ಇಟಲಿ: 200 ಮಂದಿ ನಿಗೂಢ ಸಾವಿನ ತನಿಖೆ
Team Udayavani, Apr 19, 2020, 1:45 PM IST
ಮಿಲನ್: ಕೋವಿಡ್-19 ಪ್ರಾರಂಭವಾದ ಬಳಿಕ ಮಿಲನ್ ನಲ್ಲಿರುವ ಅತೀ ದೊಡ್ಡ ಆರೈಕೆ ಕೇಂದ್ರವೊಂದರಲ್ಲಿ ಸುಮಾರು 200 ಜನರು ಅನುಮಾನಾಸ್ಪದ ಸಾವಿಗೆ ಒಳಗಾಗಿದ್ದಾರೆ.
ಫೆಬ್ರವರಿಯಲ್ಲಿ ಇಟಲಿಯಲ್ಲಿ ಕೊರೊನಾ ಹಾವಳಿ ಏಕಾಏಕಿ ಆರಂಭವಾದಾಗ ಮಿಲನ್ ಪಿಯೋ ಆಲ್ಬರ್ಗೊ ಟ್ರಿವುಲ್ಜಿಯೊ ಆರೈಕೆ ಮನೆಯಲ್ಲಿ ಸುಮಾರು 180ಕ್ಕೂ ಹೆಚ್ಚು ಜನರ ಸಾವು ಘಟಿಸಿತ್ತು. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಲೊಂಬಾರ್ಡಿ ಪ್ರಾದೇಶಿಕ ಸರಕಾರದ ಪ್ರಧಾನ ಕಚೇರಿಯಿಂದ ತನಿಖಾಧಿಕಾರಿಗಳು ಬುಧವಾರ ದಾಖಲೆ ಗಳನ್ನು ವಶಪಡಿಸಿಕೊಂಡರು. ಸಿಬಂದಿ ನಿರ್ಲಕ್ಷÂದಿಂದ ವೈರಸ್ ಹರಡಿದ್ದೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಆದರೆ ಕೋವಿಡ್ ವೈರಸ್ ಇಷ್ಟೊಂದು ನಿವಾಸಿಗಳನ್ನು ಕೊಲ್ಲಲು ಸಾಧ್ಯವಿದೆಯೇ ಎಂದು ಪರಿಶೀಲಿಸಲಾಗುತ್ತಿದೆ.
ಇಟಲಿ ದ್ವಿತೀಯ ಸ್ಥಾನ
ಈ ಕೇರ್ ಹೋಮ್ ಯುರೋಪಿನ ಅತಿದೊಡ್ಡ ಆರೈಕೆ ಕೇಂದ್ರಗಳಲ್ಲಿ ಒಂದು. ಇದು ಸಾವಿರಾರು ಜನರಿಗೆ ವಸತಿ ಒದಗಿಸುತ್ತದೆ. ಇಟಲಿಯ ಮಾಧ್ಯಮಗಳು ಸರಕಾರ ಈ ಆರೈಕೆ ಕೇಂದ್ರದ ಸತ್ಯಾಂಶವನ್ನು ಮರೆಮಾಚಿದೆ ಎಂದು ವರದಿ ಮಾಡಿವೆ. ಇಟಲಿಯು ಅಧಿಕೃತವಾಗಿ ಕೋವಿಡ್-19ನಿಂದ 21,645 ಸಾವುಗಳನ್ನು ಕಂಡಿದೆ. ಅಮೆರಿಕ ಮೊದಲ ಸ್ಥಾನ ದಲ್ಲಿದ್ದು, ಅನಂತರ ವಿಶ್ವದ ಎರಡನೇ ಅತಿ ಹೆಚ್ಚು ಸಾವು ಸಂಭವಿಸಿದ ರಾಷ್ಟ್ರಗಳ ಪೈಕಿ ಇಟಲಿ ದ್ವಿತೀಯ ಸ್ಥಾನದಲ್ಲಿದೆ.
ಆದರೆ ಹೆಚ್ಚಿನ ಆರೈಕೆ-ಕೇಂದ್ರಗಳಲ್ಲಿ ಸಂಭವಿಸಿದ ಸಾವುಗಳ ಅಧಿಕೃತ ಅಂಕಿ ಅಂಶಗಳನ್ನು ಸೇರಿಸಲಾಗಿಲ್ಲ. ಆದರೆ ಕೆಲವು ವೈದ್ಯರ ಪ್ರಕಾರ ಇಟಲಿಯ ನೈಜ ಸಂಖ್ಯೆ ಎರಡು ಪಟ್ಟು ಹೆಚ್ಚಿರುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Syria ಸರ್ವಾಧಿಕಾರಿ ಬಶರ್ ಅಸಾದ್ ಪತ್ನಿಗೆ ಲ್ಯುಕೇಮಿಯಾ: ವರದಿ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಿದ ಸುನೀತಾ ವಿಲಿಯಮ್ಸ್
Kazakhstan: ಅಜೆರ್ಬೈಜಾನ್ ಏರ್ ಲೈನ್ಸ್ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.