ಕುಕ್ಕರ್ ಬಾಂಬ್ ಸ್ಫೋಟ ಪ್ರತಿಧ್ವನಿ: ವಿಧಾನಸಭೆಯಲ್ಲಿ ಕಾಂಗ್ರೆಸ್ -ಬಿಜೆಪಿ ಸದಸ್ಯರ ನಡುವೆ ವಾಕ್ಸಮರ
Team Udayavani, Dec 23, 2022, 7:40 AM IST
ಸುವರ್ಣ ವಿಧಾನಸೌಧ: ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ವಿಧಾನಸಭೆಯಲ್ಲಿ ಗುರುವಾರ ಪ್ರತಿಧ್ವನಿಸಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ವಾಕ್ಸಮರಕ್ಕೂ ಕಾರಣವಾಯಿತು.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಸಿ.ಟಿ.ರವಿ, ದಶಕಗಳ ಕಾಲ ಭಾರತ ಭಯೋತ್ಪಾದನೆಯಿಂದ ಸಾಕಷ್ಟು ತೊಂದರೆ ಅನುಭವಿಸಿದೆ. ಒಬ್ಬರು ಹಾಲಿ ಪ್ರಧಾನಿ ಹಾಗೂ ಒಬ್ಬರು ಮಾಜಿ ಪ್ರಧಾನಿಯನ್ನು ಕಳೆದುಕೊಂಡಿದೆ. ಭಯೋತ್ಪಾದಕರು ಅಥವಾ ಭಯೋತ್ಪಾದನೆ ಕೃತ್ಯದ ಬಗ್ಗೆ ಸಹಾನುಭೂತಿ ತೋರುವುದು ಭಯೋತ್ಪಾದನೆಗೆ ಕುಮ್ಮಕ್ಕು ಕೊಟ್ಟಂತೆಯೇ. ಇತ್ತೀಚೆಗೆ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಸಂಭವಿಸಿತು. ಆ ದಿನ ಮುಖ್ಯಮಂತ್ರಿ ಕಾರ್ಯಕ್ರಮ ಅಲ್ಲಿತ್ತು, ಪ್ರಾಥಮಿಕ ತನಿಖೆ ಪ್ರಕಾರ ಮುಖ್ಯಮಂತ್ರಿ ಕಾರ್ಯಕ್ರಮ, ಶಾಲಾ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು ವಿಧ್ವಂಸಕ ಕೃತ್ಯ ಎಸಗುವ ಉದ್ದೇಶವಿತ್ತು ಎಂದು ಹೇಳಲಾಗಿದೆ. ಹೀಗಿರುವಾಗ ಈ ಮನೆಯ ಹಿರಿಯ ಸದಸ್ಯರು, ಪಕ್ಷವೊಂದರ ರಾಜ್ಯಾಧ್ಯಕ್ಷರು ಭಯೋತ್ಪದಕನ ಬಗ್ಗೆ ಸಹಾನುಭೂತಿ ತೋರಿ ಮಾತನಾಡಿದ್ದಾರೆ. ದೇಶದ ಭದ್ರತೆಗೆ ಇಂತಹ ಹೇಳಿಕೆಗಳು ಅಪಾಯಕಾರಿ, ಯಾರೂ ಇಂತಹ ಮಾತು ಆಡಬಾರದು. ಭಯೋತ್ಪಾದನೆ ಮಟ್ಟ ಹಾಕುವ ಸಂಬಂಧ ಚರ್ಚೆಗೆ ಅವಕಾಶ ಕೊಡಿ ಎಂದು ಕೋರಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಸಿ.ಟಿ.ರವಿ ನಮ್ಮ ಪಕ್ಷದ ಅಧ್ಯಕ್ಷರನ್ನು ಕುರಿತು ಹೇಳಿದ್ದಾರೆ. ಆದರೆ, ಅವರು ಸದನದಲ್ಲಿಲ್ಲ. ಹೀಗಿರುವಾಗ ನೋಟಿಸ್ ಕೊಟ್ಟು ವಿಷಯ ಪ್ರಸ್ತಾಪಿಸಬೇಕೆಂದು ಆಕ್ಷೇಪ ವ್ಯಕ್ತಪಡಿಸಿದರು. ಭಯೋತ್ಪಾದನೆ ಕೃತ್ಯ ಯಾರೂ ಸಮರ್ಥಿಸಿಕೊಳ್ಳಬಾರದು, ಅಂತಹ ಕೃತ್ಯ ಎಸಗಿದವರಿಗೆ ಗಲ್ಲು ಸೇರಿ, ಕಠಿಣ ಶಿಕ್ಷೆ ನೀಡಬೇಕು. ನನಗೆ ಇರುವ ಮಾಹಿತಿ ಪ್ರಕಾರ, ನಮ್ಮ ಅಧ್ಯಕ್ಷರು ಭಯೋತ್ಪಾದಕನಿಗೆ ಸಹಾನುಭೂತಿ ತೋರಿಲ್ಲ ಎಂದು ಸಮರ್ಥಿಸಿಕೊಂಡರು.
