Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?


Team Udayavani, Aug 24, 2024, 6:29 PM IST

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

“ಭಾರತವನ್ನು ನೆಗೆಟಿವ್ ರೀತಿಯಲ್ಲಿ ಚಿತ್ರಿಸುವುದರ ಮೂಲಕ ಬಾಲಿವುಡ್ ಕೆಲವೊಂದು ಸಿನಿಮಾಗಳು ಅಂತರರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನವಾಗುತ್ತಿರುವ ಬಗ್ಗೆ ವಿಷಾದ ವ್ಯಕ್ತ ಪಡಿಸಿರುವ ಸಂದರ್ಶನದ ಸಂದರ್ಭದಲ್ಲಿ ರಿಷಬ್ ಶೆಟ್ಟಿಯವರು ಹೇಳಿರುವ ಮಾತು ಇಂದು ಸಿನಿ ಪ್ರಪಂಚದಲ್ಲಿ ಒಂದಿಷ್ಟು ಬಿಸಿ ಬಿಸಿ ಚರ್ಚೆ ಗೆ ಎಡೆ ಮಾಡಿ ಕೊಟ್ಟಿದೆ ಅನ್ನುವುದು ಅಷ್ಟೇ ಸತ್ಯ. ಆದರೆ ಇಂತಹ ನೆಗೆಟಿವ್ ಚಿತ್ರ ವಸ್ತುಗಳಿಂದಲೇ ಬಾಲಿವುಡ್ ಇರಬಹುದು, ಹಾಲಿವುಡ್ ಇರಬಹುದು, ಸ್ಯಾಂಡಲ್ ವುಡ್ ಇರ ಬಹುದು ಈ ಎಲ್ಲಾ ವುಡ್ ಗಳ ಸಿನಿಮಾ ಬಾಕ್ಸ್ ತುಂಬುವುದೇ ಇಂತಹ ನೆಗಟಿವ್ ಕಥೆಗಳ ಮೂಲಕವೇ.

ಎಲ್ಲವನ್ನೂ ಸುಖಾಂತವಾಗಿ ತೇೂರಿಸಿದರೆ ಸಿನಿಮಾ ನೇೂಡುವರೇ ಬರಲಿಕ್ಕಿಲ್ಲ.ಈ ವಾಸ್ತವಿಕತೆಯನ್ನು ತಿಳಿದ ಚಿತ್ರ ನಿದೇ೯ಶಕರು, ತಯಾರಕರು ಕಥೆಗಾರರು ಪ್ರತಿ ಚಿತ್ರದ ಮೊದಲಿಗೆ ಒಂದಿಷ್ಟು ನೆಗೆಟಿವ್ ಭರಿತವಾದ ದುರಂತ ಮಯಾವಾದ ಸನ್ನಿವೇಶಗಳನ್ನು ತುಂಬಿಸಿ ಚಿತ್ರೀಕರಣ ಮಾಡುವುದು ಸಾಮಾನ್ಯವಾದ ಸನ್ನಿವೇಶವಾಗಿ ಬಿಟ್ಟಿದೆ..ಲೈಂಗಿಕ ಶೇೂಷಣೆ ಆರ್ಥಿಕ ಶೇೂಷಣೆ ಸಾಮಾಜಿಕ ಪಿಡುಗು..ಒಂದೇ ಎರಡೇ ..ಈ ಎಲ್ಲವನ್ನೂ ಚಿತ್ರದಲ್ಲಿ ತುಂಬಿಸಿದರೆ ಮಾತ್ರ ಅಂತಹ ಸಿನಿಮಾಗಳಿಗೆ ರಾಷ್ಟ್ರೀಯ ಅಂತರರಾಷ್ಟ್ರೀಯ ಪ್ರಶಸ್ತಿಗಳು ಬರುವುದು ಅನ್ನುವ ಸತ್ಯ ಎಲ್ಲಾ ನಿಮಾ೯ಪಕರಿಗೂ ಗೊತ್ತಿರುವ ಸಂಗತಿ..

