ಮಾತಿನಲ್ಲೂ ಹರಡುತ್ತೆ ಕೋವಿಡ್‌ : ಮಾಸ್ಕ್ ಧರಿಸುವ ಮಹತ್ವವನ್ನು ಎತ್ತಿ ಹಿಡಿದ ಸಂಶೋಧನೆ


Team Udayavani, May 16, 2020, 7:00 PM IST

ಮಾತಿನಲ್ಲೂ ಹರಡುತ್ತೆ ಕೋವಿಡ್‌ : ಮಾಸ್ಕ್ ಧರಿಸುವ ಮಹತ್ವವನ್ನು ಎತ್ತಿ ಹಿಡಿದ ಸಂಶೋಧನೆ

ಮಣಿಪಾಲ : ಇಷ್ಟರ ತನಕ ಕೆಮ್ಮು ಮತ್ತು ಸೀನಿನ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಕೋವಿಡ್‌ ವೈರಾಣು ಹರಡುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಹೊಸದಾಗಿ ನಡೆದಿರುವ ಸಂಶೋಧನೆಯಲ್ಲಿ ನಾವು ಮಾಮೂಲಾಗಿ ಮಾತನಾಡುವಾಗಲೂ ವೈರಾಣು ಹರಡುವ ಸಾಧ್ಯತೆಯಿದೆ ಎಂಬ ಬೆಚ್ಚಿಬೀಳಿಸುವ ಅಂಶವನ್ನು ಬಹಿರಂಗಪಡಿಸಿದೆ. ನಾಲ್ಕು ಗೋಡೆಗಳ ನಡುವೆ ಇರುವವರಿಗೆ ಮಾತಿನ ಮೂಲಕ ವೈರಸ್‌ ಹರಡುವ ಸಾಧ್ಯತೆ ಹೆಚ್ಚಿದೆ ಎಂದು ಈ ಅಧ್ಯಯನ ತಿಳಿಸಿದೆ.

ಈ ಸಂಶೋಧನೆ ಇನ್ನು ಮುಂದೆ ಮಾಸ್ಕ್ ಧರಿಸುವುದು ಹಾಗೂ ಇತರ ಸಾಮಾನ್ಯ ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸುವುದರ ಮಹತ್ವವನ್ನು ಎತ್ತಿ ಹಿಡಿದಿದೆ.

ನಾವು ಮಾತನಾಡುವಾಗ ಸಾವಿರಾರು ಉಗುಳಿನ ಹನಿಗಳು ಸಿಡಿಯುತ್ತವೆ. ಬರಿಗಣ್ಣಿಗೆ ಕಾಣಿಸದ ಈ ಹನಿಗಳು 8ರಿಂದ 14 ನಿಮಿಷಗಳ ಕಾಲ ವಾತಾವರಣದಲ್ಲಿರುತ್ತವೆ.ಮನೆ, ಕಚೇರಿ, ಹಡಗು, ಹೊಟೇಲ್‌ ಮತ್ತಿತರ ನಾಲ್ಕು ಗೋಡೆಗಳ ಸ್ಥಳಗಳಲ್ಲಿ ಬರಿ ಮಾತಿನ ಮೂಲಕವೂ ಕೋವಿಡ್‌ ವೈರಸ್‌ ಹರಡುವ ಸಾಧ್ಯತೆ ಹೆಚ್ಚು. ರೋಗ ಬರಲು ಎಷ್ಟು ವೈರಸ್‌ಗಳು ವರ್ಗಾವಣೆಯಾಗಬೇಕು ಎನ್ನುವುದನ್ನು ಇನ್ನೂ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಭವಿಷ್ಯದಲ್ಲಿ ಕೋವಿಡ್‌ ವೈರಸ್‌ನಿಂದ ಬಚಾವಾಗಿ ಉಳಿಯಬೇಕಾದರೆ ಮಾಸ್ಕ್ ಧರಿಸುವುದು ಕಡ್ಡಾಯವಾಗಬೇಕು ಎಂಬ ಅಂಶವನ್ನು ಈ ಸಂಶೋಧನೆ ಪ್ರತಿಪಾದಿಸುತ್ತಿದೆ.

