Iran – Israel ನಡುವಿನ ಸಂಘರ್ಷ ಮಹಾ ಯುದ್ಧಕ್ಕೆ ಕಾರಣವಾಗಬಹುದೇ? ಭಾರತದ ನಿಲುವು ಏನು?

ಯುದ್ಧದಲ್ಲಿ ಗೆದ್ದವ ಸೇೂತ ಹಾಗೆ ಸೇೂತವನು ಸತ್ತ ಹಾಗೆ

Team Udayavani, Aug 6, 2024, 4:42 PM IST

Iran – Israel ನಡುವಿನ ಸಂಘರ್ಷ ಮಹಾ ಯುದ್ಧಕ್ಕೆ ಕಾರಣವಾಗಬಹುದೇ? ಭಾರತದ ನಿಲುವು ಏನು?

ಯುದ್ಧದ ಬಗ್ಗೆಯೂ ಒಂದು ಮಾತಿದೆ. ಈ ಯುದ್ಧಗಳು ಮೊದಲು ಎಲ್ಲಿ ಹುಟ್ಟಿ ಕೊಳ್ಳುತ್ತದೆ ಅಂದರೆ ಮನುಷ್ಯರ ಮನಸ್ಸಿನಲ್ಲಿ.ಈ ಮಾತನ್ನು ಹೇಳಿದವರು ಮತ್ತಾರು ಅಲ್ಲ ಅಮೇರಿಕಾದ ಮಾಜಿ ಅಧ್ಯಕ್ಷ ಜಾನ್ ಎಫ್ ಕೆನಡಿ.ಈ ಮಾತು ಸತ್ಯ ಕೂಡಾ. ಯಾವುದೇ ಒಂದು ಯುದ್ಧದ ಹಿಂದಿನ ಸ್ಥಿತಿ ಗತಿ ಕಾರಣ ಹುಡುಕುತ್ತಾ ಹೇೂದಾಗ ನಮಗೆ ಮೊದಲು ಕಾಣುವುದು ಮನುಷ್ಯನ ಮನಸ್ಸಿನಲ್ಲಿ ಹುಟ್ಟಿ ಕೊಂಡ ದ್ವೇಷ ,ಅಸೂಯೆ, ಅಭದ್ರತೆ, ಹೆದರಿಕೆಗಳೇ ಮೂಲ ಪ್ರೇರಿಪಿತ ಕಾರಣಗಳು.ಇದನ್ನು ಮನಶಾಸ್ತ್ರಜ್ಞರು ಒಪ್ಪಿಕೊಂಡಿದ್ದಾರೆ.

