ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ


Team Udayavani, Apr 25, 2024, 2:14 AM IST

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಮಂಗಳೂರು: ಹಿಂದುತ್ವಕ್ಕೆ ಬದ್ಧತೆ ಹಾಗೂ ಅಭಿವೃದ್ಧಿಗೆ ಆದ್ಯತೆ ಎನ್ನುವುದು ನನ್ನ ಮೂಲ ಮಂತ್ರ. ಅದರ ಆಧಾರದಲ್ಲಿಯೇ ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ ಭಾರತ-2047ಕ್ಕೆ ಪೂರಕವಾಗಿ ವಿಕಸಿತ ದಕ್ಷಿಣ ಕನ್ನಡದ “ನವಯುಗ-ನವಪಥ’ ಕಾರ್ಯಸೂಚಿಯನ್ನು ಸಿದ್ಧಪಡಿಸಿದ್ದೇನೆ ಎಂದು ದ.ಕ. ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯ ಸೂಚಿಯಲ್ಲಿ ಹೇಳಿರುವ 9 ಆದ್ಯತಾ ಕ್ಷೇತ್ರಗಳಲ್ಲಿ ಯೋಜನೆಗಳನ್ನು ಎಲ್ಲ ಶಾಸಕರ ಸಹಕಾರ ದೊಂದಿಗೆ ಸಾಕಾರಗೊಳಿಸಲಾಗುವುದು ಎಂದರು.

ಸಂಪರ್ಕ, ಮೂಲಸೌಕರ್ಯ ಅಭಿವೃದ್ಧಿಯಲ್ಲಿ ದಾಪುಗಾಲು, ಕೈಗಾರಿಕೆ ಮತ್ತು ಬಂಡವಾಳ ಆಕರ್ಷಣೆ, ಸ್ಟಾರ್ಟ್‌ ಅಪ್‌ ಮತ್ತು ಉದ್ಯಮ ಶೀಲತೆ, ಪ್ರವಾಸೋದ್ಯಮ, ನಾರಿಶಕ್ತಿ, ಸಂಸ್ಕೃತಿ ಹಾಗೂ ಪರಂಪರೆ, ಕೃಷಿ, ಪಶು ಸಂಗೋಪನೆ, ಮೀನುಗಾರಿಕೆ, ಯುವಜನತೆ ಮತ್ತು ಸಂವಹನ, ಕರಾವಳಿ ಅಭಿವೃದ್ಧಿ ಮತ್ತು ಭದ್ರತೆ ಎಂಬ 9 ಕ್ಷೇತ್ರಗಳನ್ನು ಕಾರ್ಯಸೂಚಿಯಲ್ಲಿ ಅಳವಡಿಸಲಾಗಿದೆ ಎಂದರು.

ಸೈನಿಕ ಶಾಲೆ, ಸೇನಾ ಶಿಬಿರ ಸ್ಥಾಪನೆ
ಜಿಲ್ಲೆಯಲ್ಲಿ ರಾಣಿ ಅಬ್ಬಕ್ಕ ಹೆಸರಿನಲ್ಲಿ ಸೈನಿಕ ತರಬೇತಿ ಶಾಲೆ ತೆರೆದು ಸೈನಿಕರಾಗುವುದಕ್ಕೆ ಪ್ರೋತ್ಸಾಹ ನೀಡಲಾಗುವುದು, ಸಂಸದ ನಳಿನ್‌ ಕುಮಾರ್‌ ಕಟೀಲು ಅವರ ಅವಧಿಯಲ್ಲಿ ಮಂಜೂರಾದ ಕೋಸ್ಟ್‌ಗಾರ್ಡ್‌ ತರಬೇತಿ ಅಕಾಡೆಮಿ ದೇಶದಲ್ಲೇ ಏಕೈಕ ಎನ್ನುವ ಹೆಗ್ಗಳಿಕೆ ಹೊಂದಿದ್ದು ಕೆಲಸ ನಡೆಯುತ್ತಿದೆ, ಇದಕ್ಕೆ ಪೂರಕವಾಗಿ ಸೇನಾ ಶಿಬಿರವನ್ನೂ ಇಲ್ಲಿ ಸ್ಥಾಪಿಸುವುದಕ್ಕೆ ಪ್ರಯತ್ನ ಮಾಡುತ್ತೇನೆ. ಸಮಾಜಘಾತಕ ಶಕ್ತಿಗಳು, ಪಿಎಫ್‌ಐಯ ಸ್ಲಿàಪರ್‌ ಸೆಲ್‌ಗ‌ಳು ಇಲ್ಲಿ ಬಹಳಷ್ಟು ಕಾರ್ಯ ನಿರ್ವಹಿಸುತ್ತಿರುವುದರಿಂದ ಎನ್‌ಐಎ ಘಟಕವನ್ನು ಇಲ್ಲಿ ಸ್ಥಾಪಿಸುವ ನಿಟ್ಟಿನಲ್ಲಿ ಶ್ರಮಿಸುವೆ ಎಂದರು.

