ಆಡಳಿತ ಯಂತ್ರ ಚುರುಕುಗೊಳಿಸಲು ಮುಂದಾದ ಸಿಎಂ
ಅಧಿಕಾರಿಗಳ ಜತೆ ಸರಣಿ ಸಭೆ, ಲಾಕ್‌ಡೌನ್ ಸಡಿಲಿಕೆ ಸಾಧಕ ಬಾಧಕ ಚರ್ಚೆ
Team Udayavani, May 6, 2020, 6:00 AM IST
ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಜನ್ಮದಿನದ ಹಿನ್ನೆಲೆಯಲ್ಲಿ ವಿಧಾನಸೌಧ ಆವರಣದಲ್ಲಿನ ಕೆ. ಸಿ.ರೆಡ್ಡಿ ಭಾವಚಿತ್ರಕ್ಕೆ ಸಿಎಂ ಯಡಿಯೂರಪ್ಪ ಪುಷ್ಪ ನಮನ ಸಲ್ಲಿಸಿದರು.
ಬೆಂಗಳೂರು: ಕೆಂಪು ವಲಯ ಹೊರತುಪಡಿಸಿ ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಆಡಳಿತ ಯಂತ್ರ ಚುರುಕುಗೊಳಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಾ ಗಿದ್ದು, ಮಂಗಳವಾರ ಸರಣಿ ಸಭೆಗಳನ್ನು ನಡೆಸಿದರು.
ಅಧಿಕಾರಿಗಳ ಜತೆ ಲಾಕ್‌ಡೌನ್ ಸಡಿಲ ಹಿನ್ನೆಲೆಯಲ್ಲಿನ ಸಾಧಕ-ಬಾಧಕ ಚರ್ಚಿಸಿ ಮುಂದೆ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಚರ್ಚಿಸಿದರು. ಲಾಕ್‌ಡೌನ್‌ನಿಂದಾಗಿ ಸುಮಾರು 40 ದಿನ ಸರಕಾರಿ ಕೆಲಸ ಕಾರ್ಯಗಳು ಬಹುತೇಕ ಇಲಾಖೆಗಳಲ್ಲಿ ಸ್ಥಗಿತ ಗೊಂಡಿದ್ದು ಆಡಳಿತ ಯಂತ್ರ ಚುರುಕು ಗೊಳಿಸಿ ಎಂದು ನಿರ್ದೇಶ ನೀಡಿದರು.
ಕೃಷಿ, ಕೈಗಾರಿಕೆ, ವಾಣಿಜ್ಯ ಉದ್ಯಮ, ಐಟಿ, ಬಿಟಿ ವಲಯಕ್ಕೆ ವಿನಾಯಿತಿ ನೀಡಿದ್ದು ಅವುಗಳ ಕಾರ್ಯ ನಿರ್ವಹಣೆಗೆ ಅಗತ್ಯವಾದ ಸಹಕಾರ ಅಧಿಕಾರಿಗಳು ನೀಡಬೇಕು. ಕೋವಿಡ್-19 ಗುಂಗಿನಿಂದ ಹೊರಬಂದು ಸಾಮಾಜಿಕ ಅಂತರ ಕಾಯ್ದುಕೊಂಡು ಎಚ್ಚರಿಕೆಯಿಂದ ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಬೇಕು. ಲಾಕ್‌ಡೌನ್‌ನಿಂದಾಗಿ ರಾಜ್ಯಕ್ಕೆ ಆರ್ಥಿಕವಾಗಿ ದೊಡ್ಡ ಹೊಡೆತ ಬಿದ್ದಿದ್ದು ಚೇತರಿಕೆಗೆ ಹಲವು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಅಧಿಕಾರಿ ವಲಯ ಈ ನಿಟ್ಟಿನಲ್ಲಿ ಸರಕಾರಕ್ಕೆ ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡಬೇಕು ಎಂದು ಸೂಚಿಸಿದರು.
ಮಂಗಳವಾರ ಬೆಳಗ್ಗೆ ಮಾಜಿ ಮುಖ್ಯಮಂತ್ರಿ ದಿ| ಕೆ.ಸಿ.ರೆಡ್ಡಿ ಜನ್ಮ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅನಂತರ ನೇಕಾರರ ಸಮಸ್ಯೆ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿದರು. ಬಳಿಕ ಕ್ರೆಡಾಯ್ ನೇತೃತ್ವದಲ್ಲಿ ಬಿಲ್ಡರ್‌ಗಳ ಜತೆ ಸಮಾಲೋಚಿಸಿದರು. ತರುವಾಯ ಆರ್ಥಿಕ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿ ಹಣಕಾಸು ಸ್ಥಿತಿಗತಿ ಬಗೆಗೆ ಮಾಹಿತಿ ಪಡೆದರು. ಮುಖ್ಯ ಕಾರ್ಯದರ್ಶಿ ಸಹಿತ ಪ್ರಮುಖ ಇಲಾಖೆ ಮುಖ್ಯಸ್ಥರ ಜತೆಯೂ ಚರ್ಚಿಸಿದರು.
ಸಮಾಧಾನಕರ
ಪತ್ರಕರ್ತರ ಜತೆ ಮಾತನಾಡಿದ ಅವರು, ಕೊರೊನಾ ಪ್ರಕರಣಗಳ ಸಂಖ್ಯೆ ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕಡಿಮೆ ಇರುವುದು ಸಮಾಧಾನಕರ ಅಂಶ ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.