ಚೀನ ಆಗಸದಲ್ಲಿ ಒಂದೇ ದಿನ 3 ಸೂರ್ಯೋದಯ!
Team Udayavani, Oct 18, 2020, 7:10 AM IST
ಬೀಜಿಂಗ್: ಭೂಮಿಯ ಎಲ್ಲೆಡೆ ಹುಟ್ಟುವುದು ಒಬ್ಬನೇ ಸೂರ್ಯ. ಆದರೆ, ಅಪರೂಪದ ವಿಸ್ಮಯವೆಂಬಂತೆ ಚೀನದ ಆಕಾಶದಲ್ಲಿ ಶನಿವಾರ 3 ಸೂರ್ಯ ಉದಯಿಸಿದ್ದವು!
“ಮಿಥ್ಯ ಸೂರ್ಯ’, “ಸನ್ ಡಾಗ್ಸ್’ ಅಂತೆಲ್ಲ ಕರೆಯಲ್ಪಡುವ ಈ ವಿಚಿತ್ರ ವಿದ್ಯಮಾನಕ್ಕೆ ರಷ್ಯಾ ಗಡಿಗೆ ಹೊಂದಿಕೊಂಡ ಚೀನದ “ಮೊಹೆ’ ನಗರ ಸಾಕ್ಷಿಯಾಗಿತ್ತು. ಮೊಹೆಯ ಜನ ಬೆಳಗ್ಗೆದ್ದು ನಾಲ್ಕಾರು ಬಾರಿ ಕಣ್ಣುಜ್ಜಿಕೊಂಡು ನೋಡಿದಾಗ ಏಕಕಾಲದಲ್ಲಿ 3 ಸೂರ್ಯ ಕಾಣಿಸಿಕೊಂಡಿದ್ದಾನೆ. ಬೆಳಗ್ಗೆ 6.30ರಿಂದ 9.30ರವರೆಗೆ ಈ ವಿದ್ಯಮಾನ ಜರುಗಿದೆ.
ಏನಿದು ಮಿಥ್ಯ ಸೂರ್ಯ?: ಇದೊಂದು ಬೆಳಕಿನ ಮಾಯೆ. ಸೂರ್ಯನ ಬೆಳಕು ಅತ್ಯುನ್ನತ ಮಂಜಿನ ಗಡ್ಡೆಗಳ ಮೇಲೆ ಬಿದ್ದು ಪ್ರತಿಫಲನ ಹೊಂದುತ್ತವೆ. ಈ ಪ್ರತಿಫಲಿತ ಬೆಳಕು ಆಕಾಶದ ಶುಭ್ರ ಮೋಡದ ನಡುವೆ ಪ್ರಜ್ವಲಿಸುತ್ತದೆ. ಡಾಕ್ಸಿ ಯಾಂಗ್ಲಿಂಗ್ ಪ್ರಾಂತ್ಯದ ಮೊಹೆ, ಮಂಜಿನ ಬೆಟ್ಟಗಳಿಂದ ಕೂಡಿದೆ.
ದೃಶ್ಯ ಹೇಗಿತ್ತು?: ಮೊಹೆ ಆಗಸದಲ್ಲಿ ಮೂಡಿದ್ದ ನೈಜ ಸೂರ್ಯನ ಎಡ, ಬಲಗಳಲ್ಲಿ 2 ಪ್ರಕಾಶಮಾನ ಮಿಥ್ಯ ಸೂರ್ಯಗಳು ಮೂಡಿದ್ದವು. “ಇಂಥ ವಿದ್ಯಮಾನದಲ್ಲಿ ಮಿಥ್ಯ ಸೂರ್ಯ ಪ್ರಕಾಶಮಾನವಾಗಿಯೂ ಹೊಳೆಯ ಬಹುದು. ಕೆಲವು ಬಾರಿ ಕಾಮನಬಿಲ್ಲಿನ ಬಣ್ಣಗಳನ್ನೂ ಹೊಮ್ಮಿಸಬಹುದು. ವಿರಳಾತೀವಿರಳವೆಂಬಂತೆ ಹಿಮಬೆಟ್ಟಗಳ ಪ್ರದೇಶಗಳಲ್ಲಿ ಹುಣ್ಣಿಮೆ ದಿನಗಳಲ್ಲೂ ರಾತ್ರಿ ವೇಳೆ ಮಿಥ್ಯ ಚಂದ್ರನ ದರ್ಶನವಾಗುತ್ತದೆ’ ಎಂದು ಹವಾಮಾನ ತಜ್ಞ ಗ್ರಹಾಂ ಮಾಗ್ಡೆ ತಿಳಿಸಿದ್ದಾರೆ. ಚೀನ ಹವಾಮಾನ ಇಲಾಖೆ ಮಿಥ್ಯ ಸೂರ್ಯನ ಚಿತ್ರಗಳನ್ನು, ವಿಡಿಯೊ ರೂಪದಲ್ಲಿ ಬಿಡುಗಡೆ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ: ಕೇಸು ದಾಖಲು
Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.