ಮರೆಯಾದ ಕುಶಲಕರ್ಮಿ, ಪಾರಿಜಾತ ಕಲಾವಿದ, ನಾಟಿ ವೈದ್ಯ ಚಿದಾನಂದ ಬಡಿಗೇರ

Team Udayavani, Mar 20, 2022, 9:13 PM IST

ಮರೆಯಾದ ಕುಶಲಕರ್ಮಿ, ಪಾರಿಜಾತ ಕಲಾವಿದ, ನಾಟಿ ವೈದ್ಯ ಚಿದಾನಂದ ಬಡಿಗೇರ

ಮಹಾಲಿಂಗಪುರ: ಪಟ್ಟಣದ ಹಿರಿಯ ಕಾಷ್ಠ ಕಲಾವಿದ, ಸರ್ಪ ಹುಣ್ಣು ಚಿಕಿತ್ಸಕ ನಾಟಿವೈದ್ಯ, ಶ್ರೀಕೃಷ್ಣ ಪಾರಿಜಾತ ಕಲಾವಿದ ಸೇರಿದಂತೆ ಬಹುಮುಖ ಪ್ರತಿಭೆಯುಳ್ಳ ವಿಶ್ವಕರ್ಮ ಸಮಾಜದ ಹಿರಿಯ ಜೀವಿ ಚಿದಾನಂದ ಮಾರುತೆಪ್ಪ ಬಡಿಗೇರ (79) ಅವರು ವಯೋಸಹಜ ಕಾಯಿಲೆಯಿಂದಾಗಿ ಶನಿವಾರ ರಾತ್ರಿ ನಿಧನರಾದರು.

ಅದ್ಭುತ ಕಾಷ್ಠ ಕಲಾವಿದ :
ವಿಶ್ವಕರ್ಮ ಸಮಾಜದ ಚಿದಾನಂದ ಅವರು ಬಡತನದಲ್ಲಿಯೇ ಬೆಳೆದು ತಮ್ಮ ವಂಶಪಂರಪರೆಯ ಬಡಿಗತನ ಕಾಯಕ ಮುಂದುವರೆಸಿದರು. ಕಟ್ಟಿಗೆಯಲ್ಲಿ ಸೂಕ್ಷ್ಮ ಕೆತ್ತನೆಯ ಮೂಲಕ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿವಿಧ ರೀತಿಯ ಕಲಾತ್ಮಕ ಕಿಡಕಿ, ಬಾಗಿಲುಗಳನ್ನು ರೂಪಿಸುತ್ತಾ ಚಿದಾನಂದರು ಮಹಾಲಿಂಗಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮ ಮತ್ತು ಪಟ್ಟಣಗಳಲ್ಲಿ ಬಹಳ ಹೆಸರುವಾಸಿಯಾಗಿದ್ದರು. ತಮ್ಮ 70ನೇ ಇಳಿ ವಯಸ್ಸಿನವರೆಗೂ ತಮ್ಮ ಕೈ ಚಳಕದ ಮೂಲಕ ಮಹಾಪುರುಷರ ಭಾವಚಿತ್ರವುಳ್ಳ ಸುಂದರ ವಿನ್ಯಾಸದ ಬಾಗಿಲು ರೂಪಿಸುತ್ತಿದ್ದರು.
ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ, ರಾಯಭಾಗ, ಜಮಖಂಡಿ, ಮುಧೋಳ, ಗೋಕಾಕ ತಾಲೂಕಿನ ಹತ್ತಾರು ಗ್ರಾಮಗಳಲ್ಲಿ ಇವರ ಕೆತ್ತನೆಯ ನಾರಾರು ಬಾಗಿಲುಗಳು ಮತ್ತು ಗಣಪತಿ ಮಾಡಣಿಯ ಚೌಕಟ್ಟುಗಳನ್ನು ಕಾಣಬಹುದಾಗಿದೆ. ಆದರೆ ವಯೋಸಹಜವಾಗಿ ಕಣ್ಣುಗಳು ಮಂದವಾದ ಕಾರಣ ಕಳೆದ 7-8 ವರ್ಷಗಳಿಂದ ಕಟ್ಟಿಗೆ ಕೆತ್ತನೆಯನ್ನು ಕಾಯಕವನ್ನು ನಿಲ್ಲಿಸಿದ್ದರು.

ಮಾಶಾಸನದಲ್ಲೇ ಬದುಕು :
ಚಿದಾನಂದ ಅವರು ಕೆಲವರ್ಷಗಳ ಕಾಲ ಅಪ್ರತೀಮ ಶ್ರೀಕೃಷ್ಣ ಪಾರಿಜಾತ ಕಲಾವಿದರಾಗಿಯೂ ಸೇವೆಯನ್ನು ಸಲ್ಲಿಸಿದ್ದಾರೆ. ಅವರಿಗೆ ಗಂಡು ಮಕ್ಕಳಿರಲಿಲ್ಲ. ಇರುವ ನಾಲ್ಕು ಜನ ಹೆಣ್ಣು ಮಕ್ಕಳಿಗೆ ಕಷ್ಟಪಟ್ಟು ದುಡಿದು ಶಿಕ್ಷಣ ಕೊಡಿಸಿ, ಮದುವೆ ಮಾಡಿಕೊಟ್ಟಿದ್ದರು. 2012 ರಿಂದ ಇಲ್ಲಿಯವರೆಗೂ ಪ್ರತಿತಿಂಗಳು ಬರುವ ಕಲಾವಿದರ ಮಾಶಾಸನದಲ್ಲಿಯೇ ಪತ್ನಿಯೊಂದಿಗೆ ಸ್ವಾವಲಂಬನೆಯ ಬದುಕನ್ನು ಸವೆಸಿದ್ದರು. 2011 ಡಿಸೆಂಬರ್ ತಿಂಗಳಲ್ಲಿ ಮಾಶಾಸನಕ್ಕಾಗಿ ಕಾಯುತ್ತಿರುವ ಕಾಷ್ಠ ಕಲಾವಿದ” ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿ, ಚಿದಾನಂದ ಬಡಿಗೇರ ಅವರಿಗೆ ಕಲಾವಿದರ ಮಾಶಾಸನ ಕೊಡಿಸುವಲ್ಲಿ ಉದಯವಾಣಿ ಪತ್ರಿಕೆಯು ಪ್ರಮುಖವಾಗಿ ಸಹಕಾರ ನೀಡಿತ್ತು.