ಇದನ್ನೆ ಚಿತ್ರ ವಿಮರ್ಶಕರು ವಿಶ್ಲೇಷಿಸುವಾಗ “ಈ ಚಿತ್ರ ತುಂಬಾ ವಾಸ್ತವಿಕವಾದ ಸಿನಿಮಾ ಸಮಾಜದ ಸಮಸ್ಯೆಗಳಿಗೆ ಕನ್ನಡಿ ಹಿಡಿದಂತಿದೆ ಇದೆನ್ನೆಲ್ಲಾ ನೇೂಡಿ ನಮ್ಮ ಸಮಾಜ ಬದಲಾಗ ಬೇಕು..ಎಂದೆಲ್ಲಾ ಹೇಳಿ ತೀರ್ಪು ನೀಡುವುದು ಸರ್ವೆ ಸಾಮಾನ್ಯವಾದ ವಿಷಯವೂ ಹೌದು. ಬಹು ಹಿಂದೆ “ಸ್ಲಮ್ ಡಾಗ್ ಮಿಲೆನಿಯರ್” ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗೆ ಭಾಜನವಾದಾಗ ಈ ಚಿತ್ರದ ಚಿತ್ರ ಕಥೆ ಭಾರತೀಯ ಮೂಲದ ಬಾಲಕಿಯ ಲೈಂಗಿಕ ಶೇೂಷಣೆಯ ಮೇಲೆ ಹೆಣೆದ ಕಥೆ..ಇದೇ ಸಿನಿಮಾಕ್ಕೆ ಭಾರತದ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್‌ ರವರಿಗೂ ಸಂಗೀತಕ್ಕೆ ಪ್ರಶಸ್ತಿ ಬಂದಾಗ ಕೂಡಾ ಇದು ಸಾಕಷ್ಟು ಚರ್ಚೆಗೂ ಗ್ರಾಸವಾಗಿದ್ದು ಇನ್ನೂ ನೆನಪಿದೆ.

ಈ “ಸ್ಲಮ್ ಡಾಗ್” ಕುರಿತಾಗಿ ಒಂದು ವಿಮರ್ಶೆಯನ್ನು ಅಂದು ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಿಸಿದ್ದು ನೆನಪಿದೆ. ಅಂದರೆ ಇಲ್ಲಿ ಇಂಗ್ಲೆಂಡಿನ ಸಿನಿಮಾ ನಿರ್ದೇಶಕ ಡಾನಿ ಬೈಲಿಯವರು ತ್ರಿಷ್ಣಾ ಅನ್ನುವ ಹೆಸರಿನ ಬಾಲಕಿಯನ್ನು ಚಿತ್ರದ ವಸ್ತುವಾಗಿ ರೂಪಿಸಿದ ಕಥೆಯಾಗಿತ್ತು..ಮತ್ತೆ ಚರ್ಚೆ ಎಲ್ಲಿಯವರೆಗೆ ಮುಂದುವರಿಯಿತು ಕೇಳಿದರೆ ರಾಜಸ್ಥಾನ ಓವ೯ ಬಡ ಕುಟುಂಬದ ಬಾಲಕಿಯ ಶೇೂಷಣೆಯ ವಾಸ್ತವಿಕ ಕಥೆ ಅನ್ನುವ ಮಟ್ಟಿಗೆ ವಾದ ವಿವಾದ ಚಚೆ೯ ನಡೆದಿತ್ತು.

ಹಾಗಾದರೆ ಇಂತಹ ನೆಗೆಟಿವ್ ವಿಷಯಗಳಿಗೆ ಭಾರತವೇ ಉದಾಹರಣೆಯಾಗಬೇಕೇ? ಅದು ಒಬ್ಬ ವಿದೇಶಿ ನಿರ್ದೇಶಕನ ಕೈಯಲ್ಲಿ ಭಾರತೀಯ ಹೆಣ್ಣು ಮಕ್ಕಳ ದುರಂತಮಯ ಕಥೆ ಚಿತ್ರೀಕರಣಗೊಳ್ಳಬೇಕೆ? ಇದು ನಮ್ಮ ಸಿನಿಮಾ ಕಥೆಗಳ ಒಂದು ಮುಖವಾದರೆ ನಮ್ಮ ಭಾರತೀಯ ಸಿನಿಮಾ ಕಥೆಗಳು ಇಂತಹ ನೆಗೆಟಿವ್ ಅಂಶಗಳನ್ನು ಬಿಟ್ಟು ಚಿತ್ರ ಕಥೆ ಕಾದಂಬರಿ ಸಿನಿಮಾ ತಯಾರಿಸಲು ಸಾಧ್ಯವೇ ಅನ್ನುವ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.

