Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!
ಶಿಶುವಿನಿಂದ 15 ತಿಂಗಳವರೆಗೆ ಸಮಗ್ರ ಆರೋಗ್ಯ ತಪಾಸಣೆ
Team Udayavani, Nov 9, 2024, 7:10 AM IST
ಬೆಂಗಳೂರು: ನವಜಾತ ಶಿಶುಗಳ ಮರಣ ಪ್ರಮಾಣ ಕಡಿಮೆ ಮಾಡಿ, ಅನಾರೋಗ್ಯ ಸಮಸ್ಯೆಯನ್ನು ಪ್ರಾಥಮಿಕ ಹಂತದಲ್ಲಿ ಪತ್ತೆ ಹಚ್ಚಿ ಚಿಕಿತ್ಸೆಗೆ ಒಳಪಡಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಕ್ಕಳ ಆರೋಗ್ಯ ವಿಭಾಗವು “ಮನೆಮಟ್ಟದ ಎಳೆ ಮಕ್ಕಳ ಆರೈಕೆ’ (ಹೋಮ್ ಬೇಸ್ಡ್ ಯಂಗ್ ಚೈಲ್ಡ್ ಕೇರ್) ಪ್ರಾರಂಭಿಸಿದೆ.
ಅದರ ಭಾಗವಾಗಿ ಮನೆಮಟ್ಟದ ಎಳೆ ಮಕ್ಕಳ ಆರೈಕೆ ಯೋಜನೆಯನ್ನು ಜಾರಿಗೊಳಿಸಿದೆ. ಆ ಮೂಲಕ ಹುಟ್ಟಿದ ಮಗುವಿನಿಂದ 15 ತಿಂಗಳ ವರೆಗಿನ ಮಕ್ಕಳ ಸಮಗ್ರ ಆರೋಗ್ಯ ತಪಾಸಣೆ, ಮಾನಸಿಕ- ದೈಹಿಕ ಆರೋಗ್ಯದ ಬೆಳವಣಿಗೆ ಕುರಿತ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸುತ್ತಿದೆ.
3 ತಿಂಗಳಿಗೊಮ್ಮೆ ಭೇಟಿ
ಆರೋಗ್ಯ ಕಾರ್ಯಕರ್ತೆಯರು ಈ ಹಿಂದೆ “ಮನೆ ಮಟ್ಟದ ನವಜಾತ ಶಿಶು ಆರೈಕೆ ಯೋಜನೆಯಡಿ’ ನವಜಾತ ಶಿಶುವಿಗೆ 45 ದಿನ ಆಗುವವರೆಗೆ 15 ದಿನಗಳಿಗೊಮ್ಮೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದರು. ಈ ಅವಧಿಯನ್ನು 15 ತಿಂಗಳ ವರೆಗೆ ವಿಸ್ತರಿಸಲಾಗಿದೆ. ಇದರಲ್ಲಿ ಮಗುವಿಗೆ 3, 6, 9, 12 ಹಾಗೂ 15 ತಿಂಗಳು ಪೂರ್ಣಗೊಳ್ಳುವ ಸಮಯದಲ್ಲಿ ಭೇಟಿ ನೀಡಿ ಆರೋಗ್ಯ ಪರಿಶೀಲನೆ ಮಾಡಲಿದ್ದಾರೆ.
ಪ್ರಯೋಜನವೇನು?
