ಸಿಎಂಗೆ ಟೆನ್ಷನ್, ಶಾಂತಿ ಬಯಸಿ ರೆಸಾರ್ಟ್ಗೆ ಹೋಗಿದ್ದಾರೆ
ಮುಖ್ಯಮಂತ್ರಿಗಳ ರೆಸಾರ್ಟ್ ವಾಸ್ತವ್ಯಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಸಮರ್ಥನೆ
Team Udayavani, May 10, 2019, 12:30 PM IST
ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಉದ್ವೇಗಕ್ಕೊಳಾಗಿದ್ದು, ಶಾಂತಿ ಬಯಸಿ ರೆಸಾರ್ಟ್ಗೆ ತೆರಳಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್,ಎಲ್ಲರೂ ಮನುಷ್ಯರಲ್ವೇ , ರಿಲ್ಯಾಕ್ಸ್ ಮಾಡಿಕೊಳ್ಳಲು, ಟೆನ್ಷನ್ನಿಂದ ಹೊರ ಬರಲು, ಮನದ ಬೇಗುದಿ ಕಳೆದುಕೊಳ್ಳಲು ದೇವಸ್ಥಾನ, ಶಾಂತಿ ಕೊಡುವ ಸ್ಥಳಕ್ಕೆ, ನೆಮ್ಮದಿ ಕೊಡುವ ಸ್ಥಳಕ್ಕೆ ಹೋಗುತ್ತೇವೆ. ಮುಖ್ಯಮಂತ್ರಿ ರೆಸಾರ್ಟ್ಗೆ ಹೋಗುವುದು ದೊಡ್ಡ ವಿಚಾರವೇನಲ್ಲ ಎಂದು ಸಮರ್ಥನೆ ಮಾಡಿಕೊಂಡರು.
ಚುನಾವಣೆ ಮುಗಿದ ಬಳಿಕ ಸಿಎಂ ಎಚ್ಡಿಕೆ ಉಡುಪಿಯ ಕಾಪುವಿನಲ್ಲಿಪ್ರಕೃತಿ ಚಿಕಿತ್ಸೆ ಪಡೆದಿದ್ದರು. ಈಗ ಮಡಿಕೇರಿಯ ಇಬ್ಬನಿ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.