ಹಲವು ಪ್ರಥಮಗಳಿಗೆ ಕಾರಣವಾದ ಕೋವಿಡ್
Team Udayavani, Apr 15, 2020, 10:16 AM IST
ಮಣಿಪಾಲ: ಇಡೀ ಭೂಮಂಡಲವನ್ನು ವ್ಯಾಪಿಸಿ 1.10 ಲಕ್ಷಕ್ಕೂ ಅಧಿಕ ಮಂದಿಯನ್ನು ಬಲಿ ತೆಗೆದುಕೊಂಡಿರುವ ಕೋವಿಡ್ ವೈರಸ್ ಕೆಲವು ಅಭೂತಪೂರ್ವ ಬದಲಾವಣೆಗಳಿಗೂ ಕಾರಣವಾಗಿದೆ. 21ನೇ ಶತಮಾನದ ಮೊದಲ ಜಾಗತಿಕ ಸೋಂಕು ಎಂದು ಪರಿಗಣಿಸಲ್ಪಟ್ಟಿರುವ ಕೋವಿಡ್‌ನಿಂದಾಗಿ ಹಲವು ಪ್ರಥಮಗಳು ದಾಖಲಾಗಿವೆ. ಈ ಕುರಿತಾದ ಮಾಹಿತಿ ಇಲ್ಲಿದೆ.
ಲಾಕ್‌ಡೌನ್: ಜಗತ್ತಿನ ಬಹುತೇಕ ರಾಷ್ಟ್ರಗಳು ಏಕಕಾಲದಲ್ಲಿ ಲಾಕ್‌ಡೌನ್ ಘೋಷಿಸಿದ್ದು ಇದೇ ಮೊದಲು. ಜಗತ್ತಿನ ಅರ್ಧಕ್ಕೂ ಹೆಚ್ಚು ಜನರು ಈಗ ಲಾಕ್‌ಡೌನ್‌ನಲ್ಲಿದ್ದಾರೆ. ಇಷ್ಟು ಅಗಾಧ ಸಂಖ್ಯೆಯ ಅರ್ಥಾತ್ ಸುಮಾರು 400 ಕೋಟಿ ಮಂದಿ ಏಕಕಾಲದಲ್ಲಿ ಗೃಹಬಂಧಿಯಾಗಿರುವುದು ಇದೇ ಮೊದಲು.
ಭದ್ರತಾ ಮಂಡಳಿಯ ಸಭೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆ ಮಾ. 24ರಂದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆಯಿತು. ವಿಶ್ವಸಂಸ್ಥೆ ಇತಿಹಾಸದಲ್ಲೇ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಭೆ ನಡೆದದ್ದು ಇದೇ ಮೊದಲು.
ಐಎಂಎಫ್ನಿಂದ ಸಾಲಕ್ಕೆ ಇರಾನ್ ಮೊರೆ: ಇರಾನ್ 1962ರ ಬಳಿಕ ಇದೇ ಮೊದಲ ಸಲ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಸಾಲಕ್ಕೆ ಮೊರೆಯಿಟ್ಟಿತು.
ಶಾಂಗ್ರಿಲಾ ಶೃಂಗ ರದ್ದು: ಜೂ.5ರಿಂದ 7 ರತನಕ ನಡೆಯಬೇಕಾಗಿದ್ದ ಶಾಂಗ್ರಿಲಾ ಶೃಂಗವನ್ನು ಸಿಂಗಾಪುರ ಕೋವಿಡ್ ಭೀತಿಯ ಹಿನ್ನೆಲೆಯಲ್ಲಿ ರದ್ದುಗೊಳಿಸಿದೆ. 2002ರಲ್ಲಿ ಪ್ರಾರಂಭವಾದ ಶಾಂಗ್ರಿಲಾ ಶೃಂಗ ರದ್ದಾಗಿರುವುದು ಇದೇ ಮೊದಲು.
ಆನ್‌ಲೈನ್‌ನಲ್ಲಿ ಅರ್ಥ್ ಅವರ್ ಮಾರ್ಕಿಂಗ್: 2007ರಲ್ಲಿ ಶುರುವಾದ ಅರ್ಥ್ ಅವರ್ ಮಾರ್ಕಿಂಗ್ ಇದೇ ಮೊದಲ ಬಾರಿ ಆನ್‌ಲೈನ್‌ನಲ್ಲಿ ನಡೆಯಿತು.