ಉಗುಳು ಅಥವಾ ಉಸಿರಿನ ಹನಿಗಳ ಮೂಲಕ ಕೋವಿಡ್‌ ವೈರಸ್‌ ಪ್ರಸರಣವಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಸಾಮಾನ್ಯವಾಗಿ ಹನಿಗಳು ಕೆಲವು ಅಡಿ ದೂರದವರೆಗೆ ಸಿಡಿಯುತ್ತವೆ. ಈ ಸಂದರ್ಭದಲ್ಲಿ ಅದು ಬಾಗಿಲಿನ ಹಿಡಿ, ಟೇಬಲ್‌ ಇತ್ಯಾದಿಗಳ ಮೇಲೆ ಬೀಳುವ ಸಾಧ್ಯತೆಯಿರುತ್ತದೆ. ಈ ಮೇಲ್ಮೆ„ಯನ್ನು ಬೇರೊಬ್ಬ ವ್ಯಕ್ತಿ ಸ್ಪರ್ಶಿಸಿದರೆ ವೈರಸ್‌ ಅಂಟಿಕೊಳ್ಳುತ್ತದೆ. ಆದರೆ ಇಷ್ಟರ ತನಕ ಕೆಮ್ಮುವಾಗ ಅಥವಾ ಸೀನುವಾಗ ಸಿಡಿಯುವ ಹನಿಗಳು ಮಾತ್ರ ವೈರಸ್‌ ಅನ್ನು ಹರಡುತ್ತವೆ ಎಂದು ತಪ್ಪಾಗಿ ಭಾವಿಸಲಾಗಿತ್ತು.

ಸೀನು ಮತ್ತು ಕೆಮ್ಮಿನಿಂದ ಸಿಡಿಯುವ ಹನಿಗಳ ಮೂಲಕ ವೈರಸ್‌ ಯಾವ ರೀತಿ ಹರಡುತ್ತದೆ ಎನ್ನುವುದನ್ನು ಸಾಬೀತುಪಡಿಸಲು ಅನೇಕ ಅಧ್ಯಯನಗಳನ್ನು ನಡೆಸಲಾಗಿದೆ. ಒಂದು ಸಲ ಕೆಮ್ಮಿದರೆ ಸುಮಾರು 3,000 ಹನಿಗಳು ಸಿಡಿಯುತ್ತವೆ ಹಾಗೂ ಒಂದು ಸೀನಿನಿಂದ ಸುಮಾರು 40,000 ಹನಿಗಳು ಸಿಡಿಯುತ್ತವೆ ಎನ್ನುವುದನ್ನು ಈ ಸಂಶೋಧನೆಗಳಿಂದ ಕಂಡುಕೊಳ್ಳಲಾಗಿದೆ. ಸೋಂಕಿತ ವ್ಯಕ್ತಿಯ ಇಂಥ ಒಂದೊಂದು ಹನಿಯಲ್ಲಿ ನೂರಾರು ಕೋವಿಡ್‌ ವೈರಸ್‌ಗಳಿರುತ್ತವೆ. ಈ ಕಾರಣಕ್ಕೆ ಸೋಂಕಿತ ವ್ಯಕ್ತಿಗಳಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಬೇಕೆಂದು ಹೇಳುತ್ತಿರುವುದು.

ಮಾತಿನಲ್ಲಿ ಹರಡುವ ಬಗೆ
ಅಮೆರಿಕದ ಡಯಬಿಟಿಸ್‌ ಆ್ಯಂಡ್‌ ಡೈಜೆಸ್ಟಿವ್‌ ಆ್ಯಂಡ್‌ ಕಿಡ್ನಿ ಡಿಸೀಸಸ್‌ ಸಂಸ್ಥೆ ಮತ್ತು ಪೆನ್ನಿಸಿಲ್ವೇನಿಯ ವಿವಿ ಜಂಟಿಯಾಗಿ ನಡೆಸಿದ ಸಂಶೋಧನೆ ಈ ರೀತಿ ಇದೆ:

ಕೆಲವು ಸ್ವಯಂ ಸೇವಕರನ್ನು ಆರಿಸಿಕೊಂಡು ಅವರಿಗೆ sಠಿಚy ಜಛಿಚlಠಿಜy ಎಂಬ ಶಬ್ದವನ್ನು ಪದೇಪದೆ ಉಚ್ಚರಿಸಲು ಹೇಳಲಾಯಿತು. ಕಾರ್ಡ್‌ಬೋರ್ಡ್‌ ಪರದೆಯ ಆಚೆ ತುದಿಯಲ್ಲಿ ನಿಂತು ಶಬ್ದವನ್ನು ಉಚ್ಚರಿಸುವಾಗ ಈ ಕಡೆಯಿಂದ ಲೇಸರ್‌ ಕಿರಣಗಳನ್ನು ಹಾಯಿಸಿ ಆಗ ಎಷ್ಟು ಉಗುಳಿನ ಹನಿಗಳು ಸಿಡಿಯುತ್ತವೆ ಎನ್ನುವುದನ್ನು ಕಂಡುಕೊಳ್ಳಲಾಯಿತು.

