Congress Guranttee: ಗೃಹಲಕ್ಷ್ಮೀ’ ಹಣದಿಂದ ಊರಿಗೇ ಹೋಳಿಗೆ ಊಟ
ವೃದ್ಧೆಗೆ ರೇಷ್ಮೆ ಸೀರೆ ಕಳುಹಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹೆಬ್ಬಾಳ್ಕರ್
Team Udayavani, Aug 26, 2024, 2:00 AM IST
ಬೆಳಗಾವಿ/ಕುಡಚಿ: ಗೃಹಲಕ್ಷ್ಮೀ ಯೋಜನೆಯಿಂದ ಬಂದ ಹಣವನ್ನು ಕೂಡಿಟ್ಟು ಅಜ್ಜಿಯೊಬ್ಬರು ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿದ್ದಾರೆ. ಅಲ್ಲದೇ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಒಳಿತಾಗಲಿ ಎಂದು ಹರಸಿದ್ದಾರೆ.
ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದ ಅಕ್ಕಾತಾಯಿ ಲಂಗೋಟಿ ಎಂಬ ವೃದ್ಧೆ, ಗ್ರಾಮದ ಶ್ರೀ ಮಹಾಲಕ್ಷಿ$¾à ದೇವಸ್ಥಾನ ದಲ್ಲಿ ಮಹಿಳೆಯರನ್ನು ಸೇರಿಸಿ ಅಡುಗೆ ಸಿದ್ಧಪಡಿಸಿ 2,000 ಜನ ಸಂಖ್ಯೆಯ ಇಡೀ ಹಳ್ಳಿ ಜನರಿಗೆ ಹೂರಣದ ಹೋಳಿಗೆ ಜತೆಗೆ ಅನ್ನ, ಸಾರು, ಬದನೆಕಾಯಿ ಪಲ್ಯ ಊಟ ಹಾಕಿಸಿದ್ದಾರೆ. ಜತೆಗೆ ಐವರು ಮುತ್ತೈದೆಯರಿಗೆ ಉಡಿ ತುಂಬಿ ಸಾರ್ಥಕತೆ ಮೆರೆದಿದ್ದಾರೆ.
10 ತಿಂಗಳ ಹಣ ಕೂಡಿಟ್ಟಿದ್ದರು
ಅಕ್ಕಾ ತಾಯಿಗೆ ಈವರೆಗೆ 10 ತಿಂಗಳ ಗೃಹಲಕ್ಷ್ಮೀ ಹಣ ಬಂದಿದ್ದು, ಇದರಲ್ಲಿ ಒಟ್ಟು 15 ಸಾವಿರ ರೂ. ಖರ್ಚು ಮಾಡಿದ್ದಾರೆ. ಅಜ್ಜಿಯ ಈ ಉತ್ಸಾಹ ಕಂಡು ಗ್ರಾಮದ ಇನ್ನಿತರ ಮಹಿಳೆಯರೂ ಕೈಜೋಡಿಸಿದ್ದಾರೆ. ತಮ್ಮ ಮನೆಯಲ್ಲಿದ್ದ ಕಡ್ಲೆ ಬೇಳೆ, ಬೆಲ್ಲ ತಂದು ಸಹಾಯ ಮಾಡಿದ್ದಾರೆ. ಅಜ್ಜಿಯ ನಿಸ್ವಾರ್ಥ ಭಾವ ಕಂಡು ಇಡೀ ಗ್ರಾಮವೇ ಹಾಡಿ ಹೊಗಳುತ್ತಿದೆ.
ರೇಷ್ಮೆ ಸೀರೆ ಕಳುಹಿಸಿದ ಹೆಬ್ಬಾಳ್ಕರ್
ವಿಷಯ ತಿಳಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಬೆಂಬಲಿಗರಿಂದ ಈ ವೃದ್ಧೆಗೆ ರೇಷ್ಮೆ ಸೀರೆ ಕೊಟ್ಟು ಕಳುಹಿಸಿದ್ದಾರೆ. ಅಜ್ಜಿಗೆ ಪೇಟಾ ತೊಡಿಸಿ, ಹಾರ ಹಾಕಿ ಸಮ್ಮಾನಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.