ಕಡತ ವಿಲೇವಾರಿ ಗಂಭೀರವಾಗಿ ಪರಿಗಣಿಸಿ: ಜಿಲ್ಲಾಧಿಕಾರಿ ಸೂಚನೆ


Team Udayavani, Feb 26, 2022, 5:45 AM IST

ಕಡತ ವಿಲೇವಾರಿ ಗಂಭೀರವಾಗಿ ಪರಿಗಣಿಸಿ: ಜಿಲ್ಲಾಧಿಕಾರಿ ಸೂಚನೆ

ಮಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಕಡತ ವಿಲೇವಾರಿ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸಿ ನಿಗದಿ ಪಡಿಸಿದ ಅವಧಿಯೊಳಗೆ ಅವುಗಳ ವಿಲೇವಾರಿ ಮಾಡಬೇಕು. ತಪ್ಪಿದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ಎಚ್ಚರಿಕೆ ನೀಡಿದರು.

ಕಡತ ವಿಲೇವಾರಿ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ವರ್ಚುವಲ್‌ ಸಭೆಯಲ್ಲಿ ಸೂಚನೆಗಳನ್ನು ನೀಡಿದ ಅವರು, ಪ್ರಸ್ತುತ ನಡೆಯುತ್ತಿರುವ ಕಡತ ವಿಲೇವಾರಿ ಅಭಿಯಾನದಲ್ಲಿ ಎಲ್ಲ ಇಲಾಖೆಗಳು ಕೂಡ ಒಮ್ಮನಸ್ಸಿನಿಂದ ಪಾಲ್ಗೊಳ್ಳಬೇಕು, ವಿಲೆವಾರಿಯಾಗದೇ ಇರುವ ಹಳೆ ಕಡತಗಳು, ದೂರು ಅರ್ಜಿಗಳು, ಸೇವಾ ಅರ್ಜಿಗಳನ್ನು ನಿಗದಿತ ಸಮಯದೊಳಗೆ ವಿಲೆವಾರಿ ಮಾಡಲು ಅಧಿಕಾರಿಗಳು ಗುರಿ ನಿಗದಿ ಪಡಿಸಿಕೊಳ್ಳಬೇಕು, ಯಾವ ಕಡತಗಳ ವಿಲೇವಾರಿ ಸಾಧ್ಯವಾಗುವುದಿಲ್ಲವೋ ಅವುಗಳ ಬಗ್ಗೆ ಮತ್ತು ವಿಲೇವಾರಿ ಮಾಡಿದ ಕಡತಗಳ ವರದಿಯನ್ನು ಆಯಾ ಇಲಾಖೆಗಳು ಜಿಲ್ಲಾಡಳಿತಕ್ಕೆ ನೀಡಬೇಕು ಎಂದರು.

ಇದನ್ನೂ ಓದಿ :ನಗರಸಭೆ ಮಳಿಗೆ ಹರಾಜಿನಿಂದ 1.41ಕೋಟಿ ಆದಾಯ : 20 ವರ್ಷಗಳ ಬಳಿಕ ಹರಾಜಾದ ಮಳಿಗೆಗಳು

ಕಂದಾಯ ಇಲಾಖೆ ಮುಂದೆ
ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಕುಮಾರ್‌, ಜಿಲ್ಲಾ ಮಟ್ಟದ ಅಧಿಕಾರಿಗಳು ಕಡತ ವಿಲೇವಾರಿ ಅಭಿಯಾನಕ್ಕೆ ಹೆಚ್ಚಿನ ಒತ್ತು ನೀಡಬೇಕು, ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಮಾತ್ರ ಇಲ್ಲಿಯ ವರೆಗೆ ಶೇ. 85ರಷ್ಟು ಕಡತಗಳನ್ನು ವಿಲೇವಾರಿ ಮಾಡಿವೆ, ಉಳಿದ ಇಲಾಖೆಗಳು ಇದೇ ಮಾದರಿಯಲ್ಲಿಯೇ ವಿಲೇವಾರಿ ಮಾಡಬೇಕು, ವಿಲೇವಾರಿಯಲ್ಲಿ ಹಿಂದುಳಿದ ಇಲಾಖೆಗಳ ಅಧಿಕಾರಿಗಳು ಫೆ. 26 ಮತ್ತು 27ರ ರಜಾ ದಿನಗಳಲ್ಲಿಯೂ ಕೆಲಸ ಮಾಡಿ ಕಡತಗಳ ವಿಲೇವಾರಿ ಮಾಡಬೇಕು ಎಂದು ನಿರ್ದೇಶನ ನೀಡಿದರು.

