Congress: ಸಿದ್ದರಾಮಯ್ಯ, ಡಿಕೆಶಿ ಬಣ ಸಮರ ಮಧ್ಯೆ ಇಂದು 3 ಹೈವೋಲ್ಟೇಜ್‌ ಸಭೆ

ಬೆಳಗ್ಗೆ ಸರ್ವಸದಸ್ಯರು, ಮಧ್ಯಾಹ್ನ ಕೆಪಿಸಿಸಿ ಸದಸ್ಯರ ಸಭೆ, ಸಂಜೆ ಭಾರೀ ಕುತೂಹಲ ಕೆರಳಿಸಿರುವ ಶಾಸಕಾಂಗ ಪಕ್ಷ ಸಭೆ

Team Udayavani, Jan 13, 2025, 7:35 AM IST

Congress-Symbol

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವ ಕುಮಾರ್‌ ಬಣ ಸಮರದ ಗದ್ದಲಗಳ ನಡುವೆಯೇ ಸೋಮವಾರ ಕಾಂಗ್ರೆಸ್‌ನಲ್ಲಿ ಮೂರು ಹೈವೋಲ್ಟೇಜ್‌ ಸಭೆಗಳು ನಡೆಯಲಿವೆ.

ಇದೇ ಜ. 21ಕ್ಕೆ ಮರು ನಿಗದಿಯಾಗಿರುವ ಬೆಳಗಾವಿ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮದ ಪೂರ್ವಸಿದ್ಧತೆ ಸಭೆ ಎಂದು ಹೇಳಲಾಗುತ್ತಿದೆಯಾದರೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಅಧಿಕಾರ ಹಸ್ತಾಂತರದ ಚರ್ಚೆಗಳು, ಜಾತಿಗಣತಿ ವರದಿ ವಿಷಯಗಳು ಬಿಸಿ ಬಿಸಿ ಚರ್ಚೆಗೆ ಕಾರಣವಾಗಲಿದೆ ಎನ್ನಲಾಗಿದೆ.
ಈ ಸಭೆಗಳಲ್ಲಿ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲ ಕೂಡ ಇರುವುದರಿಂದ ಭಿನ್ನಾಭಿಪ್ರಾಯದ ಬಗ್ಗೆ ಧ್ವನಿ ಎತ್ತುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸೋಮವಾರ ಬೆಳಗ್ಗೆ 11 ಗಂಟೆಗೆ ನಗರದ ಕೆಪಿಸಿಸಿ ಕಚೇರಿಯ ಭಾರತ್‌ ಜೋಡೊ ಭವನ ದಲ್ಲಿ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ರಣದೀಪ್‌ಸಿಂಗ್‌ ಸುಜೇìವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನೇತೃತ್ವ ವಹಿಸಲಿದ್ದಾರೆ. ಪಕ್ಷದ ಹಿರಿಯ ಮುಖಂಡರು, ಸಚಿವರು, ಶಾಸಕರು, ವಿಧಾನ ಪರಿಷತ್ತಿನ ಸದಸ್ಯರು, ಮಾಜಿ ಶಾಸಕರು, ಕೆಪಿಸಿಸಿ ಪದಾಧಿಕಾರಿಗಳು ಇದರಲ್ಲಿ ಭಾಗವಹಿಸಲಿದ್ದಾರೆ.
ಬೆಳಗಾವಿ ಸಮಾವೇಶಕ್ಕೆ ವಾರ ಮಾತ್ರ ಬಾಕಿ ಇದೆ. ಸಮರೋಪಾದಿಯಲ್ಲಿ ಎಲ್ಲ ಸಿದ್ಧತೆಗಳು ಆಗಬೇಕಿವೆ. ಬೆಳಗ್ಗೆ ಪದಾಧಿಕಾರಿಗಳೊಂದಿಗೆ ಆರಂಭವಾಗುವ ಪೂರ್ವಭಾವಿ ಸಭೆಯು ಸಂಜೆ ಶಾಸಕಾಂಗ ಪಕ್ಷದ ಸಭೆವರೆಗೆ ವಿವಿಧ ಹಂತಗಳ ಚರ್ಚೆಗಳು ನಡೆಯಲಿವೆ.

