ಚೀನಾದ “ಶೂನ್ಯ ಕೊರೊನಾ ಮಾದರಿ” ಎಷ್ಟು ಪರಿಣಾಮಕಾರಿ?
ಕೆಲವು ಕೇಸುಗಳು ಕಂಡು ಬಂದರೂ, ಕಠಿಣ ಲಾಕ್ ಡೌನ್ ಜಾರಿ ಮಾಡಿ ಜನರನ್ನು ಮನೆಯೊಳಗೇ ಕೂರಿಸಲಾಗುತ್ತದೆ.
Team Udayavani, Jan 18, 2022, 12:28 PM IST
“ನಮ್ಮ ದೇಶದಲ್ಲಿ ಒಂದೇ ಒಂದು ಕೊರೊನಾ ಕೇಸ್ ಕೂಡ ಇರಬಾರದು…” ಇದು ನೆರೆಯ ಚೀನಾದ ಕಟುಮಂತ್ರ. ಇದಕ್ಕಾಗಿಯೇ ಏನು ಬೇಕಾದರೂ ಮಾಡಲು ಸಿದ್ಧ ಎಂದು ಹೊರಟಿರುವ ಚೀನಾ, ಕೆಲವೊಂದು ಅಮಾನವೀಯ ಕ್ರಮಗಳನ್ನೂ ತೆಗೆದುಕೊಳ್ಳುತ್ತಿದೆ. ಸೋಂಕಿನ ನಿಯಂತ್ರ ಣಕ್ಕಾಗಿ ಭಾರೀ ಪ್ರಮಾಣದಲ್ಲಿ ಟೆಸ್ಟಿಂಗ್ ನಡೆಸುವುದಲ್ಲದೇ ಕಠಿಣ ಲಾಕ್ ಡೌನ್ ಜಾರಿ ಮಾಡು ತ್ತಿದೆ. ಇದರಿಂದ ಕೇಸುಗಳು ಹೆಚ್ಚಾಗುತ್ತವೆಯೇ ವಿನಃ, ಕಡಿಮೆಯಾಗುವುದಿಲ್ಲ ಎಂಬುದು ತಜ್ಞರ ಮಾತು. ಹಾಗಾದರೆ, ಈ ಶೂನ್ಯ ಕೊರೊನಾ ಎಂದರೆ ಏನು? ಎಂಬ ಕುರಿತ ಒಂದು ನೋಟ ಇಲ್ಲಿದೆ…
ಏನಿದು ಶೂನ್ಯ ಕೊರೊನಾ?
ಚೀನಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಸಿಂಗಾಪುರದಲ್ಲಿ ಈ ಶೂನ್ಯ ಕೊರೊನಾ ಮಾದರಿ ಜಾರಿ ಯಲ್ಲಿದೆ. ಒಂದೇ ಒಂದು ಕೇಸ್ ಪತ್ತೆಯಾದ ಕೂಡಲೇ ಕಠಿಣ ನಿಯಮ ಜಾರಿಗೆ ತರುವುದೇ ಇದರ ಸೂತ್ರ. ಅಂದರೆ, ಲಾಕ್ ಡೌನ್ ಘೋಷಣೆ, ಸಾಮೂಹಿಕ ಕೊರೊನಾ ಪರೀಕ್ಷೆಯಂಥ ಕ್ರಮ ತೆಗೆ ದುಕೊಳ್ಳುವುದು. ಇಂಥ ಕ್ರಮಗಳಿಂದಾಗಿಯೇ ನಾವು ಇದುವರೆಗಿನ ಎಲ್ಲಾ ವೇರಿಯಂಟ್ ಗ ಳನ್ನು ತಡೆದಿದ್ದೇವೆ ಎಂದು ಹೇಳುತ್ತಿದೆ ಚೀನಾ ಸರ್ಕಾರ.
ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಸಿಂಗಾಪುರದಲ್ಲಿ ಲಾಕ್ ಡೌನ್, ನಿರ್ದಿಷ್ಟ ಪ್ರದೇಶಗಳಲ್ಲಿ ನಿರ್ಬಂಧ ಘೋಷಿಸಿ ಕೊರೊನಾವನ್ನು ಹತೋಟಿಗೆ ತರಲಾಗುತ್ತಿದೆ. ಆದರೆ, ಚೀನಾದಲ್ಲಿ ಮಾತ್ರ, ಲಾಕ್ ಡೌನ್ ವೇಳೆಯಲ್ಲಿ ಅಮಾನವೀಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಉದಾಹರಣೆಗೆ, ಚೀನಾದ ಕ್ಸಿಯಾನ್ ಎಂಬ ನಗರದಲ್ಲಿ ಡಿಸೆಂಬರ್ ನಲ್ಲಿ 150 ಕೇಸ್ ಪತ್ತೆಯಾಗಿದ್ದವು. ತಕ್ಷಣವೇ ಚೀನಾ ಸರ್ಕಾರ ಇಲ್ಲಿ ಕಠಿಣ ಲಾಕ್ ಡೌನ್ ಘೋಷಣೆ ಮಾಡಿತು. ಹಾಗೆಯೇ, ಝೇಂಗೌ ಎಂಬ ಪ್ರಾಂತ್ಯ ದಲ್ಲಿ ಕೇವಲ 11 ಕೇಸ್ ಪತ್ತೆಯಾದವು ಎಂಬ ಕಾರಣಕ್ಕಾಗಿ ಇಲ್ಲಿನ ಎಲ್ಲಾ ಜನರಲ್ಲೂ ಸಾಮೂ ಹಿಕ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಈ ಕ್ರಮ ಪರಿಣಾಮಕಾರಿಯೇ?