ರಿಷಬ್ ಶೆಟ್ಟಿಯವರು ಈ ಬಾಲಿವುಡ್ ಕೆಲವು ಚಿತ್ರಗಳು ಭಾರತವನ್ನು ಅತ್ಯಂತ ನೆಗೆಟಿವ್ ಆಗಿ ಕಾಣುವ ರೀತಿಯಲ್ಲಿ ಚಿತ್ರೀಕರಿಸಿ ಅಂತರರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ ಅನ್ನುವ ಹೇಳಿಕೆಯ ಮೇಲೆ ಕೆಲವರು ನೇರವಾಗಿ ಕಾಂತಾರ ಚಿತ್ರವನ್ನೆ ಉದಾಹರಣೆಯಾಗಿಟ್ಟುಕೊಂಡು ಅದರಲ್ಲೂ ಕೂಡಾ ಸಾಕಷ್ಟು ನೆಗೆಟಿವ್ ಸನ್ನಿವೇಶಗಳು ಇದ್ದವು ಅನ್ನುವುದನ್ನು ಬೊಟ್ಟು ಮಾಡಿ ತೇೂರಿಸಿದ್ದಾರೆ.. ಹಾಗಂತ ಈ ಟೀಕೆಗಳನ್ನು ಅಲ್ಲಗಳೆಯುವಂತೆಯೂ ಇಲ್ಲ..ಈ ಎಲ್ಲಾ ನೆಗೆಟಿವುಗಳಿಗೆ ಸೆಡ್ಧು ಹೊಡೆದು ನಿಂತಹ ಕೊನೆಯ ಕ್ಷಣ ಪಂಜುರ್ಲಿಯ ಪವಾಡವೇ ಇಡಿ ಚಿತ್ರಕ್ಕೆ ಪ್ರಶಸ್ತಿ ಪ್ರದಾನಿಸಿದೆ ಅನ್ನುವುದು ಸತ್ಯ. ಅದು ಕಾರಂತರ ಚೇೂಮನ ದುಡಿಯಲ್ಲೂ ಅಷ್ಟೇ ..ಇದೇ ರೀತಿಯಲ್ಲಿ ನೆಗೆಟಿವ್ ನಿಂದ ಪೊಸಿಟಿವ್ ಗೆ ಬಂದ ಕಾರಣ ಅದಕ್ಕೂ ಪ್ರಶಸ್ತಿ ಬಂತು..ಇನ್ನೂ ಅದೆಷ್ಟೋ ಚಿತ್ರಗಳ ಉದಾಹರಣೆ ನಮ್ಮ‌ ಮುಂದಿದೆ.

ಒಂದಂತೂ ಸತ್ಯ ಇಂತಹ ಶೇೂಷಣೆ ಅನ್ಯಾಯ ..ಇದನ್ನೆಲ್ಲಾ ನಮ್ಮೆಲ್ಲರ ನೆಲದಲ್ಲಿ ನಾವು ನೇೂಡುವಾಗ ಇದೆಲ್ಲವೂ ನೆಗೆಟಿವ್ ಅನ್ನಿಸುದಿಲ್ಲ..ಬೆಳವಣಿಗೆ ಸುಧಾರಣೆಗೆ ಅಭಿವೃದ್ಧಿಯಾಗಿಯೇ ಕಾಣುತ್ತದೆ ಆದರೆ ಇದನ್ನೇ ವಿದೇಶಿಯ ನೆಲದಲ್ಲಿ ನಿಂತು ನೇೂಡಿದಾಗ ನೆಗೆಟಿವ್ ಆಗಿ ನಮ್ಮ ಸಮಾಜವನ್ನು ನೇೂಡಿದ ಹಾಗೆ ಮುಜುಗುರ ಅನ್ನಿಸುವುದು ಸಹಜ ಕೂಡ..ನಮ್ಮ ಮನೆಯ ಕಥೆಯ ವ್ಯಥೆಯನ್ನು ಬೇರೆಯವರ ಮನೆಯ ಅಂಗಳದಲ್ಲಿ ನೇೂಡಿ ಕುಶಿ ಪಡಲು ಯಾರ ಮನಸ್ಸು ಒಪ್ಪುತ್ತದೆ ಹೇಳಿ.

