Congress Government Scheme: ಬಡವರ ನಂದಾದೀಪ ಗೃಹಲಕ್ಷ್ಮಿಗೆ ವರ್ಷದ ಹರ್ಷ

ಒಂದು ವರ್ಷದಲ್ಲಿ ಮನೆ ಯಜಮಾನಿಯರಿಗೆ 25 ಸಾವಿರ ಕೋಟಿ ರೂ. ಜಮೆ!, ಪಂಚ ಗ್ಯಾರಂಟಿಗಳು ದೇಶಕ್ಕೆ ದಿಕ್ಸೂಚಿ

Team Udayavani, Aug 31, 2024, 6:20 AM IST

GRUHA

ಮಹಿಳೆಯರ ಸುರಕ್ಷೆ, ಸಶಕ್ತೀಕರಣ, ಸಮಾನತೆಗೆ ಕಾಂಗ್ರೆಸ್‌ ಪಕ್ಷ ಈ ಮುಂಚಿನಿಂದಲೂ ಪ್ರಾತಿನಿಧ್ಯ ನೀಡುತ್ತಾ ಬಂದಿದೆ. ಮಹಿಳಾ ಕೇಂದ್ರಿತ ಯೋಜನೆಗಳು ಕೇವಲ ಚುನಾವಣೆ ಘೋಷಣೆಗಳಲ್ಲ. ಕಾಂಗ್ರೆಸ್‌ ಪಕ್ಷವು ಈ ದೇಶದಲ್ಲಿ ಮಹಿಳಾ ಸಶಕ್ತೀಕರಣದ ಅತೀದೊಡ್ಡ ಪ್ರತಿಪಾದಕವಾಗಿದೆ. ಮಹಿಳಾ ಸಶಕ್ತೀಕರಣಕ್ಕಾಗಿ ಕಾಂಗ್ರೆಸ್‌ ಹಲವಾರು ಯೋಜನೆಗಳನ್ನು ಘೋಷಿಸಿದ್ದು, 2023ರ ವಿಧಾನಸಭಾ ಚುನಾವಣೆಯಲ್ಲಿ ಕೂಡ ಮಹಿಳೆಯರಿಗೆ ಶಕ್ತಿ ತುಂಬಲು 5 ಗ್ಯಾರಂಟಿಗಳನ್ನು ಪ್ರಕಟಿಸಿತ್ತು.

ಚುನಾವಣೆಗಳಲ್ಲಿ ಇತರೆ ರಾಜಕೀಯ ಪಕ್ಷಗಳು ವಾಗ್ಧಾನ ನೀಡುತ್ತವೆ. ಆದರೆ ಅ ಧಿಕಾರಕ್ಕೆ ಬರುತ್ತಿದ್ದಂತೆ ಅವುಗಳನ್ನು ಮರೆತುಬಿಡುತ್ತವೆ. ಆದರೆ ಕಾಂಗ್ರೆಸ್‌ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದು ಮಾತ್ರವಲ್ಲದೆ ಅವುಗಳನ್ನು ಸಮರ್ಪಕವಾಗಿ ಜಾರಿಗೊಳಿಸಿವೆ ಎಂಬುದಕ್ಕೆ ಪಂಚ ಗ್ಯಾರಂಟಿಗಳೇ ಸಾಕ್ಷಿ.

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಂಚ ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಈ ಘೋಷಣೆಗಳು ಕೇವಲ ಘೋಷಣೆಗಳಾಗಲಿವೆ ಎಂದು ವಿಪಕ್ಷಗಳು ಗೇಲಿ ಮಾಡಿದ್ದವು. ಇಲ್ಲಸಲ್ಲದ ಸುಳ್ಳು ಸುದ್ದಿಗಳನ್ನು ಹಬ್ಬಿಸಿದವು. ಆದರೆ ರಾಜ್ಯದ ಜನತೆಗೆ ಗೊತ್ತಿತ್ತು, ಕಾಂಗ್ರೆಸ್‌ ಎಂದಿಗೂ ಕೊಟ್ಟ ಮಾತನ್ನು ತಪ್ಪುವುದಿಲ್ಲ. ನುಡಿದಂತೆ ನಡೆದ ಪಕ್ಷವೆಂದರೆ ಅದು ಕಾಂಗ್ರೆಸ್‌ ಮಾತ್ರ ಎಂದು ನಮ್ಮನ್ನು ನಂಬಿ ನಮ್ಮ ಪಕ್ಷಕ್ಕೆ 136 ಸ್ಥಾನಗಳನ್ನು ನೀಡಿ ಜನಾಶೀರ್ವಾದ ಮಾಡಿದರು.