ಚೀನಾ ಸರ್ಕಾರದ ಪ್ರಕಾರ ಈ ಕ್ರಮ ಅತ್ಯಂತ ಪರಿಣಾಮಕಾರಿ. ಕೊರೊನಾ ಸಾಂಕ್ರಾಮಿಕ ಆರಂಭವಾದಾಗ, ಚೀನಾದಲ್ಲಿ 1,00,000 ಕೇಸುಗಳು ಕಾಣಿಸಿಕೊಂಡಿದ್ದವು, ಹಾಗೆಯೇ, 5000 ಮಂದಿ ಮಾತ್ರ ಸತ್ತಿದ್ದರು. ಕೊರೊನಾ ಕಾಣಿಸಿಕೊಂಡ ತಕ್ಷಣವೇ ಕಠಿಣ ಕ್ರಮ ತೆಗೆದುಕೊಂಡಿ ದ್ದರಿಂದ ಈ ರೀತಿ ನಿಯಂತ್ರಣ ತರಲು ಸಾಧ್ಯವಾಯಿತು. ಇಲ್ಲದಿದ್ದರೆ, ಜಗತ್ತಿನ ಬೇರೆ ದೇಶ ಗ ಳಲ್ಲಿ ಆದ ರೀತಿಯೇ ಇಲ್ಲೂ ಹೆಚ್ಚು ಕೇಸು ಮತ್ತು ಸಾವು ನೋವುಗಳು ಆಗುತ್ತಿದ್ದವು ಎಂದು ಚೀನಾ ವಾದಿಸುತ್ತಿದೆ.
ಹೊರ ಜಗತ್ತಿನ ಜೊತೆ ಸಂಪರ್ಕ ಕಡಿತ
ಝೀರೋ ಕೋವಿಡ್ ಸ್ಥಿತಿ ಕೇವಲ ಚೀನಾದಲ್ಲಷ್ಟೇ ಅಲ್ಲ, ಹಾಂಕಾಂಗ್ ಮತ್ತು ತೈವಾನ್ ನಲ್ಲೂ ಜಾರಿಯಲ್ಲಿದೆ. ಕಳೆದ ಎರಡು ವರ್ಷಗಳಿಂದಲೂ ಈ ಮೂರು ದೇಶಗಳು ಹೊರಜಗತ್ತಿನ ಜೊತೆ ಸಂಪರ್ಕ ಕಡಿತ ಮಾಡಿಕೊಂಡಿವೆ. ಇನ್ನೂ ಅಂತಾರಾಷ್ಟ್ರೀಯ ವಿಮಾನ ಯಾನ ಆರಂಭವಾ ಗಿಲ್ಲ. ಹೊರಗಿನವರು ಇಲ್ಲಿಗೆ ಬರಬೇಕು ಎಂದರೆ, ಕಠಿಣವಾದ ಕ್ವಾರಂಟೈನ್ ಮತ್ತು ಐಸೋಲೇ ಶ ನ್‌ಗೆ ಒಳಗಾಗಬೇಕು. ಹೀಗಾಗಿಯೇ ಇಲ್ಲಿಗೆ ಹೋಗುವವರು ಹೆದರುತ್ತಿದ್ದಾರೆ.
ಒಮಿಕ್ರಾನ್ ನಿಂದ ಎಲ್ಲಾ ಬದಲಾಗುತ್ತಿದೆಯೇ?