ಮಾತನಾಡುವಾಗ ಪ್ರತಿ ಸೆಕೆಂಡಿಗೆ ಸುಮಾರು 2,600 ಉಗುಳಿನ ಹನಿಗಳು ಸಿಡಿಯುತ್ತವೆ ಎಂಬುದು ಈ ಸಂಶೋಧನೆಯಿಂದ ದೃಢಪಟ್ಟಿದೆ. ಧ್ವನಿಯ ಏರಿಳಿತವನ್ನು ಹೊಂದಿಕೊಂಡು ಹನಿಗಳ ಗಾತ್ರವೂ ಬದಲಾಗುತ್ತದೆ. ಮೆಲುವಾಗಿ ಮಾತನಾಡುವಾಗ ಸಣ್ಣ ಹನಿಗಳು ಮತ್ತು ಜೋರಾಗಿ ಮಾತನಾಡುವಾಗ ದೊಡ್ಡ ಹನಿಗಳು ಸಿಡಿಯುತ್ತವೆ.

ಈ ಪ್ರಯೋಗವನ್ನು ಆರೋಗ್ಯವಂತ ವ್ಯಕ್ತಿಗಳನ್ನು ಪರೀಕ್ಷೆಗೊಳಪಡಿಸಿ ನಡೆಸಲಾಗಿದೆ. ಸೋಂಕಿತರ ಮೇಲೆ ಹಿಂದೆ ನಡೆದ ಅಧ್ಯಯನದ ಆಧಾರದಲ್ಲಿ ಅವರು ಮಾತನಾಡುವಾಗ ಕನಿಷ್ಠ 1,000 ವೈರಸ್‌ ಇರುವ ಹನಿಗಳು ಸಿಡಿಯಬಹುದು ಎಂದು ಲೆಕ್ಕ ಹಾಕಲಾಗಿದೆ.

ಬಾಯಿಂದ ಸಿಡಿದ ಹನಿಗಳು ಬಹಳ ಬೇಗ ಆವಿಯಾಗಿ ಹೋಗುತ್ತವೆಯಾದರೂ ಕೆಲವು ಹನಿಗಳು 14 ನಿಮಿಷಗಳ ತನಕ ಗಾಳಿಯಲ್ಲಿರುತ್ತವೆ. ಉಸಿರಾಟದ ಮೂಲಕ ಈ ಹನಿ ಬೇರೊಬ್ಬ ವ್ಯಕ್ತಿಯ ದೇಹವನ್ನು ಪ್ರವೇಶಿಸುತ್ತದೆ. ವೈರಸ್‌ ಸೋಂಕಿಗೊಳಗಾಳಾಗಲು ಇಂಥ ಒಂದು ಹನಿ ಸಾಕು. ಹೀಗಾಗಿ ಮಾತಿನಿಂದಲೂ ವೈರಸ್‌ ಹರಡುತ್ತದೆ ಎಂಬ ತೀರ್ಮಾನಕ್ಕೆ ಬರಲಾಗಿದೆ.

6 ಅಡಿ ಅಂತರ
ಕೋವಿಡ್‌ ವೈರಸ್‌ನಿಂದ ಸುರಕ್ಷಿತ ವಾಗಿರಬೇಕಾದರೆ ಕನಿಷ್ಠ 6 ಅಡಿಯ ಅಂತರ ಪಾಲಿಸುವುದು ಆಗತ್ಯ. ಇದು ನಮ್ಮ ದೈನಂದಿನ ಬದುಕಿನಲ್ಲಿ ರೂಢಿಯಾಗಬೇಕು ಎನ್ನುತ್ತಿದ್ದಾರೆ ವಿಜ್ಞಾನಿಗಳು. ಆದರೆ ಕೆಲವು ವಿಜ್ಞಾನಿಗಳು ಉಗುಳಿನ ಹನಿಗಳು 6 ಅಡಿಗಿಂತಲೂ ದೂರ ಸಿಡಿಯುವ ಸಾಧ್ಯತೆಯೂ ಇದೆ ಎನ್ನುತ್ತಿದ್ದಾರೆ. ಕೆಲವು ಶಬ್ದಗಳನ್ನು ಉಚ್ಚರಿಸುವಾಗ ಹೆಚ್ಚು ಉಗುಳಿನ ಹನಿಗಳು ಸಿಡಿಯುತ್ತವೆ ಎಂಬ ಅಂಶವೂ ಈ ಅದ್ಯಯನದಿಂದ ತಿಳಿದು ಬಂದಿದೆ.

ಟಾಪ್ ನ್ಯೂಸ್

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

BPL card ಕೇಂದ್ರ ಸರಕಾರವೇ ರದ್ದು ಮಾಡಿದೆ: ಸಿಎಂ ಸಿದ್ದರಾಮಯ್ಯ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

1-dp

Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.