ಕೋವಿಡ್-19 ಪರಿಣಾಮ: ನೆಲ ಕಚ್ಚಿದ ವಿಮಾನ ಯಾನ

Team Udayavani, Apr 6, 2020, 11:43 AM IST

ಕೋವಿಡ್-19 ಪರಿಣಾಮ: ನೆಲ ಕಚ್ಚಿದ ವಿಮಾನ ಯಾನ

ಜಗತ್ತೇ ಲಾಕೌಡೌನ್‌ಗೆ ಒಳಗಾದ ಕಾರಣ ಹಲವು ಉದ್ಯಮ ಕ್ಷೇತ್ರಗಳು ನಷ್ಟಕ್ಕೊಳಗಾಗಿವೆ. ನಾಗರಿಕ ವಿಮಾನ ಯಾನ ವಲಯ ಅನುಭವಿಸುತ್ತಿರುವ ಸಂಕಷ್ಟ ಕಡಿಮೆಯೇನಲ್ಲ. ಅಂದಾಜಿನ ಪ್ರಕಾರ ಅಂತಾರಾಷ್ಟ್ರೀಯ ವಿಮಾನ ಯಾನ ಶೇ. 50ರಷ್ಟು ಕುಸಿದಿದೆ.

ಮಣಿಪಾಲ: ಕೋವಿಡ್-19 ವೈರಸ್‌ ಸೋಂಕು ವಿಶ್ವಾದ್ಯಂತ ಹರಡುತ್ತಿದ್ದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ಸಂಚಾರ ಬಹುತೇಕ ರದ್ದುಗೊಂಡಿದೆ. ಕೆಲವು ತುರ್ತು ವಿಮಾನಗಳ ಸಂಚಾರ ಹೊರತುಪಡಿಸಿದಂತೆ ಭಾರತವೂ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ವಿಮಾನ ಯಾನ ಸಂಪೂರ್ಣ ರದ್ದುಗೊಂಡಿದ್ದರೆ, ಇನ್ನು ಕೆಲವೆಡೆ ಆಂಶಿಕವಾಗಿ ಸಂಚಾರ ರದ್ದು ಪಡಿಸಲಾಗಿದೆ. ಕೆಲವು ದೇಶಗಳಲ್ಲಿ ದೇಶಿ ವಿಮಾನ ಯಾನ ಸಂಚಾರ ರದ್ದುಗೊಂಡಿಲ್ಲ. ಆದರೆ ಅಂತಾರಾಷ್ಟ್ರೀಯ ವಿಮಾನ ಸಂಚಾರವನ್ನು ರದ್ದುಗೊಳಿಸಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ರದ್ದುಗೊಳಿಸಿದ ಈ ಬೆಳವಣಿಗೆಯಿಂದ ವಿಮಾನಯಾನವೂ ಹೊರತಾಗಿಲ್ಲ. ಇದರಿಂದ ಜಾಗತಿಕವಾಗಿ ನಾಗರಿಕ ವಿಮಾನ ಯಾನ ಸಂಸ್ಥೆಗಳು ಕೋಟ್ಯಂತರ ರೂ. ನಷ್ಟವನ್ನು ಅನುಭವಿಸಿವೆ.

ಶೇ. 50ರಷ್ಟು ಕುಸಿತ
ಏರ್‌ಟ್ರಾಫಿಕ್‌ ಸಂಬಂಧಪಟ್ಟಂತೆ ಅಂತಾರಾಷ್ಟ್ರೀಯ ವಿಮಾನ ಪ್ರಯಾಣದಲ್ಲಿ ಶೇ. 50ರಷ್ಟು ಕುಸಿತವಾಗಿದೆ. ಇನ್ನು ಫ್ಲೈಟ್‌ ರಾಡರ್‌ ಸಂಸ್ಥೆ ನೀಡಿರುವ ಅಂಕಿ -ಅಂಶದಲ್ಲಿ ಕೇವಲ ವಾಣಿಜ್ಯೇತರ ವಿಮಾನಯಾನ ಸಂಸ್ಥೆಗಳ ಮಾಹಿತಿ ಮಾತ್ರ ಉಲ್ಲೇಖವಾಗಿದ್ದು, ವಾಣಿಜ್ಯ ವಿಮಾನಗಳ ಕಾರ್ಯಾಚರಣೆ ಕುರಿತಾದ ಅಂಕಿ-ಅಂಶ ಇದರಲ್ಲಿ ಒಳಗೊಂಡಿಲ್ಲ. ಒಂದು ವೇಳೆ ಎಲ್ಲ ವಾಣಿಜ್ಯ ಸಂಸ್ಥೆಗಳ ಮಾಹಿತಿ ಸಿಕ್ಕಲ್ಲಿ ನಷ್ಟದ ಪ್ರಮಾಣ ಮತ್ತಷ್ಟು ಹೆಚ್ಚಲಿದೆ ಎಂದು ದಿ ಗಾರ್ಡಿಯನ್‌ ವರದಿ ಮಾಡಿದೆ.

