ಉಪ್ಪಿನಂಗಡಿ-ಮಂಗಳೂರು ಮಧ್ಯೆ ನೇತ್ರಾವತಿಗೆ 6 ಅಣೆಕಟ್ಟು ನಿರ್ಮಾಣ
ನದಿಗೆ ಕಿಂಡಿ ಅಣೆಕಟ್ಟು ನಿರ್ಮಾಣದಿಂದ ನೀರಿನ ಕೊರತೆ ದೂರ
Team Udayavani, Feb 6, 2022, 7:00 AM IST
ಬಂಟ್ವಾಳ: ನೇತ್ರಾವತಿಯಲ್ಲಿ ಬೇಸಗೆಯಲ್ಲಿ ನೀರಿನ ಕೊರತೆ ಉಂಟಾಗಬಾರದು ಎಂಬ ಉದ್ದೇಶದಿಂದ ಸರಕಾರವು ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಆದ್ಯತೆ ನೀಡುತ್ತಿದೆ. ಈಗ ಇರುವ ವಿವಿಧ ಉದ್ದೇಶಗಳ ಅಣೆಕಟ್ಟುಗಳ ಜತೆಗೆ ಹೊಸ ಅಣೆಕಟ್ಟುಗಳು ಸೇರಿ ಉಪ್ಪಿನಂಗಡಿ- ಮಂಗಳೂರು ಮಧ್ಯೆ ಒಟ್ಟು ಅಣೆಕಟ್ಟುಗಳ ಸಂಖ್ಯೆ 6ಕ್ಕೇರಲಿದೆ.
ಮಂಗಳೂರು ಸಹಿತ ಜಿಲ್ಲೆಯ ಬಹುತೇಕ ಪ್ರದೇಶಗಳು ಕುಡಿಯುವ ನೀರಿಗಾಗಿ ನದಿಯನ್ನೇ ಆಶ್ರಯಿಸಿವೆ. ಹೀಗಾಗಿ ಸರಕಾರವು ಹೆಚ್ಚು ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸುತ್ತಿದೆ. ಪ್ರಸ್ತುತ ಸಣ್ಣ ನೀರಾವರಿ ಇಲಾಖೆಯ ಮೂಲಕ ಬಿಳಿಯೂರು ಮತ್ತು ಹರೇಕಳದಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಜಕ್ರಿ ಬೆಟ್ಟಿನಲ್ಲಿ ಹೊಸ ಕಿಂಡಿ ಅಣೆಕಟ್ಟಿಗೆ ಪ್ರಸ್ತಾವನೆ ಸಲ್ಲಿಕೆಯಾಗಿ ಅಂತಿಮ ಹಂತದಲ್ಲಿದೆ.
ನಗರ ಪ್ರದೇಶಗಳ ಜತೆಗೆ ಪ್ರಸ್ತುತ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಮೂಲಕ ಗ್ರಾಮೀಣ ಪ್ರದೇಶಗಳು ಕೂಡ ನದಿಯನ್ನೇ ಆಶ್ರಯಿಸುತ್ತಿವೆ. ನದಿಯಲ್ಲಿ ನೀರಿನ ಕೊರತೆಯಾದರೆ ಇಡೀ ಜಿಲ್ಲೆಗೆ ಬರ ಎದುರಾಗುವ ಅಪಾಯವಿದೆ.
2018-19: ನದಿ ಖಾಲಿ
ಜಿಲ್ಲೆಯಲ್ಲಿ 2018-19ರಲ್ಲಿ ಮಳೆ ವಿಳಂಬವಾಗಿ ನದಿಯಲ್ಲಿ ನೀರಿನ ಮಟ್ಟ ಕುಸಿದು ತೊಂದರೆ ಆಗಿತ್ತು. ಆಗ ಮಂಗಳೂರಿನಲ್ಲಿ ರೇಷನಿಂಗ್ ಮಾದರಿಯಲ್ಲಿ ನೀರು ಕೊಡಬೇಕಾದ ಸ್ಥಿತಿ ಉಂಟಾಗಿತ್ತು. 2019ರಲ್ಲಿ ಜೂನ್‌ನಲ್ಲಿಯೂ ಬಂಟ್ವಾಳದಲ್ಲಿ ಓಡಸಾಲಿನ ಮೂಲಕ ಹೂಳು ತೆಗೆದು ಜಾಕ್‌ವೆಲ್‌ಗೆ ನೀರು ಹರಿಸಬೇಕಾದ ಸ್ಥಿತಿ ಉಂಟಾಗಿತ್ತು. ಅಲ್ಲಲ್ಲಿ ಅಣೆಕಟ್ಟು ನಿರ್ಮಾಣ ಮಾಡಿದರೆ ನೀರು ಸಂಗ್ರಹವಾಗಿ ಬೇಸಗೆಯಲ್ಲೂ ಯಥೇತ್ಛ ನೀರು ಸಿಗಲಿದೆ ಎಂಬುದು ಸರಕಾರದ ಚಿಂತನೆ.