ಜಗತ್ತಿನ ವಿವಿಧ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಒಮಿಕ್ರಾನ್, ಕೊರೊನಾ ಸಾಂಕ್ರಾಮಿಕ ರೋಗದ ಕಡೇ ಹಂತ. ಅಂದರೆ ಇದು ಎಂಡೆಮಿಕ್ ಹಂತ. ಒಮ್ಮೆ ಜಗತ್ತಿನ ಎಲ್ಲರಿಗೂ ಒಮಿಕ್ರಾನ್ ಬಂದು ಹೋದ ಮೇಲೆ ಕೊರೊನಾ ವಿರುದ್ಧ ದೇಹದಲ್ಲಿ ಪ್ರತಿಕಾಯಗಳು ಸೃಷ್ಟಿ ಯಾಗುತ್ತವೆ. ಇದರ ಜತೆಗೆ, ತೆಗೆದುಕೊಂಡಿರುವ ಲಸಿಕೆಯ ಪ್ರಭಾವ ಮತ್ತು ದೇಹದಲ್ಲಿನ ಪ್ರತಿಕಾಯದಿಂದಾಗಿ ಕೊರೊನಾವನ್ನು ನಿಯಂತ್ರಿಸಬಹುದು ಎಂದು ಹೇಳುತ್ತಾರೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಈ ಕೊರೊನಾ ಇತರೆ, ಜ್ವರದಂತೆಯೇ ಆಗುತ್ತದೆ ಎಂದೂ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಚೀನಾ ಮಾರ್ಗದಿಂದ ಅಪಾಯವೇ?
ಚೀನಾದ ಶೂನ್ಯ ಕೊರೊನಾ ಮಾದರಿಯೇ ಅಪಾಯಕಾರಿ ಎಂಬುದು ಜಗತ್ತಿನ ಬಹುತೇಕ ತಜ್ಞರ ಅಭಿಪ್ರಾಯ. ನೀವು ಎಷ್ಟೇ ಲಸಿಕೆ ತೆಗೆದುಕೊಂಡಿದ್ದರೂ, ಕೊರೊನಾಗೆ ನಿಮ್ಮ ದೇಹ ತೆರೆದು ಕೊಳ್ಳದಿದ್ದರೆ ಅದು ನಿಮ್ಮಿಂದ ದೂರ ಹೋಗದು ಎಂದು ಹೇಳುತ್ತಾರೆ. ಅಂದರೆ, ಎಲ್ಲರಿಗೂ ಒಮ್ಮೆಯಾದರೂ ಬಂದು ಹೋಗಲೇಬೇಕು ಎಂಬುದು ಇವರ ಮಾತು.
ಚೀನಾದಲ್ಲಿ ಈಗ ಕೆಲವೇ ಕೆಲವು ಕೇಸುಗಳು ಕಂಡು ಬಂದರೂ, ಕಠಿಣ ಲಾಕ್ ಡೌನ್ ಜಾರಿ ಮಾಡಿ ಜನರನ್ನು ಮನೆಯೊಳಗೇ ಕೂರಿಸಲಾಗುತ್ತದೆ. ಇದರಿಂದ ಇವರು ಕೊರೊನಾ ವೈರಸ್‌ಗೆ ತುತ್ತಾಗುವುದು ಅಸಾಧ್ಯ. ಅಲ್ಲದೆ, ಕೊರೊನಾ ಕೆಲವರಿಗೆ ಲಕ್ಷಣಗಳೊಂದಿಗೆ ಬರಬಹುದು, ಇನ್ನೂ ಕೆಲವರಿಗೆ ಲಕ್ಷಣಗಳಿಲ್ಲದೇ ಬರಬಹುದು. ಹೀಗಾಗಿ ಎಲ್ಲರೂ ಕೊರೊನಾಗೆ ತೆರೆದು ಕೊಳ್ಳಬೇಕು ಎಂದೇ ಹೇಳುತ್ತಾರೆ.
ಲಸಿಕೆ ಪರಿಣಾಮಕಾರಿಯಲ್ಲವೇ?
ಸದ್ಯ ಚೀನಾದ ಜನ ಸಂಖ್ಯೆಯ ಶೇ.85ರಷ್ಟು ಮಂದಿಗೆ ಲಸಿಕೆ ಹಾಕಲಾಗಿದೆ. ಜಗತ್ತಿನಲ್ಲೇ ಅತಿ ಹೆಚ್ಚು ಮಂದಿಗೆ ಲಸಿಕೆ ಕೊಟ್ಟ ದೇಶಗಳ ಪೈಕಿ ಚೀನಾವೇ ಮೊದಲ ಸ್ಥಾನದಲ್ಲಿದೆ. ಆದರೂ, ಈಗಿನ ಒಮಿಕ್ರಾನ್ ಲಸಿಕೆಯ ಪ್ರಭಾವವನ್ನೂ ಮೀರಿ ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ಆದರೆ, ಲಸಿಕೆ ತೆಗೆದುಕೊಂಡವರಲ್ಲಿ ಹೆಚ್ಚಿನ ಅಪಾಯಗಳಾಗುತ್ತಿಲ್ಲ. ಹೀಗಾಗಿ, ಕೇವಲ ಲಸಿಕೆ ತೆಗೆದುಕೊಂಡರೆ, ಕೊರೊನಾದಿಂದ ಮುಕ್ತರಾಗುತ್ತೇವೆ ಎಂಬುದು ಸುಳ್ಳು ಎಂಬುದು ತಜ್ಞರ ವಾದ. ಹೀಗಾಗಿ, ದೇಶವನ್ನು ಮುಚ್ಚದೇ, ಲಾಕ್ ಡೌನ್ ಮೊರೆ ಹೋಗದಿರುವುದು ವಾಸಿ ಎಂದು ಹೇಳುತ್ತಾರೆ.