ಒಟ್ಟಾರೆ ಯಾಗಿ ಶತಮಾನೋತ್ಸವ ಒಂದು ಐತಿಹಾಸಿಕ ಕಾರ್ಯಕ್ರಮವಾಗಿ ಯಶಸ್ವಿಗೊಳಿಸಲು ಈಗ ಕಾಂಗ್ರೆಸ್‌ ಪಡೆ ಸಜ್ಜಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಕೂಡ ಹೊಸ್ತಿಲಲ್ಲಿದೆ. ಅದಕ್ಕೂ ತಳಮಟ್ಟದಲ್ಲಿ ಪಕ್ಷವನ್ನು ಕಟ್ಟಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಮತ್ತು ಬ್ಲಾಕ್‌ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷರು, ಮುಂಚೂಣಿ ಘಟಕ ಮತ್ತು ಸೆಲ್‌ಗ‌ಳ ರಾಜ್ಯ ಘಟಕದ ಅಧ್ಯಕ್ಷರು, ನಿಗಮ-ಮಂಡಳಿಗಳ ಅಧ್ಯಕ್ಷರ ಪಾತ್ರ ಮಹತ್ವದ್ದಾಗಿದೆ ಎಂದು ಈ ವೇಳೆ ವರಿಷ್ಠರು ನಿರ್ದೇಶನ ನೀಡಲಿದ್ದಾರೆ ಎನ್ನಲಾಗಿದೆ. ಅನಂತರ ಅದೇ ಭಾರತ್‌ ಜೋಡೊ ಭವನದಲ್ಲಿ ಅಪರಾಹ್ನ 3.30ಕ್ಕೆ ಕೆಪಿಸಿಸಿ ಪದಾಧಿಕಾರಿಗಳ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಶಾಸಕಾಂಗ ಸಭೆಯಲ್ಲಿ ಸುರ್ಜೇವಾಲ ಭಾಗಿ
ಕಾಂಗ್ರೆಸ್‌ ಶಾಸಕಾಂಗ ಸಭೆ ಸಂಜೆ 6 ಗಂಟೆಗೆ ನಗರದಲ್ಲಿ ನಡೆಯಲಿದ್ದು, ರಣದೀಪ್‌ಸಿಂಗ್‌ ಸುರ್ಜೇವಾಲ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಜ. 21ರಂದು ಏರ್ಪಾಡಾದ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವದ ಸಿದ್ಧತೆಗಳ ಕುರಿತು ಮತ್ತೂಮ್ಮೆ ಚರ್ಚೆ ಆಗಲಿದೆ.

ನಾಳೆ ಮತ್ತೆ ಸಭೆ
ಸರಣಿ ಸಭೆಗಳ ಬೆನ್ನಲ್ಲೇ ಜ. 15ಕ್ಕೆ ಮತ್ತೂಂದು ಹಂತದ ಸಭೆಯನ್ನು ಕಾಂಗ್ರೆಸ್‌ ಏರ್ಪಡಿಸಿದೆ. ಅದು ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿದೆ. ಸ್ಥಳೀಯ ಶಾಸಕರ ಸಹಿತ ಪಕ್ಷದ ಮುಖಂಡರು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಸೂಚಿಸಲಾಗಿದೆ.

