ಸ್ವೀಡನ್: ಕೋವಿಡ್ ಗೆ ಬಲಿಯಾದವರಲ್ಲಿ ಹಿರಿಯರೇ ಹೆಚ್ಚು
ವೃದ್ಧರನ್ನು ಅವಗಣಿಸಿದ ಸರಕಾರ
Team Udayavani, May 20, 2020, 11:14 AM IST
ಸ್ಟಾಕ್‌ಹೋಮ್: ಅಪಾಯದ ಗುಂಪುಗಳನ್ನು ರಕ್ಷಿಸುವುದಕ್ಕೆ ತನ್ನ ಗರಿಷ್ಠ ಆದ್ಯತೆಯೆಂದು ಸರಕಾರ ಹೇಳಿದ್ದರೂ ಸ್ವೀಡನ್‌ನಲ್ಲಿ ಕೋವಿಡ್‌ಗೆ ಈವರೆಗೆ ಬಲಿಯಾದ ಸುಮಾರು 3,700 ಮಂದಿಯ ಪೈಕಿ ಹೆಚ್ಚಿನವರು 70 ವರ್ಷ ಮೇಲ್ಪಟ್ಟ ವಯಸ್ಸಿನವರು. ಸ್ವೀಡನ್ ಪ್ರಧಾನಿ ತನ್ನ ದೇಶ ಹಿರಿಯ ಜೀವಗಳನ್ನು ರಕ್ಷಿಸುವುದಕ್ಕೆ ಸಾಕಷ್ಟು ಪ್ರಯತ್ನಗಳನ್ನು ನಡೆಸಿಲ್ಲವೆಂದು ಈಗ ಒಪ್ಪಿಕೊಂಡಿದ್ದಾರೆ.
ಉತ್ತರ ಸ್ಟಾಕ್‌ಹೋಮ್‌ನ ಕೇರ್ ಹೋಮ್‌ನಲ್ಲಿ ರೆಝಾ ಎಂಬವರು ಕೋವಿಡ್‌ಗೆ ಬಲಿಯಾದ ದಿನ ಒಬ್ಬ ವೈದ್ಯನೂ ಅವರನ್ನು ನೋಡಿರಲಿಲ್ಲ. ಆತ ಸಾವಿಗೀಡಾಗುವ ಮುನ್ನ ನೋವು ನಿವಾರಕವನ್ನು ನೀಡಲಾಗಿತ್ತು. ಆದರೆ ಆಮ್ಲಜನಕವನ್ನು ನೀಡಿರಲಿಲ್ಲ. ಸಿಬಂದಿ ಆತನನ್ನು ಆಸ್ಪತ್ರೆಗೆ ಒಯ್ಯುವುದಕ್ಕೆ ಆ್ಯಂಬುಲೆನ್ಸ್ ಅನ್ನು ಕರೆಸಲಿಲ್ಲ ಎಂದು ಕೇರ್‌ಹೋಮ್‌ನ ನರ್ಸ್ ಹೇಳಿದ್ದಾರೆ.
ಒಂದು ಕೋಟಿಯಷ್ಟು ಜನಸಂಖ್ಯೆಯನ್ನು ಹೊಂದಿರುವ ಸ್ವೀಡನ್ ಹೆಚ್ಚಿನ ಯೂರೋಪ್ ದೇಶಗಳಂತೆ ಸಮಾಜದಲ್ಲಿ ಹೆಚ್ಚು ನಿರ್ಬಂಧಗಳನ್ನು ಹೇರಿರಲಿಲ್ಲ. ಸ್ವೀಡನ್ ಕೇರ್ ಹೋಮ್‌ಗಳಿಗೆ ಭೇಟಿಗಳನ್ನು ಮಾ. 31ರಂದು ನಿಷೇಧಿಸಿತ್ತು. ಆದರೆ ಸುರಕ್ಷಾ ಉಡುಪುಗಳು ತೀರಾ ತಡವಾಗಿ ಆಗಮಿಸಿದವು.
ಈಗ ಕೇರ್‌ಹೋಮ್‌ಗಳ ಹೆಚ್ಚು ಹೆಚ್ಚು ಸಿಬಂದಿ ಪ್ರಾದೇಶಿಕ ಆರೋಗ್ಯ ಅಧಿಕಾರಿಗಳು ವಿಧಿಸಿದ್ದ ಶಿಷ್ಟಾಚಾರಗಳನ್ನು ಟೀಕಿಸಲು ಮುಂದಾಗುತ್ತಿದ್ದಾರೆ. ಈ ಶಿಷ್ಟಾಚಾರಗಳನ್ವಯ ನಿವಾಸಿಗಳನ್ನು ಆಸ್ಪತ್ರೆಗಳಿಗೆ ವರ್ಗಾಯಿಸುವುದನ್ನು ನಿರುತ್ತೇಜಿಸಲಾಗುತ್ತಿದೆ ಮತ್ತು ಕೇರ್‌ಹೋಮ್‌ನ ನರ್ಸಿಂಗ್ ಸಿಬಂದಿ ವೈದ್ಯರ ಅನುಮತಿಯಿಲ್ಲದೆ ರೋಗಿ ಪ್ರಾಣಾಂತಿಕ ಸ್ಥಿತಿಗೆ ತಲಪಿದ್ದರೂ ಆಮ್ಲಜನಕ ನೀಡುವಂತಿಲ್ಲ.
