Viral Video: ದೆಹಲಿ ಮೆಟ್ರೋದಲ್ಲಿ ಪ್ರೇಮಿಗಳ “ಈ” ಅಸಹ್ಯ ನಡವಳಿಕೆಗೆ ನೆಟ್ಟಿಗರ ಆಕ್ರೋಶ…!
ದೆಹಲಿ ಮೆಟ್ರೋದಲ್ಲಿ ದಿನದಿಂದ ದಿನಕ್ಕೆ ಇಂತಹ ಅಹಸ್ಯಕರ ಘಟನೆ ಹೆಚ್ಚಳ...
Team Udayavani, Oct 12, 2023, 2:52 PM IST
ನವದೆಹಲಿ: ಇತ್ತೀಚೆಗೆ ರಾಜಧಾನಿ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಒಂದಲ್ಲಾ, ಒಂದು ರೀತಿಯಲ್ಲಿ ಅಸಭ್ಯವಾಗಿ ನಡೆದುಕೊಳ್ಳುವ ಮೂಲಕ ಹೆಚ್ಚು ಸುದ್ದಿಯಲ್ಲಿದ್ದಾರೆ. ಅದಕ್ಕೊಂದು ಸೇರ್ಪಡೆ ಎಂಬಂತೆ ದೆಹಲಿ ಮೆಟ್ರೋದಲ್ಲಿ ಜೋಡಿಯೊಂದರ ಅಸಭ್ಯ ನಡವಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:Hunsur: ಬೆಂಕಿ ರೋಗ, ಎಲೆ ಸುರುಳಿ ಹುಳುಗಳಿಂದ ಬೆಳೆಗಳನ್ನು ರಕ್ಷಿಸಲು ಕೀಟನಾಶಕ ಲಭ್ಯ
ದೆಹಲಿ ಮೆಟ್ರೋದಲ್ಲಿ ನೂರಾರು ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಜೋಡಿಯೊಂದು ಅಸಹ್ಯಕರ ರೀತಿಯಲ್ಲಿ ತಂಪು ಪಾನೀಯವನ್ನು ಸೇವಿಸುತ್ತಿರುವ ದೃಶ್ಯವನ್ನು ವಿಡಿಯೋ ಚಿತ್ರೀಕರಣ ಮಾಡಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿರುವುದಾಗಿ ವರದಿ ವಿವರಿಸಿದೆ.
ವಿಡಿಯೋದಲ್ಲೇನಿದೆ?
ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಜೋಡಿಯೊಂದರ ವ್ಯಕ್ತಿ ಮೊದಲಿಗೆ ತಂಪು ಪಾನೀಯವನ್ನು ತಾನು ಕುಡಿದು, ನಂತರ ತನ್ನ ಪ್ರೇಯಸಿಯ ಬಾಯಿಯೊಳಗೆ ಉಗುಳುತ್ತಾನೆ. ನಂತರ ಆಕೆ ಕೂಡಾ ತನ್ನ ಬಾಯಿಯೊಳಗಿನ ಪಾನೀಯವನ್ನು ಪ್ರಿಯತಮನ ಬಾಯಿಯೊಳಗೆ ಉಗುಳಿರುವುದು ಸೆರೆಯಾಗಿದೆ.
