ಹೊರಗೆ ಕೋವಿಡ್-19 ಕಾಟ; ಒಳಗೆ ಪತಿಯ ಕಾಟ!
ಲೈಂಗಿಕ ಶೋಷಣೆ, ವರದಕ್ಷಿಣೆ ದೂರು ಅಧಿಕ; ಬಗೆ ಬಗೆ ಅಡುಗೆಗೂ ಆಗ್ರಹ
Team Udayavani, Apr 26, 2020, 6:30 AM IST
ಸಾಂದರ್ಭಿಕ ಚಿತ್ರ.
ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ದಿನವಿಡೀ ಮನೆಯೊಳಗೆ ಇರುವ ಪತಿ ಲೈಂಗಿಕ ಶೋಷಣೆ ನಡೆಸುತ್ತಿದ್ದಾರೆ, ದಿನಕ್ಕೊಂದು ಬಗೆಯ ಅಡುಗೆ ಮಾಡುವಂತೆ ಒತ್ತಡ ಹೇರುತ್ತಾರೆ, ಯಾರ ಜತೆಗಾದರೂ ಫೋನ್‌ನಲ್ಲಿ ಮಾತಾಡಿದರೆ ಸಂಶಯ, ತವರಿನಿಂದ ಹಣ ತರುವಂತೆ ಪೀಡಿಸುತ್ತಿದ್ದಾರೆ..
ಇವು ಲಾಕ್‌ಡೌನ್‌ನಿಂದ ಪಡಬಾರದ ಪಾಡು ಪಡುತ್ತಿರುವ ಸ್ತ್ರೀಯರು ಮಹಿಳಾ ಆಯೋಗಕ್ಕೆ ನೀಡಿರುವ ದೂರುಗಳ ಕೆಲವು ಮಾದರಿಗಳು.
ಇಂತಹ ಪ್ರಕರಣಗಳು ಸಾಮಾನ್ಯವಾದರೂ ಲಾಕ್‌ಡೌನ್ ಜಾರಿ ಬಳಿಕ ಹೆಚ್ಚಿದೆ. ದಿನವೂ ಇಂತಹ ನೂರಾರು ಕರೆಗಳು ಬರುತ್ತಿವೆ ಎಂದಿವೆ ಮಹಿಳಾ ಆಯೋಗದ ಮೂಲಗಳು.ಲಾಕ್‌ಡೌನ್‌ನಿಂದ ಕೆಲವರು ಕೆಲಸ ಕಳೆದುಕೊಂಡಿ ದ್ದಾರೆ. ಇನ್ನು ಕೆಲವರಿಗೆ ವೇತನ ಕಡಿತವಾಗಿದೆ. ಮತ್ತೆ ಹಲವರಿಗೆ ವರ್ಕ್ ಫಾರ್ಮ್ ಹೋಮ್, ಭವಿಷ್ಯದ ಬಗೆಗಿನ ಆತಂಕ ಮಾನಸಿಕ ಒತ್ತಡ ಉಂಟು ಮಾಡುತ್ತಿದೆ. ಆರ್ಥಿಕ ಸಮಸ್ಯೆಯೂ ಇದೆ. ಚಟಗಳಿಗೂ ಅವಕಾಶ ಇಲ್ಲ. ಇವೆಲ್ಲದರ ಪರಿಣಾಮ ಪತಿ-ಪತ್ನಿ ಸಂಬಂಧದ ಮೇಲೆ ಆಗಿದ್ದು, ಹೆಂಡತಿ ಮೇಲೆ ಹಲ್ಲೆ,ಲೈಂಗಿಕ ದೌರ್ಜನ್ಯ, ವರದಕ್ಷಿಣೆಗಾಗಿ ಪೀಡನೆ ಹೆಚ್ಚುತ್ತಿದೆ ಎಂದು ವರದಿಯಾಗಿದೆ.
ವಿವಿಧ ಅಡುಗೆಗೆ ಒತ್ತಡ
ಮಕ್ಕಳು, ಪತಿ ದಿನವಿಡೀ ಮನೆಯಲ್ಲಿಯೇ ಇರುವುದರಿಂದ ಬೇರೆ ಬೇರೆ ರೀತಿಯ ಅಡುಗೆ ಮಾಡಲು ಒತ್ತಡ ಹಾಕುತ್ತಿದ್ದಾರೆ. ಇದರಿಂದಾಗಿ ತನ್ನ ವರ್ಕ್ ಫಾರ್ಮ್ ಹೋಮ್‌ಗೆ ತೊಂದರೆಯುಂಟಾಗುತ್ತಿದೆ ಎಂಬ ಕರೆಗಳೂ ಬರುತ್ತಿವೆ ಎಂದು ಅಲವತ್ತು ಕೊಂಡಿರುವ ಮಹಿಳೆಯರೂ ಇದ್ದಾರೆ.ಆಯೋಗಕ್ಕೆ ಬರುವ ದೂರು ಇಮೇಲ್‌ಗಳ ಸಂಖ್ಯೆಯೂ 10 ಪಟ್ಟು ಹೆಚ್ಚಿದೆ ಎನ್ನುತ್ತಾರೆ ರಾಜ್ಯ ಮಹಿಳಾ ಆಯೋಗದ ಸದಸ್ಯರೊಬ್ಬರು.
ತಾಲೂಕು ಮಟ್ಟದಲ್ಲೂ ಸಹಾಯವಾಣಿ
ಶೋಷಣೆಗೀಡಾದ ಮಹಿಳೆಯರ ನೆರವಿಗಾಗಿ ಸಹಾಯವಾಣಿ ಸೌಲಭ್ಯವನ್ನು ತಾಲೂಕು ಮಟ್ಟದಲ್ಲಿಯೂ ಕಲ್ಪಿಸಿದೆ. ನೊಂದ ಮಹಿಳೆಯರು 181ಕ್ಕೆ ಕರೆ ಮಾಡಬಹುದು ಅಥವಾ ಪ್ರಮೀಳಾ ನಾಯ್ಡು ಅವರನ್ನು 948100 4367 ಈ ದೂರವಾಣಿ ಮೂಲಕ ಸಂಪರ್ಕಿಸಬಹುದು.
ನೊಂದ ಮಹಿಳೆ ಕರೆ ಮಾಡಿದರೆ
ದೂರವಾಣಿ ಮೂಲಕವೇ ಆಪ್ತ ಸಮಾ ಲೋಚನೆ ಒದಗಿಸಲಾಗುತ್ತದೆ. ಸವಾಲನ್ನು ಯಾವ ರೀತಿ ಎದುರಿಸಬೇಕು ಎಂಬ ಬಗ್ಗೆ ತಿಳಿಸಲಾಗುತ್ತಿದೆ. ಕರೆಗಳಲ್ಲಿ ಹೆಚ್ಚಿನವು ವರದಕ್ಷಿಣೆ ಪ್ರಕರಣಗಳು.
-ಪ್ರಮೀಳಾ ನಾಯ್ಡು,
ಮಹಿಳಾ ಆಯೋಗದ ಅಧ್ಯಕ್ಷೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
Kundapura: ಬಸ್ ತಂಗುದಾಣಗಳೇ ಮಾಯ; ಜನರು ಅಯೋಮಯ!
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.