Cipla and Glenmark; ಭಾರತದಲ್ಲಿ ತಯಾರಾದ ಅಸ್ತಮಾ ಔಷಧ ವಾಪಸ್
ಈ ಔಷಧವನ್ನು ಭಾರತದ ಇಂದೋರ್ ಘಟಕದಲ್ಲಿ ತಯಾರಿಸಲಾಗಿತ್ತು.
Team Udayavani, May 6, 2024, 10:18 AM IST
ಹೊಸದಿಲ್ಲಿ: ಪ್ರಸಿದ್ಧ ಔಷಧ ತಯಾರಿಕಾ ಸಂಸ್ಥೆಗಳಾದ ಸಿಪ್ಲಾ ಹಾಗೂ ಗ್ಲೆನ್ ಮಾರ್ಕ್, ಉತ್ಪಾದನ ದೋಷದ ಕಾರಣ ದಿಂದಾಗಿ ಭಾರತದಲ್ಲಿ ತಯಾರಾದ ಔಷಧಗ ಳನ್ನು ಅಮೆರಿಕ ಮಾರುಕಟ್ಟೆಯಿಂದ ವಾಪಸ್ ಪಡೆದಿವೆ. ಈ ಬಗ್ಗೆ ಅಮೆರಿಕದ ಆರೋಗ್ಯ ನಿಯಂತ್ರಣ ಸಂಸ್ಥೆ ಮಾಹಿತಿ ನೀಡಿದೆ.
ಇದನ್ನೂ ಓದಿ:ಕ್ರಿಕೆಟ್ ಆಡುವಾಗ ಖಾಸಗಿ ಅಂಗಕ್ಕೆ ತಾಗಿದ ಚೆಂಡು: ಕುಸಿದು ಬಿದ್ದು 11 ವರ್ಷದ ಬಾಲಕ ಮೃತ್ಯು
ಅಸ್ತಮಾ ಸೇರಿದಂತೆ ಶ್ವಾಸಕೋಶ ಸಂಬಂಧಿತ ಖಾಯಿಲೆಗಳಿಗೆ ಬಳಸಲಾಗುವ ಇಪ್ರಟ್ರೋಪಿಯಂ ಬ್ರೋಮೈಡ್ ಹಾಗೂ ಆಲುºಟೆರಾಲ್ ಸಲ್ಪೇಟ್ ಎಂಬ ಔಷಧ ದ್ರಾವಣವು ಉತ್ಪಾದನೆ ವೇಳೆ ಸರಿಯಾದ ಪ್ರಮಾಣದಲ್ಲಿ ಭರ್ತಿಯಾಗಿರದ ಕಾರಣ 59,244 ಔಷಧ ಪ್ಯಾಕ್ ಗಳನ್ನು ಸಿಪ್ಲಾ ಹಿಂಪಡೆದಿದೆ. ಈ ಔಷಧವನ್ನು ಭಾರತದ ಇಂದೋರ್ ಘಟಕದಲ್ಲಿ ತಯಾರಿಸಲಾಗಿತ್ತು.
ಇದೇ ವೇಳೆ ಅಧಿಕ ರಕ್ತದೊತ್ತಡ(ಬಿ.ಪಿ.) ನಿಯಂತ್ರಣಕ್ಕೆ ಬಳಸಲಾಗುವ ಡಿಲ್ಟಿಯಾಜೆಂ ಹೈಡ್ರೋಕ್ಲೋರೈಡ್ ಔಷಧದಲ್ಲಿ ದೋಷ ಕಂಡು ಬಂದಿದ್ದು, ಈ ಔಷಧದ 3,264 ಪ್ಯಾಕ್‌ಗಳನ್ನು ಗ್ಲೆನ್‌ಮಾರ್ಕ್ ಫಾರ್ಮಾ ಸೆಟಿಕಲ್ ಸಂಸ್ಥೆ ಹಿಂಪಡೆದಿದೆ. ಜನರು ಈ ಔಷಧಗಳನ್ನು ಬಳಕೆ ಮಾಡಿದ ಪಕ್ಷದಲ್ಲಿ ಸಂಭವಿಸಬಹುದಾದ ಹಾನಿಗಳನ್ನು ತಡೆಯಲು ಈ ಕ್ರಮಕೈಗೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.