ಶೇ. 40ರಷ್ಟು ಕುಸಿತ
ಸಾರಿಗೆ ವ್ಯವಸ್ಥೆಗಳ ಕುರಿತಾಗಿ ವರದಿ ಮಾಡುವ ಒಎಜಿ ಸಂಸ್ಥೆ ಪ್ರಕಾರ ಈ ವಾರದಲ್ಲಿ ವಿಮಾನಗಳ ಹಾರಾಟ ಪ್ರಮಾಣದಲ್ಲಿ ಶೇ.48ರಷ್ಟು ಕುಸಿದಿದ್ದು, ಕಳೆದ ವರ್ಷ ಇದೇ ವೇಳೆ ಕೇವಲ ಶೇ.8ರಷ್ಟು ಮಾತ್ರ ವಿಮಾನಗಳನ್ನು ರದ್ದುಗೊಳಿಸಲಾಗಿತ್ತು. ಆದರೆ ಈ ಬಾರಿ ಕೋವಿಡ್-19 ಸೋಂಕು ತೀವ್ರಗೊಂಡ ಹಿನ್ನೆಲೆಯಲ್ಲಿ ಮಾರ್ಚ್‌ ತಿಂಗಳ ಮಧ್ಯದಿಂದ ಶೇ.48ರಷ್ಟು ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ.  ಅಮೆರಿಕದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 72 ರಷ್ಟು ಅಂತಾರಾಷ್ಟ್ರೀಯ ವಿಮಾನ ಹಾರಾಟ ಕಡಿಮೆಯಾಗಿದೆ. ದೇಶೀ ವಿಮಾನಗಳ ಸಂಚಾರ ಶೇ. 18 ರಷ್ಟು ಇಳಿಕೆಯಾಗಿದೆ. ಬ್ರಿಟನ್‌ ನಲ್ಲಿ ಶೇ. 81 ರಷ್ಟು ಅಂತಾರಾಷ್ಟ್ರೀಯ ವಿಮಾನ ಸಂಚಾರ ರದ್ದಾಗಿದ್ದು, ಶೇ. 60 ರಷ್ಟು ದೇಶೀ ವಿಮಾನಗಳು ಸಂಚಾರವನ್ನು ರದ್ದುಗೊಳಿಸಿವೆ.

ಸಾವಿರಾರು ವಿಮಾನಗಳ ಹಾರಾಟ
ಇನ್ನು ಲಾಕ್‌ಡೌನ್‌ ಜಾರಿಯಲ್ಲಿದ್ದು, ಪ್ರಯಾಣಿಕರು ಇಲ್ಲದಿದ್ದರೂ ಸಾವಿರಾರು ವಿಮಾನಗಳು ಹಾರಾಟ ನಡೆಸುತ್ತಿವೆ. ಅಂತಾರಾಷ್ಟ್ರೀಯ ಮಾರ್ಗವಾಗಿ ಹಾರಾಡುವ ಕೆಲ ವಿಮಾನಗಳು ಪರವಾನಗಿ ಉಳಿಸಿಕೊಳ್ಳಲು ನಿರ್ದಿಷ್ಟ ಪ್ರಮಾಣದಲ್ಲಿ ಹಾರಾಟ ನಡೆಸಬೇಕೆಂಬ ನಿಯಮವೇ ಇದಕ್ಕೆ ಕಾರಣ. ಈಗ ಯುರೋಪಿಯನ್‌ ಒಕ್ಕೂಟ ಪ್ರಾಂತ್ಯದಲ್ಲಿ ನಿಯಮವನ್ನು ಸಡಿಲಿಸಿದ್ದು, ಮಾರ್ಗಗಳನ್ನು ರದ್ದುಗೊಳಿಸಿದೆ. ಆದರೂ ಹಲವು ದೇಶಗಳಲ್ಲಿ ದೇಶಿ ವಿಮಾನ ಸಂಚಾರ ಸಂಪೂರ್ಣವಾಗಿ ರದ್ದುಗೊಳ್ಳದ ಕಾರಣ ಸಾವಿರರಾರು ವಿಮಾನಗಳು ಹಾರಾಡುತ್ತಿವೆ.