ಜನಾದೇಶ ಸಿಗುತ್ತಿದ್ದಂತೆ ಅಧಿ ಕಾರಕ್ಕೆ ಬಂದ ತತ್‌ಕ್ಷಣವೇ ನಮ್ಮ ಸರಕಾರ ಜನರಿಗೆ ನೀಡಿದ್ದ ವಾಗ್ಧಾನದಂತೆ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿತು. 5 ಗ್ಯಾರಂಟಿಗಳಲ್ಲಿ ಗೃಹಲಕ್ಷಿ$¾ ಕೂಡ ಒಂದಾಗಿದ್ದು, ಈ ಯೋಜನೆ ಜಾರಿಗೆ ಬಂದು (ಆ.30ಕ್ಕೆ) ಒಂದು ವರ್ಷ ಸಂದಿದೆ. ಈ 1 ವರ್ಷದಲ್ಲಿ 25 ಸಾವಿರ ಕೋಟಿ ರೂ. ಹಣ ಮಹಿಳೆಯರ ಖಾತೆಗೆ ಜಮೆಯಾಗಿದೆ. ಇದರಿಂದ ಮನೆಯ ಯಜಮಾನಿಯರು ಆರ್ಥಿಕವಾಗಿ ಸಶಕ್ತರಾಗಿದ್ದು, ಮಾತ್ರವಲ್ಲದೇ ಕುಟಂಬ ನಿರ್ವಹಣೆಗೂ ಸಹಕಾರಿಯಾಗಿದೆ. ಕಳೆದ ವರ್ಷ ರಾಜ್ಯವನ್ನು ಕಾಡಿದ ಭೀಕರ ಬರಗಾಲದಲ್ಲೂ ಗ್ರಾಮೀಣ ಭಾಗದ ಮಹಿಳೆಯರು ಯಾವುದೇ ತೊಂದರೆಯಿಲ್ಲದೆ ಸುಸೂತ್ರವಾಗಿ ಸಂಸಾರ ನಡೆಸಿ¨ªಾರೆ ಎಂದರೆ ಅದಕ್ಕೆ ಗೃಹಲಕ್ಷ್ಮಿಯೇ ಸಾಕ್ಷಿ.

ಕುಟುಂಬಕ್ಕೆ ಆರ್ಥಿಕ ಬಲ: ಮಹಿಳೆಯರು ಆರ್ಥಿಕವಾಗಿ ಸಶಕ್ತರಾದರೆ ಕುಟುಂಬವೇ ಆರ್ಥಿಕವಾಗಿ ಗಟ್ಟಿಯಾಗುತ್ತದೆ. ಇದರಿಂದ ದೇಶದ ಆರ್ಥಿಕ ಪರಿಸ್ಥಿತಿ ಕೂಡ ಸುಧಾರಿಸುತ್ತದೆ ಎಂಬ ದೃಷ್ಟಿಯಿಂದ ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸಲಾಯಿತು. 2023ರ ಜು.19ರಿಂದ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಪ್ರಾರಂಭಿಸಲಾಯಿತು. ಇಲ್ಲಿಯವರೆಗೂ ರಾಜ್ಯದಲ್ಲಿ 1.23 ಕೋಟಿ ಕುಟುಂಬದ ಯಜಮಾನಿಯರಿಗೆ ಪ್ರತೀ ತಿಂಗಳು 2000 ರೂ.ನಂತೆ ತಿಂಗಳಿಗೆ 2,280 ಕೋಟಿ ರೂ. ಹಣವನ್ನು ವರ್ಗಾವಣೆ ಮಾಡುವ ಮೂಲಕ ಕಳೆದ 1 ವರ್ಷದಲ್ಲಿ 25, 248 ಕೋಟಿ ರೂ. ಹಣವನ್ನು ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ವರ್ಗಾಯಿಸಲಾಗಿದೆ. ಮನೆಯ ಯಜಮಾನಿಯರ ಖಾತೆಗೆ ನೇರವಾಗಿ ಹಣ ಸಂದಾಯ ಮಾಡುವ ಮೂಲಕ ಭ್ರಷ್ಟಾಚಾರ ರಹಿತ ಈ ಯೋಜನೆಯ ಸದುಪಯೋಗ ಪಡೆಯುತ್ತಿದ್ದಾರೆ.

