ಯಾರಿಗೆ ಗ್ರಹಣ ಗಂಡಾಂತರ? ಇಂದು ಸುಪ್ರೀಂ ಕೋರ್ಟ್ ತೀರ್ಪು
Team Udayavani, Jul 17, 2019, 5:11 AM IST
ಹೊಸದಿಲ್ಲಿ: ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರುವ ಕಾಂಗ್ರೆಸ್-ಜೆಡಿಎಸ್‌ನ 15 ಮಂದಿ ಶಾಸಕರ ರಾಜೀನಾಮೆ ವಿಚಾರ ಈಗ ನಿರ್ಣಾಯಕ ಹಂತ ತಲುಪಿದೆ. ಬುಧವಾರ ಬೆಳಗ್ಗೆ 10.30ರ ವೇಳೆಗೆ ರಾಜ್ಯ ಸರಕಾರದ “ಭವಿಷ್ಯ’ದ ಕುರಿತ ಬಹುತೇಕ ಚಿತ್ರಣ ಲಭ್ಯವಾಗಲಿದೆ.
ತಮ್ಮ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸುತ್ತಿಲ್ಲ ಎಂದು ಆರೋಪಿಸಿ 15 ಮಂದಿ ಅತೃಪ್ತ ಶಾಸಕರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಮಂಗಳವಾರ ನಡೆದಿದ್ದು, ಸುಪ್ರೀಂ ಕೋರ್ಟ್ ತನ್ನ ಆದೇಶವನ್ನು ಬುಧವಾರ ಬೆಳಗ್ಗೆ 10.30ಕ್ಕೆ ಕಾಯ್ದಿರಿಸಿದೆ.
3 ಗಂಟೆಗಳಿಗೂ ಹೆಚ್ಚು ಅವಧಿಯ ವಿಚಾರಣೆ
ಬಂಡಾಯ ಶಾಸಕರ ಅರ್ಜಿಗೆ ಸಂಬಂಧಿಸಿ ಮ್ಯಾರಥಾನ್ ವಿಚಾರಣೆಗೆ ಮಂಗಳವಾರ ಸುಪ್ರೀಂ ಕೋರ್ಟ್ ಸಾಕ್ಷಿಯಾಯಿತು. ಅತೃಪ್ತರ ಪರ ಹಿರಿಯ ನ್ಯಾಯವಾದಿ ಮುಕುಲ್ ರೋಹrಗಿ ವಾದಿಸಿದರೆ, ಸ್ಪೀಕರ್ ಪರ ಅಭಿಷೇಕ್ ಮನು ಸಿಂ Ì ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಪರ ನ್ಯಾಯವಾದಿ ರಾಜೀವ್ ಧವನ್ ವಾದ ಮಂಡಿಸಿದರು. ಮೂವರು ಹಿರಿಯ ನ್ಯಾಯವಾದಿಗಳು ನಡೆಸಿದ ಹೈವೋಲ್ಟೆàಜ್ ವಾದ- ಪ್ರತಿವಾದವು ಸತತ 3 ಗಂಟೆಗೂ ಹೆಚ್ಚು ಕಾಲ ನಡೆಯಿತು. ಎಲ್ಲರ ವಾದಗಳನ್ನೂ ಸಾವಧಾನವಾಗಿ ಆಲಿಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ತ್ರಿಸದಸ್ಯ ಪೀಠವು, ಬುಧವಾರ ಬೆಳಗ್ಗೆ 10.30ಕ್ಕೆ ಆದೇಶ ಪ್ರಕಟಿಸುವುದಾಗಿ ಘೋಷಿಸಿತು.
ಅತೃಪ್ತರ ಪರ ವಕಾಲತ್ತು ವಹಿಸಿಕೊಂಡಿದ್ದ ಮುಕುಲ್ ರೋಹrಗಿ, “ಸ್ಪೀಕರ್ ಅವರು ಈ ಎಲ್ಲ ಶಾಸಕರ ರಾಜೀ ನಾಮೆಯನ್ನು ಅಂಗೀಕರಿಸಲೇಬೇಕು. ಬೇರೆ ಯಾವುದೇ ದಾರಿ ಇಲ್ಲ’ ಎಂದರಲ್ಲದೆ, “ವಿಶ್ವಾಸಮತ ಯಾಚನೆಯ ದಿನ ವಿಪ್ ಜಾರಿಯ ಹೊರತಾಗಿಯೂ 15 ಅತೃಪ್ತ ಶಾಸಕರಿಗೆ ಸದನದ ಹಾಜರಾತಿಯಿಂದ ವಿನಾಯಿತಿ ನೀಡಬೇಕು’ ಎಂದು ಮನವಿ ಮಾಡಿದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸ್ಪೀಕರ್ ಪರ ವಕೀಲ ಸಿಂ Ì, “ನಿರ್ದಿಷ್ಟ ಕಾಲಮಿತಿಯೊಳಗೇ ರಾಜೀ ನಾಮೆ ಬಗ್ಗೆ ನಿರ್ಧರಿಸಬೇಕೆಂದು ಸ್ಪೀಕರ್‌ಗೆ ಕೋರ್ಟ್ ಆದೇಶಿಸಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.
