Corruption: ಬೇನಾಮಿ ಖಾತೆಗೆ ಹಣ, ಸಿಎಂ ಸಿದ್ದರಾಮಯ್ಯ ಹೊಣೆ: ಸಂಸದ ಶೆಟ್ಟರ್
ಹಿಂದಿನ ಸರಕಾರದಲ್ಲಿ ಹಗರಣ ಆಗಿದ್ದರೆ ನಿಮ್ಮ ಸರಕಾರ ತನಿಖೆಗೆ ಒಪ್ಪಿಸಲಿಲ್ಲ ಏಕೆ?
Team Udayavani, Aug 11, 2024, 12:09 AM IST
ಕಾರಟಗಿ: ಸಿಎಂ ಸಿದ್ದರಾಮಯ್ಯ ಮುಡಾ ಹಾಗೂ ವಾಲ್ಮೀಕಿ ಹಗರಣದಲ್ಲಿ ನೇರ ಭಾಗಿಯಾಗಿದ್ದಾರೆ. ಆದರೂ ಸಿಎಂ ಒಪ್ಪಿಕೊಳ್ಳದಿರುವುದು ಅವರ ಭಂಡತನಕ್ಕೆ ಸಾಕ್ಷಿ ಎಂದು ಸಂಸದ ಜಗದೀಶ್ ಶೆಟ್ಟರ್ ಆರೋಪಿಸಿದರು.
ರವಿವಾರ ಪಟ್ಟಣದಲ್ಲಿ ಮಾತನಾಡಿ, ವಾಲ್ಮೀಕಿ ಹಗರಣದಲ್ಲಿ ನೂರಾರು ಕೋಟಿ ರೂ. ಬೇರೆ ಬೇರೆ ಬೇನಾಮಿ ಖಾತೆಗಳಿಗೆ ವರ್ಗಾವಣೆಯಾಗಿದೆ. ಹಣಕಾಸು ಇಲಾಖೆ ಒಪ್ಪಿಗೆ ಇಲ್ಲದೆ ಮಾಡಲು ಸಾಧ್ಯವಿಲ್ಲ. ಹಿಂದಿನ ಸರಕಾರದಲ್ಲಿ ಹಗರಣ ಆಗಿದ್ದರೆ ನಿಮ್ಮ ಸರಕಾರ ಬಂದು ವರ್ಷವಾಯಿತು, ತನಿಖೆಗೆ ಒಪ್ಪಿಸಲಿಲ್ಲ ಏಕೆ. ಸರ್ಕಾರವು ಗ್ಯಾರಂಟಿಗಾಗಿ ಕೇವಲ ಹಣ ಸಂಗ್ರಹ ಮಾಡುವುದರಲ್ಲೇ ತೊಡಗಿರುವುದರಿಂದ ಇತರ ಕೆಲಸಗಳಿಗೆ ಗಮನ ಹರಿಸಿಲ್ಲ.
ಮುಡಾದಲ್ಲಿ ಪತ್ನಿ ಹೆಸರಲ್ಲಿ ಬೇರೆ ಜಾಗ ತೆಗೆದುಕೊಂಡಿದ್ದಾರೆ. ಇನ್ನು ಅಧಿವೇಶನದಲ್ಲಿ ಚರ್ಚೆಗೆ ಬಂದಿಲ್ಲಾ. ಇದರ ಹಿಂದಿನ ಸರಕಾರದ ಹಗರಣಗಳು ಹೊರಗೆ ಬರಲಿವೆ ಎಂದು ಪ್ರತಿಪಕ್ಷವನ್ನು ಹೆದರಿಸುತ್ತೀರಿ. ಹಿಂದಿನ ಸರಕಾರದಲ್ಲಿ ಹಗರಣ ಆಗಿದ್ದರೆ ನಿಮ್ಮ ಸರಕಾರ ಬಂದು ವರ್ಷವಾಯಿತು ತನಿಖೆಗೆ ಒಪ್ಪಿಸಲಿಲ್ಲಾ ಏಕೆ ಎಂದು ಪ್ರಶ್ನಿಸಿದರು.
