ಕೋವಿಡ್ 19 ಮಾನಸಿಕ ತಲ್ಲಣಕ್ಕೆ ನಿಮ್ಹಾನ್ಸ್ ಯೋಗ ಟಾನಿಕ್!
ಕೇಂದ್ರ ಆರೋಗ್ಯ ಇಲಾಖೆಯಿಂದ ವಿನೂತನ ಕಾರ್ಯಕ್ರಮ
Team Udayavani, Apr 10, 2020, 6:15 AM IST
ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ಜನರಲ್ಲಿ ಹೆಚ್ಚುತ್ತಿರುವ ಮಾನಸಿಕ ಸಮಸ್ಯೆಗಳಿಗೆ “ಯೋಗ ಟಾನಿಕ್’ ನೀಡಲು ಕೇಂದ್ರ ಆರೋಗ್ಯ ಇಲಾಖೆ ಮುಂದಾಗಿದ್ದು, ಇದರ ಹೊಣೆಯನ್ನು ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ಗೆ ನೀಡಿದೆ.
ಲಾಕ್‌ಡೌನ್‌ನಿಂದಾಗಿ ಜನರು ಒಂಟಿ ತನದ ಮಾನಸಿಕ ಖನ್ನತೆಗೆ ಒಳಗಾಗುತ್ತಿದ್ದಾರೆ. ಇದಕ್ಕೆ ಸರಳ ಯೋಗವೇ ಪರಿಹಾರ ಎಂದು ಕಂಡುಕೊಂಡಿರುವ ಕೇಂದ್ರ ಆರೋಗ್ಯ ಇಲಾಖೆಯು ಯೋಗದ ಪುಟ್ಟ ವೀಡಿಯೋ, ಕಿರು ಪೋಸ್ಟರ್‌ಸಿದ್ಧ ಪಡಿಸಿ ಕೊಡುವಂತೆ ನಿಮ್ಹಾನ್ಸ್‌ಗೆ ಸೂಚಿಸಿದೆ.
ಈ ಆಸನಗಳಿಗೆ ಆದ್ಯತೆ
ಮಾನಸಿಕ ಕಾಯಿಲೆಗಳಿಂದ ಹೊರಬರಲು ಪ್ರಾಣಾಯಾಮ ಅತ್ಯಂತ ಸಹಕಾರಿ. ಹೀಗಾಗಿ ಈ ವೀಡಿಯೋಗಳಲ್ಲಿ ಕಪಾಲಭಾತಿ, ಭಸಿŒಕಾ, ಉಜ್ಜಾಯಿ, ಅನುಲೋಮ, ವಿಲೋಮ ನಾಡಿಶೋಧನ, ಓಂಕಾರ ಉಚ್ಚಾರಗಳಿಗೆ ಆದ್ಯತೆ ನೀಡಲಾಗಿದೆ. ಜತೆಗೆ ಶ್ವಾಸೋಚ್ಛಾ$Ìಸಗಳನ್ನು ಶುದ್ಧವಾಗಿರಿಸಿಕೊಳ್ಳಲು ವ್ಯಾಘ್ರಶ್ವಾಸ, ಶ್ವಾನಶ್ವಾಸದಂತಹ ಉಸಿರಾಟ ಸಂಬಂಧಿ ಯೋಗ ಕ್ರಿಯೆಗಳಿಗೆ ಆದ್ಯತೆ ನೀಡಲಾಗಿದೆ ಎಂದು ಯೋಗಾಸನ ವಿಭಾಗದ ಪ್ರಾಧ್ಯಾಪಕ ಡಾ| ಹೇಮಂತ್ ಭಾರ್ಗವ್ ತಿಳಿಸಿದ್ದಾರೆ.ಇದರ ಜತೆಗೆ ಕೋವಿಡ್ 19 ಜಾಗೃತಿಯ ವೀಡಿಯೋಗಳನ್ನು ಕೂಡ ಸಿದ್ಧಪಡಿಸಲು ಆರೋಗ್ಯ ಇಲಾಖೆ ತಿಳಿಸಿದೆ.
ಸಾಮಾಜಿಕ ಜಾಲತಾಣ ಬಳಕೆ
ನಿಮ್ಹಾನ್ಸ್‌ನ ತಂಡ ಎರಡು ಯೋಗ ವೀಡಿಯೋ ಸಿದ್ಧಪಡಿಸಿದೆ. ಇವುಗಳನ್ನು ಕೇಂದ್ರ ಆರೋಗ್ಯ ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ನಿಮ್ಹಾನ್ಸ್ ತಿಳಿಸಿದೆ.
ಜನರ ಮಾನಸಿಕ
ಆರೋಗ್ಯ ಇಲಾಖೆ ಕಾಪಾಡಲು ಯೋಗ ಶಿಕ್ಷಣದ ವೀಡಿಯೋ ಸಿದ್ಧಪಡಿಸಿ ಕೊಡಲು ಕೇಂದ್ರ ಆರೋಗ್ಯ ಇಲಾಖೆ ಸೂಚಿಸಿದೆ. ಯೋಗ ಕುರಿತು ಎರಡು ಮತ್ತು ಕೋವಿಡ್ 19 ಜಾಗೃತಿಯ ನಾಲ್ಕು ವೀಡಿಯೋಗಳನ್ನು ಕಳಿಸಿಕೊಟ್ಟಿದ್ದು, ಕೇಂದ್ರದಿಂದ ಮೆಚ್ಚುಗೆ ಸಿಕ್ಕಿದೆ.
– ಡಾ| ಬಿ.ಎನ್. ಗಂಗಾಧರ್, ನಿರ್ದೇಶಕರು, ನಿಮ್ಹಾನ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್ ಐಆರ್ ದಾಖಲು-HDK ಎ1
Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.