ಜಗತ್ತಿನಲ್ಲಿ ಸಾವಿರಾರು ಯುದ್ಧಗಳು ನಡೆದು ಹೇೂಗಿದ್ದಾವೆ. ಅದಕ್ಕೆಲ್ಲ ಒಂದೊಂದು ಕಾರಣಗಳನ್ನು ನೀಡುತ್ತಾ ಬಂದಿದ್ದೇವೆ. ರಾಜಕೀಯ, ಧರ್ಮ, ಆಥಿ೯ಕತೆ, ಸಿದ್ಧಾಂತಗಳ ವೈರುಧ್ಯತೆ ಗಡಿ ತಕರಾರುಗಳು ಭಯೇೂತ್ಪಾದನೆಗಳು ಇತ್ಯಾದಿ.
ಅಂತರರಾಷ್ಟ್ರೀಯ ನೀತಿಯಲ್ಲಿ ಕೂಡಾ ಯುದ್ಧ ಸಾರುವುದು ಕೂಡಾ ಒಂದು ದೇಶದ ವಿದೇಶಾಂಗ ನೀತಿ ಅನ್ನುವುದನ್ನು ಒಪ್ಪಿಕೊಂಡಿದ್ದೇವೆ. ಮಾತ್ರವಲ್ಲ ಯುದ್ಧದಿಂದಾಗಿ ಮೂರು” M “ಗಳು ನಷ್ಟ ಅನ್ನುವುದು ನಮಗೂ ಗೊತ್ತಿದೆ. Men , Money, Materials…ಆದರೂ ಈ ಜಗತ್ತಿನಲ್ಲಿ ಯುದ್ಧ ನಿಂತಿಲ್ಲ.ಜಗತ್ತಿನ ಇತಿಹಾಸದಲ್ಲೇ ಎರಡು ಮಹಾಯುದ್ಧಗಳು ಸಂಭವಿಸಿ ಹೇೂಗಿದ್ದಾವೆ. ಅದೆಷ್ಟೋ ಯುದ್ಧಗಳು ಪ್ರಾದೇಶಿಕ ಮಟ್ಟದಲ್ಲಿ ನಡೆದ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿದೆ. ಯುದ್ಧದ ಕುರಿತಾಗಿ ಒಂದು ಮಾತಿದೆ “ಯುದ್ಧದಲ್ಲಿ ಗೆದ್ದವ ಸೇೂತ ಹಾಗೆ ಸೇೂತವನು ಸತ್ತ ಹಾಗೆ” ಆದರೂ ಕೂಡಾ ಈ ಯುದ್ಧ ಅನ್ನುವ ವಿದೇಶಾಂಗ ನೀತಿಗೆ ಜಗತ್ತಿನ ದೇಶಗಳು ಇತಿಶ್ರೀ ಹಾಡಲೇ ಇಲ್ಲ ಬದಲಾಗಿ ಇದನ್ನೇ ವೈಭವೀಕರಿಸುವ ಕೆಲಸ ನಡೆಯುತ್ತಾ ಇದೆ.

ಇಷ್ಟೊಂದು ಪ್ರಾಸ್ತಾವಿಕ ಮಾತುಗಳನ್ನು ಈ ಯುದ್ಧ ಅನ್ನುವ ಮನುಷ್ಯ ವಿರೇೂಧಿ ನೀತಿ ಅಸ್ತ್ರದ ಕುರಿತಾಗಿ ಬರೆಯ ಬೇಕಾಯಿತು ಕಾರಣವೆಂದರೆ; ಇತ್ತೀಚಿಗೆ ವಿಶ್ವದ ಶಾಂತಿ ‌ಪ್ರಿಯರಲ್ಲಿ ಆತಂಕ ಸೃಷ್ಟಿ ಮಾಡುತ್ತಿರುವ ಸುದ್ದಿ ಅಂದರೆ ಇರಾನ್ -ಇಸ್ರೇಲ್ ನಡುವಿನ ಸಮರದ ಛಾಯೆ. ಒಂದು ಅರ್ಥದಲ್ಲಿ ಈ ಎರಡು ದೇಶಗಳ ನಡುವೆ ಶೀತಲ ಸಮರವೊ ಅಥವಾ ಮುಸುಕಿನ ಯುದ್ಧ ಹಲವು ವರುಷಗಳ ಹಿಂದೇನೆ ಪ್ರಾರಂಭವಾಗಿತ್ತು.ಇದಕ್ಕೆ ಮೂಲ ಕಾರಣ ಮಧ್ಯ ಪ್ರಾಚ್ಯ ರಾಷ್ಟ್ರದಲ್ಲಿನ ಜನಾಂಗೀಯ ದ್ವೇಷ ಮತಧರ್ಮಗಳ ವೈಷಮ್ಯ ರಾಜಕೀಯ ಅಸ್ಥಿರತೆ ಸರ್ವಾಧಿಕಾರ ಮನಸ್ಥಿತಿಯ ಪೈಪೇೂಟಿ ಇದರ ನಡುವೆ ಬಡತನ, ಭಯೇೂತ್ಪಾದನ ಪಿಡುಗುಗಳೆಂದೇ ಹೇಳ ಬಹುದು.

