ಆತ್ಮಾಹುತಿ ದಾಳಿಗೆ ಸಂಚು; ನಾಲ್ಕು ಉಗ್ರ ಸಂಘಟನೆಗಳಿಂದ ಜೆಹಾದಿಗಳ ನೇಮಕ
Team Udayavani, Jan 13, 2020, 5:45 AM IST
ಬೆಂಗಳೂರು: ಮಾಹಿತಿ ತಂತ್ರಜ್ಞಾನ ಕ್ಷೇತ್ರ ಉದ್ದಿಮೆಯಿಂದ ಜಗತøಸಿದ್ಧಗೊಂಡಿರುವ ಬೆಂಗಳೂರಿನಲ್ಲಿ ನಾಲ್ಕು ಉಗ್ರಗಾಮಿ ಸಂಘಟನೆಗಳು “ಆತ್ಮಾಹುತಿ ದಾಳಿ’ಗೆ ಸಿದ್ಧತೆ ಮಾಡಿಕೊಂಡಿವೆ. ಈ ಉದ್ದೇಶಕ್ಕಾಗಿ ಮೂವರ ಮನವೊಲಿಕೆ ಮಾಡಿ ಯಶಸ್ವಿಯಾಗಿದ್ದು, ಬೃಹತ್ ಕಾರ್ಯಕ್ರಮಗಳಲ್ಲಿ ಕುಕೃತ್ಯ ನಡೆಸುವುದೇ ಅವರ ಇರಾದೆಯಾಗಿತ್ತು ಎಂಬ ಘಾತಕ ಮಾಹಿತಿ ಬೆಳಕಿಗೆ ಬಂದಿದೆ.
ಚೆನ್ನೈಯ “ಕ್ಯು’ ಬ್ರಾಂಚ್, ದಿಲ್ಲಿ ಪೊಲೀಸರು ಹಾಗೂ ಬೆಂಗಳೂರಿನ ಸಿಸಿಬಿ ಪೊಲೀಸರ ಜಂಟಿ ಕಾರ್ಯಾ ಚರಣೆಯಲ್ಲಿ ಬಂಧಿತರಾಗಿರುವ ಜೆಹಾದಿ ಗಳ ವಿಚಾರಣೆ ಹಾಗೂ ಪ್ರಾಥಮಿಕ ತನಿಖೆಯಲ್ಲಿ ಈ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.
ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರುದ್ಧ ದೇಶಾದ್ಯಂತ ಪ್ರತಿರೋಧ ಇರುವಂತೆಯೇ ಜೆಹಾದಿ ಗುಂಪುಗಳು ಹಲವು ರೀತಿಯ ವಿಧ್ವಂಸಕ ಕೃತ್ಯಗಳಿಗೆ ಈ ಸಂದರ್ಭವನ್ನು ಬಳಸಲು ಕುತಂತ್ರ ರೂಪಿಸಿವೆ. ಅದಕ್ಕಾಗಿ ಈಗಾಗಲೇ ಹಲವು ಸುತ್ತಿನ ಸಭೆ ನಡೆಸಿ, “ಆತ್ಮಾಹುತಿ ದಾಳಿ’ಗೆ ರೂಪುರೇಷೆಗಳನ್ನು ಸಿದ್ಧಪಡಿಸಿದ್ದವು. ಆಘಾತಕಾರಿ ಮಾಹಿತಿ ಎಂದರೆ ಈ ಸಭೆ ನಡೆದದ್ದು ಬೆಂಗಳೂರಿನ ಎಚ್.ಎಸ್.ಆರ್. ಲೇಔಟ್, ಸದ್ದುಗುಂಟೆ ಪಾಳ್ಯ, ಎಚ್‌ಬಿಆರ್ ಲೇಔಟ್, ಗುರಪ್ಪನಪಾಳ್ಯದಲ್ಲಿ. ಇದರ ಜತೆಗೆ ಇನ್ನೂ ಹಲವು ಸ್ಥಳಗಳಲ್ಲಿ ಪರಾಮರ್ಶೆ ನಡೆದಿತ್ತು. ಅದರಲ್ಲಿ ಜೆಹಾದಿಗಳ ಪ್ರಮುಖರು “ಆತ್ಮಹತ್ಯಾ ಬಾಂಬರ್’ ಆಗಲು ಸಿದ್ಧರಿರುವವರನ್ನು ಆಯ್ಕೆ ಮಾಡಲು ಪ್ರಕ್ರಿಯೆ ನಡೆಸಿದ್ದರು. ಈ ವೇಳೆ ಕೆಲವು ಯುವಕರು ಈ ದಾಳಿಯನ್ನು ಬಲವಾಗಿ ವಿರೋಧಿಸಿ ಸಭೆಯಿಂದ ಹೊರ ನಡೆದಿದ್ದರು. ಆದರೆ ಮೂವರು ಯುವಕರು ಭೀಭತ್ಸ ಕೃತ್ಯಕ್ಕೆ ಬೆಂಬಲ ಸೂಚಿಸಿದ್ದರು. ಇದರಿಂದ ಉತ್ತೇಜಿತರಾದ ಜೆಹಾದಿ ಗುಂಪಿನ ಪ್ರಮುಖರು ದಾಳಿಗೆ ಸಜ್ಜಾಗುವಂತೆ ಯುವಕರಿಗೆ ಸೂಚಿಸಿದ್ದರು ಎಂದು ತನಿಖೆಯಲ್ಲಿ ಗೊತ್ತಾಗಿದೆ ಎಂದು ತನಿಖಾ ತಂಡದ ಮೂಲಗಳು ತಿಳಿಸಿವೆ.
