ಕೋವಿಡ್ ಪ್ರಕರಣ : ನರೇಗಾ ಕೆಲಸ ಸ್ಥಗಿತ ,ಮೇ 24ರ ವರೆಗೆ ಇಲ್ಲ ಎಂದ ಗ್ರಾ. ಇಲಾಖೆ
Civid case Nareda work will be closed
Team Udayavani, May 12, 2021, 7:20 AM IST
ಬೆಂಗಳೂರು : ಹಳ್ಳಿಗಳಿಗೂ ಕೊರೊನಾ ವ್ಯಾಪಿಸುತ್ತಿರುವ ಬೆನ್ನಲ್ಲೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ನರೇಗಾ ಕೆಲಸವನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ.
ಮೇ 10ರಿಂದ ಮೇ 24ರ ವರೆಗೆ ರಾಜ್ಯದಲ್ಲಿ ಕಠಿನ ನಿರ್ಬಂಧಗಳಿದ್ದು, ಹೆಚ್ಚು ಜನರು ಗುಂಪುಗೂಡಬಾರದು ಎಂದು ಸರಕಾರ ಆದೇಶ ಹೊರಡಿಸಿದೆ. ಅಲ್ಲದೆ ನಗರ ಪ್ರದೇಶಗಳಿಂದ ಗ್ರಾಮೀಣ ಪ್ರದೇಶಕ್ಕೆ ಭಾರೀ ಸಂಖ್ಯೆಯಲ್ಲಿ ಜನ ತೆರಳಿದ್ದಾರೆ. ಇವರೂ ನರೇಗಾ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಜನರಿಗೂ ಸೋಂಕು ಹರಡುವ ಭೀತಿ ಇದೆ. ಈ ಕಾರಣದಿಂದಾಗಿ ಮೇ 24ರ ವರೆಗೆ ನರೇಗಾ ಕೆಲಸವನ್ನು ಸ್ಥಗಿತ ಮಾಡಿ ಆದೇಶ ಹೊರಡಿಸಲಾಗಿದೆ.
ಸಾಮಾನ್ಯವಾಗಿ ಎಪ್ರಿಲ್ ನಿಂದ ಜೂನ್ ವರೆಗೆ ನರೇಗಾದಡಿ ಹೆಚ್ಚು ಕೆಲಸವಿರುತ್ತದೆ. ಈ ಕಾರಣದಿಂದ ಹೆಚ್ಚು ಮಂದಿ ಸೇರುವ ಅಪಾಯವಿದೆ. ಕೂಲಿಕಾರರಲ್ಲಿ ಯಾರಾದರೂ ಒಬ್ಬರಿಗೆ ಸೋಂಕು ತಗುಲಿದರೂ ಅಪಾಯ ಹೆಚ್ಚು. ಗ್ರಾಮೀಣ ಭಾಗದಲ್ಲಿ ಸೋಂಕು ಹರಡಿ ಪ್ರಾಣಾಪಾಯವೂ ಆಗುವ ಸಂಭವವಿದೆ. ಮೇ 10ರಿಂದ 24ರ ವರೆಗೆ ಕೆಲಸ ಇರುವುದಿಲ್ಲವಾದರೂ ಗ್ರಾ.ಪಂ.ಗಳು ಜನ ರಿಂದ ಕೆಲಸದ ಬೇಡಿಕೆಯ ಅರ್ಜಿ ಸ್ವೀಕರಿಸಬೇಕು. ಈಗ ಸ್ವೀಕರಿಸಿದರೂ ಮೇ 25ರ ಅನಂತರ ಕೆಲಸ ನೀಡಲು ಅನುಕೂಲವಾಗುತ್ತದೆ ಎಂದು ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ
BJP ಸರಕಾರ ಕಾಲದ ಕೋವಿಡ್, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ
MUST WATCH
ಹೊಸ ಸೇರ್ಪಡೆ
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.