 ಗೃಹಲಕ್ಷ್ಮಿಯೋಜನೆ ಸದ್ಬಳಕೆ:
ಗೃಹಲಕ್ಷ್ಮಿಯೋಜನೆಯ ಹಣ ಅನೇಕರಿಗೆ ನಾನಾ ರೀತಿಯಲ್ಲಿ ನೆರವಿಗೆ ಬಂದಿದೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಮಹಿಳೆಯೊಬ್ಬರು ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು ಫ್ರೀಡ್ಜ್ ಖರೀದಿಸಿದ್ದು ಒಂದು ಕಡೆಯಾದರೆ, ದ್ವಿತೀಯ ಪಿಯುಸಿಯ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ವಿಜಯಪುರದ ಹುಡುಗ ತನ್ನ ವ್ಯಾಸಂಗಕ್ಕೆ ಗೃಹಲಕ್ಷಿ$¾ ಹಣ ಸಹಕಾರಿಯಾಯಿತು ಎಂದು ಹೇಳಿದ್ದನ್ನು ಕೇಳಿ ಸಾರ್ಥಕತೆಯ ಭಾವನೆ ಮನದಲ್ಲಿ ಮೂಡಿತು.

ಬಾಗಲಕೋಟೆಯಲ್ಲಿ ಮತ್ತೂಬ್ಬ ಮಹಿಳೆ ತನಗೆ ಬಂದ ಗೃಹಲಕ್ಷ್ಮಿ ಹಣದಲ್ಲಿ ತನ್ನ ಸೊಸೆಗೆ ಫ್ಯಾನ್ಸಿ ಸ್ಟೋರ್‌ ಹಾಕಿಕೊಡುವ ಮುಖಾಂತರ ಸ್ವಯಂ ಉದ್ಯೋಗ ಕಲ್ಪಿಸಿಕೊಟ್ಟು, ಅವರ ಬಾಳಿಗೆ ನೆರವಾಗಿದ್ದರೆ, ಬೆಳಗಾವಿಯಲ್ಲಿ ಅಜ್ಜಿಯೊಬ್ಬರು ಗೃಹಲಕ್ಷಿ$¾ ಹಣದಲ್ಲಿ ಊರಿನವರಿಗೆಲ್ಲ ಹೊಳಿಗೆ ಊಟ ಹಾಕಿಸಿ ಸಂತೃಪ್ತಿಪಡಿಸಿದ್ದನ್ನು ನೋಡಿದರೆ ನಮ್ಮ ಯೋಜನೆಗಳು ಬಿಟ್ಟಿ ಭಾಗ್ಯಗಳಲ್ಲ, ಅವುಗಳು ಬಡವರ ಪಾಲಿನ ನಂದಾದೀಪ. ಗೃಹಿಣಿಯರ ಪಾಲಿನ ಆಶಾಕಿರಣಗಳಾಗಿವೆ.

