Data Protection: ಮಾಹಿತಿ ರಕ್ಷಣೆ ವಿಧೇಯಕಕ್ಕೆ ಸಮ್ಮತಿ
Team Udayavani, Jul 6, 2023, 7:12 AM IST
ಹೊಸದಿಲ್ಲಿ: ಬಹುಚರ್ಚಿತ ಮತ್ತು ನಿರೀಕ್ಷಿತ “ಮಾಹಿತಿ ರಕ್ಷಣ ವಿಧೇಯಕ”ಕ್ಕೆ (ಡೇಟಾ ಪ್ರೊಟೆಕ್ಷನ್ ಬಿಲ್) ಬುಧವಾರ ಕೇಂದ್ರ ಸಂಪುಟದಲ್ಲಿ ಅನುಮೋದನೆ ಸಿಕ್ಕಿದೆ. ಜು.20ರಿಂದ ಆ.11ರವರೆಗೆ ನಡೆಯ ಲಿರುವ ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ಅದನ್ನು ಮಂಡಿಸಿ, ಅನು ಮೋದನೆ ಪಡೆದುಕೊಳ್ಳುವ ಇರಾದೆಯಲ್ಲಿದೆ ಕೇಂದ್ರ ಸರಕಾರ.
ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿ ಸುವುದಿದ್ದರೂ, ಅದನ್ನು ಕಾನೂನು ಬದ್ಧವಾಗಿಯೇ ನಡೆಸ ಲಾಗುತ್ತದೆ ಎಂದು ಕೇಂದ್ರ ಸರಕಾರದ ಮೂಲಗಳನ್ನು ಉಲ್ಲೇಖೀಸಿ “ನ್ಯೂಸ್18” ವರದಿ ಮಾಡಿದೆ. ಅದಕ್ಕೋಸ್ಕರ ನಿಗದಿತ ಪುರುಷ ಅಥವಾ ಮಹಿಳೆಯ ಅನುಮತಿ ಪಡೆದುಕೊಂಡೇ ಉದ್ದೇಶಿತ ಮಾಹಿತಿಯನ್ನು ಪಡೆಯುವಂತೆ ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಇದೇ ಮೊದಲ ಬಾರಿಗೆ ಪುರುಷರನ್ನು ಮತ್ತು ಮಹಿಳೆಯರನ್ನು ಉದ್ದೇಶಿಸಿ ವಾಕ್ಯಗಳನ್ನು ಬಳಕೆ ಮಾಡಲಾಗಿದೆ. ದೇಶದ ಸಂಸದೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂಥ ಪ್ರಯೋಗ ನಡೆಸಲಾಗಿದೆ. ಯಾವ ಸಂದರ್ಭದಲ್ಲಿ ಮಾಹಿತಿಯನ್ನು ಪಡೆದು ಕೊಳ್ಳಬೇಕು ಎಂಬುದರ ಬಗ್ಗೆ ವಿಧೇಯಕ ದಲ್ಲಿ ಸ್ಪಷ್ಟವಾಗಿ ಉಲ್ಲೇಖೀಸಲಾಗಿದೆ. ಸಂಗ್ರಹಿಸಲಾಗಿರುವ ಮಾಹಿತಿಯನ್ನು ಸೂಕ್ತ ಸಂದರ್ಭಗಳಲ್ಲಿ ಮಾತ್ರ ಬಳಕೆ ಮಾಡ ಲಾಗುತ್ತದೆ ಎಂದು ಹೇಳುವ ಮೂಲಕ ದೇಶವಾಸಿಗಳಲ್ಲಿ ವಿಶ್ವಾಸ ಮೂಡಿಸುವ ಪ್ರಯತ್ನ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.