ಇಸ್ಲಾಮಿಕ್‌ ಮೂಲಭೂತವಾದದ ಚಟುವಟಿಕೆಗಳಿಗೆ ಇರುವ ಇಕೋ ಸಿಸ್ಟಂ ಅನ್ನು ಬದಲಾಯಿಸ ಬೇಕು. ಅವುಗಳನ್ನು ಬುಡ ಸಮೇತ ಕಿತ್ತುಹಾಕಲು ಕೆಲಸ ಮಾಡುತ್ತೇವೆ. ಮುಸ್ಲಿಂ ಯುವಕರ ಮಧ್ಯೆ ದೇಶ ವಿರೋಧಿ ಮತ್ತು ಸಮಾಜ ವಿರೋ ಧಿ ಮಾನಸಿಕತೆಯನ್ನು ಬಿತ್ತುವ ಮತ್ತು ಬೆಳೆಸುವ ವ್ಯವಸ್ಥಿತ ಚಟುವಟಿಕೆಗಳು ನಡೆಯುತ್ತಿವೆ. ಅವನ್ನು ಸಂಪೂರ್ಣ ಮಟ್ಟಹಾಕಲಾಗುವುದು ಎಂದರು.

ಉದ್ಯಮ, ಉದ್ಯೋಗಸಣ್ಣ, ಮಧ್ಯಮ ಮತ್ತು ಬೃಹತ್‌ ಉದ್ಯಮ ಗಳು ಹೆಚ್ಚಾಗಬೇಕು, ಆಹಾರ ಸಂಸ್ಕರಣೆ, ಜವುಳಿ, ಮೀನುಗಾರಿಕೆ, ಸಮುದ್ರ ಅವಲಂಬಿತ ಉತ್ಪನ್ನಗಳ ವಿಶೇಷ ಕ್ಲಸ್ಟರ್‌ಗಳ ಸ್ಥಾಪನೆ ಮಾಡ ಬೇಕೆಂಬ ಯೋಜನೆಯಿದೆ. ಈ ರೀತಿಯ ಕ್ಲಸ್ಟರ್‌ಗಳಲ್ಲಿ ಮಹಿಳೆಯರ ಮತ್ತು ಮೀನುಗಾರ ಸಮು ದಾಯಗಳಿಗೆ ವಿಶೇಷ ಆದ್ಯತೆ ನೀಡಲಾಗುವುದು. ಮಹಿಳೆಯರಿಗೆ ಉದ್ಯೋಗ ಸೃಷ್ಟಿಗೆ ಕೆಲಸ ಮಾಡುವುದು, ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಘಟಕಗಳನ್ನು ಸ್ಥಾಪಿಸಲು ವಿಶ್ವದ ಪ್ರಮುಖ ಜಾಗತಿಕ ಕಂಪೆನಿಗಳನ್ನು ಇಲ್ಲಿಗೆ ಕರೆಸಬೇಕೆಂಬ ಯೋಚನೆಯಿದೆ. ಆ ದೃಷ್ಟಿಯಿಂದಲೂ ಕೆಲಸ ಮಾಡಲಾಗುವುದು ಎಂದರು.

ಮಗನಾಗಿ ಕೆಲಸ ಮಾಡುವೆ
ನಾಮಪತ್ರ ಸಲ್ಲಿಕೆಗೆ ಒಂದು ದಿನ ಮೊದಲು ಮೀನುಗಾರ ಮಹಿಳೆಯರು, ಹೂ ಮಾರುವ ಮಹಿಳೆಯರು, ಅತೀ ಸಾಮಾನ್ಯ ಮಹಿಳೆಯರು ಬಂದು ಇಡುಗಂಟಿನ ಮೊತ್ತಕ್ಕೆ ತಮ್ಮ ದೇಣಿಗೆಯನ್ನು ಕೊಟ್ಟಿದ್ದರು. ಇದು ನನ್ನ ಹೃದಯಕ್ಕೆ ತಟ್ಟಿದ ಕ್ಷಣ. ಅತ್ಯಂತ ಭಾವನಾತ್ಮಕ ಕ್ಷಣ. ಪ್ರಧಾನಿ ಮೋದಿಯವರು ತಾಯಂದಿರ ಮಧ್ಯೆ ತಲುಪಿದ್ದಾರೆ ಎಂಬುದಕ್ಕೆ ನಿದರ್ಶನವಾಗಿ ನನಗೆ ಈ ಘಟನೆ ಕಾಣಿಸಿತು. ಜಿಲ್ಲೆಯ ಎಲ್ಲ ತಾಯಂದಿರಿಗೆ ಋಣಿಯಾಗಿರುತ್ತೇನೆ. ಅವರ ಭದ್ರತೆ, ಅವರ ಗೌರವ, ಸ್ವಾಭಿಮಾನದ ವಿಷಯದಲ್ಲಿ ನಾನು ಅವರ ಮಗನಾಗಿ ಕೆಲಸ ಮಾಡುವೆ ಎಂದು ಕ್ಯಾ| ಚೌಟ ಅವರು ಹೇಳಿದರು.

