Corruption:ಮತಕ್ಕಾಗಿ ಲಂಚ: ಸಂಸದರು, ಶಾಸಕರಿಗೆ ಶಿಕ್ಷೆಯಿಂದ ವಿನಾಯ್ತಿ ಇಲ್ಲ: ಸುಪ್ರೀಂ
ಪಿವಿ ನರಸಿಂಹ ರಾವ್ ಪ್ರಕರಣವನ್ನು ನಾವು ಒಪ್ಪುವುದಿಲ್ಲ.
Team Udayavani, Mar 4, 2024, 12:55 PM IST
ನವದೆಹಲಿ: ಭಾಷಣಕ್ಕಾಗಿ ಲಂಚ ಪ್ರಕರಣಗಳಲ್ಲಿ ಸಂಸದರು ಮತ್ತು ಶಾಸಕರಿಗೆ ಶಿಕ್ಷೆಯಿಂದ ವಿನಾಯಿತಿ ಇಲ್ಲ ಎಂದು ಸುಪ್ರೀಂಕೋರ್ಟ್ ನ ಸಾಂವಿಧಾನಿಕ ಪೀಠ ಸೋಮವಾರ (ಮಾರ್ಚ್ 04) ಐತಿಹಾಸಿಕ ತೀರ್ಪು ನೀಡಿದೆ.
ಇದನ್ನೂ ಓದಿ:ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ ಐವರು ಸ್ಥಳದಲ್ಲೇ ಮೃತ್ಯು
ಸುಪ್ರೀಂಕೋರ್ಟ್ ನ ಸಿಜೆಐ ಡಿವೈ ಚಂದ್ರಚೂಡ್ ಅವರನ್ನೊಳಗೊಂಡ ಏಳು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಈ ತೀರ್ಪನ್ನು ನೀಡಿದೆ. 1998ರ ಜೆಎಂಎಂ ಲಂಚ ಹಗರಣದ (ಭಾಷಣಕ್ಕಾಗಿ ಅಥವಾ ಮತಕ್ಕಾಗಿ ಲಂಚ ಪಡೆಯುವ ಸಂಸದರು, ಶಾಸಕರು) ಪ್ರಕರಣದಲ್ಲಿನ ಪಂಚ ಸದಸ್ಯರ ಸಾಂವಿಧಾನಿಕ ಪೀಠದ ತೀರ್ಪನ್ನು ಸರ್ವಾನುಮತದಿಂದ ರದ್ದುಮಾಡಿರುವುದಾಗಿ ಪೀಠ ತಿಳಿಸಿದೆ.
ಸಂಸತ್ ನಲ್ಲಿ ಭಾಷಣ ಮಾಡಲು ಅಥವಾ ಮತದಾನ ಮಾಡಲು ಲಂಚ ಪಡೆದ ಶಾಸಕರಿಗೆ ಜೆಎಂಎಂ ಪ್ರಕರಣದ ತೀರ್ಪಿನಲ್ಲಿ ಕಾನೂನು ಕ್ರಮದಿಂದ ವಿನಾಯ್ತಿ ನೀಡಲಾಗಿತ್ತು. ಲಂಚಕ್ಕೆ ಸಂಸದೀಯ ವಿಶೇಷ ಸವಲತ್ತಿನಿಂದ ರಕ್ಷಣೆ ನೀಡಲಾಗುವುದಿಲ್ಲ. 1998ರ ತೀರ್ಪಿನ ವಾಖ್ಯಾನವು ಸಂವಿಧಾನದ 105 ಮತ್ತು 194ನೇ ವಿಧಿಗಳಿಗೆ ವಿರುದ್ಧವಾಗಿದೆ ಎಂದು ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ವಿಶ್ಲೇಷಿಸಿದೆ.
ಈ ಎರಡು ವಿಧಿಗಳ ಅನ್ವಯ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಕಾನೂನು ಕ್ರಮದಿಂದ ವಿನಾಯ್ತಿ ನೀಡುವುದಕ್ಕೆ ವಿರುದ್ಧವಾಗಿದೆ ಎಂದು ಸುಪ್ರೀಂ ಪೀಠ ತಿಳಿಸಿದೆ.
ಪಿವಿ ನರಸಿಂಹ ರಾವ್ ಪ್ರಕರಣವನ್ನು ನಾವು ಒಪ್ಪುವುದಿಲ್ಲ. ಪಿವಿ ನರಸಿಂಹ ರಾವ್ ಪ್ರಕರಣದ ತೀರ್ಪಿನಲ್ಲಿ ಮತ ಚಲಾಯಿಸಲು ಲಂಚ ಪಡೆದ ಶಾಸಕರಿಗೆ ಶಿಕ್ಷೆಯಿಂದ ವಿನಾಯ್ತಿ ನೀಡಬೇಕೆಂಬ ತೀರ್ಪು ಜಟಿಲವಾಗಿದ್ದು, ಅದನ್ನು ರದ್ದುಪಡಿಸುವುದಾಗಿ ಸಿಜೆಐ ಹೇಳಿದರು.
1993ರ ಜುಲೈನಲ್ಲಿ ಪಿವಿ ನರಸಿಂಹ ರಾವ್ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡಿಸಿದ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್ ಗಮನಸೆಳೆಯಿತು. ಅಂದು ಸರ್ಕಾರದ ಪರ 265 ಮತಗಳಿಂದ ಸರ್ಕಾರ ಬಹುಮತ ಪಡೆದಿತ್ತು. ಸರ್ಕಾರದ ವಿರುದ್ಧವಾಗಿ 251 ಮತ ಚಲಾವಣೆಯಾಗಿತ್ತು.
ಈ ಘಟನೆಯ ಬಳಿಕ ಪಿವಿ ನರಸಿಂಹ ರಾವ್ ಸರ್ಕಾರವನ್ನು ಬೆಂಬಲಿಸಲು ಜಾರ್ಖಂಡ್ ಮುಕ್ತಿ ಮೋರ್ಚಾದ ಶಾಸಕರು ಮತಚಲಾಯಿಸಲು ಲಂಚ ಪಡೆದಿದ್ದರು ಎಂಬ ಹಗರಣ ಬಯಲಿಗೆ ಬಂದಿತ್ತು. 1998ರಲ್ಲಿ ಜೆಎಂಎಂ ಲಂಚ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾಗ, ಶಾಸಕರು ಮತಚಲಾಯಿಸಲು ಲಂಚ ಪಡೆದ ಪ್ರಕರಣದಲ್ಲಿ ಶಿಕ್ಷೆಯಿಂದ ವಿನಾಯ್ತಿ ನೀಡುವ ತೀರ್ಪು ನೀಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.