“ರೋಗಿ 65 ವರ್ಷ ವಯಸ್ಸಿನವನೇ ಆಗಿದ್ದರೂ ಮತ್ತು ಇನ್ನೂ ಹಲವು ವರ್ಷಗಳ ಕಾಲ ಜೀವಿಸಬಲ್ಲನಾಗಿದ್ದರೂ ಆಸ್ಪತ್ರೆಗೆ ಯಾರನ್ನೂ ಕಳುಹಿಸಬಾರದೆಂದು ನಮಗೆ ಹೇಳಲಾಗಿತ್ತು’ ಎಂದು ಸೋಂಕು ದೇಶಕ್ಕೆ ಕಾಲಿಟ್ಟ ಹಂತದಲ್ಲಿ ಉತ್ತರ ಸ್ಟಾಕ್‌ಹೋಮ್‌ನ ಸುತ್ತಮುತ್ತ ಹಲವು ಕೇರ್ ಹೋಮ್‌ಗಳಲ್ಲಿ ಕೆಲಸ ಮಾಡಿದ್ದ ನರ್ಸ್ ಲತಿಫಾ ಲಾಫನ್‌ಬರ್ಗ್ ಹೇಳುತ್ತಾರೆ.
ಕೆಲವರು ತಮ್ಮ ಪ್ರೀತಿಪಾತ್ರರೊಂದಿಗೆ ಇನ್ನೂ ಹಲವು ವರ್ಷಗಳ ಕಾಲ ಜೀವಿಸಬಲ್ಲರಾಗಿದ್ದರು. ಆದರೆ ಅವರನ್ನು ಆಸ್ಪತ್ರೆಗೆ ಕಳುಹಿಸುವುದಕ್ಕೆ ಅನುಮತಿಸದೆ ಈ ಅವಕಾಶದಿಂದ ವಂಚಿಸಲಾಯಿತು.ಅವರು ಉಸಿರಾಡಲಾಗದೆ ಸಾಯುತ್ತಿದ್ದರು. ಅದನ್ನು ಪಕ್ಕದಲ್ಲಿ ಸುಮ್ಮನೆ ನಿಂತು ನೋಡುವುದು ಅತ್ಯಂತ ಅಸಹನೀಯವೆನಿಸುತ್ತಿತ್ತು’ ಎಂದವರು ವ್ಯಥೆ ವ್ಯಕ್ತಪಡಿಸುತ್ತಾರೆ.
ಕೋವಿಡ್-19 ತೀವ್ರರೂಪದಲ್ಲಿ ಹಬ್ಬಿದ್ದ ವೇಳೆ ತಾನು ಅವಧಿ ಮೀರಿ ದುಡಿಯುತ್ತಿದ್ದಾಗಲೂ ಕೋವಿಡ್‌ಗೆ ಸಂಬಂಧಿಸಿ ಹಿರಿಯ ಜೀವಿಗಳಿದ್ದ ಕೇರ್ ಹೋಮ್‌ಗಳಿಂದ ತನಗೆ ಒಂದೇ ಒಂದು ಕರೆ ಬಂದಿರಲಿಲ್ಲವೆಂದು ಹೆಸರು ತಿಳಿಸಲಿಚ್ಛಿಸದ ಸ್ಟಾಕ್‌ಹೋಮ್‌ನ ಇನ್ನೋರ್ವ ಪ್ಯಾರಾಮೆಡಿಕ್ ಹೇಳಿದರು.
ಇನ್ನಷ್ಟು ರೋಗಿಗಳಿಗೆ ಆಸ್ಪತ್ರೆಯ ಚಿಕಿತ್ಸೆ ಲಭ್ಯವಾಗುತ್ತಿದ್ದಲ್ಲಿ ಅಥವಾ ಕೇರ್ ಹೋಮ್ ಸಿಬಂದಿಗೆ ಆಮ್ಲಜನಕವನ್ನು ಪ್ರಯೋಗಿಸುವ ಜವಾಬ್ದಾರಿಯನ್ನು ವಹಿಸುತ್ತಿದ್ದಲ್ಲಿ ಬಹಳಷ್ಟು ಜೀವಗಳು ಉಳಿಯುತ್ತಿದ್ದವು ಎಂದು ಸ್ವೀಡನ್‌ನ ಖಾಸಗಿ ಸಮಾಲೋಚನ ಸಂಸ್ಥೆ ಮಿಕಾಯೆಲ್ ಜಾಲಿದ್ ಹೇಳಿದೆ. “ಯಾವುದೇ ನೆರವಿಲ್ಲದೆ ಶೇ. 20 ಮಂದಿ ಬದುಕುಳಿಯಬಲ್ಲರಾದರೆ ಪೂರಕ ಆಮ್ಲಜನಕದೊಂದಿಗೆ ಅಷ್ಟೇ ಮಂದಿ ಬದುಕುಳಿಯುತ್ತಿದ್ದರೆಂದು ಊಹಿಸಬಹುದಾಗಿದೆ ಎಂದು ಅದು ಬೆಟ್ಟು ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
ಸಂಸ್ಕೃತ ಕಾಲೇಜಿನ 120ರ ಸಂಭ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟಾಗಲಿ: ವಿ| ಪ್ರಸನ್ನಾಚಾರ್ಯ
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.