ಕೋವಿಡ್ 19 ಅಲರ್ಟ್‌ಗೆ ಆರೋಗ್ಯ ಸೇತು ಆ್ಯಪ್
ಕಡ್ಡಾಯ ಬಳಕೆಗೆ ಆರೋಗ್ಯ ಇಲಾಖೆ ಸೂಚನೆ
Team Udayavani, Apr 12, 2020, 5:45 AM IST
ಬೆಂಗಳೂರು: ಕೋವಿಡ್ 19 ವೈರಸ್ ಸೋಂಕಿತರು ಹಾಗೂ ಶಂಕಿತರ ಚಲನವಲನವನ್ನು ಜಿಪಿಎಸ್ ತಂತ್ರಜ್ಞಾನ ಸಹಾಯದಿಂದ ಸೆರೆಹಿಡಿ ಯುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಬಿಡುಗಡೆಗೊಳಿಸಿರುವ “ಆರೋಗ್ಯ ಸೇತು – ಕೋವಿಡ್ 19′ ಟ್ರ್ಯಾಕರ್ ಮೊಬೈಲ್ ಆ್ಯಪ್ ಅನ್ನು ಎಲ್ಲರೂ ಕಡ್ಡಾಯವಾಗಿ ಡೌನ್‌ಲೋಡ್ ಮಾಡಿಕೊಂಡು ಅದರ ಉಪಯೋಗ ಪಡೆದುಕೊಳ್ಳಬೇಕೆಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.
ಈ ಆ್ಯಪ್‌ನಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್ ಸಹಿತ 11 ಭಾಷೆಗಳ ಆಯ್ಕೆಯನ್ನು ನೀಡಲಾಗಿದೆ. ಕೋವಿಡ್ 19 ಸೋಂಕು ಹರಡುವ ಬಗೆ, ಅನುಸರಿಸಬೇಕಾದ ಮುಂಜಾ ಗ್ರತಾ ಕ್ರಮಗಳು, ಚಿಕಿತ್ಸಾ ವಿಧಾನ, ಸಹಾಯವಾಣಿ ಸೇರಿದಂತೆ ಹಲವು ಮಾಹಿತಿಗಳು ಲಭ್ಯವಿವೆ. ಸ್ವಯಂ ಮೌಲ್ಯ ಮಾಪನ ಪರೀಕ್ಷೆಗೂ ಅವಕಾಶ ನೀಡಲಾಗಿದೆ. ಆರೋಗ್ಯಕ್ಕೆ ಸಂಬಂಧಿ ಸಿದ ಕೆಲವು ಪ್ರಶ್ನೆಗಳು ಮೊಬೈಲ್ ಪರದೆಯ ಮೇಲೆ ಮೂಡಲಿವೆೆ. ಅದಕ್ಕೆ ಉತ್ತರಿಸಿದ ಬಳಿಕ ಫಲಿತಾಂಶ ನೀಡಲಾಗುತ್ತದೆ.ಕೋವಿಡ್ 19 ಸೋಂಕಿತ ವ್ಯಕ್ತಿ ಹತ್ತಿರ ಬಂದರೆ ಈ ಆ್ಯಪ್ ಅಲರ್ಟ್ ಮೂಲಕ ಎಚ್ಚರಿಸುತ್ತದೆ. ಈ ಆ್ಯಪ್ ಅನ್ನು ಸಾರ್ವಜನಿಕರು, ಸರಕಾರಿ ನೌಕರರು, ಸ್ವಯಂ ಸೇವಕರು ಎಲ್ಲರೂ ಕಡ್ಡಾಯವಾಗಿ ಡೌನ್ ಲೋಡ್ ಮಾಡಿಕೊಂಡು ಬಳಸಬೇಕು ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ತಿಳಿಸಿದ್ದಾರೆ.
ಬಳಕೆ ಹೇಗೆ ?
ಈ Arogya Setup COVID 19 ಆ್ಯಪ್ ಅನ್ನು ಐಒಎಸ್ ಮತ್ತು ಆ್ಯಂಡ್ರಾಯ್ಡ ಸ್ಮಾರ್ಟ್ ಫೋನ್‌ನಲ್ಲಿ ಬಳಕೆ ಮಾಡಬಹುದಾಗಿದ್ದು, ಡೌನ್‌ಲೋಡ್ ಮಾಡಿಕೊಂಡು ಬಳಿಕ ಬ್ಲೂಟೂತ್ ಮತ್ತು ಲೊಕೇಶನ್ ಆನ್ ಮಾಡಿರಬೇಕು. ಅದರಲ್ಲಿ ಸೆಟ್ ಲೊಕೇಶನ್ ಎಂದಿರುವುದನ್ನು ಆಲ್ವೇಸ್ (ALWAYS) ಎಂದು ಕೊಡಬೇಕು. ಈಗಾಗಲೇ 50 ಲಕ್ಷಕ್ಕೂ ಹೆಚ್ಚು ಮಂದಿ ಡೌನ್‌ಲೋಡ್ ಮಾಡಿ ಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.