ಆಗ ಮಧ್ಯಪ್ರವೇಶಿಸಿದ ಸಿಜೆಐ ಗೊಗೊಯ್, “ಜು.11ರಂದು ಸ್ವತಃ ಶಾಸಕರೇ ಖುದ್ದಾಗಿ ಹಾಜರಾದರೂ ಅದು ಸ್ವಇಚ್ಛೆಯಿಂದಲೇ ನೀಡಿದ ರಾಜೀನಾಮೆ ಎಂದು ನಿರ್ಧರಿಸುವುದಕ್ಕೆ ಸ್ಪೀಕರ್‌ಗಾದ ಅಡ್ಡಿಯಾದರೂ ಏನು’ ಎಂದು ಪ್ರಶ್ನಿಸಿದಾಗ, ಸಿಂ Ì ಸ್ವಲ್ಪ ಗಲಿಬಿಲಿಗೊಂಡರು. ಬಳಿಕ ಪ್ರತಿಕ್ರಿಯಿಸಿದ ಅವರು, ನ್ಯಾಯಾಲಯವು ಜು.12ರಂದು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನೀಡಿರುವ ಆದೇಶವನ್ನು ಬದಲಿಸುವ ಮೂಲಕ, ಬುಧವಾರವೇ ಶಾಸಕರ ಅನರ್ಹತೆ ಹಾಗೂ ರಾಜೀನಾಮೆ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ಸ್ಪೀಕರ್‌ಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ, ಸರಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಬಂಡಾಯ ಶಾಸಕರು “ಸಾಮೂಹಿಕ ಬೇಟೆ’ಗೆ ಮುಂದಾಗಿದ್ದಾರೆ ಎಂದು ಕುಮಾರಸ್ವಾಮಿ ಪರ ವಕೀಲರಾದ ರಾಜೀವ್ ಧವನ್ ಆರೋಪಿಸಿದರು.
ಅಂದು ಆಗಿದ್ದು, ಇಂದು ಆಗಲ್ಲವೇಕೆ?
ರಾಜೀನಾಮೆ ಅಂಗೀಕಾರಕ್ಕೆ ಸ್ಪೀಕರ್‌ಗೆ ಕಾಲಮಿತಿ ನಿಗದಿಪಡಿಸುವುದು ಸುಪ್ರೀಂ ಕೋರ್ಟ್‌ನ ವ್ಯಾಪ್ತಿಗೆ ಬರುವುದಿಲ್ಲ ಎಂಬ ವಕೀಲ ಸಿಂ Ì ವಾದಕ್ಕೆ ಸಿಜೆಐ ಗೊಗೊಯ್ ಖಾರವಾದ ಪ್ರತಿಕ್ರಿಯೆ ನೀಡಿದರು.
ರಾಜೀವ್ ಧವನ್, ಸಿಎಂ ಕುಮಾರಸ್ವಾಮಿ ಪರ
– ಸ್ಪೀಕರ್‌ಗೆ ಯಾವುದೇ ನಿರ್ದಿಷ್ಟ ಆದೇಶವನ್ನು ನೀಡುವುದರಿಂದ ಸುಪ್ರೀಂ ಕೋರ್ಟ್ ಹಿಂದೆ ಸರಿಯಬೇಕು.
– ರಾಜೀನಾಮೆ ಕುರಿತು ನಿರ್ಧಾರ ಕೈಗೊಳ್ಳಬೇಕೆಂದು ಸ್ಪೀಕರ್‌ಗೆ
ಜು.11ರಂದು ಆದೇಶಿಸುವ ಮೂಲಕ ಸರ್ವೋಚ್ಚ ನ್ಯಾಯಾಲಯವು ತನ್ನ ವ್ಯಾಪ್ತಿ ಮೀರಿ ವರ್ತಿಸಿದೆ. ರಾಜೀನಾಮೆ ಪ್ರಕ್ರಿಯೆಯೇ ನಿಯಮಬದ್ಧವಾಗಿ ಇಲ್ಲದಿರುವಾಗ, ಸಂಜೆ 6 ಗಂಟೆಯೊಳಗೆ ನಿರ್ಧರಿಸಿ ಎಂದು ಸ್ಪೀಕರ್‌ಗೆ ಕೋರ್ಟ್ ಆದೇಶ ನೀಡಲು ಬರುವುದಿಲ್ಲ.