ಯಾವ ಸಂದರ್ಭದಲ್ಲಿ ದಾಳಿ ನಡೆಸಬೇಕು ಎಂದು ಅಂತಿಮ ನಿರ್ಧಾರ ಮಾಡುವಷ್ಟರಲ್ಲಿ ಪೊಲೀಸ ರಿಗೆ ಸಂಚಿನ ಮಾಹಿತಿ ಲಭ್ಯವಾಗಿ, ಶೋಧ ಶುರು ವಾಗಿತ್ತು. ಇದು ಅವರಿಗೂ ಗೊತ್ತಾಗಿ ಅವ ರೆಲ್ಲರೂ ದೇಶದ ವಿವಿಧ ಭಾಗಗಳಿಗೆ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಿಂದೂ ಮುಖಂಡರ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಉಗ್ರರಿಗೆ ಆಶ್ರಯ ನೀಡಿ ಸಭೆಗಳನ್ನು ನಡೆಸಿದ್ದ ಸಂಬಂಧ 17 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಸಿಸಿಬಿ ಪೊಲೀಸರ ತನಿಖೆಯಲ್ಲಿ ಮತ್ತಷ್ಟು ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಸಂಘಟನೆಯ ಪ್ರಮುಖರು ಬೆಂಗಳೂರು ಮಾತ್ರ ವಲ್ಲದೆ ರಾಮನಗರ, ಮೈಸೂರು, ಶಿವಮೊಗ್ಗ ಸಹಿತ ಹಲವೆಡೆ ಜೆಹಾದಿಗಳನ್ನು ಸಂಘಟಿಸುತ್ತಿದ್ದರು. ಮನ ಪರಿವರ್ತನೆ ಕಾರ್ಯದಲ್ಲೂ ತೊಡಗಿದ್ದರು ಎಂಬ ಮಾಹಿತಿಯೂ ಹೊರಬಿದ್ದಿದೆ.
ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಳ ಪೈಕಿ ಗುರಪ್ಪನಪಾಳ್ಯದ ಮೆಹಬೂಬ್ ಪಾಷಾ, ಮೊಹಮದ್ ಮನ್ಸೂರ್, ನಾಯಂಡಹಳ್ಳಿಯ ಇಮ್ರಾನ್ ಖಾನ್, ಜಬೀವುಲ್ಲಾ, ಚನ್ನರಾಯ ಪಟ್ಟಣದ ಅನೀಸ್, ರಾಮನಗರದ ಅಜಾಜ್ ಪಾಷಾ, ಕೋಲಾರದ ಸಲೀಂ ಖಾನ್, ಶಿವಮೊಗ್ಗ ತೀರ್ಥಹಳ್ಳಿಯ ಅಬ್ದುಲ್ ಮತೀನ್ ಅಹ್ಮದ್, ಮುಸ್ಸಾವೀರ್ ಹುಸೇನ್ ಸೇರಿದ್ದಾರೆ. ಇನ್ನೂ ಹಲವರು ಭಾಗಿಯಾಗಿರುವ ಶಂಕೆ ಇದೆ.
ಏಳೇ ದಿನಗಳಲ್ಲಿ
ಉಗ್ರ ರಹಸ್ಯ ಭೇದಿಸಿದ ಸಿಸಿಬಿ!
