20 ದಿನ ನಿಯೋವೈಸ್ ಧೂಮಕೇತುವಿನ ದರ್ಶನ : ಖಗೋಳಾಸಕ್ತರಿಗೆ ನಾಳೆಯಿಂದ ಹಬ್ಬ
Team Udayavani, Jul 13, 2020, 11:29 AM IST
ಭಾರತದ ಖಗೋಳಾಸಕ್ತರಿಗೆ ಮುಂದಿನ ಕೆಲವು ದಿನಗಳು ಕಣ್ಣಿಗೆ ಹಬ್ಬ. ಏಕೆಂದರೆ ಇದೇ ಮಂಗಳವಾರದಿಂದ 20 ದಿನಗಳ ಕಾಲ ನಿಯೋವೈಸ್ ಧೂಮಕೇತುವನ್ನು (ಸಿ/2020 ಎಫ್3) ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದೆ. ಪ್ರತಿ ದಿನ ಸುಮಾರು 20 ನಿಮಿಷಗಳ ಕಾಲ ಈ ಅದ್ಭುತ ಆಕಾಶಕಾಯವು ಗೋಚರಿಸಲಿದ್ದು, ಬರಿಗಣ್ಣಿನಿಂದಲೇ ಇದನ್ನು ವೀಕ್ಷಿಸಲು ಸಾಧ್ಯವಿದೆ.
ಭಾರತದಲ್ಲಿ ಗೋಚರ
ಆಗಸದ ವಾಯವ್ಯ ಭಾಗದಲ್ಲಿ ಜು.14ರಿಂದ ಮುಂದಿನ 20 ದಿನಗಳವರೆಗೆ ಇದು ಗೋಚರಿಸಲಿದೆ. ಸೂರ್ಯಾಸ್ತವಾದ ಬಳಿಕ ಸುಮಾರು 20 ನಿಮಿಷಗಳ ಕಾಲ ಇದು ಕಾಣಿಸಲಿದ್ದು, ಬರಿಗಣ್ಣಿನಿಂದಲೇ ವೀಕ್ಷಿಸಬಹುದು. ಜುಲೈ 22-23ರಂದು ಭೂಮಿಯ ಅತ್ಯಂತ ಸಮೀಪಕ್ಕೆ ಧೂಮಕೇತು ಬರಲಿದೆ ಎಂದು ಒಡಿಶಾ ಪ್ಲಾನೆಟೋರಿಯಂನ ಉಪ ನಿರ್ದೇಶಕ
ಡಾ| ಸುಭೇಂದು ಪಾಟ್ನಾಯಕ್ ಹೇಳಿದ್ದಾರೆ.
ಪತ್ತೆಯಾಗಿದ್ದು ಯಾವಾಗ?
ನಾಸಾದ ನಿಯೋವೈಸ್(ನಿಯರ್ ಅರ್ಥ್ ವೈಡ್- ಫೀಲ್ಡ್ ಇನ್‌ಫ್ರಾರೆಡ್ ಸರ್ವೇ ಎಕ್ಸ್‌ಪ್ಲೋರರ್) ಟೆಲಿಸ್ಕೋಪ್ ಕಳೆದ ಮಾರ್ಚ್ 27ರಂದು ಈ ಧೂಮಕೇತುವನ್ನು ಪತ್ತೆಹಚ್ಚಿತ್ತು.
ಆಗಸ್ಟ್‌ನಲ್ಲಿ ಕಣ್ಮರೆ
ಆಗಸ್ಟ್ ತಿಂಗಳು ಸಮೀಪಿಸಿದಂತೆ ಧೂಮಕೇತು ಕಣ್ಮರೆಯಾಗಲಿದ್ದು, ಅನಂತರ ಅದು ಬರಿಗಣ್ಣಿಗೆ ಕಾಣ ಸಿಗುವುದಿಲ್ಲ. ಬೈನಾಕ್ಯುಲರ್ ಅಥವಾ ದೂರದರ್ಶಕದ ಮೂಲಕ ಇದು ಸ್ವಲ್ಪಮಟ್ಟಿಗೆ ಗೋಚರಿಸಬಹುದು.
ಈಗ ಎಲ್ಲಿದೆ?
ಪ್ರಸ್ತುತ ಈ ಧೂಮಕೇತು ಭೂಮಿಯಿಂದ 20 ಕೋಟಿ ಕಿ.ಮೀ. ದೂರದಲ್ಲಿ ಪರಿಭ್ರಮಿ ಸುತ್ತಿದೆ. ಜು.22ರಂದು ಅದು ಭೂಮಿಯ ಸಮೀಪಕ್ಕೆ ಅಂದರೆ 10.30 ಕೋಟಿ ಕಿ.ಮೀ.ಗಳ ಹತ್ತಿರಕ್ಕೆ ಆಗಮಿಸಲಿದ್ದು, ಆಗ ಅದು ಸ್ಪಷ್ಟವಾಗಿ ಗೋಚರಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.