– ಸ್ಪೀಕರ್ ನಿರ್ಧಾರ ಕೈಗೊಂಡ ಬಳಿಕವೇ ಸುಪ್ರೀಂ ಕೋರ್ಟ್‌ಗೆ ಮಧ್ಯಪ್ರವೇಶಿಸುವ ಅಧಿಕಾರ ಇದೆಯೇ ಹೊರತು ಅದಕ್ಕೂ ಮೊದಲು ಈ ಪ್ರಕ್ರಿಯೆಯಲ್ಲಿ ಕೋರ್ಟ್ ಹಸ್ತಕ್ಷೇಪ ಮಾಡು ವಂತಿಲ್ಲ.
ವಾದ- ಪ್ರತಿವಾದ
ಮುಕುಲ್ ರೋಹrಗಿ
ಅತೃಪ್ತ ಶಾಸಕರ ಪರ ನ್ಯಾಯವಾದಿ
- ಕೇವಲ ಇಬ್ಬರು ಬಂಡಾಯ ಶಾಸಕರ ವಿರುದ್ಧ ಮಾತ್ರವೇ ಅನರ್ಹತೆಯ ನೋಟಿಸ್ ಜಾರಿ ಮಾಡಲಾಗಿದೆ. ಈ ಪೈಕಿ ಅನರ್ಹತೆಯ ನೋಟಿಸ್ ಪಡೆದಿದ್ದ ಶಾಸಕ ಉಮೇಶ್ ಜಾಧವ್ ಅವರು ಮಾ.20ರಂದು ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿದ್ದಾರೆ. ಅಂದರೆ, ಅನರ್ಹತೆಯ ನೋಟಿಸ್ ಪಡೆದಿರುವಂಥ ಶಾಸಕರ ರಾಜೀನಾಮೆಯನ್ನು ಸ್ವೀಕರ್ ಅವರೇ ಸ್ವತಃ ಅಂಗೀಕರಿಸಿದ್ದಾರೆ. ಸಂವಿಧಾನದ 190ನೇ ವಿಧಿ ಮತ್ತು 10ನೇ ಪರಿಚ್ಛೇದದ ಅನ್ವಯ ಸ್ಪೀಕರ್ ಅವರ ಪಾತ್ರವು ಭಿನ್ನವಾಗಿದೆ. ಹೀಗಾಗಿ ಅನರ್ಹತೆಯ ಪ್ರಕ್ರಿಯೆ ಇತ್ಯರ್ಥಕ್ಕೆ ಬಾಕಿಯಿದೆ ಎಂದು ನೆಪ ಹೇಳಿ ರಾಜೀನಾಮೆ ಅಂಗೀಕರಿಸಲು ಒಪ್ಪದೇ ಇರುವುದು ತಪ್ಪಾಗುತ್ತದೆ.
- ಶಾಸಕರು ಬಿಜೆಪಿ ಸೇರಲೆಂದೇ ಬಂಡಾಯ ಎದ್ದಿದ್ದಾರೆ ಎಂಬ ವಾದವನ್ನು ನಾನು ತಿರಸ್ಕರಿ ಸುತ್ತೇನೆ. ಅವರು ಜನರ ಬಳಿಗೆ ವಾಪಸ್ ಹೋಗಲು ಬಯಸುತ್ತಿದ್ದಾರೆಯೇ ಹೊರತು ಬಿಜೆಪಿ ಸೇರಲು ಅಲ್ಲ.
ಅಭಿಷೇಕ್ ಮನು ಸಿಂ Ì
ಸ್ಪೀಕರ್ ಪರ ನ್ಯಾಯವಾದಿ
- ಶಾಸಕರು ರಾಜೀನಾಮೆ ಕೊಡುವುದಕ್ಕೂ ಬಹಳ ಮೊದಲೇ, ಅಂದರೆ ಕಳೆದ ಫೆಬ್ರವರಿಯಲ್ಲೇ ಅನರ್ಹತೆಯ ಪ್ರಕ್ರಿಯೆ ಯನ್ನು ಆರಂಭಿಸಲಾಗಿದೆ. ನಿಯಮದ ಪ್ರಕಾರ, ವೈಯಕ್ತಿಕ ವಾಗಿ ಶಾಸಕರು ರಾಜೀನಾಮೆ ಪತ್ರವನ್ನು ಸಲ್ಲಿಸತಕ್ಕದ್ದು. ಆದರೆ ಈ ಪ್ರಕರಣದಲ್ಲಿ, ಬಂಡಾಯ ಶಾಸಕರು ಖುದ್ದಾಗಿ ಸ್ಪೀಕರ್ ಮುಂದೆ ಹಾಜರಾಗಿದ್ದೇ ಜು.11ರಂದು. ಅಷ್ಟರಲ್ಲೇ ಅನರ್ಹತೆಯ ಪ್ರಕ್ರಿಯೆ ಆರಂಭವಾಗಿತ್ತು. ಹಾಗಾಗಿ ಈ ಕುರಿತೇ ಸ್ಪೀಕರ್ ಮೊದಲು ನಿರ್ಧಾರ ಕೈಗೊಳ್ಳಬೇಕಾಗುತ್ತದೆ.
