ಶೌಚಾಲಯದ ಹೊರ ಆವರಣದಲ್ಲೇ ಮಲಗುತ್ತಿದ್ದ ವ್ಯಕ್ತಿಯ ಕಥೆ ಹಾಲಿವುಡ್ ಸಿನಿಮಾವಾಯ್ತು
ಅದೃಷ್ಟ ಆತನನ್ನು ಬಹಳಷ್ಟು ಸಮಯದವರೆಗೆ ಕಾಯಿಸಿಬಿಟ್ಟಿತು.
Team Udayavani, Aug 30, 2021, 12:52 PM IST
ಸುಮಾರು ಒಂದೂವರೆ ವರ್ಷಗಳ ಕಾಲ ತನ್ನ ಪುಟ್ಟ ಮಗುವಿನೊಂದಿಗೆ ಸಾರ್ವಜನಿಕ ಶೌಚಾಲಯದ ಹೊರ ಆವರಣದಲ್ಲಿ ಮಲಗುತ್ತಿದ್ದ ಆತನಿಗೆ ಒಂದಲ್ಲ ಒಂದು ದಿನ ತನ್ನ ಜೀವನ ಬದಲಾಗುತ್ತದೆ ಎಂಬ ನಂಬಿಕೆ ಇತ್ತು. ಅವನ ನಂಬಿಕೆ ನಿಜವಾಯಿತು. ಜಗತ್ತು ಒಂದು ಕ್ಷಣ ತಿರುಗಿ ನೋಡುವವರೆಗೂ ಆತ ಬೆಳೆದುಬಿಟ್ಟ. ಕೇವಲ ಬದಲಾದದ್ದು ಮಾತ್ರವಲ್ಲ ಆತನ ಜೀವನಕಥೆಯನ್ನು ಆಧಾರಿಸಿ ಒಂದು ಹಾಲಿವುಡ್ ಸಿನೆಮಾ ತಯಾರಾಗುತ್ತದೆ. ಅದೂ ಹಿಟ್ ಸಿನೆಮಾ.
ಸ್ಯಾನ್ ಫ್ರಾನ್ಸಿಸ್ಕೋ ದ ಕ್ರಿಸ್ ಗಾರ್ಡಿನರ್ ಮತ್ತು ಆತನ ಮಗನಿಗೆ ಅಲ್ಲಿನ ಸಾರ್ವಜನಿಕ ಶೌಚಾಲಯದ ಹೊರ ಆವರಣವೇ ಮನೆ. ಇದ್ದ ಒಂದು ಸಣ್ಣ ಕೆಲಸದಲ್ಲಿ ಅವನ ಮತ್ತು ಮಗನ ಹೊಟ್ಟೆ ತುಂಬುತ್ತಿತ್ತು. ಹಣ ದುಂದು ವೆಚ್ಚದ ಬಗ್ಗೆ ಆಲೋಚನೆಯೇ ಇರಲಿಲ್ಲ. ಊಟ ತಿಂಡಿಯ ಖರ್ಚು ಬಿಟ್ಟು ಉಳಿದ ಹಣದಲ್ಲಿ ಮಗನನ್ನು ಶಾಲೆಗೆ ಸೇರಿಸುತ್ತಾರೆ. ತನ್ನ ಮಗನಾದರೂ ಶಿಕ್ಷಣ ಪಡೆದು ಎಲ್ಲರಂತೆ ಬದುಕಲಿ ಎಂಬ ಪ್ರತಿಯೋರ್ವ ತಂದೆಯ ಕನಸು ಮಾತ್ರ ಕ್ರಿಸ್ ಗಾರ್ಡಿನರ್ ಗೆ ಇದ್ದಿದ್ದು.