ಭೇಟಿಯ ಸಂದರ್ಭ ಮಗುವಿನ ಸಮಗ್ರ ಬೆಳವಣಿಯ ಮಾಹಿತಿಯನ್ನು ಕಾರ್ಯಕರ್ತೆಯರು ಸಂಗ್ರಹಿಸಲಿದ್ದಾರೆ. ಹಾಲೂಡಿಸುವಾಗ ಮಗುವಿನ ತೂಕ ಹಾಗೂ ಶಿಶು ಆರೈಕೆ ಬಗ್ಗೆ ತಾಯಿಗೆ ಮಾಹಿತಿ ನೀಡಲಿದ್ದಾರೆ. ಎರಡನೇ ಭೇಟಿ ಅಂದರೆ ಮಗುವಿಗೆ 3, 6, 9 ಸೇರಿದಂತೆ 15 ತಿಂಗಳು ಪ್ರಾರಂಭವಾಗುವಾಗ ಮಗುವಿಗೆ ಯಾವ ಆಹಾರ ನೀಡಬೇಕು ಎಂಬ ಮಾಹಿತಿ ನೀಡುವುದಲ್ಲದೆ ದೈಹಿಕ ಬೆಳವಣಿಗೆ, ಸೇರಿದಂತೆ ವಿವಿಧ ಹಂತ ಸಮಗ್ರವಾಗಿ ಪರಿಶೀಲನೆ ನಡೆಸಲಿದ್ದಾರೆ. ಭೇಟಿಯ ವೇಳೆ ಮಗುವಿನ ಸಂವೇದನಾ ದೌರ್ಬಲ್ಯದ ಜತೆಗೆ ದೃಷ್ಟಿ ಮತ್ತು ಶ್ರವಣ ದೋಷಗಳು, ಇತರ ಮಕ್ಕಳಿಗೆ ಸಂಬಂಧಿಸಿದ ಇತರೆ ಸಮಸ್ಯೆಗಳು ಕಂಡು ಬಂದರೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವುದರ ಜತೆಗೆ ವೈದ್ಯರನ್ನು ಸಂಪರ್ಕಿಸಲು ಪೋಷಕರಿಗೆ ಮಾಹಿತಿ ನೀಡಲಿದ್ದಾರೆ.
“ಮಕ್ಕಳ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲ್ವಿಚಾರಣೆಗಾಗಿ ಹೋಮ್ ಬೇಸ್ಡ್ ಯಂಗ್ ಚೈಲ್ಡ್ ಕೇರ್ ಪರಿಚಯಿಸಲಾಗಿದೆ. ಇದರಲ್ಲಿ ನವಜಾತ ಶಿಶುಗಳ ಸೋಂಕುಗಳು ಹಾಗೂ ಹುಟ್ಟು ಆರೋಗ್ಯ ಸಮಸ್ಯೆಗಳ ಮೇಲ್ವಿಚಾರಣೆ ನಡೆಸಲಾಗುತ್ತದೆ. ಅನಾರೋಗ್ಯಕ್ಕೆ ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ನೀಡುವುದರಿಂದ ಕಾಯಿಲೆ ಶೀಘ್ರವಾಗಿ ಗುಣಮುಖವಾಗಲಿದೆ.” -ಡಾ| ಬಸವರಾಜ ಬಿ. ಧಬಾಡಿ, ಉಪ ನಿರ್ದೇಶಕ, ಮಕ್ಕಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ಆಗ್ತಿರೋದು ಸತ್ಯ:ಸತೀಶ್ ಜಾರಕಿಹೊಳಿ
Renukaswamy Case: ಪವಿತ್ರಾ ಗೌಡ ಜಾಮೀನಿಗೆ ವಾದ ಮಂಡನೆ.. ವಿಚಾರಣೆ ಮುಂದೂಡಿದ ಹೈಕೋರ್ಟ್
Belagavi: ಬಸ್ ಸೀಟಿಗಾಗಿ ಜಗಳ: ದಂಪತಿಗೆ ಮನಸೋ ಇಚ್ಛೆ ಥಳಿಸಿದ ಯುವಕರ ತಂಡ
Electoral Bond Case: ನಿರ್ಮಲಾ, ನಡ್ಡಾ, ನಳಿನ್ ವಿರುದ್ದದ FIR ರದ್ದು ಮಾಡಿದ ಹೈಕೋರ್ಟ್
Fengal Cyclone: ಶಿವಮೊಗ್ಗದಲ್ಲೂ ಎಲ್ಲೊ ಅಲರ್ಟ್; ಶಾಲೆ- ಕಾಲೇಜುಗಳಿಗೆ ರಜೆ ಘೋಷಣೆ
MUST WATCH
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.