ಇರಾನ್, ಇರಾಕ್, ಲೆಬನಾನ್, ಇಸ್ರೇಲ್, ಸೌದಿ ..ಮುಂತಾದ ಮಧ್ಯ ಪ್ರಾಚ್ಯ ದೇಶಗಳಲ್ಲಿ ಪ್ರಜಾಪ್ರಭುತ್ವದ ನೆಲೆಗಟ್ಟು ಇಲ್ಲದಿರುವ ಕಾರಣ ಸರ್ವಾಧಿಕಾರಿಗಳು ಹೇಳಿದ್ದೇ ಅಂತಿಮ ನಿರ್ಣ ಯ. ಅವರ ಅಧಿಕಾರ ಪ್ರತಿಷ್ಠೆ ಕುತ್ತು ಬಂದಾಗ ಇಂತಹ ಯುದ್ಧದ ಹೇಳಿಕೆಗಳು ಕಾರ್ಯಗಳು ನಡೆಯುತ್ತಲೇ ಇರುತ್ತದೆ.ಇದಕ್ಕೆ ಸಂಬಂಧಿಸಿದ ಹತ್ತು ಹಲವು ಉದಾಹರಣೆಗಳನ್ನು ನೇೂಡಿದ್ದೇವೆ. ಇರಾಕ್, ಇರಾನ್, ಕುವೈಟ್ ಯುದ್ಧ..ಅದೇ ರೀತಿಯಲ್ಲಿ ಏಶಿಯಾದ ಕಡೆಗೆ ಬಂದಾಗ ಪಾಕಿಸ್ತಾನ ಅಫ್ಘಾನಿಸ್ತಾನ, ಚೀನಾ ರಷ್ಯಾ- ಯುಕ್ರೇನ್ ..ಮುಂತಾದ ದೇಶಗಳಲ್ಲಿ ಸಂಭವಿಸಿದ ಯುದ್ಧದ ಪರಿಸ್ಥಿತಿ ಇವೆಲ್ಲವೂ ಕೂಡಾ ಒಂದು ರೀತಿಯಲ್ಲಿ ಜಗತ್ತಿನಲ್ಲಿ ಪ್ರಕ್ಷುಬ್ಧ ಮತ್ತು ಆತಂಕ ಸೃಷ್ಟಿಸಲು ಹುಟ್ಟಿ ಕೊಂಡ ಯುದ್ಧಗಳೆಂದೇ ವ್ಯಾಖ್ಯಾನಿಸ ಬಹುದು.

