ಆ್ಯಂಟಿ ಬಯೋಟಿಕ್ : ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಶುಂಠಿ ರಾಮಬಾಣ
ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿ ಆರೋಗ್ಯ ಸುಧಾರಣೆಯಾಗುತ್ತದೆ.
Team Udayavani, Oct 7, 2022, 6:07 PM IST
ನೆಗಡಿಯಾದರೆ ಸಾಕು ಶುಂಠಿ ಕಷಾಯ ಮಾಡಿ ಕುಡಿ ಸಾಕು ಎನ್ನುವುದು ನಮ್ಮ ಕಡೆ ರೂಢಿಮಾತು. ಗಂಟಲಿನ ಕಿಚ್ ಕಿಚ್ ದೂರಾಗಿಸಲು ವಿಕ್ಸ್ ಗೋಲಿಗಳನ್ನು ತೆಗೆದುಕೊಳ್ಳುವ ಮೊದಲೆ ಹಸಿ ಶುಂಠಿ ಸಕ್ಕರೆ ನಮ್ಮ ಬಾಯಿ ಸೇರಿರುತ್ತದೆ. ಆಹಾರದಲ್ಲಿ ಶುಂಠಿ ಬಳಸುವುದರಿಂದ ಆಹಾರದ ಸುವಾಸನೆ ಮತ್ತು ರುಚಿ ಹೆಚ್ಚುವುದಷ್ಟೇ ಅಲ್ಲ, ಆರೋಗ್ಯ ಮತ್ತು ಸೌಂದರ್ಯದ ಮೇಲೂ ಉತ್ತಮ ಪರಿಣಾಮವನ್ನು ಬೀರುತ್ತದೆ. ನಮ್ಮ ಅಡುಗೆ ಮನೆಯಲ್ಲಿ ಶುಂಠಿ ಇಲ್ಲದೇ ಇರುವುದಿಲ್ಲ. ಶುಂಠಿ ಶೀತ ಸಂಬಂಧೀ ರೋಗಗಳಿಗೆ ಉತ್ತಮ ಮನೆ ಮದ್ದು ಎಂದು ಕೇಳಿರುತ್ತೇವೆ.
ಶುಂಠಿಯ ಸಾಮಾನ್ಯ ಉಪಯೋಗಗಳು:
ಮಕ್ಕಳ ಶೀತಕ್ಕೆ: ಮಕ್ಕಳಿಗೆ ನೆಗಡಿ ಶೀತವಾಗಿ ಜ್ವರ ಬಂದು, ಮೂಗು ಕಟ್ಟಿ, ಉಸಿರಾಡಲು ತೊಂದರೆಯಾದಾಗ 3 ರಿಂದ 6 ಹನಿ ಹಸಿ ಶುಂಠಿರಸ, ಒಂದು ಚಮಚ ಜೇನುತುಪ್ಪ ಮತ್ತು 2-3 ಹನಿ ತುಳಸಿ ರಸ ಸೇರಿಸಿಕೊಟ್ಟರೆ ಬಹುಬೇಗ ಶೀತ ನೆಗಡಿಗಳು ಕಡಿಮೆಯಾಗಿ ಮಗುವಿಗೆ ಆರಾಮವೆನಿಸುತ್ತದೆ.
ದೇಹದ ತೂಕ ಕಡಿಮೆ ಮಾಡಲು: ಒಂದು ದೊಡ್ಡ ಲೋಟ ಕಡೆದ ಮಜ್ಜಿಗೆಗೆ ಎರಡು ಚಮಚ ಹಸಿ ಶುಂಠಿ ರಸ ಮತ್ತು ಸ್ವಲ್ಪ ಸೈಂಧವ ಲವಣವನ್ನು ನೀರಿನಲ್ಲಿ ಪ್ರತಿ ದಿನ ತೆಗೆದುಕೊಂಡು ಜಿಡ್ಡಿನ ಪದಾರ್ಥ, ಸಿಹಿ ಪದಾರ್ಥಗಳನ್ನು ಬಿಟ್ಟು ಪಥ್ಯ ಮಾಡಿದರೆ ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ಇದಲ್ಲದೆ ಪಚನ ಶಕ್ತಿ ಹೆಚ್ಚಾಗುತ್ತದೆ. ತಿಂದ ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿ ಆರೋಗ್ಯ ಸುಧಾರಣೆಯಾಗುತ್ತದೆ.
