ಗಡಿಯಲ್ಲಿ ಭಾರತ-ಚೀನ ಶಾಂತಿಗೆ ಬದ್ಧ
ದ್ವಿಪಕ್ಷೀಯ ಒಪ್ಪಂದ ಅನ್ವಯ ಗಡಿ ಬಿಕ್ಕಟ್ಟು ಶಮನದತ್ತ: ವಿದೇಶಾಂಗ ಸಚಿವಾಲಯ
Team Udayavani, Jun 8, 2020, 6:00 AM IST
ಹೊಸದಿಲ್ಲಿ: ಭಾರತ- ಚೀನ ಗಡಿ ಮುನಿಸು ತಣ್ಣಗಾಗುವ ದಿನಗಳು ಬಂದಿವೆ. ಎರಡೂ ದೇಶಗಳು ಈ ಹಿಂದಿನ ದ್ವಿಪಕ್ಷೀಯ ಒಪ್ಪಂದಗಳ ಅನ್ವಯ ಗಡಿ ಬಿಕ್ಕಟ್ಟನ್ನು ಬಗೆ ಹರಿಸಿ ಕೊಳ್ಳಲು ತೀರ್ಮಾನಿಸಿವೆ ಎಂದು ಭಾರತದ ವಿದೇಶಾಂಗ ಸಚಿವಾಲಯ ರವಿವಾರ ತಿಳಿಸಿದೆ.
ಲಡಾಖ್‌ನ ಚುಶುಲ್- ಮೊಲ್ಡಾದ ಬಿಪಿಎಂ ಪಾಯಿಂಟ್‌ನಲ್ಲಿ ಸಕಾರಾತ್ಮಕವಾಗಿ ಸಭೆ ಅಂತ್ಯ ಕಂಡಿದೆ. ಭಾರತ-ಚೀನ ಗಡಿಯಲ್ಲಿ ಶಾಂತಿ ಅಗತ್ಯ ಎಂಬುದನ್ನು ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ. ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಮಂದಿನ ಚರ್ಚೆಗಳು ನಡೆಯಲಿವೆ ಎಂದು ಸಚಿವಾಲಯ ಹೇಳಿದೆ.
ಎಲ್‌ಎಸಿ ಬಗ್ಗೆಯೇ ಆಕ್ಷೇಪ
ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಎಂದು ಕರೆಯಲ್ಪಡುವ ಭಾರತ-ಚೀನ ನಡುವಿನ ವಿವಾದಿತ ಗಡಿಯನ್ನು ಪಶ್ಚಿಮ, ಮಧ್ಯ ಮತ್ತು ಪೂರ್ವ ಎಂಬ 3 ಭಾಗಗಳಾಗಿ ವಿಂಗಡಿಸಲಾಗಿದೆ. ಎಲ್‌ಎಸಿಯ ನಿಖರವಾದ ವ್ಯಾಪ್ತಿಯ ಬಗ್ಗೆ ಎರಡೂ ದೇಶಗಳು ಭಿನ್ನಾಭಿಪ್ರಾಯ ಹೊಂದಿವೆ. ಅದು 3,348 ಕಿ.ಮೀ. ಉದ್ದವಿದೆ ಎಂದು ಭಾರತ ಹೇಳಿದರೆ, 2 ಸಾವಿರ ಕಿ.ಮೀ. ಮಾತ್ರ ಇದೆ ಎಂಬುದು ಚೀನದ ವಾದ. ಗಡಿ ಉದ್ವಿಗ್ನಕ್ಕೆ ಇದೇ ಕಾರಣ ಎಂದು ಸಭೆಯಲ್ಲಿ ತಿಳಿದುಬಂದಿದೆ.
ಭಾರತ-ಚೀನ ರಾಜತಾಂತ್ರಿಕ ಸಂಬಂಧ ಏರ್ಪಟ್ಟು 70 ವರ್ಷಗಳು ತುಂಬುತ್ತಿವೆ. ಈ ಹಿಂದೆ ನಡೆದ ದ್ವಿಪಕ್ಷೀಯ ಮಾತುಕತೆಗಳಲ್ಲಿ ಆಗಿರುವ ತೀರ್ಮಾನಗಳನ್ನು ಗೌರವಿಸಿ, ಭಿನ್ನಾಭಿ ಪ್ರಾಯ ಗಳನ್ನು ಬಗೆಹರಿಸಿಕೊಳ್ಳಲು ಉಭಯ ದೇಶಗಳು ಬದ್ಧವಾಗಿವೆ ಎಂದು ಸಚಿವಾಲಯ ತಿಳಿಸಿದೆ.
“ಬಾಯ್ಕಟ್ ಚೀನ’, ಸರಕಾರದ ಘೋಷಣೆ ಅಲ್ಲ
ಚೀನೀ ವಸ್ತುಗಳ ಬಹಿಷ್ಕಾರ (ಬಾಯ್ಕಟ್ ಚೀನ) ಅಭಿಯಾನ ಜನಪ್ರಿಯ ಭಾವನೆಯೇ ವಿನಾ ಸರಕಾರದ ಘೋಷಣೆ ಅಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಸ್ಪಷ್ಟಪಡಿಸಿದ್ದಾರೆ. “ಬಾಯ್ಕಟ್ ಚೀನ’ ಭಾರತೀಯರು ಹುಟ್ಟುಹಾಕಿರುವ ಜನಪ್ರಿಯ ಭಾವನೆ. ಈ ಬಗ್ಗೆ ಕೇಂದ್ರ ಸರಕಾರ ಘೋಷಣೆ ಹೊರಡಿ ಸಿಲ್ಲ. “ಮೇಡ್ ಇನ್ ಚೀನ’ ಉತ್ಪನ್ನಗಳನ್ನು ಜನ ತಾವಾಗಿಯೇ ಬಹಿಷ್ಕರಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಚೀನ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ. ಪೂರ್ವ ಲಡಾಖ್‌ನಲ್ಲಿನ ಅದರ ವರ್ತನೆಯೂ ಈ ಆಕ್ರೋಶ ಹೆಚ್ಚಲು ಪ್ರಮುಖ ಕಾರಣವಾಗಿದೆ ಎಂದಿದ್ದಾರೆ.
ಭಾರತವು ಯಾವುದೇ ರಾಷ್ಟ್ರದ ಮುಂದೆ ತಲೆಬಾಗುವುದಿಲ್ಲ. ಚೀನದೊಂದಿಗಿನ ಗಡಿ ಬಿಕ್ಕಟ್ಟನ್ನು ಪರಸ್ಪರ ಮಾತುಕತೆಯಿಂದ ಬಗೆಹರಿಸಿಕೊಳ್ಳುತ್ತಿದ್ದೇವೆ.
– ರಾಜನಾಥ್ ಸಿಂಗ್, ರಕ್ಷಣಾ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
MUST WATCH
ಹೊಸ ಸೇರ್ಪಡೆ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.