ಈ ಎಲ್ಲಾ ಯುದ್ಧದ ಪ್ರಸಂಗದಲ್ಲಿ ವಿಶ್ವದಲ್ಲೇ ತಾನೇ ದೊಡ್ಡಣ್ಣ ಅನ್ನುವ ತರದಲ್ಲಿ ಕಾಲು ಕೆದರಿಕೊಂಡು ತನ್ನ ಅನುಕೂಲತೆ ಮತ್ತು ಲಾಭ ನೇೂಡಿ ಬೆಂಬಲಕ್ಕೆ ನಿಲ್ಲುವ ಅಮೇರಿಕ ರಷ್ಯಾ ದಂತಹ ದೇಶಗಳು. ವಿಶ್ವದಲ್ಲೇ ಯಾವುದೇ ಭಿನ್ನಾಭಿಪ್ರಾಯ ಹುಟ್ಟಿ ಕೊಂಡಾಗ ತನ್ನನ್ನು ಕರೆಯಲಿ ಕರೆಯದೇ ಇರಲಿ ಅಲ್ಲಿ ಮೂಗು ತೂರಿಸಿಕೊಂಡು ಹೇೂಗುವ ದೇಶವಿದ್ದರೆ ಅದು ಅಮೆರಿಕಾ ಅನ್ನುವುದು ಸಾಬೀತಾಗಿ ಬಿಟ್ಟಿದೆ.ಈ ಬಂಡವಾಳಶಾಹಿ ಅಮೇರಿಕಾದ ವಿರುದ್ಧ ಸದಾ ನಿಲ್ಲುವ ದೇಶವೆಂದರೆ ಕಮ್ಯುನಿಸ್ಟ್ ಸಿದ್ಧಾಂತ ಒಪ್ಪಿಕೊಂಡ ರಷ್ಯಾ ಮತ್ತು ಚೀನಾ. ಅದು ಇರಾಕ್ ಯುದ್ಧದಲ್ಲೂ ನೇೂಡಿದ್ದೇವೆ, ಉಕ್ರೇನ್ ಪರಿಸ್ಥಿತಿಯಲ್ಲೂ ನೇೂಡಿದ್ದೇವೆ. ಅಫ್ಘಾನಿಸ್ತಾನದ ನೆಲದಲ್ಲಿಯೂ ನೇೂಡಿದ್ದೇವೆ. ಈಗ ಮತ್ತೆ ಇರಾನ್ ಇಸ್ರೇಲ್ ಯುದ್ಧದ ನೆರಳಿನಲ್ಲಿಯೂ ಕಾಣುತ್ತಿದ್ದೇವೆ.ಇವುಗಳ ಜೊತೆಗೆ ಶ್ರೀಮಂತ ರಾಷ್ಟ್ರಗಳ ಬಣ ರಾಜಕೀಯ ನೀತಿ.

ಇಂದಿನ ಇಸ್ರೇಲ್ -ಇರಾನ್ ಯುದ್ಧದ ಛಾಯೇ ಮಹಾ ಯುದ್ಧಕ್ಕೆ ಕಾರಣವಾಗ ಬಹುದಾ? ಅನ್ನುವ ಪ್ರಶ್ನೆ ಕೆಲವರ ತಲೆಯಲ್ಲಿ ಹೊಳೆದಿರ ಬಹುದು. ಆದರೆ ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ ಇದು ಬರೇ ಸ್ಥಳೀಯ ಮಟ್ಟದ ಯುದ್ಧವಾಗಿ ಕೊನೆಗೊಳ್ಳ ಬಹುದು ಹೊರತು ಜಾಗತಿಕವಾದ ದೊಡ್ಡ ಮಟ್ಟದಲ್ಲಿ ಯುದ್ಧಕ್ಕೆ ನಾಂದಿ ಹಾಡಲು ಸಾಧ್ಯವಿಲ್ಲ. ಇದಕ್ಕೂ ಹಲವು ಕಾರಣಗಳಿವೆ. ಇಂದಿನ ಜಗತ್ತು ಹಿಂದಿನ ಹಾಗಿಲ್ಲ. ಇಂದು ಈ ಯುದ್ಧದಂತಹ ಭೀಕರತೆಯ ನಿಣ೯ಯವನ್ನು ರಾಜಕೀಯ ಅಧಿಕಾರಿದಲ್ಲಿ ಕುಳಿತುಕೊಂಡವರು ಮಾತ್ರ ತೆಗೆದುಕೊಳ್ಳುವುದು ಅಲ್ಲ ಬದಲಾಗಿ ಪ್ರತಿಯೊಂದು ಪ್ರಜಾಪ್ರಭುತ್ವ ದೇಶದಲ್ಲಿ ಜನರ ಅಭಿಪ್ರಾಯವೂ ಮುಖ್ಯ ನಿರ್ಣಾಯಕವಾಗಿದೆ. ಹಿಂದೆ ಪರಿಸ್ಥಿತಿ ಹಾಗಿರಲಿಲ್ಲ..ಯಾವುದೇ ಮಾಧ್ಯಮಗಳು ಇರಲಿಲ್ಲ ಸಾಮಾಜಿಕ ಜಾಲತಾಣ ಗಳಿರಲಿಲ್ಲ..ಅಂದು ಯುದ್ಧಗಳು ನಡೆದದ್ದು ಜನರಿಗೆ ತಿಳಿಯುವಾಗಲೇ ಯುದ್ಧ ನಿಂತಿರುತ್ತಿತ್ತು.ಈಗ ಹಾಗಲ್ಲ..ಯುದ್ಧ ರಣರಂಗದ ಪರಿಸ್ಥಿತಿ ಕ್ಷಣಕ್ಷಣಕ್ಕೂ ಪ್ರತಿ ಮನೆಯಲ್ಲಿಯೇ ಕೂತು ಲೈವ್‌ ನೇೂಡುವ ಮಟ್ಟದಲ್ಲಿ ಜಗತ್ತು ಬೆಳೆದುನಿಂತಿದೆ.

