ಕೋವಿಡ್ 19 ಹೋರಾಟ: ಉಡುಪಿ ಮಾದರಿ

ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ; ನಿಯಂತ್ರಣದಲ್ಲೂ ಎತ್ತಿದ ಕೈ

Team Udayavani, Apr 18, 2020, 5:30 AM IST

ಕೋವಿಡ್ 19 ಹೋರಾಟ: ಉಡುಪಿ ಮಾದರಿ

ಉಡುಪಿ: ಕೋವಿಡ್ 19 ವೈರಾಣು ಪ್ರಸರಣವನ್ನು ತಡೆಯಲು ಉಡುಪಿ ಜಿಲ್ಲಾಡಳಿತವು ಅನುಸರಿಸಿದ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಜಿಲ್ಲೆಯು ಕೋವಿಡ್‌-19 ಅಪಾಯದಿಂದ ಮುಕ್ತಿ ಹೊಂದುವ ದಾರಿಯಲ್ಲಿದೆ.

ಶಂಕಿತ ಕೋವಿಡ್ 19 ಲಕ್ಷಣಗಳನ್ನು ಹೊಂದಿರುವವರನ್ನು ಮುಂಚಿತ ವಾಗಿ ಗುರುತಿಸಿ, ಅವರನ್ನು ಪರೀಕ್ಷೆಗೊಳ ಪಡಿಸುವುದು, ಕ್ವಾರಂಟೈನ್‌ ಮಾಡುವುದು ಕೋವಿಡ್ 19 ಪ್ರಸರಣ ತಡೆಗೆ ಉಪಯುಕ್ತ ಕ್ರಮ. ಹೀಗೆ ಪರೀಕ್ಷೆಗಾಗಿ ಕಳುಹಿಸಿದ ಶಂಕಿತರ ಗಂಟಲುದ್ರವ ಮಾದರಿಗಳ ಸಂಖ್ಯೆಯಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಪ್ರತಿ 10 ಲಕ್ಷ ಜನಸಂಖ್ಯೆಗೆ ಅನುಗುಣವಾಗಿ ಕಳುಹಿಸಲಾದ ಸರಾಸರಿ ಮಾದರಿಯಂತೆ ಈ ಲೆಕ್ಕಾಚಾರ ಹಾಕಲಾಗಿದೆ. ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ಅವರು ಇದನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ.ದೇಶ ಮಟ್ಟದಲ್ಲಿ ಇದುವರೆಗೆ 10 ಲಕ್ಷ ಮಂದಿಗೆ ಸರಾಸರಿ 220ರಂತೆ 3 ಲಕ್ಷಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಲಾಗಿದೆ.

ಶೇ. 65 ಪರೀಕ್ಷೆ
ಮೂರ್‍ನಾಲ್ಕು ದಿನಗಳ ಹಿಂದೆ 403 ಮಾದರಿಗಳ ಸಂಗ್ರಹವಾಗಿದ್ದಾಗ ಜಿಲ್ಲೆ ರಾಜ್ಯದಲ್ಲಿ ಲಕ್ಷ ಜನಸಂಖ್ಯೆಗೆ ಶೇ.34ರ ಸಾಧನೆ ಮಾಡಿ ಪ್ರಥಮ ಸ್ಥಾನದಲ್ಲಿತ್ತು.

ಶುಕ್ರವಾರದ ವರೆಗೆ 839 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಜಿಲ್ಲೆಯ ಜನಸಂಖ್ಯೆ ಸುಮಾರು 13 ಲಕ್ಷ. ಅಂದರೆ ಲಕ್ಷ ಜನಸಂಖ್ಯೆಗೆ ಸುಮಾರು ಶೇ.65ರಂತೆ ಪರೀಕ್ಷೆನಡೆಸಲಾಗಿದೆ. ಇದು ದೇಶ ಮಟ್ಟ ದಲ್ಲೂ ಉತ್ತಮ ಸಾಧನೆಯೇ.

ಉಡುಪಿ ಜಿಲ್ಲೆಯಲ್ಲಿ ಜಿಲ್ಲಾಡಳಿತ ಎಷ್ಟು ಬಿಗಿ ಕ್ರಮಗಳನ್ನು ಕೈಗೊಂಡಿದೆ ಎಂದರೆ, ಸೋಂಕು ದೃಢಪಟ್ಟ ವ್ಯಕ್ತಿಯಪ್ರಾಥಮಿಕ ಸಂಪರ್ಕ ಹೊಂದಿದ ವರು ಮಾತ್ರವಲ್ಲದೆ, ಪ್ರಾಥಮಿಕ ಸಂಪರ್ಕ ಹೊಂದಿದವರ ಸಂಪರ್ಕಿತರನ್ನೂ ಕ್ವಾರಂಟೈನ್‌ ಮಾಡಿಪರೀಕ್ಷೆಗೆ ಒಳಪಡಿಸಲಾಗಿದೆ ಸೋಂಕು ಸಮುದಾಯದತ್ತ ನುಗ್ಗದಂತೆ ಆರೋಗ್ಯ ಇಲಾಖೆ ಸಿಬಂದಿ, ಆಶಾ ಕಾರ್ಯಕರ್ತೆಯರು ಅತೀವ ಶ್ರಮ ವಹಿಸಿದ್ದಾರೆ.ಜಿಲ್ಲೆಯ ಗಡಿಗಳನ್ನು ಮುಚ್ಚಿರು ವುದೂ ಸೋಂಕು ನಿಯಂತ್ರಣದಲ್ಲಿ ಪ್ರಧಾನ ಪಾತ್ರ ವಹಿಸಿದೆ.