ಮುಡಾ ಹಗರಣದಲ್ಲಿ ಬಿಜೆಪಿ ಸರಕಾರದ ಯಾವ ಪಾತ್ರವೂ ಇಲ್ಲಾ. ಮುಡಾ 14 ನಿವೇಶನಗಳನ್ನು ಕಮೀಷನರ್ ಮಟ್ಟದಲ್ಲಿ ಸಿದ್ಧರಾಮಯ್ಯನವರ ಪತ್ನಿಗೆ ವಿತರಿಸಿದ್ದಾರೆ. ಆದರೆ ರಾಜ್ಯ ಸರಕಾರದ ಒಪ್ಪಿಗೆ ಪಡೆದಿಲ್ಲಾ. ಅಲ್ಲದೆ ಅಂದಿನ ನಗರಾಭಿವೃದ್ಧಿ ಸಚಿವರಾಗಲಿ, ಇಲಾಖೆ ಕಾರ್ಯದರ್ಶಿಗಳಾಗಲಿ ರುಜು ಮಾಡಿದ್ದರೆ ಬಿಜೆಪಿ ಸರಕಾರ ಹೊಣೆಯಾಗುತ್ತಿತ್ತು. ಹೀಗಾಗಿ ಮುಡಾ ಹಗರಣದಲ್ಲಿ ಬಿಜೆಪಿಯ ಯಾವ ಪಾತ್ರವಿಲ್ಲಾ. ಮುಖ್ಯಮಂತ್ರಿ ಸಿದ್ಧರಾಮಯ್ಯ ಸಂಪೂರ್ಣವಾಗಿ ಭಾಗಿ ಇರುವುದು ಸ್ಪಷ್ಟವಾಗಿದೆ. ಅಲ್ಲದೆ ಸಿದ್ಧರಾಮಯ್ಯನವರೇ ನೇರವಾಗಿ ತಪ್ಪಿತಸ್ಥರಾಗಿದ್ದು ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಅರ್ಕಾವತಿ ಡಿನೋಟಿಫಿಕೆಷನ್ ಪ್ರಕರಣ ಹೊರಗಡೆ ತಂದಿದ್ದು ನಾನು. ಆಗ ಕೆಂಪಣ್ಣ ಆಯೋಗದಿಂದ ತನಿಖೆ ಮಾಡಿಸಲಾಯಿತು. ವರದಿ ಕೊಟ್ಟಿದ್ದರೂ ಅದನ್ನು ಸಿದ್ಧರಾಮಯ್ಯ ಮುಚ್ಚಿಟ್ಟರು ಎಂದು ಆರೋಪಿಸಿದರು. ವರದಿ ಕೊಟ್ಟ ನಂತರ ಸದನದಲ್ಲಿ ಮಂಡನೆ ಮಾಡಬೇಕು. ಇದಕ್ಕೂ ಮೊದಲೇ ತಾವು ನಿರಪರಾಧಿ ಎಂದು ಹೇಳುತ್ತಿದ್ದಾರೆ. ನೀವು ನಿರಪರಾ ಆಗಿದ್ದರೆ ಅರ್ಕಾವತಿ ವರದಿ ಮಂಡನೆ ಮಾಡಿ ನೀವು ಮಾಡದಿದ್ದರೆ ತಪ್ಪಿತಸ್ಥರು ಎಂದಾಗುತ್ತದೆ ಎಂದರು.
ಹಣವಿಲ್ಲದೆ ಕ್ರಸ್ಟ್‌ಗೇಟ್ ನಿರ್ವಹಣೆ ಮಾಡಿಲ್ಲ:
ರಾಜ್ಯ ಕಾಂಗ್ರೆಸ್ (ಅಂದಾದುನ್ನಿ) ಸರಕಾರ ಗ್ಯಾರಂಟಿಗಳ ನಿಭಾಯಿಸಲು ಹಣ ಸಂಗ್ರಹಣೆಯಲ್ಲಿ ತೊಡಗಿರುವುದರಿಂದ ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ಗಳ ನಿರ್ವಹಣೆ ಮಾಡಲಾಗದೆ ಕ್ರಸ್ಟ್‌ಗೇಟ್ ಚೆ„ನ್ ಕಟ್ಟಾಗಲು ಕಾರಣವಾಗಿದೆ. ಸರಕಾರ, ಇಲಾಖಾ ಹಿರಿಯ ಅಧಿಕಾರಿಗಳು ಆರು ತಿಂಗಳ ಹಿಂದೆ ಅವುಗಳೆನ್ನಲ್ಲಾ ಸಮರ್ಪಕವಾಗಿ ನಿರ್ವಹಣೆ ಮಾಡಿದ್ದರೆ ಇಂದು ಈ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲಾ. ರೈತರು ಸಂಕಷ್ಟಸ್ಥಿತಿ ಎದುರಿಸಬೇಕಾಗಿದೆ. ಹಣವಿಲ್ಲದೆ ಕ್ರಸ್ಟ್‌ಗೇಟ್ ನಿರ್ವಹಣೆ ಮಾಡಲಾಗಲಿಲ್ಲ ಎಂದು ಅಧಿಕಾರಿಗಳಿಂದ ಉತ್ತರ ಬರುತ್ತೆ ಎಂದರು.
ಈ ಸಂದರ್ಭದಲ್ಲಿ ಗಂಗಾವತಿ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಕನಕಗಿರಿ ಮಾಜಿ ಶಾಸಕ ಬಸವರಾಜ ಧಡೆಸೂಗುರ ಸೇರಿ ಪಕ್ಷದ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.