ಈಗಾಗಲೇ ಕೊರೊನದ ಹೊಡೆತದಿಂದ ತಲೆ ಎತ್ತಿ ನಿಂತು ಸೆಣಸಾಡುವ ಪರಿಸ್ಥಿತಿ ಇರುವಾಗ ಇನ್ನೊಂದು ಯುದ್ಧವನ್ನು ಖಂಡಿತವಾಗಿಯೂ ಯಾರು ಕೂಡಾ ಬಯಸುದಿಲ್ಲ..ಅನ್ನುವ ಸತ್ಯ ಎಲ್ಲರಿಗೂ ತಿಳಿದಿದೆ. ಇದು ಅಭಿವೃದ್ಧಿ ಬಯಸುವ ಮಧ್ಯ ಪ್ರಾಚ್ಯ ದೇಶಗಳಿಗೂ ಗೊತ್ತಿದೆ ಅಮೇರಿಕಾ ರಷ್ಯಾ ಬ್ರಿಟನ್, ಫ್ರಾನ್ಸ್‌ ನಂತಹ ದೇಶಗಳಿಗೂ ಗೊತ್ತಿರಲೇ ಬೇಕು.
|ಇಸ್ರೇಲ್ -ಇರಾನ್ ನಡುವಿನ ಸಮರದಲ್ಲಿ ಭಾರತದ ನಿಲುವು ಹೇಗಿರ ಬಹುದು? ಭಾರತ ಮೊದಲಿನಿಂದಲೂ ಒಪ್ಪಿಕೊಂಡು ಬಂದ ಅಂತರರಾಷ್ಟ್ರೀಯ ನೀತಿಯಂದರೆ ಪಂಚಶೀಲ ತತ್ವ ಇದರಲ್ಲಿ ನಾವು ಯಾವುದೇ ಸಂದರ್ಭದಲ್ಲಿ ಯಾವುದೇ ದೇಶದ ಪರವಾಗಿ ಬೆಂಬಲಕ್ಕೆ ನಿಲುವುದಿಲ್ಲ..ಅಂದರೆ ಯುದ್ಧದ ಪರಿಸ್ಥಿತಿಯಲ್ಲಿ ತಟಸ್ಥ ನೀತಿ ಅನುಸರಿಸಿಕೊಂಡು ಬಂದಿದ್ದೇವೆ.