ಟಾಪ್ ನ್ಯೂಸ್

Naringana Kambala 2025 result

Kambala: ದಾಖಲೆ ಜೋಡಿ ಕೋಣಗಳಿಗೆ ಸಾಕ್ಷಿಯಾದ ನರಿಂಗಾನ ಕಂಬಳ: ಇಲ್ಲಿದೆ ಫಲಿತಾಂಶ ಪಟ್ಟಿ

Panambur: ಲೈಟರ್ ವಿಚಾರಕ್ಕೆ ಘರ್ಷಣೆ… ಬಿಯರ್ ಬಾಟಲಿಯಿಂದ ಹಲ್ಲೆ, ಪ್ರಕರಣ ದಾಖಲು

Panambur: ಲೈಟರ್ ವಿಚಾರಕ್ಕೆ ಘರ್ಷಣೆ… ಬಿಯರ್ ಬಾಟಲಿಯಿಂದ ಹಲ್ಲೆ, ಪ್ರಕರಣ ದಾಖಲು

Bengaluru: ಆನ್‌ಲೈನ್‌ ಗೇಮ್‌ನಲ್ಲಿ ಹಣ ಕಳೆದುಕೊಂಡ ಇಬ್ಬರು ಆತ್ಮಹತ್ಯೆ

Bengaluru: ಆನ್‌ಲೈನ್‌ ಗೇಮ್‌ನಲ್ಲಿ ಹಣ ಕಳೆದುಕೊಂಡ ಇಬ್ಬರು ಆತ್ಮಹತ್ಯೆ

10 ರೂ. ಗಾಗಿ ನಿವೃತ್ತ ಐಎಎಸ್ ಅಧಿಕಾರಿ ಮೇಲೆ ಬಸ್ ಕಂಡಕ್ಟರ್ ನಿಂದ ಹಿಗ್ಗಾಮುಗ್ಗಾ ಹಲ್ಲೆ…

10 ರೂ. ಗಾಗಿ ನಿವೃತ್ತ ಐಎಎಸ್ ಅಧಿಕಾರಿ ಮೇಲೆ ಬಸ್ ಕಂಡಕ್ಟರ್ ನಿಂದ ಹಿಗ್ಗಾಮುಗ್ಗಾ ಹಲ್ಲೆ…

Tragedy: ರಸ್ತೆ ಅಪಘಾತ… ಯುವ ಪರ್ತಕರ್ತ ಮೃತ್ಯು…

Tragedy: ರಸ್ತೆ ಅಪಘಾತ… ಯುವ ಪರ್ತಕರ್ತ ಮೃತ್ಯು…

Bengaluru: ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಓರ್ವ ಆರೋಪಿ ಬಂಧನ

Bengaluru: ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಓರ್ವ ಆರೋಪಿ ಬಂಧನ

BBK11: ವಾರದ ಮಧ್ಯದಲ್ಲೇ ಒಬ್ಬ ಸ್ಪರ್ಧಿ ಔಟ್; ರಜತ್‌ ಮೇಲೆ  ಭವ್ಯಾ, ಮೋಕ್ಷಿತಾ ಟಾರ್ಗೆಟ್

BBK11: ವಾರದ ಮಧ್ಯದಲ್ಲೇ ಒಬ್ಬ ಸ್ಪರ್ಧಿ ಔಟ್; ರಜತ್‌ ಮೇಲೆ ಭವ್ಯಾ, ಮೋಕ್ಷಿತಾ ಟಾರ್ಗೆಟ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

895

Fraud Case: 2 ಕೋಟಿ ರೂ.ಗೆ 3.5 ಕೋಟಿ ರೂ. ಕೊಡುವುದಾಗಿ ವಂಚನೆ

Naringana Kambala 2025 result

Kambala: ದಾಖಲೆ ಜೋಡಿ ಕೋಣಗಳಿಗೆ ಸಾಕ್ಷಿಯಾದ ನರಿಂಗಾನ ಕಂಬಳ: ಇಲ್ಲಿದೆ ಫಲಿತಾಂಶ ಪಟ್ಟಿ

216

Bengaluru: ಟ್ರಕ್‌ ಡಿಕ್ಕಿ; ಜನ್ಮದಿನದಂದೇ ಬಾಲಕ ಸಾವು

Panambur: ಲೈಟರ್ ವಿಚಾರಕ್ಕೆ ಘರ್ಷಣೆ… ಬಿಯರ್ ಬಾಟಲಿಯಿಂದ ಹಲ್ಲೆ, ಪ್ರಕರಣ ದಾಖಲು

Panambur: ಲೈಟರ್ ವಿಚಾರಕ್ಕೆ ಘರ್ಷಣೆ… ಬಿಯರ್ ಬಾಟಲಿಯಿಂದ ಹಲ್ಲೆ, ಪ್ರಕರಣ ದಾಖಲು

Bengaluru: ರಸ್ತೆ ಬದಿ ಮಲಗುವ ವಿಷಯಕ್ಕೆ ಜಗಳ; ಕಟ್ಟಿಗೆಯಿಂದ ಹೊಡೆದು ವ್ಯಕ್ತಿಯ ಕೊಲೆ

Bengaluru: ರಸ್ತೆ ಬದಿ ಮಲಗುವ ವಿಷಯಕ್ಕೆ ಜಗಳ; ಕಟ್ಟಿಗೆಯಿಂದ ಹೊಡೆದು ವ್ಯಕ್ತಿಯ ಕೊಲೆ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

895

Fraud Case: 2 ಕೋಟಿ ರೂ.ಗೆ 3.5 ಕೋಟಿ ರೂ. ಕೊಡುವುದಾಗಿ ವಂಚನೆ

Naringana Kambala 2025 result

Kambala: ದಾಖಲೆ ಜೋಡಿ ಕೋಣಗಳಿಗೆ ಸಾಕ್ಷಿಯಾದ ನರಿಂಗಾನ ಕಂಬಳ: ಇಲ್ಲಿದೆ ಫಲಿತಾಂಶ ಪಟ್ಟಿ

216

Bengaluru: ಟ್ರಕ್‌ ಡಿಕ್ಕಿ; ಜನ್ಮದಿನದಂದೇ ಬಾಲಕ ಸಾವು

Panambur: ಲೈಟರ್ ವಿಚಾರಕ್ಕೆ ಘರ್ಷಣೆ… ಬಿಯರ್ ಬಾಟಲಿಯಿಂದ ಹಲ್ಲೆ, ಪ್ರಕರಣ ದಾಖಲು

Panambur: ಲೈಟರ್ ವಿಚಾರಕ್ಕೆ ಘರ್ಷಣೆ… ಬಿಯರ್ ಬಾಟಲಿಯಿಂದ ಹಲ್ಲೆ, ಪ್ರಕರಣ ದಾಖಲು

Bengaluru: ರಸ್ತೆ ಬದಿ ಮಲಗುವ ವಿಷಯಕ್ಕೆ ಜಗಳ; ಕಟ್ಟಿಗೆಯಿಂದ ಹೊಡೆದು ವ್ಯಕ್ತಿಯ ಕೊಲೆ

Bengaluru: ರಸ್ತೆ ಬದಿ ಮಲಗುವ ವಿಷಯಕ್ಕೆ ಜಗಳ; ಕಟ್ಟಿಗೆಯಿಂದ ಹೊಡೆದು ವ್ಯಕ್ತಿಯ ಕೊಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.