ಗೃಹ ಸಚಿವ ಆರಗ ಜ್ಞಾನೇಂದ್ರ, ಮಂಗಳೂರು ಸ್ಫೋಟ ಪ್ರಕರಣದ ಆರೋಪಿ ಭಯೋತ್ಪಾದಕ ಎಂಬುದು ತನಿಖೆ ವೇಳೆ ಪತ್ತೆಯಾಗಿದೆ. ಆತನ ಮನೆ ಮೇಲೆ ದಾಳಿ ನಡೆಸಲಾಗಿದೆ. ಯಾವುದೋ ಒಂದು ಶಕ್ತಿಯಿಂದ ಅಂದು ಆಟೋದಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಆಯಿತು. ಮುಖ್ಯಮಂತ್ರಿಯವರ ಕಾರ್ಯಕ್ರಮ ಅಥವಾ ಶಾಲಾ ವಿದ್ಯಾರ್ಥಿ ಕೇಂದ್ರೀಕೃತವಾಗಿ ಆಗಿದ್ದರೆ ಎಂತಹ ಅನಾಹುತ ಆಗುತ್ತಿತ್ತು ಎಂದು ಪ್ರಶ್ನಿಸಿದರು.
ಉಪ ನಾಯಕ ಯು.ಟಿ.ಖಾದರ್, ಭಯೋತ್ಪಾದನೆ ಬುಡ ಸಮೇತ ಕಿತ್ತುಹಾಕಬೇಕಿದೆ. ದೇಶ, ರಾಜ್ಯದ ಆಂತರಿಕ ಭದ್ರತೆ ವಿಚಾರದಲ್ಲಿ ಯಾವುದೇ ರಾಜಿ ಬೇಡ. ಆ ಕುರಿತು ಚರ್ಚೆಯಾಗಲಿ. ಆದರೆ ನೀವು ಪ್ರಸ್ತಾಪಿಸುವ ವಿಷಯದ ಹಿಂದಿನ ಉದ್ದೇಶ ಸರಿ ಇರಬೇಕು ಎಂದು ಹೇಳಿದರು.
ಇದಕ್ಕೆ ಬಿಜೆಪಿಯ ಈಶ್ವರಪ್ಪ, ಆರವಿಂದ ಲಿಂಬಾವಳಿ ಸಹಿತ ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಯಾವ ರೀತಿಯ ದುರುದ್ದೇಶ ಇರಲು ಸಾಧ್ಯ ಎಂದರು. ಆರವಿಂದ ಲಿಂಬಾವಳಿ, ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಯಾಕೆ ಮುಟ್ಟಿ ನೋಡಿಕೊಳ್ಳುತ್ತೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಸಿದ್ದರಾಮಯ್ಯ, ಪಕ್ಷದ ಅಧ್ಯಕ್ಷ ಎಂದರೆ ಗೊತ್ತಾಗುವುದಿಲ್ಲವೇ? ಅವರು ಸದನದಲ್ಲಿ ಇಲ್ಲದಿರುವಾಗ ಹೇಗೆ ಪ್ರಸ್ತಾಪ ಮಾಡುತ್ತೀರಿ ಎಂದರು.