ಸಾಮೂಹಿಕ ಪರೀಕ್ಷೆ ಸಾಧುವೇ?
ಒಮಿಕ್ರಾನ್ ವಿಚಾರದಲ್ಲಿ ಜಗತ್ತಿನ ಒಂದೊಂದು ದೇಶದಲ್ಲಿ ಒಂದೊಂದು ನಿಯಮ ಜಾರಿಯಲ್ಲಿದೆ. ಭಾರತದಲ್ಲಿ ಮಾತ್ರ ಕೊರೊನಾ ಪರೀಕ್ಷೆ ವಿಚಾರದಲ್ಲಿ ಬೇರೆಯದ್ದೇ ರೀತಿಯ ನಿರ್ಧಾರ ಕೈಗೊ ಳ್ಳಲಾಗಿದೆ. ಇತ್ತೀಚೆಗಷ್ಟೇ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ( ಐಸಿಎಂಆ ರ್), ಕೊರೊನಾ ರೋಗಿಗಳ ಸಂಪರ್ಕಿತರಾಗಿದ್ದೂ, ಯಾವುದೇ ಲಕ್ಷಣಗಳು ಇಲ್ಲದಿದ್ದರೆ ಮತ್ತು ಹೈ ರಿಸ್ಕ್ ಕೆಟಗೆರಿಯಲ್ಲಿ ಬರುವುದಿಲ್ಲ ಎಂದಾದರೆ, ಅಂಥವರ ಪರೀಕ್ಷೆ ಮಾಡಬೇಡಿ ಎಂದಿದೆ. ಅಂದರೆ, ಎಲ್ಲರನ್ನು ಪರೀಕ್ಷೆಗೆ ಒಳಪಡಿಸುವುದನ್ನು ಬಿಟ್ಟು, ಇತರೆ ರೋಗಗಳಿಂದ ನರಳುತ್ತಿರು ವವರು ಮತ್ತು ಹೆಚ್ಚಿನ ಕೊರೊನಾ ಲಕ್ಷಣಗಳನ್ನು ಹೊಂದಿದವರಿಗೆ ಮಾತ್ರ ಪರೀಕ್ಷೆ ಮಾಡಬಹುದು ಎಂಬುದು ಕೇಂದ್ರ ಸರ್ಕಾರದ ಹೇಳಿಕೆ.
ಬೀಜಿಂಗ್ ವಿಂಟರ್ ಒಲಿಂಪಿಕ್ಸ್ ಕಥೆ ಏನು?
ಇನ್ನೇನು ಕೆಲವೇ ದಿನಗಳಲ್ಲಿ ಚೀನಾದ ಬೀಜಿಂಗ್ ನಲ್ಲಿ ಚಳಿಗಾಲದ ಒಲಿಂಪಿಕ್ಸ್ ಆರಂಭವಾಗ ಲಿದೆ. ಇದರಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ, ಮಾಧ್ಯಮದವರಿಗೆ, ಇತರೆ ಸಿಬ್ಬಂದಿಗೆ ಕಠಿಣ ನಿಯಮ ರೂಪಿಸಲಾಗಿದೆ. ಒಂದು ವೇಳೆ ಯಾರಾ ದರೂ ಸ್ಪರ್ಧಿಗೆ ಪಾಸಿಟಿವ್ ಬಂದರೆ, ಅವ ರನ್ನು ಹೋಟೆಲ್‌ವೊಂದಕ್ಕೆ ಕರೆದು ಕೊಂಡು ಹೋಗಿ ಕೂಡಿ ಹಾಕಲಾಗುತ್ತದೆ. ಇವರಿಗೆ ಹೋಟೆ ಲ್‌ನ ಕಿಟಕಿ ತೆರೆ ಯಲು ಮಾತ್ರ ಅನು ಮತಿ ನೀಡ ಲಾ ಗು ತ್ತದೆ. ಉಳಿ ದಂತೆ ಹೊರಗೂ ಬರುವ ಹಾಗಿಲ್ಲ. ದಿನವೂ ಆರ್ ಟಿಪಿಸಿ ಆರ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ನೆಗೆಟಿವ್ ಬಂದರೂ, ಪ್ರತಿ ನಿತ್ಯ ಟೆಸ್ಟ್ ಮಾಡಿಸಿಕೊಳ್ಳಬೇಕು ಎಂಬ ನಿಯಮ ರೂಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.