– ಗಂಟಲು ನೋವು, ಕೆಮ್ಮಿನಿಂದಾಗಿ ಗಂಟಲು ಕೆರೆದಂತಾಗುತ್ತಿದ್ದರೆ, ಹಸಿ ಶುಂಠಿ ಮತ್ತು ಉಪ್ಪು ಹಾಕಿ ತಿಂದರೆ ಗಂಟಲು ಕೆರೆತ ನಿವಾರಣೆಯಾಗುತ್ತದೆ. ರಾತ್ರಿಯಿಡೀ ಕೆಮ್ಮಿನಿಂದಾಗಿ ನಿದ್ರೆ ಮಾಡಲೂ ತೊಂದರೆಯಾಗುತ್ತಿದ್ದರೆ, ಹೀಗೆ ಮಾಡಬಹುದು.
– ಶುಂಠಿ ಜೀರ್ಣಕ್ರಿಯೆಗೂ ಸಹಕಾರಿ. ಹಲಸಿನ ಕಾಯಿ ತಿಂದರೆ ಶುಂಠಿ ತಿನ್ನಬೇಕು ಎಂಬ ಆಡುಮಾತಿದೆ. ಅದರಂತೆ ಸುಲಭವಾಗಿ ಜೀರ್ಣವಾಗದ ಆಹಾರ ಸೇವಿಸಿದಾಗ ಒಂದು ತುಂಡು ಶುಂಠಿ ತಿಂದರೆ ಬೇಗನೇ ಜೀರ್ಣವಾಗುತ್ತದೆ. ಅಥವಾ ಚಹಾ ಮಾಡುವಾಗ ಚಿಕ್ಕ ಚೂರು ಶುಂಠಿ ಸೇರಿಸಿ ಮಾಡಿದರೂ, ಜೀರ್ಣಕ್ರಿಯೆ ಸುಗಮವಾಗುತ್ತದೆ.
– ನಿಲ್ಲದ ಕೆಮ್ಮಿದ್ದರೆ, ಶುಂಠಿ ರಸಕ್ಕೆ ಸ್ವಲ್ಪ ಜೇನು ತುಪ್ಪ ಸೇರಿಸಿಕೊಂಡು ಸೇವಿಸಿದರೆ ಕೆಮ್ಮು ನಿಯಂತ್ರಣಕ್ಕೆ ಬರುತ್ತದೆ. ಶುಂಠಿಯಲ್ಲಿ ನೋವು ನಿವಾರಿಸುವ ಗುಣ ಹೊಂದಿದೆ. ಹೀಗಾಗಿ ಮಾಂಸ ಖಂಡದ ನೋವು, ಸಂಧಿ ನೋವು ಇದ್ದರೆ ಶುಂಠಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.
-ಊಟ ಮಾಡುವುದಕ್ಕೂ ಮುನ್ನು ಸಣ್ಣ ತುಂಡು ಶುಂಠಿಯನ್ನು ಜಗಿದು ಸೇವಿಸಿದರೆ ಹಸಿವು ಹೆಚ್ಚಾಗುವುದು.
-ಜೀರ್ಣದ್ರವಗಳು ಕಾರ್ಯನಿರ್ವಹಿಸುವಂತೆ ಮಾಡುತ್ತದೆ.
-ಶುಂಠಿಯು ದೇಹದ ಅತ್ಯವಶ್ಯಕ ಪೋಷಕಾಂಶವನ್ನು ಹೀರಿಕೊಳ್ಳುತ್ತದೆ.
-ವಾಂತಿ ಬರುವಂತಾದರೆ, ಜೇನುತುಪ್ಪದೊಂದಿಗೆ ಸಣ್ಣ ತುಂಡು ಶುಂಠಿ ಸೇರಿಸಿ ಸೇವಿಸಿದರೆ ಪರಿಹಾರವಾಗುವುದು.
-ಹೊಟ್ಟೆಯಲ್ಲಿ ಸಂಕಟವಾದರೆ ಸಣ್ಣು ತುಂಡು ಶುಂಠಿಯನ್ನು ಬಾಯಿಗೆ ಹಾಕಿಕೊಂಡು ಜಗಿದರೆ ಪರಿಹಾರ ಸಿಗುವುದು.