ಪರಿಸರಕ್ಕೆ ಒಳ್ಳೆಯದಾಯಿತು !
ವಿಮಾನಯಾನ ಸಂಚಾರ ರದ್ದಿನಿಂದ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದರೂ ಪರಿಸರಕ್ಕೆ ಅನುಕೂಲವಾಗಿದೆ. ಯಾಕೆಂದರೆ, ವಿಮಾನ ಯಾನ ರದ್ದಿನಿಂದ ಹಸಿರು ಅನಿಲ ಉತ್ಪಾದನೆ ಪ್ರಮಾಣ ಬಹಳಷ್ಟು ಇಳಿಕೆಯಾಗಿದೆ. ಕೋವಿಡ್-19 ವೈರಸ್‌ ಆವರಿಸಿಕೊಳ್ಳುವ ಮೊದಲು ವಿಮಾನ ಸಂಚಾರದಿಂದ ವಾಯು ಮಾಲಿನ್ಯ ಮಟ್ಟ ನಿರಂತರವಾಗಿ ಏರಿಕೆಯಾಗುತ್ತಿತ್ತು. ಒಂದು ಅಂದಾಜಿನಲ್ಲಿ ಹೇಳುವುದಾದರೆ 1990 ರಿಂದ 2019 ರಷ್ಟೊತ್ತಿಗೆ ವಾಯು ಮಾಲಿನ್ಯ ಮಟ್ಟ ದ್ವಿಗುಣಗೊಂಡಿತ್ತು.

ಅಮೆರಿಕದಲ್ಲೂ ಸಹ ಹೆಚ್ಚು ಮಾಲಿನ್ಯ ಉಂಟು ಮಾಡುತ್ತಿರುವ ವಿಮಾನಗಳ ಸಂಚಾರವನ್ನು ರದ್ದುಪಡಿಸಿ ಎಂದೂ ಪರಿಸರ ಸಂಘಟನೆಗಳು ಆಗ್ರಹಿಸುತ್ತಿದ್ದವು. ಪ್ಯಾರಿಸ್‌ ಪರಿಸರ ಒಪ್ಪಂದದ ಹಿನ್ನೆಲೆಯಲ್ಲಿ 60 ಬಿಲಿಯನ್‌ ಪರಿಹಾರ ಪ್ಯಾಕೇಜ್‌ ನ್ನೂ ಯುಎಸ್‌ ಸಂಸತ್ತು ಅನುಮೋದನೆ ಮಾಡಿತ್ತು.

ಹಾಗೆಯೇ ಬ್ರಿಟನ್‌ನಲ್ಲೂ 26 ಪರಿಸರ ಸಂಘಟನೆಗಳೂ ಸಹ ಪರಿಸರ ಸ್ನೇಹಿ ಕ್ರಮಗಳಿಗೆ ಒತ್ತಾಯಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ಯಾನ ಸಂಸ್ಥೆಯೂ ಹಲವಾರು ಕ್ರಮಗಳನ್ನು ಕೈಗೊಂಡಿತ್ತು. ಅದು ಜಾರಿಯಾಗುವಷ್ಟರಲ್ಲಿ ಕೋವಿಡ್-19 ವೈರಸ್‌ ದಾಳಿ ಉದ್ಯಮಕ್ಕೆ ಬಡಿದಿದೆ.

ಟಾಪ್ ನ್ಯೂಸ್

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

National Mourning: Postponement of Mangaluru Beach Festival

National Mourning: ಮಂಗಳೂರಿನ ಬೀಚ್‌ ಉತ್ಸವ ಮುಂದೂಡಿಕೆ

Clown Kohli: ವಿರಾಟ್‌ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್‌ ಮಾಧ್ಯಮಗಳು!

Clown Kohli: ವಿರಾಟ್‌ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್‌ ಮಾಧ್ಯಮಗಳು!

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಮಾರ್ಗದರ್ಶಕರನ್ನು ಕಳೆದುಕೊಂಡುಕೊಂಡಿದ್ದೇವೆ… ಮನಮೋಹನ್ ಸಿಂಗ್ ನಿಧನಕ್ಕೆ ರಾಹುಲ್ ಸಂತಾಪ

ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ

2-gangavathi

Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

GST on Sale: ಹಳೆ ಕಾರು ಮಾರಾಟ: ಲಾಭಕ್ಕೆ ಮಾತ್ರ ಜಿಎಸ್‌ಟಿ

GST on Sale: ಹಳೆ ಕಾರು ಮಾರಾಟ: ಲಾಭಕ್ಕೆ ಮಾತ್ರ ಜಿಎಸ್‌ಟಿ

IRCTC: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ

GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ

RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

ಕೋಳಿ ಅಂಕಕ್ಕೆ ಪೊಲೀಸ್‌ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ

National Mourning: Postponement of Mangaluru Beach Festival

National Mourning: ಮಂಗಳೂರಿನ ಬೀಚ್‌ ಉತ್ಸವ ಮುಂದೂಡಿಕೆ

Clown Kohli: ವಿರಾಟ್‌ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್‌ ಮಾಧ್ಯಮಗಳು!

Clown Kohli: ವಿರಾಟ್‌ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್‌ ಮಾಧ್ಯಮಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.