ಇಡೀ ದೇಶಕ್ಕೆ ದಿಕ್ಸೂಚಿ:
ಕರ್ನಾಟಕ ಸರಕಾರದ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ದಿಕ್ಸೂಚಿಯಾಗಿವೆ. ಗೃಹಲಕ್ಷ್ಮಿ ಯೋಜನೆ ವಿಶ್ವದಲ್ಲೇ ಅತ್ಯಂತ ದೊಡ್ಡ ಯೋಜನೆ. ಮನೆಯ ಯಜಮಾನಿಯರಿಗೆ ನಮ್ಮ ಸರಕಾರ ಪ್ರತಿ ತಿಂಗಳು ನೀಡುತ್ತಿರುವ 2 ಸಾವಿರ ರೂ. ದಿನಸಿ, ತರಕಾರಿ, ಹಾಲು ಖರೀದಿ, ಔಷಧೋಪಚಾರಗಳಿಗೆ, ಮಕ್ಕಳ ಶಾಲಾ ಶುಲ್ಕ ಪಾವತಿ ಸೇರಿ ವಿವಿಧ ರೀತಿಯಲ್ಲಿ ಸದುಪಯೋಗವಾಗುತ್ತಿದೆ. ಬಡವರ ಬಾಳಿನಲ್ಲಿ ಹೊಸಬೆಳಕನ್ನು ಮೂಡಿಸಿದೆ. ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ಹಾಗೂ ಆರ್ಥಿಕ ಚಟುವಟಿಕೆ ಗರಿಗೆದರಲು ಈ ಯೋಜನೆ ಉಪಯುಕ್ತವಾಗಿದೆ.

ನಮ್ಮ ಪಕ್ಷ ಮತ್ತು ಸರಕಾರ ಮತಗಳಿಕೆಗೋಸ್ಕರ ಘೋಷಣೆ ಮಾಡಿದಂತಹ ಯೋಜನೆಗಳಲ್ಲ. ಮಹಿಳೆಯರ ಸಶಕ್ತೀಕರಣಕ್ಕಾಗಿ ನಮ್ಮ ನಾಯಕರಾದ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಿರಿಯ ಮುಖಂಡರಾದ ಕೆ.ಸಿ. ವೇಣುಗೋಪಾಲ…, ಕರ್ನಾಟಕ ರಾಜ್ಯದ ಉಸ್ತುವಾರಿ ರಣದೀಪ್‌ ಸಿಂಗ್‌ ಸುಜೇìವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾನು ಒಟ್ಟುಗೂಡಿ ಇಂಥ ಒಂದು ಐತಿಹಾಸಿಕ ಘೋಷಣೆ ಮಾಡಿ, ಜಾರಿಗೊಳಿಸಿದ್ದೇವೆ.

ಲೋಕಸಭಾ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುವುದು ಎಂದು ಹಲವರು ಆರೋಪಿಸಿದರು. ಆದರೆ ಈ ಬಾರಿಯ ಬಜೆಟ್‌ನಲ್ಲಿ ಪಂಚಗ್ಯಾರಂಟಿ ಯೋಜನೆಗಳಿಗೆಂದೇ 58 ಸಾವಿರ ಕೋಟಿ ರೂ. ಹಣವನ್ನು ಮೀಸಲಿಡಲಾಗಿದೆ. ಗೃಹಲಕ್ಷ್ಮಿ ಯೋಜನೆಗೆಂದೇ 28,608 ಕೋಟಿ ರೂ. ಹಣ ತೆಗೆದಿಡಲಾಗಿದೆ. ಜೂನ್‌ ತಿಂಗಳಿನಲ್ಲಿ 1.21 ಕೋಟಿ ಫಲಾನುಭವಿಗಳಿಗೆ ಹಣ ಸಂದಾಯ ಮಾಡಲಾಗಿದೆ. ಜುಲೈ ಮತ್ತು ಆಗಸ್ಟ್‌ ತಿಂಗಳಿನ ಹಣವನ್ನು ಕೂಡ ಶೀಘ್ರವಾಗಿ ಬಿಡುಗಡೆಗೊಳಿಸಲಾಗುತ್ತದೆ.