ಶೇ. 100 ಗುರಿ: ಫೆ. 28ರ ಗಡುವು
ಫೆ. 28ರಂದು ಎಲ್ಲ ಇಲಾಖೆಗಳು ಕೂಡ ಶೇ. 100ರಷ್ಟು ಪ್ರಗತಿ ಸಾಧಿಸಿರಬೇಕು. ಕಡತ ವಿಲೇವಾರಿ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಮೇಲೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

 

ಟಾಪ್ ನ್ಯೂಸ್

NZ-ENg

England vs Newzeland Test: ನ್ಯೂಜಿಲ್ಯಾಂಡ್‌ ಹಿಡಿತದಲ್ಲಿ ಹ್ಯಾಮಿಲ್ಟನ್‌ ಟೆಸ್ಟ್‌

Womens-Cri

Womens T20 Cricket: ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧ ಭಾರತಕ್ಕೆ ಗೆಲುವು

syaad-Ali-mub

Ali Trophy: ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ: ಮುಂಬಯಿಗೆ ಪ್ರಶಸ್ತಿ ಸಂಭ್ರಮ

Lokasabha-MP-Cri

Friendly Cricket: ರಾಜ್ಯಸಭಾ ತಂಡದೆದುರು ಲೋಕಸಭಾ ತಂಡಕ್ಕೆ ಜಯ

Okkaliga-Swamiji

Bengaluru: ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ಪಟ್ಟಾಧಿಕಾರ ಮಹೋತ್ಸವ

Gadag-CM-Dcm

Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ

MNG-Zakir

Tabla maestro: ಮಂಗಳೂರಿಗೆ ಮೂರು ಬಾರಿ ಭೇಟಿ ಕೊಟ್ಟಿದ್ದ ತಬಲಾ ಮಾಂತ್ರಿಕ ಜಾಕೀರ್ ಹುಸೇನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Mulki: ಬಪ್ಪನಾಡು; ಕಾರು-ರಿಕ್ಷಾ ಢಿಕ್ಕಿ

4

Mangaluru: ಅಭಿವೃದ್ಧಿ ಯೋಜನೆಗಳಿಗೆ ಇ-ಖಾತಾ ಹೊಡೆತ

2

Mudbidri: ನಿಮ್ಮ ದೇಹ ಪ್ರಕೃತಿ ಉಚಿತ ಪರೀಕ್ಷೆ!

SDM-Law

Golden Jubilee: ಸಂವಿಧಾನದಿಂದ ನ್ಯಾಯಾಂಗದಲ್ಲಿ ವಿಶ್ವಾಸ: ನ್ಯಾ| ಮುರಳೀಕೃಷ್ಣ

Alvas-virast14

Alvas Virasat: ಜಯ ಘೋಷ, ಮಂಗಳವಾದ್ಯಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೆರೆ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

NZ-ENg

England vs Newzeland Test: ನ್ಯೂಜಿಲ್ಯಾಂಡ್‌ ಹಿಡಿತದಲ್ಲಿ ಹ್ಯಾಮಿಲ್ಟನ್‌ ಟೆಸ್ಟ್‌

Womens-Cri

Womens T20 Cricket: ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧ ಭಾರತಕ್ಕೆ ಗೆಲುವು

syaad-Ali-mub

Ali Trophy: ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ: ಮುಂಬಯಿಗೆ ಪ್ರಶಸ್ತಿ ಸಂಭ್ರಮ

Lokasabha-MP-Cri

Friendly Cricket: ರಾಜ್ಯಸಭಾ ತಂಡದೆದುರು ಲೋಕಸಭಾ ತಂಡಕ್ಕೆ ಜಯ

Okkaliga-Swamiji

Bengaluru: ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ಪಟ್ಟಾಧಿಕಾರ ಮಹೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.