ಇದನ್ನೂ ಓದಿ : ಪರೀಕ್ಷಾ ಭಯ ಹೋಗಲಾಡಿಸಲು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ : ಬನ್ನೂರು ಕೆ.ರಾಜು ಸಲಹೆ

ಆಯುರ್ವೇದ ಚಿಕಿತ್ಸೆ :
ಸದ್ಯ ಪಟ್ಟಣದ ಗ್ರಾಮದೇವತೆ ದ್ಯಾಮವ್ವನ ದೇವಸ್ಥಾನದಲ್ಲಿ ರವಿವಾರ ಮತ್ತು ಗುರುವಾರ ಸರ್ಪ ಹುಣ್ಣು, ಪೈನ್‌ದಂತಹ ಕಾಯಿಲೆಗಳಿಗೆ ಆಯುರ್ವೇದ ಪದ್ದತಿ(ನಾಟಿವೈದ್ಯ) ಮೂಲಕ ಚಿಕಿತ್ಸೆ ನೀಡುತ್ತಾ, ಪತ್ನಿಯೊಂದಿಗೆ ಸರಳ ಜೀವನ ನಡೆಸುತ್ತಿದ್ದರು. ಮುಧೋಳ, ಜಮಖಂಡಿ, ರಾಯಭಾಗ, ಗೋಕಾಕ ತಾಲೂಕಿನ ಹತ್ತಾರು ಗ್ರಾಮಗಳಿಂದ ಸರ್ಪ ಹುಣ್ಣು, ಪೈನ್‌ದಂತಹ ಕಾಯಿಲೆಗಳಿಗೆ ತುತ್ತಾದ ನೂರಾರು ರೋಗಿಗಳು ಪ್ರತಿ ಗುರುವಾರ ಮತ್ತು ರವಿವಾರ ಇವರಲ್ಲಿಗೆ ಬಂದು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇವರ ಈ ನಿಸ್ವಾರ್ಥ ಸೇವೆಗಾಗಿ 2017ನೇ ಸಾಲಿನ ನಿರಾಣಿ ಪೌಂಢೇಶನವತಿಯಿಂದ ಸಮಾಜ ಸೇವಾ ರತ್ನ ಪ್ರಶಸ್ತಿ ಹಾಗೂ 2018ರಲ್ಲಿ ಚಿಮ್ಮಡ ವಿರಕ್ತ ಸ್ವಾಮಿಗಳ 25ನೇ ಪುಣ್ಯಸ್ಮರಣಿ ನಿಮಿತ್ಯ ಕೊಡಮಾಡಿದ ಪ್ರಭು ಭೂಷಣ ಪ್ರಶಸ್ತಿಗಳು ಅರಸಿ ಬಂದಿದ್ದವು.

ಆಯುರ್ವೇದ ಚಿಕಿತ್ಸೆಯು ನಮ್ಮ ತಂದೆಯ ಕಾಲದಿಂದಲೂ ಬಂದಿದೆ, ಅದನ್ನು ಸದ್ಯ ನಾನು ಗ್ರಾಮದೇವತೆ ದ್ಯಾಮವ್ವನ ಸೇವೆಯೆ ಎಂದು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ. ಚಿಕಿತ್ಸೆಗಾಗಿ ರೋಗಿಗಳಿಂದ ಯಾವುದೇ ಫೀ ಪಡೆಯುವದಿಲ್ಲ. ಆದರೆ ಮೂರು ವಾರಗಳ ಚಿಕಿತ್ಸೆ ಪಡೆದು ಗುಣಮುಖರಾದ ನಂತರ ಅವರು ಪ್ರೀತಿಯಿಂದ ನೀಡುವ ಅಲ್ಪ ಕಾಣಿಕೆ ಮತ್ತು ಸರಕಾರದ ಕಲಾವಿದರ ಮಾಶಾಸನದಲ್ಲಿ ಸ್ವಾವಲಂಬಿಯಾಗಿ ಬದುಕುತ್ತಿದ್ದೇನೆ ಎನ್ನುತ್ತಿದ್ದ ಚಿದಾನಂದ ಬಡಿಗೇರ ಅವರ ನಿಧನದಿಂದಾಗಿ ಪಾರಿಜಾತ, ಕಾಷ್ಠ ಕಲೆ ಮತ್ತು ಪಾರಂಪರಿಕ ನಾಟಿವೈದ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದರೆ ತಪ್ಪಾಗಲಾರದು.

ಟಾಪ್ ನ್ಯೂಸ್

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.