ಬೆಲೆ ಏರಿಕೆ ಬಿಸಿ ತಾಗದಂತೆ ನೋಡಿಕೊಂಡ ಗೃಹಲಕ್ಷ್ಮಿ:
ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟದಂತೆ ಗೃಹಲಕ್ಷಿ$¾ ಕಾಪಾಡಿದ್ದಾಳೆ. ಲಕ್ಷಾಂತರ ತಾಯಂದಿರು, ಅಕ್ಕತಂಗಿಯರು, ಅಜ್ಜಿಯಂದಿರಿಗೆ ಕಾಂಗ್ರೆಸ್‌ ಸರಕಾರದ ಗೃಹಲಕ್ಷಿ$¾ ಹಣ ಅಕ್ಷರಶಃ ವರದಾನವಾಗಿದೆ. ಬರಗಾಲದಲ್ಲಿ ಬಡವರ ಕೈ ಹಿಡಿದಿದೆ. ಲಿಂಗತ್ವ ಅಲ್ಪಸಂಖ್ಯಾಕರು ಕೂಡ ಗೃಹಲಕ್ಷಿ$¾ ಯೋಜನೆಯ ಫಲಾನುಭವಿಗಳಾಗಬಹುದು. ಜನಹಿತವೇ ನಮ್ಮ ಧ್ಯೇಯ.

ಎಲ್ಲರಿಗೂ ಪ್ರಯೋಜನ:
ಆಡಳಿತ ನಡೆಸುವವರಿಗೆ ಅಂತಃಕರಣವಿರಬೇಕು. ತಾಯಿ ಹೃದಯವಿರಬೇಕು. ಬಡವರಿಗೆ ಮಿಡಿಯುವಂತಿರಬೇಕು. ಬಾಯಿ ಮಾತಿನಲ್ಲಿ ಬಡವರ ಬದುಕನ್ನು ಹಸನಾಗಿಸಲು ಸಾಧ್ಯವಿಲ್ಲ, ಅವರಿಗೆ ಆರ್ಥಿಕವಾಗಿ ಶಕ್ತಿ ತುಂಬಿದರಷ್ಟೇ ಅವರನ್ನು ಬಡತನದಿಂದ ಮೇಲಕ್ಕೆತ್ತಲು ಸಾಧ್ಯ ಎಂಬುದನ್ನು ನಮ್ಮ ಕಾಂಗ್ರೆಸ್‌ ಪಕ್ಷದ ಪಂಚಗ್ಯಾರಂಟಿಗಳು ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿದೆ.

ಬಿಟ್ಟಿ ಭಾಗ್ಯಗಳಿಂದ ಆರ್ಥಿಕ ದಿವಾಳಿಯಾಗುತ್ತದೆ ಎಂದು ಆರೋಪಿಸುತ್ತಿದ್ದವರೂ ಒಂದಿಲ್ಲೊಂದು ರೀತಿಯಲ್ಲಿ ಪಂಚಗ್ಯಾರಂಟಿಗಳ ಪ್ರಯೋಜನ ಪಡೆಯುತ್ತಿದ್ದಾರೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಧ್ಯೇಯದೊಂದಿಗೆ ಕಾಂಗ್ರೆಸ್‌ ಪಕ್ಷ ಆಡಳಿತ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಜನಪರ ಯೋಜನೆಗಳನ್ನು ಜಾರಿಗೆ ತರಲಾಗುವುದು.

-ಡಿ.ಕೆ.ಶಿವಕುಮಾರ್‌, ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು 

ಟಾಪ್ ನ್ಯೂಸ್

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

GST

Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ

fadnavis

Maharashtra; ಫ‌ಡ್ನವೀಸ್‌ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!

BJP 2

BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?

1-srrrr

English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ

Sheik Hasina

Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ

Uddav-2

Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್‌ ಶಿವಸೇನೆ ಇಂಗಿತ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

11

Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

10

Sullia: ಬಸ್‌ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್‌, ಶೂ ಕಳವು

GST

Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.