ಸಿ.ಟಿ.ರವಿ, ನಾನು ಎಲ್ಲವನ್ನೂ ಸ್ಪಷ್ಟವಾಗಿ ಹೇಳಿದ್ದೇನೆ, ಯಾರ ಹೆಸರೂ ಪ್ರಸ್ತಾಪ ಮಾಡಿಲ್ಲ. ಆದರೂ ಇದರಲ್ಲಿ ಖಾದರ್ ಅವರು ಪೂರ್ವಾಗ್ರಹ ಪೀಡಿತರಾಗಿ ದುರುದ್ದೇಶ ಎಲ್ಲಿ ಹುಡುಕಿದರು. ನಾನು ಶಾರೀಕ್ ಮತ್ತು ಖಾದರ್ ಅವರನ್ನು ಒಂದೇ ತಕ್ಕಡಿಯಲ್ಲಿ ತೂಗಿಲ್ಲ. ನಾವು ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿಗಳಾಗಿ ಮಾಡಿದ್ದೇವೆ, ಉತ್ತಮರನ್ನು ಭುಜದ ಮೇಲೆ ಕೂರಿಸಿ ಮೆರವಣಿಗೆ ಮಾಡುವ ಸಂಸ್ಕಾರ ನಮ್ಮದು. ನಾನು ಪಕ್ಷದ ರಾಜ್ಯಾಧ್ಯಕ್ಷರು ಆ ದಿನ ಆಡಿದ ಮಾತುಗಳ ಪೆನ್ ಡ್ರೆçವ್ ಕೊಡುತ್ತೇನೆ. ಸದನದಲ್ಲಿ ಹಾಕಿ ಕೇಳಿಸಿ, ಸಿದ್ದರಾಮಯ್ಯ ಅವರೇ ತೀರ್ಪು ಕೊಡಲಿ ಎಂದರು. ಆಗ ಸ್ಪೀಕರ್ ಇಲ್ಲಿ ನಾನೇ ತೀರ್ಪು ಕೊಡಬೇಕು. ಬೇರೆ ಯಾರಿಗೂ ನನ್ನ ಅಧಿಕಾರ ಕೊಡಬೇಡಿ ಎಂದು ಚಟಾಕಿ ಹಾರಿಸಿದರು.
ಸ್ಪೀಕರ್ ಕಾಗೇರಿ, ಭಯೋತ್ಪಾದನೆ ಕೃತ್ಯ ನಿಗ್ರಹ ಕುರಿತು ಸದನದಲ್ಲಿ ಚರ್ಚೆಯಾಗಿ ಸಂದೇಶ ರವಾನೆಯಾಗಬೇಕು. ಸಿ.ಟಿ.ರವಿ ಪ್ರಸ್ತಾಪಿಸಿರುವ ವಿಷಯದ ಬಗ್ಗೆ ಸೋಮವಾರದ ನಂತರ ಚರ್ಚೆಗೆ ಅವಕಾಶ ಕೊಡಲಾಗುವುದು ಎಂದು ಹೇಳಿದರು.
ಸಿ.ಟಿ.ರವಿ ತುಂಬಾ ಚೆನ್ನಾಗಿ ವಿಷಯ ಪ್ರಸ್ತಾಪಿಸಿದ್ದಾರೆ. ಹೇಳಿದಂತೆಯೂ ಇರಬೇಕು, ಗೊತ್ತಾಗಲೂ ಬೇಕು. ಹೆಸರು ಮಾತ್ರ ಇಲ್ಲ. ಸಿ.ಟಿ.ರವಿ ಬುದ್ಧಿವಂತರು, ಸೀಜನ್ ಆಗಿದ್ದಾರೆ ಐ ಲೈಕ್ ಇಟ್.–ರಮೇಶ್ ಕುಮಾರ್, ಮಾಜಿ ಸ್ಪೀಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.