- ಸಂವಿಧಾನದ 190ನೇ ವಿಧಿ ಹಾಗೂ 10ನೇ ಪರಿಚ್ಛೇದವು ಒಂದಕ್ಕೊಂದು ಅವಲಂಬಿಸಲ್ಪಟ್ಟಿದೆ. ಒಂದು ಬಾರಿ ಅನರ್ಹತೆಯ ಪ್ರಕ್ರಿಯೆ ಆರಂಭವಾದ ಬಳಿಕ, ಅದರಿಂದಾಗುವ ಪರಿಣಾಮಗಳಿಂದ ತಪ್ಪಿಸಿಕೊಳ್ಳಲೆಂದು ರಾಜೀನಾಮೆಯ ಅಸ್ತ್ರವನ್ನು ಬಳಸುವ ಹಾಗಿಲ್ಲ.
- ಕಳೆದ ವರ್ಷ ಯಡಿಯೂರಪ್ಪರಿಗೆ ಸರಕಾರ ರಚನೆಗೆ ಆಹ್ವಾನ ಕೊಟ್ಟಂತಹ, ವಿಶ್ವಾಸಮತಕ್ಕೆ ಸೂಚಿಸಿದಂಥ ಸಂದರ್ಭದಲ್ಲಿ, ಮಧ್ಯರಾತ್ರಿ ವಿಚಾರಣೆ ನಡೆದಾಗಲೂ ನ್ಯಾಯಾಲಯ ಕರ್ನಾಟಕ ಸ್ಪೀಕರ್‌ಗೆ ಯಾವುದೇ ಆದೇಶ ನೀಡಿರಲಿಲ್ಲ.
- ನ್ಯಾಯಾಲಯವು ಜು. 12ರಂದು ಯಥಾಸ್ಥಿತಿ ಕಾಯ್ದು ಕೊಳ್ಳು ವಂತೆ ನೀಡಿರುವ ಆದೇಶವನ್ನು ಬದಲಿಸುವ ಮೂಲಕ, ಬುಧವಾರವೇ ಶಾಸಕರ ಅನರ್ಹತೆ ಹಾಗೂ ರಾಜೀನಾಮೆ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ಸ್ಪೀಕರ್‌ಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಸರಕಾರ, ಎಸ್‌ಐಟಿಗೆ ನೋಟಿಸ್
ಬೆಂಗಳೂರು, ಜು. 16: ಐಎಂಎ ಬಹುಕೋಟಿ ಹಗರಣದ ತನಿಖೆ ಸಂಬಂಧ ಮಾಜಿ ಸಚಿವ ಮತ್ತು ಶಿವಾಜಿನಗರ ಶಾಸಕ ರೋಷನ್ ಬೇಗ್ ಅವರನ್ನು ಸೋಮವಾರ ರಾತ್ರಿ ಎಸ್‌ಐಟಿ ವಶಕ್ಕೆ ತೆಗೆದುಕೊಂಡ ವಿಚಾರವಾಗಿ ಹೈಕೋರ್ಟ್, ರಾಜ್ಯ ಸರಕಾರ ಮತ್ತು ಎಸ್‌ಐಟಿಗೆ ನೋಟಿಸ್ ನೀಡಿದೆ. ತಮ್ಮ ವಿರುದ್ಧ ಯಾವುದೇ ರೀತಿ ಬಲವಂತದ ಕ್ರಮ ಕೈಗೊಳ್ಳಬಾರದು ಹಾಗೂ ತಮ್ಮ ಮುಕ್ತ ಓಡಾಟಕ್ಕೆ ಅಡ್ಡಿಪಡಿಸದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ)ಕ್ಕೆ ನಿರ್ದೇಶನ ನೀಡುವಂತೆ ಕೋರಿ ರೋಷನ್‌ಬೇಗ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಆಕ್ಷೇಪಣೆ ಸಲ್ಲಿಸುವಂತೆ ನೋಟಿಸ್ ನೀಡಿ ವಿಚಾರಣೆಯನ್ನು ಜು.30ಕ್ಕೆ ಮುಂದೂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.