ಕೋಮು ಸೂಕ್ಷ್ಮಹಣೆಪಟ್ಟಿ ಕಳಚೋಣ
ದ.ಕ. ಜಿಲ್ಲೆ ಕೋಮು ಸೂಕ್ಷ್ಮ ಎನ್ನುವ ಆಖ್ಯಾನವನ್ನು ಕೆಲವು ಸ್ಥಾಪಿತ ಹಿತಾಸಕ್ತಿಗಳು ಹಿಂದಿನಿಂದಲೂ ಮಾಡಿ ಕೊಂಡು ಬಂದಿವೆ, ದ.ಕ. ಜಿಲ್ಲೆಯಲ್ಲಿ ಅಂತಹ ಪರಿಸ್ಥಿತಿ ಇಲ್ಲ, ಈಗಲೂ ಉದ್ಯಮ, ಪ್ರವಾಸೋದ್ಯಮಕ್ಕೆ ಪೂರಕ ಅವಕಾಶಗಳಿವೆ. ಹಾಗಾಗಿ ಎಲ್ಲರೂ ಸೇರಿಕೊಂಡು ಈ ಹಣೆಪಟ್ಟಿ ಕಳಚುವ ಯತ್ನ ಮಾಡೋಣ ಎಂದು ಕ್ಯಾ| ಬ್ರಿಜೇಶ್‌ ಚೌಟ ಅವರು ತಿಳಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್‌ ಕುಂಪಲ, ಚುನಾವಣ ಪ್ರಭಾರಿ ಕ್ಯಾ| ಗಣೇಶ್‌ ಕಾರ್ಣಿಕ್‌, ಸಂಚಾಲಕರಾದ ನಿತಿನ್‌ ಕುಮಾರ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ ಮತ್ತು ಯತೀಶ್‌ ಅರ್ವಾರ, ಮಾಜಿ ಶಾಸಕ ರುಕ್ಮಯ ಪೂಜಾರಿ ಹಾಗೂ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಉಪಸ್ಥಿತರಿದ್ದರು.

3ನೇ ಬಾರಿ ಮೋದಿಗಾಗಿ ನಂ. 3ನೇ ಬಟನ್‌!
ಸಮಗ್ರ ಅಭಿವೃದ್ಧಿ ಕಾರ್ಯ ಮುಂದು ವರಿಯಲು ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಬೇಕು, ಅದಕ್ಕಾಗಿ ಎ. 26ರಂದು ಇವಿಎಂನ ಮೂರನೇ ಕ್ರಮ ಸಂಖ್ಯೆಯಲ್ಲಿರುವ ನನಗೆ ಮತ ಹಾಕಬೇಕು ಎಂದು ಚೌಟ ಮನವಿ ಮಾಡಿದರು.

ಮೋದಿ 3.0 ಸಂದರ್ಭದಲ್ಲಿ ವಿಕಸಿತ ದಕ್ಷಿಣ ಕನ್ನಡವನ್ನು ರೂಪಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ 2.0 ಮಾಡಬೇಕೆಂಬ ಕನಸು ನನ್ನಲ್ಲಿದೆ. ಸಂಪರ್ಕ ಮತ್ತು ಮೂಲ ಸೌಕರ್ಯ ದೃಷ್ಟಿಯಿಂದ ನಮ್ಮ ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ತಂದಿರುವ ಎಲ್ಲ ಯೋಜನೆಗಳನ್ನು, ವಿಶೇಷವಾಗಿ ಹೆದ್ದಾರಿ, ಅನುಷ್ಠಾನ ಹಂತದಲ್ಲಿರುವುದನ್ನು ಸಮಯ ಬದ್ಧವಾಗಿ ಪೂರ್ಣಗೊಳಿಸಲು ಮೊದಲ ಆದ್ಯತೆ ನೀಡುತ್ತೇನೆ ಎಂದರು.

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ

Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ

Anwar-Manippady

Mangaluru: ವಕ್ಫ್‌ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ

Pocso

Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.