ವಿಂಬಲ್ಡನ್ ರದ್ದು: ಜೂ. 29ರಿಂದ ಜು. 12ರ ತನಕ ನಡೆಯಬೇಕಾಗಿದ್ದ ಪ್ರತಿಷ್ಠಿತ ವಿಂಬಲ್ಡನ್ ಚಾಂಪಿಯನ್‌ಶಿಪ್ ರದ್ದುಗೊಳಿಸಲಾಗಿದೆ. ಎರಡನೇ ಜಾಗತಿಕ ಯುದ್ಧದ ಬಳಿಕ ಇದೇ ಮೊದಲ ಸಲ ಈ ಕೂಟ ರದ್ದಾಗಿದೆ.
ಎವರೆಸ್ಟ್ ಪರ್ವತಾರೋಹಣ ಬಂದ್: ನೇಪಾಳ ಮಾ. 13ರಂದು ಎವರೆಸ್ಟ್ ಪರ್ವತಾ
ರೋಹಣವನ್ನು ನಿರ್ಬಂಧಿಸಿದೆ. ಹೀಗಾಗಿ ರುವುದು ಇದೇ ಮೊದಲು.
ಒಲಿಂಪಿಕ್ಸ್ ಮುಂದೂಡಿಕೆ: ಜೂ. 24ರಂದು ಆರಂಭವಾಗಬೇಕಿದ್ದ ಒಲಿಂಪಿಕ್ಸ್ ಕ್ರೀಡಾ ಕೂಟವನ್ನು ಮುಂದೂಡಲಾಗಿದೆ. ವೈರಸ್ ರೋಗದ ಕಾರಣ ಒಲಿಂಪಿಕ್ಸ್ ಕೂಟ ಮುಂದೂ ಡಲ್ಪಟ್ಟಿರುವುದು ಇದೇ ಪ್ರಥಮ.
ಸಿನೆಮಾ ಬಾಕ್ಸ್ ಆಫೀಸ್ ಶೂನ್ಯ ಗಳಿಕೆ: ಜಗತøಸಿದ್ಧ ಹಾಲಿವುಡ್ ಸಿನೇಮಾ ಉದ್ಯಮದ ತವರಾಗಿರುವ ಅಮೆರಿಕದಲ್ಲಿ ಇದೇ ಮೊದಲ ಬಾರಿಗೆ ಗಲ್ಲಾ ಪೆಟ್ಟಿಗೆ ಗಳಿಕೆ ಶೂನ್ಯವಾಗಿದೆ.
ವಿಕ್ಟೋರಿಯ ಲಾನ್ ಮುಚ್ಚುಗಡೆ: ಕೋಲ್ಕತ್ತದ ಪ್ರಸಿದ್ಧ ವಿಕ್ಟೋರಿಯ ಲಾನ್‌ಗೆ 100 ವರ್ಷಗಳಲ್ಲಿ ಇದೇ ಮೊದಲ ಸಲ ಸಾರ್ವಜನಿಕ ಸಂದರ್ಶನವನ್ನು ನಿಷೇಧಿಸಲಾಯಿತು.
ವಿಮಾನ ಯಾನ ರದ್ದು: ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ವಿಮಾನ ಯಾನ ಸಂಪೂರ್ಣವಾಗಿ ಸ್ಥಗಿತಗೊಂಡದ್ದು ಇದೇ ಮೊದಲು.
ಭದ್ರತಾ ಮಂಡಳಿ ನಿರ್ಣಯಕ್ಕೆ ರಿಮೋಟ್ ವೋಟಿಂಗ್
ಮಾ.31ರಂದು ವಿಶ್ವಸಂಸ್ಥೆ ಅವಿರೋಧವಾಗಿ ನಾಲ್ಕು ನಿರ್ಣಯಗಳನ್ನು ಅಂಗೀಕರಿಸಿಕೊಂಡಿದೆ. ವಿಶ್ವಸಂಸ್ಥೆಯ ಸಿಬಂದಿ ಮನೆಯಿಂದಲೇ ಕೆಲಸ ಮಾಡುತ್ತಿರುವುದರಿಂದ ಮತದಾನ ಪ್ರಕ್ರಿಯೆಯನ್ನು ರಿಮೋಟ್ ವೋಟಿಂಗ್ ಮೂಲಕ ಮಾಡಲಾಗಿತ್ತು. ಇದೇ ಮೊದಲ ಸಲ ರಿಮೋಟ್ ವೋಟಿಂಗ್ ಪದ್ಧತಿಯನ್ನು ಅನುಸರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.