2030ರ ವಿಶ್ವಕಪ್ ಫುಟ್‌ಬಾಲ್‌ಗೆ ಚೀನ ಸಿದ್ಧತೆ !
Team Udayavani, Apr 26, 2020, 7:00 AM IST
ತಾವರೆ ಹೂವಿನ ಅತ್ಯಾಕರ್ಷಕ ವಿನ್ಯಾಸದ ಕ್ರೀಡಾಂಗಣದ ನೀಲನಕ್ಷೆ
ಬೀಜಿಂಗ್: ಇಡೀ ವಿಶ್ವಕ್ಕೆ ಕೋವಿಡ್-19 ಕಾಣಿಕೆ ನೀಡಿ ಖಳನಾಯಕನ ಸ್ಥಾನದಲ್ಲಿ ನಿಂತಿರುವ ಚೀನ, ಕ್ರೀಡಾ ಆತಿಥ್ಯದಲ್ಲಿ ಸೂಪರ್ ಪವರ್ ಆಗಬೇಕೆಂಬ ಆಕಾಂಕ್ಷೆಯಿಂದ ದೂರವಾಗಿಲ್ಲ. ಅದು ಬಿಡ್ ಸಲ್ಲಿಸುವ ಮೊದಲೇ 2030ರ ಪ್ರತಿಷ್ಠಿತ ಫಿಫಾ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯ ಸಿದ್ಧತೆಯನ್ನು ಆರಂಭಿಸಿದೆ!
ಇದಕ್ಕಾಗಿ ಗ್ವಾಂಗ್‌ಝೂನಲ್ಲಿ 1.7 ಬಿಲಿಯನ್ ಡಾಲರ್ ವೆಚ್ಚದ ನೂತನ ಕ್ರೀಡಾಂಗಣದ ಕಾಮಗಾರಿಯನ್ನು ಆರಂಭಿಸಿದೆ. ತಾವರೆ ಹೂವಿನ ಅತ್ಯಾಕರ್ಷಕ ವಿನ್ಯಾಸದಲ್ಲಿರುವ ಈ ಕ್ರೀಡಾಂಗಣ ಒಂದು ಲಕ್ಷ ವೀಕ್ಷಕರ ಸಾಮರ್ಥ್ಯವನ್ನು ಹೊಂದಿರಲಿದೆ. 2022ರ ಒಳಗಾಗಿ ಇದನ್ನು ಪೂರ್ಣಗೊಳಿಸುವುದು ಚೀನದ ಯೋಜನೆ. ಆಗ ಇದು ವಿಶ್ವದ ಅತೀ ದೊಡ್ಡ ಫುಟ್‌ಬಾಲ್ ಸ್ಟೇಡಿಯಂ ಎಂಬ ಹಿರಿಮೆಗೆ ಪಾತ್ರವಾಗಲಿದೆ.
ಇನ್ನಷ್ಟು ಕ್ರೀಡಾಂಗಣ…
ಈ ಸಂದರ್ಭದಲ್ಲಿ ಕ್ರೀಡಾಂಗಣದ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಚೀನದ ಖ್ಯಾತ “ಎವರ್‌ಗ್ರಾÂಂಡ್ ಗ್ರೂಪ್’ನ ಮುಖ್ಯಸ್ಥರು ಪ್ರತಿಕ್ರಿಯಿಸಿದ್ದು, ವಿಶ್ವಕಪ್‌ಗಾಗಿ 80 ಸಾವಿರದಷ್ಟು ವೀಕ್ಷಕರ ಸಾಮರ್ಥ್ಯದ ಇನ್ನೂ 2 ನೂತನ ಸ್ಟೇಡಿಯಂ ಸಹಿತ ಒಟ್ಟು 12 ಅತ್ಯಾಧುನಿಕ ಕ್ರೀಡಾಂಗಣಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದಿದ್ದಾರೆ.
ಚೀನ ವಿಶ್ವಕಪ್ ಪಂದ್ಯಾವಳಿಗೆ ಬಿಡ್ ಸಲ್ಲಿಸುವ ಎಲ್ಲ ಅರ್ಹತೆ ಹೊಂದಿದೆ ಎಂಬುದಾಗಿ “ಓರಿಯಂಟಲ್ ನ್ಪೋರ್ಟ್ಸ್ ಡೈಲಿ’ಯ ಜಿ ಯುಯಾಂಗ್ ಹೇಳಿದ್ದು, ಚೀನ ಬಿಡ್ ಗೆಲ್ಲುವ ಸಾಧ್ಯತೆಯನ್ನು ಕಳೆದ ಜೂನ್‌ನಲ್ಲೇ ಫಿಫಾ ಅಧ್ಯಕ್ಷ ಗಿಯಾನಿ ಇನ್‌ಫ್ಯಾಂಟಿಯಾನೊ ಹೇಳಿದ್ದನ್ನು ಉಲ್ಲೇಖೀಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ರಾತ್ರಿ ಪ್ರಿಪೇಯ್ಡ್ ಆಟೋ ಇಲ್ಲದೆ ಪ್ರಯಾಣಿಕರ ಪರದಾಟ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.