ಅಂದರೆ ತಟಸ್ಥತೆ ನಿಲಿ೯ಪ್ತ ನವಲ್ಲ..ತಪ್ಪಾಗಿದ್ದರೆ ಖಂಡಿತವಾಗಿಯೂ ಖಂಡಿಸುವ ಹೇಳಿಕೆ ನೀಡುತ್ತೇವೆ..ನಾವು ಅಭಿವೃದ್ಧಿ ಪರ ನಿಲುವು ಬಯಸುವ ರಾಷ್ಟ್ರವಾದ ಕಾರಣ ಬರೇ ಜಗತ್ತಿನ ಸಮಸ್ಯೆಗಳನ್ನು ತಾನಾಗಿಯೇ ಮೈ ಮೇಲೆ ಎಳೆದುಕೊಳ್ಳುವ ದೇಶ ನಮ್ಮದಲ್ಲ..ಅನ್ನುವುದು ಮೊದಲಿನಿಂದಲೂ ಸಾಬೀತಾಗಿದೆ. ಅದು ಯುಕ್ರೇನ್ ರಷ್ಯಾ ಸಂದರ್ಭದಲ್ಲಿ ಇರಬಹುದು ಅಫ್ಘಾನಿಸ್ತಾನ ವಿಚಾರದಲ್ಲಿಯೇ ಇರ ಬಹುದು..ಮಾತ್ರವಲ್ಲ ಮಧ್ಯ ಪ್ರಾಚ್ಯ ದಲ್ಲಿ ಯಾದ ಕೆಲವೊಂದು ಯುದ್ಧದ ಸಂದರ್ಭದಲ್ಲಿಯೂ ಅಷ್ಟೇ..ಭಾರತ ಇಂದು ವಿಶ್ವ ಗುರು ಮನ್ನಣೆಗೆ ಪಾತ್ರವಾಗಿದೆ ಅಂದರೆ ಹೊರ ಜಗತ್ತಿನಲ್ಲಿ ನಮ್ಮ ಶಕ್ತಿ ಪ್ರದರ್ಶನದಿಂದ ಅಲ್ಲ..ನಮ್ಮ ವಿದೇಶಾಂಗ ನೀತಿಯ ಯುಕ್ತಿ ಯಿಂದಾಗಿ ಅನ್ನುವುದನ್ನು ನಾವು ಒಪ್ಪಿಕೊಳ್ಳಲೇ ಬೇಕು. ರಷ್ಯಾ ಉಕ್ರೇನ್ ಯುದ್ಧ ಕಾಲ ಘಟ್ಟದ ಲ್ಲೂ ನೇೂಡಿದ್ದೇವೆ. ಯುದ್ಧದಲ್ಲಿ ಸೇೂತು ಸುಣ್ಣವಾದ ಉಕ್ರೇನ್ ರಷ್ಯಾ ಕೊನೆಗೂ ಬಂದ ತೀರ್ಮಾನವೆಂದರೆ ಭಾರತದ ಮಧ್ಯಸ್ಥಿಕೆಯನ್ನೆ..ನಮ್ಮ ಅಭಿವೃದ್ಧಿಯ ದೃಷ್ಟಿಯಿಂದ ನಮಗೆ ಇಸ್ರೇಲೂ ಅನಿವಾರ್ಯ ಇರಾನ್ ಕೂಡಾ ಅಗತ್ಯ..ಹಾಗಾಗಿ ನಮ್ಮ ತಟಸ್ಥ ಯುದ್ಧ ನೀತಿಯೇ ಇಂದಿನ ಅನಿವಾರ್ಯತೆಯು ಹೌದು. ಚುಟಕು ಬ್ರಹ್ಮ ದಿನಕರ ದೇಸಾಯಿ ಅವರ ಮಾತಿನಂತೆ “ಯಾತಕ್ಕೆ ಯುದ್ಧ ಯಾತಕ್ಕೆ ಮದ್ದು ಎಲ್ಲರೂ ಒಂದೇ ಮನೆಯೊಳಗಿದ್ದು..” ಇದು ಜಗತ್ತಿನ ಶಾಂತಿ ಪ್ರಿಯರ ಭಾವನೆಯೂ ಹೌದು..

ವಿಶ್ಲೇಷಣೆ :ಪ್ರೊ|ಕೊಕ್ಕರ್ಣೆ ಸುರೇಂದ್ರ ನಾಥ ಶೆಟ್ಟಿ ಉಡುಪಿ

ಟಾಪ್ ನ್ಯೂಸ್

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು

OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು

3-winter-foods

Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…

1-bg

Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Gurunandan

Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್‌ ಬಾಂಡ್‌’ ಚಿತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.