करत दिल के कतल बाड़ू⁰केकर मेहनत के फल बाड़ू⁰लाली ओठवा के ललचावे
देखिए जरा दिल्ली मेट्रो में कई सालों बाद दो बिछड़े आशिक़ों का भोजपुरी गाने में रील बनाने के साथ मिलन हो रहा है. एक दूसरे के मुंह में कुल्ला करना आज के समय में प्यार की नई परिभाषा है. pic.twitter.com/VcaCtZw5kB
— Shubham Shukla (@ShubhamShuklaMP) October 11, 2023
ಮೆಟ್ರೋ ರೈಲಿನ ಆಸನದಲ್ಲಿ ಯುವತಿ ಕುಳಿತಿದ್ದು, ಆಕೆಯ ಕಾಲ ಬುಡದಲ್ಲಿ ಪ್ರಿಯತಮ ಕುಳಿತಿದ್ದು, ತಂಪು ಪಾನೀಯವನ್ನು ಒಬ್ಬರ ಬಾಯಿಯೊಳಗೆ ಒಬ್ಬರು ಉಗುಳುತ್ತಾ…ಈ ದೃಶ್ಯವನ್ನು ಚಿತ್ರೀಕರಣ ಮಾಡುತ್ತಿದ್ದರು. ಸಹ ಪ್ರಯಾಣಿಕರು ಅಸಹ್ಯಕರ ನಡವಳಿಕೆಯನ್ನು ಗಮನಿಸಿ ಹುಬ್ಬೇರಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ದೆಹಲಿ ಮೆಟ್ರೋದಲ್ಲಿ ದಿನದಿಂದ ದಿನಕ್ಕೆ ಇಂತಹ ಅಹಸ್ಯಕರ ಘಟನೆಗಳೇ ಹೆಚ್ಚುತ್ತಿರುವುದಕ್ಕೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೆಹಲಿ ಮೆಟ್ರೋದಲ್ಲಿ ಇಂತಹ ಅಸಹ್ಯಕರ ರೋಮ್ಯಾನ್ಸ್ ನಡೆಯುತ್ತಿದ್ದರೂ ಕೂಡಾ ಯಾವುದೇ ಕಡಿವಾಣ ಇಲ್ಲದಂತಾಗಿದೆ. ಜೊತೆಗೆ ಪ್ರಯಾಣಿಕರ ರಕ್ಷಣೆ ಮತ್ತು ಸುರಕ್ಷಿತ ಪ್ರಯಾಣದ ಬಗ್ಗೆ ಕಳವಳ ಮೂಡಿಸುವಂತಾಗಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
कल को कोई नग्न होकर #DelhiMetro में रील बनाए तो मुझे आश्चर्य नहीं होगा।@DelhiPolice कृपया मामले को संज्ञान में लेकर त्वरित कार्रवाई करे, यह दोनों अश्लीलता के साथ-साथ ऐसा कार्य कर रहे जो सेहत के लिए बिल्कुल भी अच्छा नहीं है। pic.twitter.com/vRTdYulvzZ
— कालनेमि (Parody) (@kalnemibasu) October 6, 2023
ದೆಹಲಿ ಮೆಟ್ರೋದಲ್ಲಿ ನಡೆದ ಈ ಅಸಹ್ಯಕರ ಘಟನೆಗೆ ಸಂಬಂಧಿಸಿದಂತೆ ಪ್ರೇಮಿಗಳ ವಿರುದ್ಧ ಅಗತ್ಯವಾದ ಕ್ರಮ ತೆಗೆದುಕೊಳ್ಳುವಂತೆ ನೆಟ್ಟಿಗರು ದೆಹಲಿ ಪೊಲೀಸ್ ಅಧಿಕಾರಿಗಳ ಗಮನ ಸೆಳೆಯಲು ಯತ್ನಿಸಿರುವುದಾಗಿ ವರದಿ ತಿಳಿಸಿದೆ.
ಅದೇ ರೀತಿ ಈ ಜೋಡಿ ದೆಹಲಿ ಮೆಟ್ರೋದಲ್ಲಿನ ಆಸನದಿಂದ ಕೆಳಗೆ ಕುಳಿತು, ಆಕೆಯ ಬಾಯಿಗೆ ನೂಡಲ್ಸ್ ಹಾಕಿ, ನಂತರ ಅದನ್ನು ಸ್ಪೂನ್ ನಿಂದ ತೆಗೆದು ಪ್ರಿಯತಮ ತಿನ್ನುತ್ತಿರುವ ಮತ್ತೊಂದು ವಿಡಿಯೋ ಕೂಡಾ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Mumbai Train; ಮಹಿಳಾ ಬೋಗಿಗೆ ಬೆ*ತ್ತಲೆ ಯಾಗಿ ನುಗ್ಗಿದ ಪುರುಷ!!: ವಿಡಿಯೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.