ತೀವ್ರ ಉಸಿರಾಟದ ಸಮಸ್ಯೆ
ಹೊಂದಿದವರ ಗಂಟಲ ದ್ರವ ಸಂಗ್ರಹಿಸಿದ ಸಾಧನೆಯಲ್ಲಿಯೂ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನವಿದೆ. ಉಸಿರಾಟ ಸಮಸ್ಯೆ
ಯುಳ್ಳ ಸುಮಾರು 100 ಮಂದಿಯ ಮಾದರಿ ಸಂಗ್ರಹಿಸಲಾಗಿದೆ.

ಇಬ್ಬರು ಗುಣಮುಖ ಜಿಲ್ಲೆಯಲ್ಲಿ ಕೋವಿಡ್ 19 ದೃಢ
ಪಟ್ಟ ಮೂವರಲ್ಲಿ ಇಬ್ಬರು ಈಗಾಗಲೇ ಗುಣಮುಖರಾಗಿ ದ್ದಾರೆ, ಇನ್ನೊಬ್ಬರ ಮೊದಲ ವರದಿ ನೆಗೆಟಿವ್‌ ಬಂದಿದೆ. ಕೇಂದ್ರ ಆರೋಗ್ಯ ಇಲಾಖೆಯ ಮಾರ್ಗದರ್ಶಿ ಸೂತ್ರದನ್ವಯ ಜಿಲ್ಲೆಯು ಆರೆಂಜ್‌ ಮತ್ತು ನಾನ್‌ ಹಾಟ್‌ಸ್ಪಾಟ್‌ ವಲಯದಲ್ಲಿದೆ.

ಕೋವಿಡ್ 19 ಸೋಂಕುಪೀಡಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕದವರು ಹಾಗೂ ತೀವ್ರ ಉಸಿರಾಟದ ಸಮಸ್ಯೆಯುಳ್ಳವರನ್ನು ಪತ್ತೆ ಮಾಡಿ ಮಾದರಿಗಳನ್ನು ಸಂಗ್ರಹಿಸಿದ ಕಾರಣ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪ್ರಾಪ್ತಿಯಾಗಿದೆ.
– ಡಾ|ಸುಧೀರ್‌ಚಂದ್ರ ಸೂಡ,
ಜಿಲ್ಲಾ ಆರೋಗ್ಯಾಧಿಕಾರಿ, ಉಡುಪಿ ಜಿಲ್ಲೆ

ರೋಗ ಲಕ್ಷಣ ಗುರುತಿಸಲು ಪರೀಕ್ಷೆ ನಡೆಸುವುದು ಬಹಳ ಮುಖ್ಯ. ಇದಕ್ಕಾಗಿ ಆರೋಗ್ಯ ಇಲಾಖೆ ಸಿಬಂದಿ ಉತ್ತಮ ರೀತಿಯಲ್ಲಿ ಶ್ರಮಿಸಿದ್ದಾರೆ.ಆದ್ದರಿಂದ ರಾಜ್ಯದಲ್ಲಿ ಲಕ್ಷ ಜನಸಂಖ್ಯೆಗೆ ಮಾದರಿ ಪರೀಕ್ಷೆಗಳನ್ನು ಅತಿ ಹೆಚ್ಚು ನಡೆಸಿದ ಹಿರಿಮೆಗೆ ಉಡುಪಿ ಪಾತ್ರವಾಗಿದೆ.ಆರೋಗ್ಯ ಇಲಾಖೆ ಸಿಬಂದಿಗೆ ಅಭಿನಂದನೆಗಳು.ಅವರು ಮುಂದೆಯೂ ಇದೇ ಗುಣಮಟ್ಟದಲ್ಲಿ ಶ್ರಮಿಸುತ್ತಾರೆ ಎಂಬ ವಿಶ್ವಾಸವಿದೆ.
ಜಿ. ಜಗದೀಶ್‌, ಜಿಲ್ಲಾಧಿಕಾರಿಗಳು, ಉಡುಪಿ

ಟಾಪ್ ನ್ಯೂಸ್

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

road-mishap

Udupi: ಪಿಕಪ್‌ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

4

Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್‌ ಬಾಟಲಿ ಸದ್ದು  

Untitled-1

Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ

KMC

Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ 

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

crime

Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

road-mishap

Udupi: ಪಿಕಪ್‌ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.