-ಶುಂಠಿ ಟೀ ಸೇವಿಸುವುದರಿಂದ ಗಂಟಲು ಬೇನೆ ಮತ್ತು ಕಟ್ಟಿದ ಮೂಗಿನಿಂದ ರಿಲೀಫ್ ಸಿಗುವುದು.
– ಶುಂಠಿಯನ್ನು ನೀರಿನಲ್ಲಿ ಅರೆದು ಬರುವ ಗಂಧವನ್ನು ಹಣೆಗೆ ಲೇಪ ಮಾಡಿ ಹಚ್ಚುವುದರಿಂದ ತಲೆನೋವು ನಿವಾರಣೆಯಾಗುತ್ತದೆ.
– ಒಣ ಶುಂಠಿ ಚೂರ್ಣವನ್ನು ಬೆಲ್ಲದೊಂದಿಗೆ ನೀಡುವುದರಿಂದ ಅಜೀರ್ಣದಿಂದ ಉಂಟಾದ ಭೇದಿ ಹತೋಟಿಗೆ ಬರುತ್ತದೆ.
– ಬಾಯಿ ರುಚಿ ಕೆಟ್ಟಾಗ, ಹೊಟ್ಟೆ ಉಬ್ಬರಿಸಿದಾಗ, ಶುಂಠಿ ಪುಡಿಗೆ ನೆಲ್ಲಿಕಾಯಿ,ಅಳಲೆಕಾಯಿ ನಿಂಬೆರಸ ಬೆರೆಸಿ ಬಿಸಿನೀರಲ್ಲಿ ಸೇವನೆ ಮಾಡಿದರೆ ಒಳ್ಳೆಯದು.
– ಶ್ವಾಸ ಸಂಬಂಧಿ ಖಾಯಿಲೆಗೆ, ಶುಂಠಿಗೆ ಕರಿಮೆಣಸು,ಜೇನುತುಪ್ಪ ಬೆರೆಸಿ ಬಿಸಿನೀರಿನೊಡನೆ ಕುಡಿಯುವುದು ಒಳ್ಳೆಯದು.
– ಅರ್ಧ ಲೋಟ ಬಿಸಿ ನೀರಿಗೆ ಶುಂಠಿ ರಸ, ಬೆಲ್ಲ ಬೆರೆಸಿ ಕಲಸಿ ಬೆಳಗ್ಗೆ ಮತ್ತು ರಾತ್ರಿ ಮೂರು ದಿನಗಳ ಕಾಲ ಕುಡಿದರೆ ನೆಗಡಿ ನಿವಾರಣೆಯಾಗುತ್ತದೆ.
– ಒಂದು ಚಮಚೆ ಹಸಿಶುಂಠಿ ರಸಕ್ಕೆ ಒಂದು ಚಮಚೆ ಜೇನುತುಪ್ಪ ಬೆರೆಸಿ ಒಂದರಿಂದ ಎರಡು ಚಮಚೆಯಷ್ಟು ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ವಾಂತಿ ನಿಂತುಹೊಗುತ್ತದೆ.
– ಒಂದು ಸ್ಪೂನ್ ಹಸಿ ಶುಂಠಿ ರಸಕ್ಕೆ ಅರ್ಧ ಸ್ಪೂನ್ ಜೇನುತುಪ್ಪ ಸೇರಿಸಿ ಸೇವಿಸಿದರೆ ಕೆಮ್ಮು, ಕಫ, ಉಬ್ಬಸ ಕಡಿಮೆಯಾಗುತ್ತದೆ.
– ಶುಂಠಿಯನ್ನು ಪ್ರತಿ ದಿನ ಊಟದಲ್ಲಿ ಸಾಕಷ್ಟು ಬಳಸಿದರೆ, ಅದು ಊಟಕ್ಕೆ ರುಚಿಯನ್ನು ಕೊಡುವುದೇ ಅಲ್ಲದೆ, ಪಚನ ಕ್ರಿಯೆಯನ್ನು ವದ್ಧಿಗೊಳಿಸಿ, ಆಹಾರವು ಸುಲಭವಾಗಿ ಜೀರ್ಣವಾಗುವಂತೆ ಮಾಡುತ್ತದೆ, ದೇಹಕ್ಕೆ ಪೋಷಣೆ ಕೊಟ್ಟು ಆರೋಗ್ಯವನ್ನು ಕಾಪಾಡುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.