ತಮಿಳುನಾಡಿನ ಹಿಂದೂ ಮುಖಂಡ ಸುರೇಶ್ ಅವರ ಕೊಲೆ ಪ್ರಕರಣದ ಆರೋಪಿಗಳು ಬೆಂಗಳೂರಿನಲ್ಲಿ ನೆಲೆಸಿರುವ ಸಾಧ್ಯತೆ ಬಗ್ಗೆ “ಕ್ಯು’ ಬ್ರಾಂಚ್ ಪೊಲೀಸರು ರಾಜ್ಯ ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಜತೆಗೆ ತಮಿಳುನಾಡಿ ನಲ್ಲಿ ಖರೀದಿಸಿದ್ದ ಸುಮಾರು 50 ಮೊಬೈಲ್ ಸಿಮ್ ಕಾರ್ಡ್‌ಗಳು ಬೆಂಗಳೂರಿನಲ್ಲಿ ಸಕ್ರಿಯಗೊಂಡಿರುವ ಬಗ್ಗೆ ಡಿಸೆಂಬರ್ ಮೂರನೇ ವಾರದಲ್ಲಿ ತಿಳಿಸಿದ್ದರು. ಇದರ ಬೆನ್ನತ್ತಿದ್ದ ಸಿಸಿಬಿಯ ತನಿಖಾ ತಂಡಕ್ಕೆ ಆರಂಭದಲ್ಲಿ ಎಚ್‌ಬಿಆರ್ ಲೇಔಟ್‌ನಲ್ಲಿ ಒಂದು ಸಿಮ್ ಕೆಲವೊಮ್ಮೆ ಮಾತ್ರ ಬಳಕೆಯಾಗಿ ಅನಂತರ ಬಂದ್ ಆಗುವುದು ಗಮನಕ್ಕೆ ಬಂತು. ಯಶವಂತಪುರದಲ್ಲೂ ಇದೇ ಮಾದರಿಯಲ್ಲಿ ಒಂದು ಸಿಮ್ ಕಾರ್ಯ ನಿರ್ವಹಣೆಯಾಗುತ್ತಿರುವುದು ಪತ್ತೆಯಾಯಿತು.
ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿ ಅವಲೋಕಿಸಿದಾಗ ನಿರ್ದಿಷ್ಟ ಸಂಖ್ಯೆ ಯೊಂದಿಗಷ್ಟೇ ಸಂಭಾಷಣೆ ನಡೆಸಿ ಬಳಿಕ ಸ್ವಿಚ್ ಆಫ್ ಆಗುತ್ತಿರುವುದು ಗಮನಕ್ಕೆ ಬಂತು. ಈ ಬಗ್ಗೆ ಅನುಮಾನ ಮೂಡಿ ಒಬ್ಬನನ್ನು ವಶಕ್ಕೆ ಪಡೆದಾಗ ಇಡೀ ಜೆಹಾದಿ ತಂಡದ ದುಷ್ಕೃತ್ಯದ ಸಂಚು ಬಯಲಾಗಿತ್ತು. ಏಳು ದಿನಗಳ ಕಾರ್ಯಾ ಚರಣೆಯು ವಿಧ್ವಂಸಕ ಕೃತ್ಯಕ್ಕೆ ಸಜ್ಜಾಗಿದ್ದವರ ಪ್ರಯತ್ನ ವನ್ನು ವಿಫಲಗೊಳಿಸುವಲ್ಲಿ ಯಶಸ್ಸು ಕಂಡಿತು.
ಇದುವರೆಗೂ
ಸಿಕ್ಕಿಬಿದ್ದವರು ಯಾರ್ಯಾರು?
ದಿಲ್ಲಿ ಪೊಲೀಸರ ಬಲೆಗೆ ಬಿದ್ದವರು- ಖ್ವಾಜಾ ಮೊಹಿದ್ದೀನ್ (52), ಅಬ್ದುಲ್ ಸಮದ್ ( 28), ಸೈಯದ್ ಅಲಿ ನವಾಜ್ (32).ಚೆನ್ನೆ „ಯ “ಕ್ಯು’ ಬ್ರಾಂಚ್‌ಗೆ ಸೆರೆ ಸಿಕ್ಕವರು- ಮೊಹಮದ್ ಹನೀಫ್ ಖಾನ್ (29), ಇಮ್ರಾನ್ ಖಾನ್ ( 32) ಉಸ್ಮಾನ್ ಗನಿ ಮೊಹಮ್ಮದ್ ಜೈದ್ ( 24).
ಐಸಿಸ್‌ನಲ್ಲಿ ಸಕ್ರಿಯ?
