ಕೋವಿಡ್-19 ಚಿಕಿತ್ಸೆ: ಖಾಸಗಿ ಆಸ್ಪತ್ರೆಗಳ ದರ: ತಜ್ಞರ ಸಮಿತಿ ಪರಿಷ್ಕರಣೆ
Team Udayavani, Jun 20, 2020, 6:20 AM IST
ಬೆಂಗಳೂರು: ಕೋವಿಡ್ 19ರ ಚಿಕಿತ್ಸೆ ದರ ನಿಗದಿ ಕುರಿತು ಖಾಸಗಿ ಆಸ್ಪತ್ರೆಗಳು ಸಲ್ಲಿಸಿದ್ದ ಬೇಡಿಕೆ ದರಗಳನ್ನು ಸರಕಾರ ರಚಿಸಿದ್ದ ಎಂಟು ಜನರ ಸಮಿತಿ ಪರಿಷ್ಕರಿಸಿದ್ದು, ಈ ಕುರಿತು ಮುಂದಿನ ಸಚಿವ ಸಂಪುಟದ ಮುಂದೆ ಮಂಡಿಸಿ ಅನಂತರ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ (ಎಬಿ-ಎಆರ್‌ಕೆ) ಫಲಾನು ಭವಿಗಳಿಗೆ ಸಾಮಾನ್ಯ ವಾರ್ಡ್‌ಗೆ ದಿನಕ್ಕೆ 5,200 ರೂ. ಆಕ್ಸಿಜನ್‌ವುಳ್ಳ ವಾರ್ಡ್‌ಗೆ 7,000 ರೂ., ಐಸಿಯು ವಾರ್ಡ್‌ಗೆ 8,500 ರೂ., ಐಸಿಯು ಜತೆಗೆ ವೆಂಟಿಲೇಟರ್‌ವುಳ್ಳ ವಾರ್ಡ್‌ಗೆ 10,000 ರೂ. ನಿಗದಿ ಮಾಡಿದೆ.
ಹಾಗೆಯೇ ನಗದು ಪಾವತಿಸುವ ಮತ್ತು ವಿಮೆ ಯೋಜನೆಗಳಡಿ ಚಿಕಿತ್ಸೆ ಪಡೆಯುವವರಿಗೆ ಸಾಮಾನ್ಯ ವಾರ್ಡ್‌ಗೆ 10,000 ರೂ., ಆಕ್ಸಿಜನ್ ಸಹಿತ ವಾರ್ಡ್‌ಗೆ 12,000 ರೂ., ಐಸಿಯು ವಾರ್ಡ್‌ಗೆ 15,000ರೂ., ಐಸಿಯು ಜತೆ ವೆಂಟಿಲೇಟರ್ ಇದ್ದರೆ 25,000 ರೂ. ನಿಗದಿ ಮಾಡಿದೆ. ಇಲಾಖೆ ವತಿಯಿಂದ ಸೋಂಕು ಪರೀಕ್ಷೆಗೊಳಗಾದರೆ ಉಚಿತ ವಿದೆ. ಆದರೆ ಖಾಸಗಿಯಲ್ಲಿ 2,600 ರೂ. ದರ ನಿಗದಿ ಮಾಡಲು ಪ್ರಸ್ತಾವಿಸ ಲಾಗಿದ್ದು, ಇದಕ್ಕೆ ಖಾಸಗಿ ಆಸ್ಪತ್ರೆಗಳು ಒಪ್ಪಿಗೆ ಸೂಚಿಸಿಲ್ಲ. 4,000 ರೂ. ಮೇಲ್ಪಟ್ಟು ದರ ನಿಗದಿಗೆ ಪಟ್ಟು ಹಿಡಿದಿವೆ. ಈ ಬಗ್ಗೆಯೂ ಸಂಪುಟದಲ್ಲಿ ತೀರ್ಮಾನಿಸ ಲಾಗುವುದು ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.