ಅದೇ ರೀತಿ ಇದು ಕೂಡಾ ..ಇವೆಲ್ಲವನ್ನೂ ನಮ್ಮ ಸಮಾಜದ ಬದಲಾವಣೆಗಾಗಿ ಮಾಡಿಕೊಂಡ ಸಿನಿಮಾಗಳು ಆಗ ಬೇಕೇ ಹೊರತು ಪರದೇಶಿಗರ ಮುಂದೆ ಪ್ರದರ್ಶನಕ್ಕಾಗಿಯೊ ಪ್ರಶಸ್ತಿಗಾಗಿಯೊ ಪ್ರದರ್ಶನಕ್ಕಿಡುವ ಸಿನಿಮಾ ವಸ್ತುಗಳಾಗ ಬಾರದು..ಅಷ್ಟೇ..ಅಲ್ವೇ?

ವಿಶ್ಲೇಷಣೆ :ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ.

ಟಾಪ್ ನ್ಯೂಸ್

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

anHassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!

Hassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!

Nagamangala ತನಿಖೆ ಎನ್‌ಐಎಗೆ ವಹಿಸಲಿ: ಸಿ.ಟಿ. ರವಿ

Nagamangala ತನಿಖೆ ಎನ್‌ಐಎಗೆ ವಹಿಸಲಿ: ಸಿ.ಟಿ. ರವಿ

Nagamangala ಗಲಭೆಯ ಹಿನ್ನೆಲೆ ಗೊತ್ತಾಗಬೇಕು: ಸಿ.ಎನ್‌. ಅಶ್ವತ್ಥನಾರಾಯಣ

Nagamangala ಗಲಭೆಯ ಹಿನ್ನೆಲೆ ಗೊತ್ತಾಗಬೇಕು: ಸಿ.ಎನ್‌. ಅಶ್ವತ್ಥನಾರಾಯಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

ಪ್ರವಾಸ ಕಥನ 5:ಕನ್ನಡ ತುಳು, ನಾಡು-ನುಡಿ ಸಂಸ್ಕೃತಿಯ ರಾಯಭಾರಿ ಸರ್ವೋತ್ತಮ ಶೆಟ್ಟಿ

ಪ್ರವಾಸ ಕಥನ 5:ಪರೀಕ To ಅಬುಧಾಬಿ ಪಯಣ….ಸಂಸ್ಕೃತಿಯ ರಾಯಭಾರಿ ಸರ್ವೋತ್ತಮ ಶೆಟ್ಟಿ ಯಶೋಗಾಥೆ

Private Job Quota:ಖಾಸಗಿ ವಲಯದಲ್ಲಿ ಮೀಸಲಾತಿ ವಿಧೇಯಕ ಜಾರಿಯಾದರೆ…ಮುಂದಿನ ಪರಿಣಾಮವೇನು?

Private Job Quota:ಖಾಸಗಿ ವಲಯದಲ್ಲಿ ಮೀಸಲಾತಿ ವಿಧೇಯಕ ಜಾರಿಯಾದರೆ…ಮುಂದಿನ ಪರಿಣಾಮವೇನು?

Agri

Agriculture: ಗ್ರಾಮೀಣ ಬದುಕಿನ ಚಾವಡಿ ಚರ್ಚೆ; ಕೇವಲ ನೆನಪು

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

Kolar ಗುಂಪು ಘರ್ಷಣೆ: ಮಾರಕಾಸ್ತ್ರಗಳಿಂದ ಹಲ್ಲೆ

Kolar ಗುಂಪು ಘರ್ಷಣೆ: ಮಾರಕಾಸ್ತ್ರಗಳಿಂದ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.