆಟ್ ಪ್ಯಾಕ್ ನ ಜಾಹೀರಾತಿನಲ್ಲಿ ಬಿಸ್ಕೆಟ್ ಪ್ಯಾಕ್ ನೊಳಗೆ 16 ಬಿಸ್ಕೆಟ್ ಇದ್ದಿರುವುದಾಗಿ ನಮೂದಿಸಿತ್ತು. ಆದರೆ ದೂರುದಾರ ಚೆನ್ನೈನ ಪಿ.ದಿಲ್ಲಿಬಾಬು ಎಂಬವರು ಪ್ಯಾಕ್ ಒಡೆದಾಗ ಅದರಲ್ಲಿ ಕೇವಲ 15 ಬಿಸ್ಕೆಟ್ ಇದ್ದಿರುವುದನ್ನು ಗಮನಿಸಿದ್ದರು. ಈ ಹಿನ್ನೆಲೆಯಲ್ಲಿ ದಿಲ್ಲಿಬಾಬು ಅವರು ಸನ್ ಫೀಸ್ಟ್ ಮಾರಿ ಲೈಟ್ ಸಂಸ್ಥೆ ವಿರುದ್ಧ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.
ಆದರೆ ಗ್ರಾಹಕ ನ್ಯಾಯಾಲಯದಲ್ಲಿ ಕಂಪನಿ ಪರ ವಕೀಲರು, ತಮ್ಮ ಕಂಪನಿಯ ಉತ್ಪನ್ನವನ್ನು ತೂಕದ ಆಧಾರದ ಮೇಲೆ ಮಾತ್ರ ಮಾರಾಟ ಮಾಡಲಾಗುತ್ತದೆಯೇ ಹೊರತು, ಬಿಸ್ಕೆಟ್ ಗಳ ಸಂಖ್ಯೆಯನ್ನು ಆಧರಿಸಿ ಅಲ್ಲ ಎಂದು ವಾದ ಮಂಡಿಸಿದ್ದರು. ಆದರೆ ಬಿಸ್ಕೆಟ್ ಪ್ಯಾಕ್ ಮೇಲೆ ಉತ್ಪನ್ನವನ್ನು ಖರೀದಿಸುವ ಗ್ರಾಹಕರು ಬಿಸ್ಕೆಟ್ ಸಂಖ್ಯೆಯನ್ನು ಆಧರಿಸಿ ಉತ್ಪನ್ನ ಖರೀದಿಸಬಹುದು ಎಂಬ ಸ್ಪಷ್ಟ ಮಾಹಿತಿ ನೀಡಿರುವುದರಿಂದ ಕಂಪನಿಯ ಈ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಗ್ರಾಹಕ ನ್ಯಾಯಾಲಯ ತಿಳಿಸಿತ್ತು.
ಗ್ರಾಹಕರು ಯಾವುದೇ ಉತ್ಪನ್ನವನ್ನು ಖರೀದಿಸುವ ವೇಳೆ ಪ್ಯಾಕ್ ಮೇಲೆ ನಮೂದಿಸಿರುವುದನ್ನು ಮಾತ್ರ ಗಮನಿಸುತ್ತಾರೆ. ಏಕೆಂದರೆ ಪ್ಯಾಕಿಂಗ್ ನಲ್ಲಿ ಲಭ್ಯವಿರುವ ಮಾಹಿತಿ ಗ್ರಾಹಕರ ಖರೀದಿ ಮೇಲೆ ಪ್ರಭಾವ ಬೀರುತ್ತದೆ ಹಾಗೂ ಲೇಬಲ್ ನಲ್ಲಿರುವ ಲಭ್ಯವಿರುವ ಉತ್ಪನ್ನದ ಮಾಹಿತಿಯು ಗ್ರಾಹಕರ ಖರೀದಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದಿರುವ ಗ್ರಾಹಕ ನ್ಯಾಯಾಲಯವು ಸನ್ ಫೀಸ್ಟ್ ಕಂಪನಿಯು ಗ್ರಾಹಕರಿಗೆ ಒಂದು ಲಕ್ಷ ರೂಪಾಯಿ ಪಾವತಿಸುವಂತೆ ನಿರ್ದೇಶನ ನೀಡಿರುವುದಾಗಿ ವರದಿ ತಿಳಿಸಿದೆ.
100 ಕೋಟಿ ದಂಡ ವಿಧಿಸಲು ಮನವಿ:
ಸನ್ ಫೀಸ್ಟ್ ಕಂಪನಿ ಹಾಗೂ ಅಂಗಡಿಗೆ 100 ಕೋಟಿ ರೂಪಾಯಿ ದಂಡ ಹಾಗೂ ಗ್ರಾಹಕರ ದಿಕ್ಕುತಪ್ಪಿಸುವ ನಿಟ್ಟಿನಲ್ಲಿ ಬಿಸ್ಕೆಟ್ ಮಾರಾಟ ಮಾಡಿರುವುದಕ್ಕಾಗಿ 10 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಕೋರಿ ದಿಲ್ಲಿಬಾಬು ಅವರು ಗ್ರಾಹಕ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ
Nestle: ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್, ಕಿಟ್‌ಕ್ಯಾಟ್ ಚಾಕ್ಲೆಟ್ ಬೆಲೆ ಏರಿಕೆ?
‘DigiLocker’; ಕ್ಲೇಮ್ ಮಾಡದ ಹೂಡಿಕೆಗೆ ಪರಿಹಾರ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.