ಕ್ರಿಸ್ ಗಾರ್ಡಿನರ್ ಬಾಲ್ಯ ಅಷ್ಟು ಸುಲಭವಾಗಿರಲಿಲ್ಲ. ಸಿಂಗಲ್ ಪೇರೆಂಟ್ ಆದ ಅವನ ಅಮ್ಮನೇ ಆತನಿಗೆ ರೋಲ್ ಮಾಡೆಲ್. ನಿಜವಾಗುವ ಕನಸುಗಳನ್ನು ಮಾತ್ರ ನೀನು ಕಾಣಬೇಕು, ನೀನು ಮುಂದೆ ಏನಾಗಬೇಕೆಂಬುದನ್ನು ನೇನೇ ನಿರ್ಧರಿಸಬೇಕೆಂದು ಹೇಳುತ್ತಿದ್ದ ಅವಳ ಮಾತುಗಳು ಕ್ರಿಸ್ ಗಾರ್ಡಿನರ್‌ಗೆ ಸ್ಫೂರ್ತಿದಾಯಕವಾಗಿದ್ದವು. ಆದರೂ ಅದೃಷ್ಟ ಆತನನ್ನು ಬಹಳಷ್ಟು ಸಮಯದವರೆಗೆ ಕಾಯಿಸಿಬಿಟ್ಟಿತು. ಬೇರೆ ಬೇರೆ ಕೆಲಸಗಳನ್ನು ಮಾಡುತ್ತಾ ಜೀವನ ಸಾಗಿಸುತ್ತಿದ್ದ. ಇದರ ಮಧ್ಯೆ ಯಾವುದೋ ಕಾರಣಗಳಿಂದ ಜೈಲಿಗೂ ಹೋಗಿ ಬರುತ್ತಾರೆ. ಮೂರು ವರ್ಷಗಳ ಬಳಿಕ ವಾಪಾಸು ಬಂದು ಜೀವನ ಆರಂಭಿಸುತ್ತಾರೆ. ಮಗ ಹುಟ್ಟಿದ ಬಳಿಕ ಅವರ ಜೀವನ ಬದಲಾಗುತ್ತದೆ. ಮಗನೂ ತನ್ನ ಕಷ್ಟ ಅನುಭವಿಸಬಾರದೆಂದು ಆತ ಹೆಚ್ಚು ದುಡಿಇಯಲು ಆರಂಭಿಸುತ್ತಾನೆ.
ಬದುಕು ಬದಲಿಸಿದ ರೆಡ್ ಫೆರಾರಿ
ರೆಡ್‌ಫೆರಾರಿ ವಾಹನವನ್ನು ಯಾವುದೋ ಕಟ್ಟಡದ ಎದುರುಗಡೆ ಕಂಡ ಕ್ರಿಸ್‌ಗಾರ್ಡಿನರ್ ಆ ಕಾರನ್ನು ನೋಡಿಯೇ ನಿಲ್ಲುತ್ತಾರೆ. ಅದರ ಮಾಲಕ ಕ್ರಿಸ್ ಗಾರ್ಡಿನರ್ ಅವರಲ್ಲಿ ಕೇಳಿದ್ದು ಒಂದು ಎರಡೇ ಪ್ರಶ್ನೆ ನೀನು ಏನು ಮಾಡುತ್ತಿಯಾ ಮತ್ತು ಅದನ್ನು ಹೇಗೆ ಮಾಡುತ್ತಿಯಾ ಎಂದು..ಆತ ಬಾಬ್ ಬ್ರಿಡ್ಜ್ಸ್. ಸ್ಟಾಕ್ ಬಾರ್ಕರ್. ಮುಂದೆ ಕ್ರಿಸ್ ಆತನ ಜತೆ ಸೇರುತ್ತಾರೆ. ಕೆಲಸದಲ್ಲಿದ್ದ ಶ್ರದ್ಧೆ ಆತನನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ತನ್ನ ಜೀವನದ ಬಗ್ಗೆ ಆತ ಬರೆದ ಪರ್ಸ್ಯುಯೆಟ್ ಹ್ಯಾಪಿನೆಸ್ ಎಂಬ ಪುಸ್ತಕದ ಮೂಲಕ ಆತ ಅತಿ ಹೆಚ್ಚು ಪ್ರಸಿದ್ಧನಾಗುತ್ತಾನೆ. ಹಾಲಿವುಡ್ ನಿರ್ದೇಶಕರನ್ನು ಕೂಡ ಈ ಕಥೆ ಆಕರ್ಷಿಸುತ್ತದೆ. ಸಿನೆಮಾ ಬಿಗ್ ಹಿಟ್ ಆದಾಗ ಗೆದ್ದದ್ದು ಮಾತ್ರ ಕ್ರಿಸ್ ಗಾರ್ಡಿನರ್ ..
*ಸುಶ್ಮಿತಾ ಶೆಟ್ಟಿ ಸಿರಿಬಾಗಿಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು
Naxal Movement End:1990 To 2025:ಕರ್ನಾಟಕ ನಕ್ಸಲೀಯರ ಶಸ್ತ್ರಾಸ್ತ್ರ ಹೋರಾಟದ ಯುಗಾಂತ್ಯ…
Delhi Election; ಅಧಿಕಾರ ಉಳಿಸಿಕೊಳ್ಳುವರೋ? ಪಡೆದುಕೊಳ್ಳುವರೋ?
Maha Kumbh Mela 2025: 144 ವರ್ಷಗಳಿಗೊಮ್ಮೆ ಮಹಾಕುಂಭ ಮೇಳ- ಇದರ ಹಿಂದಿದೆ ರೋಚಕ ಸಂಗತಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.