ಜೆಹಾದಿಗಳ ಕುರಿತ ತನಿಖೆ ಚುರುಕುಗೊಳ್ಳುತ್ತಲೇ ಹಲವು ಸ್ಫೋಟಕ ಮಾಹಿತಿಗಳು ಬಯಲಾಗುತ್ತಿವೆ. ಖ್ವಾಜಾ ಮೊಹಿದ್ದೀನ್ ಐಸಿಸ್ ಸಂಘಟನೆಯಲ್ಲಿ ಸಕ್ರಿಯವಾಗಿದ್ದ. ಉಳಿದವರು “ಅಲ್ ಉಮ್ಮಾ’ ಹಾಗೂ “ಅಲ್ ಹಿಂದ್’ ಸಂಘಟನೆಗಳೊಂದಿಗೆ ಸಂಪರ್ಕವಿಟ್ಟುಕೊಂಡಿದ್ದರು. ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಮನ್ಸೂರ್ ಖಾನ್ ನಿಷೇಧಿತ “ಸಿಮಿ’ ಉಗ್ರ ಸಂಘಟನೆಯ ಸದಸ್ಯ ಸಾದಿಕ್ ಸಮೀರ್‌ನೊಂದಿಗೆ ಸಂಪರ್ಕ ಹೊಂದಿದ್ದ. ಈ ಎಲ್ಲ ಆರೋಪಿಗಳು ಒಟ್ಟಾಗಿ ದೊಡ್ಡ ಪ್ರಮಾಣದ ವಿಧ್ವಂಸಕ ಕೃತ್ಯ ಎಸಗಲು ಸಿದ್ಧತೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.
ಗುಂಡ್ಲುಪೇಟೆಯಲ್ಲಿ ಇಬ್ಬರ ಬಂಧನ
ಚಾಮರಾಜನಗರ: ನಿಷೇಧಿತ ಉಗ್ರ ಸಂಘಟನೆ ಯೊಂದರ ಇಬ್ಬರು ಶಂಕಿತ ಉಗ್ರರನ್ನು ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ಶನಿವಾರ ಬಂಧಿಸಲಾಗಿದೆ. ಖಚಿತ ಮಾಹಿತಿಯ ಆಧಾರದ ಮೇಲೆ ಆಂತರಿಕ ಭದ್ರತಾ ವಿಭಾಗ, ಭಯೋತ್ಪಾದಕ ನಿಗ್ರಹ ದಳ ಹಾಗೂ ಜಿಲ್ಲಾ ಪೊಲೀಸರ ನೇತೃತ್ವದಲ್ಲಿ ಶನಿವಾರ ರಾತ್ರಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.
ಬಂಧಿತ ಇಬ್ಬರಿಗೆ ಕೇರಳ ಮೂಲದ ಉಗ್ರ ರೊಂದಿಗೆ ಸಂಪರ್ಕವಿತ್ತು ಎನ್ನಲಾಗಿದೆ. ಕರ್ನಾಟಕ, ತಮಿಳುನಾಡು ಮತ್ತಿತರ ರಾಜ್ಯಗಳಲ್ಲಿ ಮತೀಯ ಗಲಭೆ ಹುಟ್ಟುಹಾಕಲು ಈ ಶಂಕಿತ ಉಗ್ರರ ಗುಂಪು ಸಂಚು ರೂಪಿಸಿತ್ತು ಎನ್ನಲಾಗಿದೆ.
ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬೆಂಗಳೂರಿನಲ್ಲಿ 3 ಶಂಕಿತ ಉಗ್ರರನ್ನು ಇತ್ತೀ ಚೆಗೆ ಬಂಧಿಸಿದ್ದರು. ಇದೇ ತಂಡದ ಐವರನ್ನು ತಮಿಳು ನಾಡಿನಲ್ಲಿ ಬಂಧಿಸಲಾಗಿತ್ತು. ಈ ಆರೋಪಿಗಳ ವಿಚಾರಣೆ ಸಂದರ್ಭದಲ್ಲಿ ಈ ಇಬ್ಬರ ಬಗ್ಗೆ ಮಾಹಿತಿ ನೀಡಿದ್ದರು ಎಂದು ತಿಳಿದುಬಂದಿದೆ.
- ಮಂಜುನಾಥ ಲಘುಮೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid: ಎನ್-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ
Belagavi: ಖಾನಾಪುರ ಪೊಲೀಸ್ ಠಾಣೆ ಸಿಪಿಐ ಅಮಾನತಿಗೆ ಸ್ಪಷ್ಟನೆ ಕೊಟ್ಟ ಸಿಎಂ
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
Covid: ಎನ್-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ
Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ
Koteshwar: ಬೀಜಾಡಿಯ ಯೋಧ ಅನೂಪ್ ಪೂಜಾರಿ ಮೃತ್ಯು
Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್ ಸಿಂಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.