ಸಣ್ಣ ನೀರಾವರಿ ಇಲಾಖೆಯ ಮೂಲಕ ಬಿಳಿಯೂರಿನಲ್ಲಿ ಕಿಂಡಿ ಅಣೆಕಟ್ಟು ಪೂರ್ಣಗೊಂಡಾಗ ಅದರ ಹಿನ್ನೀರು ಉಪ್ಪಿನಂಗಡಿಯಿಂದ ಒಂದು ಕಿ.ಮೀ. ಹಿಂದೆ ವರೆಗೆ ನಿಲ್ಲಲಿದೆ. ಮುಂದೆ ಉಪ್ಪಿನಂಗಡಿಯಲ್ಲೂ ಕಿಂಡಿ ಅಣೆಕಟ್ಟು ನಿರ್ಮಾಣದ ಯೋಜನೆ ಇಲಾಖೆಯ ಮುಂದಿದೆ. ಬೆಳ್ತಂಗಡಿಯಲ್ಲೂ ಸಾಕಷ್ಟು ಕಿಂಡಿ ಅಣೆಕಟ್ಟುಗಳಿದ್ದು, ಅದು ನದಿಯ ಪ್ರಾರಂಭದ ಹಂತವಾಗಿರುವುದರಿಂದ ಸಣ್ಣ ಪ್ರಮಾಣದ್ದಾಗಿವೆ.
ಇವುಗಳನ್ನು “ಬ್ರಿಜ್ ಕಂ ಬ್ಯಾರೇಜ್’ ಗಳಾಗಿ ನಿರ್ಮಿಸಲಾಗುತ್ತಿದ್ದು, ಸೇತುವೆ ಯೂ ಲಭ್ಯವಾಗಲಿದೆ. ಪ್ರಸ್ತುತ ಸಣ್ಣ ನೀರಾವರಿ ಇಲಾಖೆಯ ಮೂರು ಅಣೆಕಟ್ಟುಗಳಲ್ಲೂ ಸೇತುವೆಯ ಯೋಜನೆ ಸೇರಿದೆ.
ಇದನ್ನೂ ಓದಿ:ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 731.03 ಕೋಟಿ ರೂ. ಅನುದಾನ ಬಿಡುಗಡೆ
ಯಾವ್ಯಾವ ಅಣೆಕಟ್ಟು ಎಲ್ಲೆಲ್ಲಿ ?
ಬಿಳಿಯೂರಿನಲ್ಲಿ ಪ್ರಸ್ತುತ ಒಂದು ಕಿಂಡಿ ಅಣೆಕಟ್ಟು ನಿರ್ಮಾಣವಾಗುತ್ತಿದ್ದು, ಅದರ ಕೆಳಭಾಗದ ಶಂಭೂರಿನಲ್ಲಿ ವಿದ್ಯುತ್ ಉತ್ಪಾದನೆಯ ಎಎಂಆರ್ ಅಣೆಕಟ್ಟು ಇದೆ. ಇದರ ನಡುವೆ ಸರಪಾಡಿಯಲ್ಲಿ ಎಂಆರ್‌ಪಿಎಲ್‌ಗೆ ನೀರು ಪೂರೈಸುವ ಸಣ್ಣ ಅಣೆಕಟ್ಟು ಇದ್ದು, ಪ್ರಸ್ತುತ ಅದು ಶಂಭೂರು ಅಣೆಕಟ್ಟಿ ನಿಂದಾಗಿ ಮುಳುಗಡೆಯಾಗಿದೆ.
ಶಂಭೂರಿನ ಕೆಳಭಾಗ, ಜಕ್ರಿಬೆಟ್ಟಿನಲ್ಲಿ ಕಿಂಡಿ ಅಣೆಕಟ್ಟಿನ ಪ್ರಸ್ತಾವನೆ ಸರಕಾರದ ಮುಂದಿದ್ದು, ಅದರ ಕೆಳಭಾಗದಲ್ಲಿ ಮಂಗಳೂರಿಗೆ ನೀರು ಪೂರೈಸುವ ತುಂಬೆ ಅಣೆಕಟ್ಟು ಇದೆ. ಮತ್ತೂ ಕೆಳಗೆ ಅಡ್ಯಾರ್-ಹರೇಕಳ ಮಧ್ಯೆ ಇನ್ನೊಂದು ಕಿಂಡಿ ಅಣೆಕಟ್ಟು ನಿರ್ಮಾಣಗೊಳ್ಳುತ್ತಿದೆ. ತುಂಬೆಯಲ್ಲಿ ಮತ್ತೂಂದು ಹಳೆಯ ಅಣೆಕಟ್ಟು ಇದ್ದು, ಹೊಸ ಅಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಡೆಯಾಗಿದೆ.
ಉಪ್ಪಿನಂಗಡಿ ಬಳಿಕ ಇಲಾಖೆ ಯಿಂದ 2 ವೆಂಟೆಡ್ ಡ್ಯಾಮ್‌ಗಳು ನಿರ್ಮಾಣ ಗೊಳ್ಳುತ್ತಿದ್ದು, ಜಕ್ರಿಬೆಟ್ಟು ಡ್ಯಾಮ್‌ನ ಪ್ರಸ್ತಾವನೆ ಸರಕಾರದ ಹಂತದಲ್ಲಿದೆ. ನಾವು ಮುಖ್ಯ ವಾಗಿ ಕೃಷಿ ಗಾಗಿಯೇ ಇವುಗಳನ್ನು ನಿರ್ಮಿಸು ತ್ತಿದ್ದು, ಕುಡಿಯುವ ನೀರಿಗೂ ಬಳಸಬಹುದಾಗಿದೆ. ಇದರಿಂದ ಎಪ್ರಿಲ್-ಮೇಯಲ್ಲೂ ನೀರಿಗೆ ತೊಂದರೆ ಎದುರಾಗದು.
-ಗೋಕುಲ್‌ದಾಸ್,
ಕಾರ್ಯಪಾಲಕ ಎಂಜಿನಿಯರ್
ಸಣ್ಣ ನೀರಾವರಿ, ಅಂತರ್ಜಲ ಅಭಿವೃದ್ಧಿ ವಿಭಾಗ, ಮಂಗಳೂರು
– ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.